ವಾಯುಮಾಲಿನ್ಯ: ಅಪಾಯದ ಕರೆಗಂಟೆ 


Team Udayavani, Dec 6, 2018, 9:59 AM IST

6-december-1.gif

ಮಹಾನಗರ: ಮಹಾನಗರದಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದಿಂದಾಗಿ ಆರೋಗ್ಯ ಸಹಿತ ನಗರ ಜನ ಜೀವನದ ಮೇಲೆ ಗಂಭೀರ ಪರಿಣಾಮಗಳನ್ನು ಬೀರುತ್ತಿರುವ ಆಘಾತಕಾರಿ ವಿಷಯವನ್ನು ಸಾರಿಗೆ ಇಲಾಖೆ ನಡೆಸಿರುವ ಅಧ್ಯಯನ ವೊಂದರಿಂದ ಬಹಿರಂಗಗೊಂಡಿದೆ.

ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ಹಾಗೂ ಆ್ಯಂಟಿ ಪೊಲ್ಯುಶನ್‌ ಡ್ರೈವ್‌ ಸಂಸ್ಥೆ ಸಹಯೋಗದಲ್ಲಿ ನಡೆಸಿದ ಅಧ್ಯಯನದಲ್ಲಿ ‘ನಗರದಲ್ಲಿ ಜನರ ಆರೋಗ್ಯ ಹದಗೆಡುತ್ತಿರುವುದಕ್ಕೆ ಹೆಚ್ಚಾಗುತ್ತಿರುವ ವಾಯುಮಾಲಿನ್ಯ ಕೂಡ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ’. ಆ್ಯಂಟಿ ಪೊಲ್ಯುಶನ್‌ ಡ್ರೈವ್‌ ಸಂಸ್ಥೆ ಆರ್‌ಟಿಒ ಸೂಚನೆ ಮೇರೆಗೆ ಒಂದು ತಂಡವನ್ನು ರಚಿಸಿ ಆ ಮೂಲಕ ದಿನನಿತ್ಯ ಕಚೇರಿ ಹೊರಭಾಗದಲ್ಲಿ ದುಡಿಯುವ ಜನರನ್ನು ಆಯ್ಕೆ ಮಾಡಿಕೊಂಡು ಮೂರು ಹಂತಗಳಲ್ಲಿ ಅವರ ಶ್ವಾಸಕೋಶದ ಪರೀಕ್ಷೆ ಮಾಡಿತ್ತು. ಮೊದಲ ಹಂತದಲ್ಲಿ ಟ್ರಾಫಿಕ್‌ ಪೊಲೀಸರು, ಎರಡನೇ ಹಂತದಲ್ಲಿ ರಿಕ್ಷಾ ಡ್ರೈವರ್‌, ಮೂರನೇ ಹಂತದಲ್ಲಿ ಬೀದಿ ಬದಿ ವ್ಯಾಪಾರಸ್ಥರನ್ನು ಪರೀಕ್ಷಿಸಲಾಗಿತ್ತು. ಅಧ್ಯಯನದ ವರದಿಯಲ್ಲಿ ಕಚೇರಿ ಹೊರಭಾಗದಲ್ಲಿ ಕೆಲಸ ಮಾಡುವ ಬಹುತೇಕ ಮಂದಿಗೆ ವಾಹನಗಳ ಹೊಗೆ ಇನ್ನಿತರ ಮಾಲಿನ್ಯದಿಂದ ಶ್ವಾಸಕೋಶದ ತೊಂದರೆ ಎದುರಾಗಿರುವುದು ಬಯಲಾಗಿದೆ.

ಬೀದಿ ವ್ಯಾಪಾರಿಗಳ ಪರೀಕ್ಷೆ
ಕೈಗಾರಿಕೆ, ವಾಹನಗಳ ಹೊಗೆ ಮೊದಲಾದವುಗಳಿಂದ ಉಂಟಾಗುತ್ತಿರುವ ವಾಯುಮಾಲಿನ್ಯದಿಂದ ಜನರ ಆರೋಗ್ಯದ ಮೇಲೆ ಬೀರುವ ಪರಿಣಾಮದ ಬಗ್ಗೆ ಸಂಸ್ಥೆ ತಂಡ ರಚಿಸಿ ಅಧ್ಯಯನ ನಡೆಸಿತು. ಅಧ್ಯಯನಕ್ಕಾಗಿ ನಗರದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುವ ಬೀದಿಬದಿ ವ್ಯಾಪಾರಸ್ಥರ ಪಲ್ಮನರಿ ಫಂಕ್ಷನ್‌ ಟೆಸ್ಟ್‌ ನಡೆಸಿತ್ತು.

