ಸಂಕಷ್ಟದಲ್ಲಿದ್ದ ಅಬ್ದುಲ್‌ ಹಮೀದ್‌ ಮರಳಿ ತಾಯ್ನಾಡಿಗೆ

Team Udayavani, Aug 11, 2017, 8:20 AM IST

taynadige.jpg

ಬೆಳ್ತಂಗಡಿ: ಕೆಲವು ವರ್ಷಗಳಿಂದ ಕತಾರ್‌ನಲ್ಲಿ ವಾಹನ ಚಾಲಕ ವೃತ್ತಿಯಲ್ಲಿದ್ದ ಬೆಳ್ತಂಗಡಿ ತಾಲೂಕಿನ ಕಿಲ್ಲೂರು, ನಾಡ ಎಂಬಲ್ಲಿನ ಅಬ್ದುಲ್‌ ಹಮೀದ್‌ ಎಂಬವರು ವಿದೇಶಿಯೊಬ್ಬರಿಂದ ಲಭಿಸಿದ ಹೆಚ್ಚಿನ ವೇತನದ ಬೇರೊಂದು ಉದ್ಯೋಗದ ಆಮಿಷಕ್ಕೆ ಬಲಿಯಾಗಿ ಇದ್ದ ಕೆಲಸವನ್ನೂ ಬಿಟ್ಟು, ಹೆಚ್ಚಿನ ವೇತನ ಸಿಗುವ ಹೊಸ ಕನಸುಗಳೊಂದಿಗೆ ಆ ಹೊಸ ಉದ್ಯೋಗವನ್ನು ಗಿಟ್ಟಿಸಿಕೊಂಡರು. ಕೆಲ ಕಾಲದ ಪರಿಚಯಸ್ಥನಾದುದರಿಂದ ಹಿಂದೆ ಮುಂದೆ ನೋಡದೆ ಕೆಲಸಕ್ಕೆ ಸೇರಿಕೊಂಡರು. ಸಾಮಾನ್ಯವಾಗಿ 10-12 ಗಂಟೆಗಳಷ್ಟಿರುವ ಕೆಲಸವು ಪ್ರಾರಂಭದಿಂದಲೇ ಇಮ್ಮಡಿಯಷ್ಟಾದರೂ ಸುಧಾರಿಸಿಕೊಂಡರು. ಇತರ ಕೆಲವು ಚಾಲಕರು ರಜೆಯಲ್ಲಿದ್ದಾರೆ, ಕೆಲವೇ ದಿನಗಳಲ್ಲಿ ಅವರು ಬಂದುಬಿಡುತ್ತಾರೆ ಸಾವರಿಸಿಕೊಳ್ಳಿ ಅಂತ ಸಮಜಾಯಿಷಿ  ನೀಡಿದರು.

ಅನಂತರದ ದಿನಗಳಲ್ಲಿ ಕಡಿಮೆಯೆಂದರೆ ದಿನಕ್ಕೆ 20 ಗಂಟೆಗಳಷ್ಟಾದರೂ ದುಡಿಯಬೇಕಾದ ಪರಿಸ್ಥಿತಿ ಎದುರಾಗಿತ್ತು. ಹೀಗೆ  2-3 ತಿಂಗಳು ಕಳೆದು   ತನ್ನ ಅಸಹಾಯಕ ವೇದನೆಗೆ ಯಾವುದೇ ಮಾನ್ಯತೆ ಸಿಗದೇ ಇದ್ದಾಗ, ತನಗೆ ಈ ಉದ್ಯೋಗ ಮಾಡಲಾಗುವುದಿಲ್ಲ, ಊರಿಗೆ ಕಳಿಸಿ ಬಿಡಿ ಎಂಬ ಕಠಿನ ನಿರ್ಧಾರಕ್ಕೆ  ಬಂದರು. ಅಂಗಲಾಚಿದರೂ ತನ್ನ 
ಮಾಲಕರು ಕಿವಿಗೊಡಲಿಲ್ಲ. ಹೀಗೆ ಮೋಸಕ್ಕೆ ಬಲಿಯಾಗಿದ್ದೇನೆಂದು ಖಚಿತಗೊಂಡು ಪ್ರತಿಭಟನೆಯೇ ಕೊನೆಯ ಅಸ್ತ್ರವೆಂದುಕೊಂಡು ಕೆಲಸಕ್ಕೆ ಹಾಜರಾಗದೆ ತನ್ನ ವಸತಿ ಸ್ಥಳದಲ್ಲೇ ಕಳೆದರು. ರಾಯಭಾರಿ ಕಚೇರಿ ಮತ್ತು ಇತರ ಕಚೇರಿಗಳಿಗೆ ಹಲವು ಬಾರಿ ಅಲೆದಾಡಿ ಯಾವುದೇ ಪ್ರಯೋಜನವಾಗಲಿಲ್ಲ. ಅತ್ತ ಮಾಲಕರಿಂದಲೂ ಯಾವುದೇ ಪ್ರತಿಕ್ರಿಯೆ ಸಿಗದಿದ್ದಾಗ, ತನ್ನ ಕಷ್ಟವನ್ನು ಊರಿನ ಮತ್ತು ಇತರ ಗಲ್ಫ್  ರಾಷ್ಟ್ರಗಳಲ್ಲಿರುವ ಸ್ನೇಹಿತರಲ್ಲಿ ಹೇಳಿಕೊಂಡಿದ್ದರು.

