ಹೆಚ್ಚುವರಿ ಸ್ವ್ಯಾಬ್‌ ಟೆಸ್ಟ್‌ ಖಾಸಗಿ ಮೆಡಿಕಲ್‌ ಕಾಲೇಜಿಗೆ ರವಾನೆ?


Team Udayavani, May 6, 2021, 4:00 AM IST

ಹೆಚ್ಚುವರಿ ಸ್ವ್ಯಾಬ್‌ ಟೆಸ್ಟ್‌ ಖಾಸಗಿ ಮೆಡಿಕಲ್‌ ಕಾಲೇಜಿಗೆ ರವಾನೆ?

ಮಹಾನಗರ: ಕೋವಿಡ್ ಪರೀಕ್ಷೆಯ ವರದಿ ಸದ್ಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತಡವಾಗಿ ಸಿಗುತ್ತಿರುವ ಕಾರಣದಿಂದ, ಹೆಚ್ಚುವರಿ ಸ್ವ್ಯಾಬ್‌  ಟೆಸ್ಟ್‌ಗಳನ್ನು ಜಿಲ್ಲೆಯ ಖಾಸಗಿ ಮೆಡಿಕಲ್‌ ಕಾಲೇಜಿನಿಂದಲೇ ನಡೆಸಲು ಸರಕಾರ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯಿದೆ.

ಖಾಸಗಿ ಮೆಡಿಕಲ್‌ ಕಾಲೇಜಿನಿಂದಲೇ ಟೆಸ್ಟ್‌ ರಿಪೋರ್ಟ್‌ ದೊರೆಯುವಂತೆ ಮಾಡಿದರೆ ರಿಪೋರ್ಟ್‌ ಬೇಗನೆ ದೊರೆಯಬಹುದು; ಹೀಗಾಗಿ, ಅವಕಾಶ ನೀಡುವಂತೆ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಆರೋಗ್ಯ ಸಚಿವ ಡಾ| ಕೆ. ಸುಧಾಕರ್‌ ಅವರಿಗೆ ಪತ್ರ ಬರೆದಿದ್ದಾರೆ. ಇದು ಸಾಧ್ಯವಾದರೆ ಪರೀಕ್ಷಾ ಫಲಿತಾಂಶ 24 ಗಂಟೆಯೊಳಗೆ ದೊರೆಯುವ ಸಾಧ್ಯತೆಯಿದೆ.

ಸುಳ್ಯ-ಪುತ್ತೂರು ತಾಲೂಕುಗಳ ಸ್ವ್ಯಾಬ್‌ಗಳನ್ನು ಸುಳ್ಯ ಕೆವಿಜಿ ಮೆಡಿಕಲ್‌ ಕಾಲೇಜಿನ ಲ್ಯಾಬ್‌ನಲ್ಲಿ ಟೆಸ್ಟ್‌ ಮಾಡಲು, ಇತರ ತಾಲೂಕುಗಳ ಸ್ವ್ಯಾಬ್‌ಗಳನ್ನು ಇತರ ಖಾಸಗಿ ಮೆಡಿಕಲ್‌ ಕಾಲೇಜುಗಳಲ್ಲಿ ಟೆಸ್ಟ್‌ ಮಾಡಲು ಅವಕಾಶ ದೊರೆತರೆ ಒಂದು ದಿನಗಳೊ ಳಗೆ ಪರೀಕ್ಷಾ ವರದಿ ಪಡೆಯಲು ಸಾಧ್ಯವಾಗಲಿದೆ. ಇದಕ್ಕೆ ಬೇಕಾಗುವ ಖರ್ಚನ್ನು ಜಿಲ್ಲಾಡಳಿತದ ಕೋವಿಡ್‌ ಪರಿಹಾರ ನಿಧಿಯಿಂದ ಭರಿಸಲು ಅವಕಾಶ ನೀಡುವಂತೆ ಪತ್ರದಲ್ಲಿ ಕೋರಲಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಯಲ್ಲಿ ಕೋವಿಡ್ ಸ್ವ್ಯಾಬ್‌ ತೆಗೆಯಲಾಗುತ್ತದೆ. ಜಿಲ್ಲೆಯ 10 ಪ್ರಯೋಗಾಲಯದಲ್ಲಿ ಸ್ವ್ಯಾಬ್‌ ಪರೀಕ್ಷೆ ನಡೆಸಲಾಗುತ್ತದೆ. ಪ್ರತೀ ದಿನ ಸರಾಸರಿ ಸುಮಾರು 5ರಿಂದ 6 ಸಾವಿರ ಕೋವಿಡ್‌ ತಪಾಸಣೆ ನಡೆಸಲಾಗುತ್ತಿದೆ. ಕೆಲವು ದಿನಗಳಿಂದೀಚೆಗೆ ಕೋವಿಡ್ ತಪಾಸಣೆ ಚುರುಕಾಗಿದ್ದು, ಸರಕಾರಿ ವಲಯದಲ್ಲಿ ತಪಾಸಣೆ ವರದಿ ಬರಲು ಕೆಲವು ದಿನ ಬೇಕು. ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ ಒತ್ತಡದ ಪರಿಣಾಮ ಸ್ವ್ಯಾಬ್‌ ಅನ್ನು ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಸರಕಾರಿ ಪ್ರಯೋಗಾಲಯಕ್ಕೆ ಕಳುಹಿಸಿ ಕೊಡಲಾಗುತ್ತಿದೆ.