ಅದರ ಆಧಾರದ ಮೇಲೆ ಬಂದ ವರದಿಯ ಪ್ರಕಾರ 174 ಜನರಲ್ಲಿ 61 ಜನರು ಶ್ವಾಸಕೋಸದ ತೊಂದರೆ ಅನುಭವಿಸುತ್ತಿದ್ದಾರೆ. ಅಂದರೆ ಶೇ.35ರಷ್ಟು ಜನ ವಾಯುಮಾಲಿನ್ಯದಿಂದ ಶ್ವಾಸಕೋಶದ ತೊಂದರೆ ಅನುಭವಿಸುತ್ತಿದ್ದಾರೆ. ಈ ಹಿಂದೆ ರಿಕ್ಷಾ ಚಾಲಕರ ಶ್ವಾಸಕೋಸ ಪರೀಕ್ಷೆಯಲ್ಲಿ ಶೇ.19ರಷ್ಟು ರಿಕ್ಷಾ ಡ್ರೈವರ್‌ ಗಳಿಗೆ ಶ್ವಾಸಕೋಸದ ಸಮಸ್ಯೆ ಇದೆ ಎಂದು ತಿಳಿದು ಬಂದಿತ್ತು.

ತಂಡದಲ್ಲಿ ವೈದ್ಯರು, ತಂತ್ರಜ್ಞರು
ವಾಯುಮಾಲಿನ್ಯ ಜನರ ಆರೋಗ್ಯದ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರಿದೆ ಎಂಬುದನ್ನು ತಿಳಿದುಕೊಳ್ಳಲು ಆ್ಯಂಟಿ ಪೊಲ್ಯುಶನ್‌ ಡ್ರೈವ್‌ ಸಂಸ್ಥೆ ಸದಸ್ಯರು, ವೈದ್ಯರು ಹಾಗೂ ತಂತ್ರಜ್ಞರನ್ನೊಳಗೊಂಡ ತಂಡ ಕಚೇರಿ ಹೊರಭಾಗದಲ್ಲಿ ಕರ್ತವ್ಯ ನಿರ್ವಹಿಸುವ ಜನರ ಬಳಿ ತೆರಳಿ ಅರ್ಜಿ ನಮೂನೆಯನ್ನು ಭರ್ತಿ ಮಾಡಲು ನೀಡಿತ್ತು. ಅದರಲ್ಲಿ ಧೂಮಪಾನ ಮಾಡುತ್ತಾರೆಯೇ, ಅಸ್ತಮಾ ಇದೆಯೇ ಸಹಿತ 8 ಪ್ರಶ್ನೆಗಳನ್ನು ಕೇಳಲಾಗಿತ್ತು. ಬಳಿಕ ಫಲ್‌ವುನರಿ ಫಂಕ್ಷನ್‌ ಟೆಸ್ಟ್‌ ಮಾಡಲಾಗಿತ್ತು. ವೈದ್ಯರು ಇದನ್ನು ಪರಿಶೀಲಿಸಿ ವರದಿ ನೀಡಿದ್ದರು.

174ರಲ್ಲಿ 61 ಜನರಿಗೆ ಶ್ವಾಸಕೋಶ ಸಮಸ್ಯೆ
ತಂಡ ಸುಮಾರು 215 ಜನರನ್ನು ಪರೀಕ್ಷೆಗೆ ಒಳಪಡಿಸಿತ್ತು. ಅದರಲ್ಲಿ ಕೆಲವು ಜನರ ತಪಾಸಣೆಯಲ್ಲಿ ತಪ್ಪಾದ ಹಿನ್ನೆಲೆಯಲ್ಲಿ ಒಟ್ಟು 174 ಜನರ ಶ್ವಾಸಕೋಶ ತಪಾಸಣೆ ಸರಿಯಾಗಿ ನಡೆಯಿತು. ವರದಿಯ ಪ್ರಕಾರ ಅದರಲ್ಲಿ 61 ಮಂದಿಗೆ ಶ್ವಾಸಕೋಶದಲ್ಲಿ ತೊಂದರೆ ಕಂಡುಬಂದಿದೆ. ಅಚ್ಚರಿ ಎಂದರೆ ಅದರಲ್ಲಿ 51 ಮಂದಿ ಯಾವುದೇ ದುಶ್ಚಟ ಇಲ್ಲದೆ ಇದ್ದರೂ ಅವರಿಗೆ ದಿನನಿತ್ಯದ ಮಾಲಿನ್ಯದಿಂದಾಗಿ ಸಮಸ್ಯೆ ಎದುರಾಗಿದೆ.

