ಅಂಗಾರ ಅವರಿಗೆ ಕೈ ತಪ್ಪಿದ ಮಂತ್ರಿ ಸ್ಥಾನ : 70 ಕ್ಕೂ ಅಧಿಕ ಮಂದಿ ರಾಜಿನಾಮೆ

Team Udayavani, Aug 21, 2019, 11:55 PM IST

ಸುಳ್ಯ : ಶಾಸಕ ಎಸ್. ಅಂಗಾರ ಅವರಿಗೆ ಕೊನೇ ಕ್ಷಣದಲ್ಲಿ ಸಚಿವ ಸ್ಥಾನ ತಪ್ಪಿದ ಹಿನ್ನಲೆಯಲ್ಲಿ ಅಸಮಾಧಾನಗೊಂಡಿರುವ ಸುಳ್ಯ ಬಿಜೆಪಿ ತುರ್ತು ಸಭೆ ಸಡೆಸಿದ್ದು, 70 ಕ್ಕೂ ಅಧಿಕ ಚುನಾಯಿತ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜಿನಾಮೆ ಸಲ್ಲಿಸಿದ್ದು ಮಂಡಲ‌ ಸಮಿತಿಗೆ ಪತ್ರ ನೀಡಿದ್ದಾರೆ.

ಜತೆಗೆ ಪಕ್ಷದಿಂದ ಅಸಹಕಾರ ಚಳವಳಿ ನಡೆಸಲು ಬುಧವಾರ ನಡೆದ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.

ಬಿಜೆಪಿ ಪಕ್ಷದ ಮೂಲಕ ಗೆದ್ದ ಜನಪ್ರತಿನಿಧಿಗಳು ತಮ್ಮ
ಕಛೇರಿಗೆ ಹೋಗುವುದಿಲ್ಲ. ಸಭೆ ಸಮಾರಂಭಗಳಲ್ಲಿ ಭಾಗವಹಿಸುವುದಿಲ್ಲ. ಪಕ್ಷದ ಜಿಲ್ಲಾ ಮತ್ತು ರಾಜ್ಯ ಘಟಕದೊಂದಿಗೆ ಅಸಹಕಾರ ಧೋರಣೆ ತಳೆಯಲಾಗುತ್ತದೆ ಎಂದು ಮಂಡಲ ಸಮಿತಿ ಬಿಜೆಪಿ ಅಧ್ಯಕ್ಷ ವೆಂಕಟ್ ವಳಲಂಬೆ ಹೇಳಿದ್ದಾರೆ.

ಸಭೆಯಲ್ಲಿ ಎ.ವಿ.ತೀರ್ಥರಾಮ, ವೆಂಕಟ್ ದಂಬೆಕೋಡಿ, ರಾಕೇಶ್ ರೈ ಕೆಡೆಂಜಿ, ಭಾಗೀರಥಿ ಮುರುಳ್ಯ, ಚನಿಯ ಕಲ್ತಡ್ಕ, ಸುಭೋದ್ ಶೆಟ್ಟಿ ಮೇನಾಲ, ಹರೀಶ್ ಕಂಜಿಪಿಲಿ, ದಿನೇಶ್ ಮೆದು, ಚಂದ್ರಶೇಖರ ಪನ್ನೆ, ಮುಳಿಯ ಕೇಶವ ಭಟ್, ಪಿ.ಕೆ. ಉಮೇಶ್, ಸುರೇಶ್ ಕಣೆಮರಡ್ಕ, ಮಹೇಶ್ ಕುಮಾರ್ ಮೇನಾಲ, ಮಾಧವ ಚಾಂತಾಳ, ರಾಧಾಕೃಷ್ಣ ಬೊಳ್ಳೂರು ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