ಈ ಸಂಕಷ್ಟವನ್ನು ಮನಗಂಡ ಸೌದಿಯಲ್ಲಿರುವ  ಅವರ  ಸ್ನೇಹಿತರಲ್ಲಿ ಯಾರೋ ಒಬ್ಬರು ಅಲ್ಲಿನ ಕೆಸಿಎಫ್‌ ನಾಯಕರ ಗಮನಕ್ಕೆ ತಂದರು. ಕಾರ್ಯದರ್ಶಿ ಅಬ್ದುರ್ರಹೀಂ ಸಅದಿ ಮತ್ತು ಸಾಂತ್ವನ ವಿಭಾಗದ ನಾಯಕ ಅಬ್ದುಲ್‌ ರಜಾಕ್‌ ಮುಂಡ್ಕೂರು  ಅವರು ಫಾರೂಕ್‌ ಕೃಷ್ಣಾಪುರ , ಇಮ್ರಾನ್‌ ಕೂಳೂರು ಇವರ ಸಹಕಾರದೊಂದಿಗೆ ಅವರಿಗೆ ಬೇಕಾದ ಎಲ್ಲ ದಾಖಲೆಗಳನ್ನು ವಾರದೊಳಗೆ ಸರಿಪಡಿಸಿ, ಕಂಪೆನಿಯಿಂದ ಪಾಸ್‌ಪೋರ್ಟ್‌ ಪಡೆದು, ಎಕ್ಸಿಟ್‌ ವ್ಯವಸ್ಥೆಯೊಂದಿಗೆ ಆ.4 ರಂದು ಊರಿಗೆ ಕಳಿಸಿ ಕೊಟ್ಟಿದ್ದಾರೆ.

ಟಾಪ್ ನ್ಯೂಸ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Kalaburagi; Congress government has given 2000 compensation to farmers like beggars: Vijayendra

Kalaburagi; ಕಾಂಗ್ರೆಸ್ ಸರಕಾರ ರೈತರಿಗೆ ಭಿಕ್ಷುಕರಂತೆ 2ಸಾವಿರ ಪರಿಹಾರ ನೀಡಿದೆ: ವಿಜಯೇಂದ್ರ

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

ದ. ಭಾರತದಲ್ಲಿ ಬಿಜೆಪಿ ಎಷ್ಟು ಸ್ಥಾನಗಳಲ್ಲಿ ಜಯಗಳಿಸಬಹುದು? ರೇವಂತ್‌ ರೆಡ್ಡಿ ಲೆಕ್ಕಚಾರವೇನು!

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Pushpa 2: ದಾಖಲೆ ಬೆಲೆಗೆ ʼಪುಷ್ಪ-2ʼ ಡಿಜಿಟಲ್‌ ಹಕ್ಕನ್ನು ಖರೀದಿಸಿದ ನೆಟ್‌ಫ್ಲಿಕ್ಸ್

Rohit Sharma spoke about team selection for T20 World Cup

T20 WC; ‘ಎಲ್ಲವೂ ಸುಳ್ಳು…’: ತಂಡದ ಆಯ್ಕೆ ಬಗ್ಗೆ ಮಹತ್ವದ ಅಪ್ಡೇಟ್ ನೀಡಿದ ರೋಹಿತ್ ಶರ್ಮಾ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

EVM VVPAT case:  ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯತೆ ಇರಬೇಕು: ಆಯೋಗಕ್ಕೆ ಸುಪ್ರೀಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Belthangady ಪಿಕಪ್‌ ಹಿಮ್ಮುಖವಾಗಿ ಚಲಿಸಿ ವ್ಯಕ್ತಿ ಸಾವು

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

Uppinangady ದ್ವಿಚಕ್ರ ವಾಹನಕ್ಕೆ ಟ್ಯಾಂಕರ್‌ ಢಿಕ್ಕಿ; ಮಗು ಸಹಿತ ದಂಪತಿಗೆ ಗಾಯ

Uppinangady ದ್ವಿಚಕ್ರ ವಾಹನಕ್ಕೆ ಟ್ಯಾಂಕರ್‌ ಢಿಕ್ಕಿ; ಮಗು ಸಹಿತ ದಂಪತಿಗೆ ಗಾಯ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

Karwar; ಬಿಜೆಪಿ ಅಭ್ಯರ್ಥಿ ಕಾಗೇರಿ ಜಿಲ್ಲಾ ವಿಭಜನೆಗೆ ಯತ್ನಿಸಿಲ್ಲ: ಸದಾನಂದ ಭಟ್

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

ದಳಪತಿ ಅಭಿಮಾನಿಗಳ ಟ್ರೋಲ್‌ನಿಂದ ಇನ್ಸ್ಟಾ ಖಾತೆಯನ್ನು ನಿಷ್ಕ್ರಿಯಗೊಳಿಸಿದ್ರಾ ಯುವನ್ ಶಂಕರ್?

19-rcb

RCB: ಈ  ಸಲ ಕಪ್‌ ನಮ್ಮದು…

18

Honesty: ಪ್ರಾಮಾಣಿಕರಿಗಿದು ಕಾಲವಲ್ಲ…

Loan: ಸಾಲ ಪಡೆಯಲು ಸತ್ತ ವ್ಯಕ್ತಿಯನ್ನೇ ಬ್ಯಾಂಕಿಗೆ ಕರೆತಂದ ಮಹಿಳೆ… ಕೊನೆಗೆ ಆದದ್ದೇ ಬೇರೆ

Loan: ಸತ್ತ ವ್ಯಕ್ತಿಯನ್ನು ಕರೆತಂದು ಸಾಲ ಪಡೆಯಲು ಮುಂದಾದ ಮಹಿಳೆ… ಕೊನೆಗೆ ಆದದ್ದೇ ಬೇರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.