ಆರೋಗ್ಯ ಸಮಸ್ಯೆ ಹೆಚ್ಚಳ
ವಾಹನ ದಟ್ಟಣೆ, ಇತರ ಮಾಲಿನ್ಯಗಳಿಂದ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಆ ಹಿನ್ನೆಲೆಯಲ್ಲಿ ಆರ್‌ ಟಿಒ ಜತೆ ಸೇರಿ ನಾವು ಅಧ್ಯಯನ ಮಾಡಿದೆವು. ಪರೀಕ್ಷೆಯಲ್ಲಿ ಲಂಗ್ಸ್‌ ಯಾವ ರೀತಿ ಕಾರ್ಯಾಚರಿಸುತ್ತಿದೆ ಎಂಬುದನ್ನು ತಪಾಸಣೆ ಮಾಡಿದ್ದೆವು. ವರದಿಯನ್ನು ಡಾ| ಇರ್ಫಾನ್‌ ಅವರು ಪರೀಕ್ಷಿಸಿ ಸಮಸ್ಯೆಯನ್ನು ತಿಳಿಸಿದ್ದಾರೆ.
– ಅಬ್ದುಲ್ಲಾ ಎ. ರೆಹಮಾನ್‌,
ಸ್ಥಾಪಕರು, ಆ್ಯಂಟಿ ಪೊಲ್ಯುಶನ್‌ ಡ್ರೈವ್‌ ಸಂಸ್ಥೆ

ಹೆಚ್ಚು ಹೊಗೆ; ವಾಹನಗಳ ವಿರುದ್ಧ ಕ್ರಮ
ನಗರದಲ್ಲಿ ಸಂಚರಿಸುವ ವಾಹನದಲ್ಲಿ ನಿಗದಿತ ಮಾನದಂಡಕ್ಕಿಂತ ಹೆಚ್ಚು ಹೊಗೆ ಉಗುಳುವ ವಾಹನಗಳ ವಿರುದ್ಧ ಕ್ರಮ ಜರಗಿಸಲಾಗುವುದು. ವಾಯುಮಾಲಿನ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ನಮ್ಮೊಂದಿಗೆ ಸಾರ್ವಜನಿಕರು ಕೈ ಜೋಡಿಸಬೇಕು.
– ಜಾನ್‌ ಮಿಸ್ಕಿತ್‌, 
ಆರ್‌ಟಿಒ ಅಧಿಕಾರಿ (ಪ್ರಭಾರ)

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಮೈಸೂರಿನಲ್ಲಿ ಜೋಡಿ ಕೊಲೆ: ಮಗನಿಂದಲೇ ತಂದೆ, ತಂದೆಯ ಪ್ರೇಯಸಿಯ ಬರ್ಬರ ಕೊಲೆ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

ಟಿ20 ವಿಶ್ವಕಪ್‌ ಕ್ರಿಕೆಟ್‌: ಸೂಪರ್‌-12 ಹಂತಕ್ಕೆ ನೆಗೆದ ಲಂಕಾ, ಬಾಂಗ್ಲಾ

PM Narendra Modi to address nation at 10 am today

ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಪ್ರಧಾನಿ ಮೋದಿ

rwytju11111111111

ಶುಕ್ರವಾರದ ರಾಶಿಫಲ : ಇಲ್ಲಿದೆ ನೋಡಿ ನಿಮ್ಮ ಗ್ರಹಬಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

udayavani youtube

ಅಬ್ಬಾ ಬದುಕಿದೆ ಬಡ ಜೀವ ! ಚಿರತೆ ಬಾಯಿಯಿಂದ ತಪ್ಪಿಸಿಕೊಂಡ ಶ್ವಾನದ ಕಥೆ

ಹೊಸ ಸೇರ್ಪಡೆ

4

200 ಕೋಟಿ ವೆಚ್ಚದಲ್ಲಿ ಕಲಾಗ್ರಾಮ ಸ್ಥಾಪನೆ ಯೋಜನೆ

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಅವರಿಂದ ಪ್ರಶಸ್ತಿ ಪ್ರದಾನ

ಟಿವಿಎಸ್‌ ಮೋಟಾರ್ಸ್‌ಗೆ ಗ್ರೀನ್‌ ಎನರ್ಜಿ ಅವಾರ್ಡ್‌

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

3

ಪ್ರಚಾರದ ಗೀಳಿನಿಂದ ರಾಹುಲ್‌ ಬಗ್ಗೆ ಕಟೀಲ್‌ ಹೇಳಿಕೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.