ಕೋವಿಡ್ ವರದಿ ಸಿಗಲು 8 ದಿನ! :

ಕೋವಿಡ್ ನಿಯಂತ್ರಣಕ್ಕೆ ಶೀಘ್ರ ರೋಗ ಪತ್ತೆಯೇ ಅತ್ಯಂತ ಮುಖ್ಯ. ವರದಿ ವಿಳಂಬವಾದಷ್ಟು ರೋಗಿಗಳನ್ನು ಗುರುತಿಸಿ ಪ್ರತ್ಯೇಕಿಸುವುದು ಕಷ್ಟ. ಹೀಗಾಗಿ ಸೋಂಕು ವೃದ್ಧಿಗೂ ಕಾರಣವಾಗುತ್ತದೆ. ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯ 8 ವೈದ್ಯಕೀಯ ಕಾಲೇಜ, ವೆನ್ಲಾಕ್ ಆಸ್ಪತ್ರೆಯಲ್ಲಿ ಆರ್‌ಟಿ-ಪಿಸಿಆರ್‌ ಪರೀಕ್ಷೆ ನಡೆಯುತ್ತಿವೆ. ವೆನ್ಲಾಕ್‌ನಲ್ಲಿ ಪ್ರತೀದಿನ 2,500ಕ್ಕೂ ಅಧಿಕ ಪರೀಕ್ಷೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ತಲಾ 300ರಷ್ಟು ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಸ್ವ್ಯಾಬ್ ಸಂಗ್ರಹ ಹೆಚ್ಚುತ್ತಿರುವ ಕಾರಣದಿಂದ ಪರೀಕ್ಷೆ ವರದಿ ದಿನದಿಂದ ದಿನಕ್ಕೆ ಬಾಕಿಯಾಗುತ್ತಿದೆ. ಆರ್‌ಟಿ-ಪಿಸಿಆರ್‌ ಪರೀಕ್ಷೆ ವರದಿ 24ರಿಂದ 48 ಗಂಟೆ ಅವಧಿಯಲ್ಲಿ ದೊರೆಯಬೇಕು. ಆದರೆ ಈಗ ವಾರ ಕಳೆದರೂ ವರದಿ ಸಿಗುತ್ತಿಲ್ಲ.

ವೆನ್ಲಾಕ್‌ನಲ್ಲಿ ಕಾರ್ಯಾರಂಭಿಸಿದ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರ  :

ವೆನ್ಲಾಕ್‌ ಜಿಲ್ಲಾಸ್ಪತ್ರೆಯ ಪ್ರಯೋಗಾಲಯದಲ್ಲಿ ಕೋವಿಡ್ ಸ್ವ್ಯಾಬ್‌ ಟೆಸ್ಟ್‌ ಮಾಡಲಾಗುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಹೆಚ್ಚಿದ ಕಾರ್ಯದೊತ್ತಡದಿಂದಾಗಿ ಟೆಸ್ಟಿಂಗ್‌ ವ್ಯವಸ್ಥೆ ನಿಧಾನ ವಾಗುತ್ತಿತ್ತು. ಸ್ವ್ಯಾಬ್‌ ತೆಗೆದು 7-8 ದಿನಗಳಾದರು ವರದಿ ದೊರಕದೆ ವಿಳಂಬವಾಗುತ್ತಿತ್ತು ಎಂಬ ದೂರು ಕೇಳಿಬಂದಿತ್ತು. ಹೀಗಾಗಿ ಕೊರೊನಾ ಪರೀಕ್ಷೆಯ ಫಲಿತಾಂಶ ವಿಳಂಬವಿಲ್ಲದೇ ದೊರೆಯಬೇಕು ಎಂಬ ಉದ್ದೇಶದಿಂದ ಜಿಲ್ಲಾ ವೆನ್ಲಾಕ್‌ ಆಸ್ಪತ್ರೆಯಲ್ಲಿ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರವನ್ನು ಬುಧವಾರ ಹೊಸದಾಗಿ ತರಿಸಲಾಗಿದೆ. ಹೀಗಾಗಿ ಮುಂದೆ ಪ್ರತೀದಿನಕ್ಕೆ 3500 ಸ್ವ್ಯಾಬ್‌ ಟೆಸ್ಟ್‌ ಮಾಡಿ 24 ಅಥವಾ 36 ಗಂಟೆಯೊಳಗೆ ವರದಿ ನೀಡಲು ಸಾಧ್ಯವಾಗಲಿದೆ.

