Udayavni Special

ಪತಿ, ಪತ್ನಿ ಹೆಸರಲ್ಲೂ ಖಾತೆ; ಅನರ್ಹತೆ

ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌

Team Udayavani, Jul 22, 2019, 5:33 AM IST

PM

ಸಾಂದರ್ಭಿಕ ಚಿತ್ರ.

ಬೆಳ್ತಂಗಡಿ: ಪ್ರಧಾನಮಂತ್ರಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಉಭಯ ಜಿಲ್ಲೆಗಳಲ್ಲಿ ಅರ್ಹ ಫಲಾನುಭವಿಗಳನ್ನು ಗುರುತಿಸುವುದು ಇಲಾಖೆಗೆ ಇಕ್ಕಟ್ಟಾಗಿರುವ ನಡುವೆ ಅರ್ಜಿದಾರರ ಸಂಖ್ಯೆ 2.52 ಲಕ್ಷ ಮುಟ್ಟಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 3,98,818 ಲಕ್ಷ ಖಾತೆದಾರರ ಪೈಕಿ 2.52 ಲಕ್ಷಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿವೆ. ಜು.19ರ ವರೆಗಿನಅಂಕಿಅಂಶ ಪ್ರಕಾರ 1,24,362 ಮಂದಿ ಖಾತೆದಾರರು ಅರ್ಹರೆಂದು ಪರಿಗಣಿಸಲಾಗಿದೆ. ಉಡುಪಿ ಜಿಲ್ಲೆಯಲ್ಲಿ 1,89,900 ಲಕ್ಷ ಖಾತೆದಾರರು ಅರ್ಜಿಸಲ್ಲಿಸಿದ್ದು, 1,27,613 ಮಂದಿಯನ್ನು ಅರ್ಹರೆಂದು ಗುರುತಿಸಲಾಗಿದೆ. ಕಂದಾಯ ಇಲಾಖೆಯಿಂದ ಮತ್ತೂಂದು ಸುತ್ತಿನ ಪರಿಶೀಲನೆಯಾಗುತ್ತಿದೆ. ಒಂದೇ ಕುಟುಂಬದ ಪತಿ, ಪತ್ನಿ,ಮಕ್ಕಳ ಹೆಸರಲ್ಲಿ ಜಮೀನು ಹೊಂದಿದ್ದು,ಎಲ್ಲರೂ ಅರ್ಜಿ ಸಲ್ಲಿಸಿರುವುದು ಇಲಾಖೆಯ ಗಮನಕ್ಕೆ ಬಂದಿದೆ. ಅಂಥ ಫಲಾನುಭವಿಗಳ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಮತ್ತಷ್ಟು ಫಲಾನುಭವಿಗಳು ಇದರಿಂದ ಅವಕಾಶ ವಂಚಿತರಾಗುವ ಸಾಧ್ಯತೆಯೂ ಇದೆ ಎಂದು ಇಲಾಖಾ ಅಧಿಕಾರಿಗಳು ತಿಳಿಸಿದ್ದಾರೆ.

ಚುನಾವಣೆ ವೇಳೆ ಪ್ರಧಾನಿ ಮೋದಿಅವರು ರೈತರಿಗೆ ನೇರವಾಗಿ ಹಣ ನೀಡುವ ಯೋಜನೆ ಘೋಷಿಸಿದ್ದರು. ಆದಾದ ಕೆಲವೇ ದಿನಗಳಲ್ಲಿ ನೀತಿ ಸಂಹಿತೆ ಜಾರಿಯಾಗಿ ಹಣಸಂದಾಯ ಸ್ಥಗಿತಗೊಂಡಿತ್ತು. ಮತ್ತೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ ಹಣ ಬಿಡುಗಡೆ ಪುನರಾರಂಭವಾಗಿದೆ.

ಎರಡೂವರೆ ಲಕ್ಷ ರೈತರಿಗೆ ಲಾಭ
ರಾಜ್ಯದಲ್ಲಿ ಈಗಾಗಲೇ ರೈತರ ಖಾತೆಗಳಿಗೆ ಮೊದಲ ಕಂತಿನ 2 ಸಾವಿರ ರೂ. ಹಣ ನೇರ ಜಮೆ ಆಗಿದೆ.ಈ ಮುನ್ನ ಕೇವಲ ಸಣ್ಣ ಹಿಡುವಳಿದಾರರಿಗೆ ಮೀಸಲಾಗಿದ್ದ ಈ ಯೋಜನೆಯನ್ನು ಈಗ ತೆರಿಗೆ ಪಾವತಿಸುವವರು ಮತ್ತು ಸರಕಾರಿ, ಅರೆ ಸರಕಾರಿ ನೌಕರಿ ಹೊಂದಿರುವವರನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ರೈತರಿಗೆ ವಿಸ್ತರಿಸಲಾಗಿದೆ. ಹೀಗಾಗಿ ದ.ಕ., ಉಡುಪಿ ಜಿಲ್ಲೆಯ 2,51,975 ಅರ್ಜಿದಾರ ರೈತರು ಯೋಜನೆಯ ಲಾಭ ಪಡೆಯಲಿದ್ದಾರೆ.

