ಯಜಮಾನನ ದಾರಿ ಕಾಯುತ್ತಿವೆ ಸಾಕು ಪ್ರಾಣಿಗಳು


Team Udayavani, Aug 24, 2018, 11:56 AM IST

24-agust-7.jpg

ಸುಳ್ಯ : ಯಜಮಾನ ಯಾವಾಗ ಬರುವೆನೆಂದು ರಸ್ತೆಯಲ್ಲಿ ಕಾದು ಕುಳಿತ ಮೂಕ ಪ್ರಾಣಿಗಳ ದಂಡು, ಬೀಗ ಹಾಕಿದ ಮನೆ ಅಂಗಳದಲ್ಲಿ ಜೀವ ಕಳೆ ಇಲ್ಲದ ಸ್ಥಿತಿ, ಸಂತ್ರಸ್ತರ ಪಾಲಿಗೆ ಯಮನಂತೆ ಕಾಡಿದ ತೋಡಲ್ಲಿ ಶಾಂತವಾಗಿ ಹರಿಯುವ ನೀರು. ವಾರದ ಹಿಂದೆ ಕಣ್ಣ ಮುಂದೆ ಕಂಡಿದ್ದ ಜೋಡುಪಾಲ ಈಗ ಬದಲಾಗಿದೆ!

ಅಬ್ಬರಿಸಿ ಬೊಬ್ಬಿರಿದ ಜೋಡುಪಾಲ ಈಗ ಜನರ ಓಡಾಟ ಇಲ್ಲದೆ ಅಕ್ಷರಶಃ ಬಿಕೋ ಎನ್ನುತ್ತಿದೆ. ನಾಯಿ, ಬೆಕ್ಕು, ದನಗಳು ರಸ್ತೆಯಲ್ಲಿಯೇ ಬೀಡುಬಿಟ್ಟಿವೆ. ಬೆರಳೆಣಿಕೆಯ ಸಿಬಂದಿ ಕಾರ್ಯಾಚರಣೆ ಸ್ಥಳದಲ್ಲಿದ್ದಾರೆ. ಜೆಸಿಬಿ ಯಂತ್ರಗಳು ದುರಸ್ತಿ ಮುಂದುವರಿಸಿವೆ. ಜೋಡುಪಾಲ ವೀಕ್ಷಣೆಗೆ ಬಂದವರು ಹಾಕಿದ ಬಿಸ್ಕೆಟ್‌ ಮೂಕ ಪ್ರಾಣಿಗಳ ಪಾಲಿನ ಆಹಾರವಷ್ಟೆ. ಸಂತ್ರಸ್ತರ ಕುಟುಂಬಗಳು ಪರಿಹಾರ ಕೇಂದ್ರದೊಳಗೆ ಮನೆ ಪರಿಸ್ಥಿತಿ ಕುರಿತು ಚಿಂತೆಯಲ್ಲಿದ್ದರೆ, ಸಾಕು ಪ್ರಾಣಿಗಳು ಯಜಮಾನ ಬರುವಿಕೆ ನಿರೀಕ್ಷೆಯಲ್ಲಿದ್ದುದು ಮನ ಕಲಕುತಿದೆ.

ಗುರುವಾರ ಕೊಂಚ ಖುಷಿ
ರಸ್ತೆಯಲ್ಲಿ ಮಲಗಿದ್ದ ಸಾಕು ಪ್ರಾಣಿಗಳಿಗೆ ಗುರುವಾರ ಕೊಂಚ ಖುಷಿ ಕೊಟ್ಟಿತ್ತು. ವಾಹನಗಳಿಂದ ಇಳಿದು ಮನೆಗೆ ಬರುತ್ತಿದ್ದ ಮನೆ ಮಂದಿಯನ್ನು ಕಂಡು ನೋವು, ದುಮ್ಮಾನಗಳನ್ನು ಹಾವಭಾವಗಳಲ್ಲೇ ತೋರ್ಪಡಿಸಿದವು. ಹೊತ್ತು-ಹೊತ್ತು ಊಟ, ತಿಂಡಿ ನೀಡಿ, ಮನೆ ಮಕ್ಕಳಂತೆ ಬೆಳೆಸಿದ ಸಾಕು ಪ್ರಾಣಿಗಳು ಹಸಿವಿನಿಂದ ಬಳಲಿ ಬೆಂಡಾದದನ್ನು ಕಂಡು ಸಂತ್ರಸ್ತರ ಕಣ್ಣಲ್ಲಿಯೂ ನೀರು ತೊಟ್ಟಿಕ್ಕಿತ್ತು. ತಲೆ ನೇವರಿಸುತ್ತ ಸಂತೈಸಿದರು. ನಾವು ಮನೆಗೆ ಬಂದಿದ್ದೇವೆ. ಸಾಕು ಪ್ರಾಣಿಗಳು ನಮ್ಮನ್ನು ಕಂಡು ಜೀವ ಸಿಕ್ಕಿದಷ್ಟು ಖುಷಿ ಪಟ್ಟವು. ಈಗ ಸುಬ್ರಹ್ಮಣ್ಯಕ್ಕೆ ಹೊರಟಿದ್ದೇವೆ. ಇವು ನಮ್ಮ ಜತೆಗೆ ಬರುತ್ತಿದೆ. ಮರಳಿ ಹೋಗುತ್ತಿದ್ದಾರೆ ಎಂಬ ಭಯ ಎಂದು ಎರಡನೆ ಮೊಣ್ಣಂಗೇರಿ ನಿವಾಸಿ ಬೆಕ್ಕಿನ ತಲೆ ನೇವರಿಸಿಸುತ್ತಲೇ ನುಡಿದರು.