ದ.ಕ. ಜಿಲ್ಲೆಯಲ್ಲಿ ಕೊರೊನಾ ಪರೀಕ್ಷೆಯ ಹೆಚ್ಚುವರಿ ಸ್ವ್ಯಾಬ್‌ಗಳ ವರದಿಯನ್ನು ಶೀಘ್ರ ನೀಡುವ ನಿಟ್ಟಿನಲ್ಲಿ ಖಾಸಗಿ ಮೆಡಿಕಲ್‌ ಕಾಲೇಜಿನಿಂದಲೇ ವರದಿ ನಡೆಸಲು ಅನುಮತಿ ಕೇಳಿ ಆರೋಗ್ಯ ಸಚಿವರನ್ನು ಕೋರಲಾಗಿದೆ. ಒಂದೆರಡು ದಿನದಲ್ಲಿ ಅನುಮತಿ ದೊರೆಯುವ ನಿರೀಕ್ಷೆಯಿದೆ. ಜತೆಗೆ ವೆನ್ಲಾಕ್‌ನಲ್ಲಿ 3ನೇ ಹೆಚ್ಚುವರಿ ಪರೀಕ್ಷಾ ಯಂತ್ರವು ಬುಧವಾರದಿಂದ ಕಾರ್ಯಾರಂಭಿಸಿದ್ದು, ವರದಿ ಬೇಗ ದೊರೆಯಲಿದೆ.  ಕೋಟ ಶ್ರೀನಿವಾಸ ಪೂಜಾರಿ, ದ.ಕ. ಜಿಲ್ಲಾ ಉಸ್ತುವಾರಿ ಸಚಿವರು

ಟಾಪ್ ನ್ಯೂಸ್

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಸೂಚನೆ

ನಿರ್ದಿಷ್ಟ ಗಡುವಿನೊಳಗೆ ಯೋಜನೆ ಜಾರಿಗೆ ಪ್ರಧಾನಿ ಮೋದಿ ಸೂಚನೆ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ ಇಬ್ಬರು ಕಾನ್‌ಸ್ಟೇಬಲ್‌ಗಳ ಬಂಧನ

ಸಿಎಂ ಮನೆ ಭದ್ರತೆಗೆ ನಿಯೋಜನೆಗೊಂಡಿದ್ದ 2 ಕಾನ್‌ಸ್ಟೇಬಲ್‌ಗಳು ಪರಪ್ಪನ ಅಗ್ರಹಾರದಲ್ಲಿ ಬಂಧಿ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನ

ಎಟಿಎಸ್‌ ಸ್ಥಾಪಿಸಿದ ಐಪಿಎಸ್‌ ಅಧಿಕಾರಿ ಅಫ್ತಾಬ್‌ ಅಹ್ಮದ್‌ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ ಭರದಿಂದ ಸಾಗಿದ ಹಳಿ ಕಾಮಗಾರಿ

ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ ಭರದಿಂದ ಸಾಗಿದ ಹಳಿ ಕಾಮಗಾರಿ

ಪಶು ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಸಿದ್ಧ; ಪ್ರಾಣಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ

ಪಶು ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಸಿದ್ಧ; ಪ್ರಾಣಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ

1-fdsfdsf

ಬಂಟ್ವಾಳ : ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ ಪತ್ತೆ

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ದ್ಗತಜಹಗ್ದ

ಬೆಂಕಿ ಅವಘಢ: 3 ಎಕರೆ ಅಡಕೆ ತೋಟ ನಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.