ಅಂಗರಗುಡ್ಡೆ ಶ್ರೀ ರಾಮ ಭಜನ ಮಂಡಳಿ: ಭಜನ ಮಂಗಲೋತ್ಸವ

Team Udayavani, Apr 18, 2019, 6:58 AM IST

ಕಿನ್ನಿಗೋಳಿ: ಭಜನೆಯ ಮೂಲಕವಾಗಿ ಸುಲಭವಾಗಿ ಭಗವಂತನನ್ನು ಮೆಚ್ಚಿಸಬಹುದು. ಪುರಂದರ ದಾಸರು, ಕನಕ ದಾಸರಂತಹ ದಾರ್ಶಿ ನಿಕರು ಈ ಸತ್ಯವನ್ನು ಕಂಡುಕೊಂಡು ಭಜನೆಯ ಮೂಲಕ ಸಂದೇಶ ನೀಡಿದ್ದಾರೆ ಎಂದು ಪುನರೂರು ಪ್ರತಿಷ್ಠಾನದ ಅಧ್ಯಕ್ಷ ದೇವಪ್ರಸಾದ್‌ ಪುನರೂರು ಹೇಳಿದರು.

ಅಂಗರಗುಡ್ಡೆ ಶ್ರೀ ರಾಮ ಭಜನ ಮಂದಿರದಲ್ಲಿ ವಾರ್ಷಿಕ ಭಜನ ಮಂಗಲೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತಾನಾಡಿದರು.

ಪುರೋಹಿತ ಕಿಲ್ಪಾಡಿ ನಾರಾ ಯಣ ಭಟ್‌ ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಭುವನಾಭಿರಾಮ ಉಡುಪ, ಕಿನ್ನಿಗೋಳಿ ಉದ್ಯಮಿ ಪೃಥ್ವೀರಾಜ ಆಚಾರ್ಯ, ಮಂದಿರದ ಅಧ್ಯಕ್ಷ ಜೀವನ್‌ ಶೆಟ್ಟಿ , ಅರ್ಚಕ ಪುರುಷೋತ್ತಮ ದಾಸ್‌, ಮಾಜಿ ಅಧ್ಯಕ್ಷ ತಾರಾನಾಥ ದೇವಾಡಿಗ ಸಂತೋಷ್‌ ಶೆಟ್ಟಿ ಪುನರೂರು, ಜನವಿಕಾಸ ಸಮಿತಿಯ ಅಧ್ಯಕ್ಷ ಭಾಗ್ಯಾ, ಉದ್ಯಮಿ ಸ್ಟಾನಿ ಪಿಂಟೋ ಕಟೀಲು, ಮಹಿಳಾ ಮಂಡಲದ ಅಧ್ಯಕ್ಷೆ ಸುನೀತಾ ಶೆಟ್ಟಿ , ಗೀತಾ ಶೆಟ್ಟಿ , ಕೇಶವ ದೇವಾಡಿಗ, ಸುಧೀರ್‌ ಶೆಟ್ಟಿ ,ಆನಂದ ಶೆಟ್ಟಿ ಶೆಟ್ಟಿಗಾರ್‌, ಸಂತೋಷ್‌ ದೇವಾಡಿಗ, ಉಮೇಶ್‌ ಆಚಾರ್ಯ, ನಿಶಾ ಸತೀಶ್‌, ಸತೀಶ್‌ ಕೆ.ಪಿ., ಪ್ರದೀಪ್‌ ಆಚಾರ್ಯ, ಸತೀಶ್‌ ಪೂಜಾರಿ, ರಾಜೇಶ್‌ ದೇವಾಡಿಗ, ಪ್ರಶಾಂತ್‌ ಕೋಟ್ಯಾನ್‌, ಸಂತೋಷ್‌, ರಾಘವೇಂದ್ರ, ಮುಖೇಶ್‌ ಪೂಜಾರಿ ಮೊದಲಾದವರು
ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