ಯಾವಾಗ ಬರುವನು ಯಜಮಾನ?
ಸಂಪಾಜೆ, ದೇವರಕೊಲ್ಲಿ, ಅರೆಕ್ಕಳ್‌, ಎರಡನೆ ಮೊಣ್ಣಂಗೇರಿ ಭಾಗದ ಕೆಲ ಕುಟುಂಬಗಳು ಮನೆಗೆ ಮರಳಿವೆ. ಆದರೆ ಜೋಡುಪಾಲದಲ್ಲಿ ಪರಿಸ್ಥಿತಿ ಪೂರ್ತಿ ತಹಬದಿಗೆ ಬಾರದ ಕಾರಣ ಸಂತ್ರಸ್ತರು ಪರಿಹಾರ ಕೇಂದ್ರದಲ್ಲಿಯೇ ಉಳಿದಿದ್ದಾರೆ. ಇಲ್ಲಿ 50ಕ್ಕೂ ಅಧಿಕ ಮನೆಯ ಸಾಕು ಪ್ರಾಣಿಗಳ ಮೂಕರೋದನ ಮುಂದುವರಿದಿದೆ. ಮನೆ ನೋಡಲು ಬರುವವರು, ದುರಂತ ಸ್ಥಳದಲ್ಲಿ ಕಾರ್ಯಾಚರಣೆ ಮಾಡುವವರು ಹಾಕುವ ತಿಂಡಿ ತಿನಿಸುಗಳಿಗೆ ಕಾಯುವ ಸ್ಥಿತಿ. ಮನೆ ಯಜಮಾನ ಮರಳಿ ಯಾವಾಗ ಬರಬಹುದು ಎಂಬ ಮೂಕ ಪ್ರಾಣಿಗಳ ನಿರೀಕ್ಷೆಗೆ ಪ್ರಕೃತಿ ಉತ್ತರ ಹೇಳಬೇಕಿದೆ.

ಟಾಪ್ ನ್ಯೂಸ್

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

covid-1

ರಾಜ್ಯದಲ್ಲಿ ಕಡಿಮೆಯಾಗುತ್ತಿರುವ ಕೋವಿಡ್ ಪ್ರಕರಣಗಳು : ಇಂದು 49 ಸಾವು

1-dffds

ಪಕ್ಷ ತ್ಯಾಗದ ನಿರ್ಧಾರ ಪುನರ್ ಪರಿಶೀಲಿಸಿ : ಸಿ.ಎಂ.ಇಬ್ರಾಹಿಂಗೆ ಕಾಂಗ್ರೆಸ್

1-dsads

ನನ್ನನ್ನ ಗೋಮಾತೆ ಕೈ ಬಿಡಲ್ಲ..!: ಸಚಿವ ಪ್ರಭು ಚೌಹಾಣ್ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

5ಜಿ ತಂತ್ರಜ್ಞಾನಕ್ಕೆ ವಿರೋಧ: ನಟಿ ಜೂಹಿ ಚಾವ್ಲಾ ದಂಡ 2 ಲಕ್ಷ ರೂ.ಗೆ ಇಳಿಕೆ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

ಲಖನ್‌ ಜಾರಕಿಹೊಳಿಯನ್ನು ಕಾಂಗ್ರೆಸ್‌ಗೆ ಕರೆಯಲ್ಲ: ಸತೀಶ್ ಜಾರಕಿಹೊಳಿ

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

500 ರೂ.ಗೆ ಕೊಂಡ ಕುರ್ಚಿಗೆ ಈಗ 16 ಲಕ್ಷ ರೂ.!

ಪ್ರೊ ಕಬಡ್ಡಿ: ಪುನೇರಿ ಹ್ಯಾಟ್ರಿಕ್‌ ಜಯಭೇರಿ

ಪ್ರೊ ಕಬಡ್ಡಿ: ಪುನೇರಿ ಹ್ಯಾಟ್ರಿಕ್‌ ಜಯಭೇರಿ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

7 ಕೋಟಿ ರೂ. ನಕಲಿ ನೋಟು ವಶ: 7 ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.