ಬೆಳ್ತಂಗಡಿ, ಕುಂದಾಪುರ ಗರಿಷ್ಠ
ಆರಂಭದಲ್ಲಿ ಅರ್ಜಿ ಸಲ್ಲಿಸಲು ರೈತರು ಹಿಂದೇಟು ಹಾಕಿದ್ದರು. ಬಳಿಕದ ದಿನಗಳಲ್ಲಿ ಕೃಷಿ, ತೋಟಗಾರಿಕೆ, ನಾಡ ಕಚೇರಿ, ಗ್ರಾ.ಪಂ. ಸೇರಿದಂತೆ ಗ್ರಾಮ ಲೆಕ್ಕಾಧಿಕಾರಿ ಮೂಲಕವೂ ಅರ್ಜಿ ಸ್ವೀಕರಿಸುವ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಕೃಷಿ ಇಲಾಖೆ ಅಧಿಕಾರಿಗಳು, ಸಹಕಾರಿ ಸಂಘಗಳವರು ಉಭಯ ಜಿಲ್ಲೆಗಳಲ್ಲಿ ಮನೆ ಭೇಟಿ ನಡೆಸಿ ಯೋಜನೆಯ ಮಾಹಿತಿ ನೀಡಲು, ಅರ್ಜಿ ಸ್ವೀಕರಿಸಲುಮುಂದಾಗಿದ್ದಾರೆ. ದ.ಕ. ಜಿಲ್ಲೆಯಲ್ಲಿ ಬೆಳ್ತಂಗಡಿ ತಾ|ನಲ್ಲಿ ಗರಿಷ್ಠ 29,835 ಮತ್ತು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ಗರಿಷ್ಠ 36,946 ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ.

ಮೂರು ಲಕ್ಷಕ್ಕೂ ಅಧಿಕ ಖಾತೆದಾರರ ಸಂಖ್ಯೆ ಇದ್ದರೂ ಭೂ ಪರಿವರ್ತನೆ, ಇತರ ವಾಣಿಜ್ಯ ಉದ್ದೇಶಗಳಿಂದ ಒಂದೇ ಕುಟುಂಬದ ಪತಿ, ಪತ್ನಿ ಇಬ್ಬರ ಹೆಸರಲ್ಲಿ ಖಾತೆಗಳಿವೆ. ಅರ್ಹರನ್ನು ಪರಿಗಣಿಸುವ ಅವಧಿಯಲ್ಲಿ ಮತ್ತಷ್ಟು ಅರ್ಜಿ ತಿರಸ್ಕಾರಗೊಳ್ಳುವ ಸಾಧ್ಯತೆ ಇದೆ. ಬಾಕಿ ಉಳಿದಿರುವ ಅರ್ಜಿದಾರರು ಆನ್‌ಲೈನ್‌ ಮೂಲಕವೂ ಅರ್ಜಿ ಸಲ್ಲಿಸಬಹದು.
– ಸೀತಾ ಸಿ., ದ.ಕ. ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು

ಉಡುಪಿ ಜಿಲ್ಲೆಯಲ್ಲಿ ಕಿಸಾನ್‌ ಸಮ್ಮಾನ್‌ ಯೋಜನೆಯಡಿ ಹೊಂದಲಾದ ಗುರಿ ಶೇ.90 ಪೂರ್ಣವಾಗಿದೆ. ಆಧಾರ್‌ ಸಮಸ್ಯೆ, ಊರಿನಿಂದ ಹೊರಗುಳಿದವರು ಹೊರತುಪಡಿಸಿ 1.27 ಲಕ್ಷ ಮಂದಿಯನ್ನು ಅರ್ಹರು ಎಂದು ಪರಿಗಣಿಸಲಾಗಿದೆ. ಬಾಕಿ ಉಳಿದಿದ್ದವರು ಈ ತಿಂಗಳ ಒಳಗಾಗಿ ಅರ್ಜಿ ಸಲ್ಲಿಸದೆ ಹೋದಲ್ಲಿ ಮೊದಲ ಕಂತು ಜಮೆಗೆ ಸಮಸ್ಯೆಯಾಗಲಿದೆ.
– ಕೆಂಪೇಗೌಡ, ಉಡುಪಿ ಜಿಲ್ಲಾ ಜಂಟಿ ಕೃಷಿ ನಿರ್ದೇಶಕರು

