ಕೆಲಸಕ್ಕೆ ಸೇರಲು ಹೋದವ ಸೇರಿದ್ದು ಮಸಣಕ್ಕೆ! ಹಾಸನದಲ್ಲಿ ಮಾಣಿಯ ಯುವಕ ಸಾವು

Team Udayavani, Nov 25, 2019, 10:44 AM IST

ಬಂಟ್ವಾಳ: ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಹಿರೆಸಾವಿಯಲ್ಲಿ ಅಪಘಾತದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಾಣಿಯ ಯುವಕ ಬಲಿಯಾದ ಘಟನೆ ರವಿವಾರ ರಾತ್ರಿ ನಡೆದಿದೆ.

ಮಾಣಿ ನಿವಾಸಿ ಚಂದಪ್ಪ ಮೂಲ್ಯ ಅವರ ಮೊಮ್ಮಗ, ಉಗ್ಗಪ್ಪ ಮೂಲ್ಯ ಅವರ ಮಗ ಅಭಿಷೇಕ್ (27) ಮೃತಪಟ್ಟಿದ್ದಾನೆ.

ನಿನ್ನೆ ರಾತ್ರಿ ಮಾಣಿಯಿಂದ ಬಸ್ ಹತ್ತಿದ ಅಭಿಷೇಕ್ ವೇಳೆ ಬಸ್ ಪಲ್ಟಿಯಾಗಿ ಮೃತಪಟ್ಟಿದ್ದಾನೆ.

ಅಭಿಷೇಕ್ ಗೆ ಬೆಂಗಳೂರಿನಲ್ಲಿ ಖಾಸಗಿ ಬ್ಯಾಂಕ್ ಒಂದರಲ್ಲಿ ಕೆಲಸ ಸಿಕ್ಕಿದ್ದು ಅತ ಇಂದು ಕೆಲಸಕ್ಕೆ ಸೇರಲಿದ್ದ. ಆದರೆ ಕೆಲಸದ ಉತ್ಸಾಹದಲ್ಲಿ ಮನೆ ಬಿಟ್ಟಿದ್ದ ಅಭಿಷೇಕ್ ಮರಳಿ ಬಾರದ ಲೋಕಕ್ಕೆ ಹೋಗಿದ್ಧಾನೆ.

ಇತ್ತೀಚೆಗೆ ಅಭಿಷೇಕ್ ಕುಟುಂಬ ಬೆಂಗಳೂರಿನಲ್ಲಿ ನೆಲೆಸಿತ್ತು. ನಿನ್ನೆ ಅವರ ಹತ್ತಿರದ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆಂದು ಅವರ ಊರಿಗೆ ಬಂದಿದ್ದರು. ಮದುವೆ ಮುಗಿಸಿ ವಾಪಾಸು ಊರಿನಿಂದ ಬಸ್ ಮೂಲಕ ಬೆಂಗಳೂರಿಗೆ ತಮ್ಮನ ಜೊತೆಯಲ್ಲಿ ಪ್ರಯಾಣ ಬೆಳೆಸಿದ್ದ.‌ ತಮ್ಮನಿಗೂ ಗಾಯಗಳಾಗಿದ್ದು,  ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