ಖಾತೆಗೆ ಸಂದಾಯ ವಿವರ
ದ.ಕ. ಜಿಲ್ಲೆಮೊದಲ ಕಂತು 61,884 (ರೈತ ಖಾತೆ) ಎರಡನೇ ಕಂತು 5,629 ಉಡುಪಿ ಜಿಲ್ಲೆಮೊದಲ ಕಂತು 32,293 ಎರಡನೇ ಕಂತು 2,214

-ಚೈತ್ರೇಶ್‌ ಇಳಂತಿಲ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಏ.1ರಿಂದ ಜಾರಿ: ಸಂಸದರ ಸಂಬಳ ಕಡಿತ ತಿದ್ದುಪಡಿ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ಕೋವಿಂದ್ ಅಂಕಿತ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ಫುಟ್ ಬಾಲ್ ವಿಶ್ವಕಪ್‌ಗಾಗಿ ರಷ್ಯಾ, ಕತಾರ್‌ನಿಂದ ಲಂಚ: ಅಮೆರಿಕ ಕಾನೂನು ಸಚಿವಾಲಯದ ಆರೋಪ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

ದೊಡ್ಡಬಳ್ಳಾಪುರ ಕೃಷಿ ಮಾರುಕಟ್ಟೆಗೆ ಸಚಿವ ಎಸ್ ಟಿ ಸೋಮಶೇಖರ್ ಭೇಟಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

Covid-19 ವೈರಸ್ ಬಗ್ಗೆ ಮುಚ್ಚಿಟ್ಟಿದ್ಯಾಕೆ, ವಿಶ್ವ ಆರೋಗ್ಯ ಸಂಸ್ಥೆ ಚೀನಾ ಪರ: ಟ್ರಂಪ್ ಕಿಡಿ

whatsapp-message

ನಿಮ್ಮ ವಾಟ್ಸಾಪ್ ಸಂದೇಶಗಳ ಮೇಲೆ ಸರ್ಕಾರದ ಹದ್ದಿನಕಣ್ಣು ? ಪಿಐಬಿ ಹೇಳಿದ್ದೇನು ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಓಟಾಟ

ಚಾರ್ಮಾಡಿ ಘಾಟಿಯಲ್ಲಿ ಒಂಟಿ ಸಲಗ ಓಟಾಟ

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ; 71,000 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು

71,000 ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು

ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!

ಬ್ಯಾಂಕ್ ದಾಖಲೆ ಕೇಳಿ ಹಣ ಗುಳುಂ ಮಾಡುವ ದಂಧೆ…ಎಚ್ಚರ.!

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

ಬಾಗಿಲು ತೆಗೆದ ಕೃಷಿ ಉಪಕರಣಗಳ ಅಂಗಡಿ

ಒಟಿಪಿ ಇಲ್ಲದೆ ಪಡಿತರ ವಿತರಿಸಿ: ಕೋಟ ಮರುಆದೇಶ

ಒಟಿಪಿ ಇಲ್ಲದೆ ಪಡಿತರ ವಿತರಿಸಿ: ಕೋಟ ಮರುಆದೇಶ

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

08-April-6

ದಿನಬಳಕೆ ವಸ್ತುಗಳ ದರ ಹೆಚ್ಚಳಕ್ಕೆ ಹೈರಾಣಾದ ಸಾರ್ವಜನಿಕರು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

ಉಸಿರುಗಟ್ಟಿಸುವ ರಕ್ಷಣಾ ಕವಚಗಳು

08-April-5

ಅಭಿವೃದ್ಧಿಗೆ ಕೊರೊನಾ ಲಾಕ್‌ಡೌನ್‌ ಅಡ್ಡಿ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಆಸ್ಪತ್ರೆಯಲ್ಲಿ ಎಲ್ಲೆಂದರಲ್ಲಿ ಉಗಿದು ಪುಂಡಾಟ: ಮೂವರು ಪೊಲೀಸ್ ವಶಕ್ಕೆ

ಲಾಕ್‌ಡೌನ್‌: ಖನ್ನತೆಯಲ್ಲಿ ಟೆಕ್ಕಿಗಳೇ ಹೆಚ್ಚು!

ಲಾಕ್‌ಡೌನ್‌: ಖನ್ನತೆಯಲ್ಲಿ ಟೆಕ್ಕಿಗಳೇ ಹೆಚ್ಚು!