ಮನೆಯಿಂದ ನಗ, ನಗದು ಕಳವು ಮಾಡಿ ಪರಾರಿಯಾಗುತ್ತಿದ್ದ ಆರೋಪಿಗಳಿಬ್ಬರ ಸೆರೆ

ಆಲಂಕಾರಿನಲ್ಲಿ ಸ್ಥಳೀಯರಿಂದ ವಿಚಾರಣೆಗೆ ಒಳಗಾಗಿ ಪಾರಾಗಿದ್ದ ಆರೋಪಿಗಳು!

Team Udayavani, Oct 12, 2019, 3:05 AM IST

d-51

ಆಲಂಕಾರು: ಮನೆಮನೆಗೆ ತೆರಳಿ ಭವಿಷ್ಯ ನುಡಿಯುವ ಇಬ್ಬರು ಪಂಜದಿಂದ ಮಗುವೊಂದನ್ನು ಅಪಹರಿಸಿ ಸರಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾರೆ ಎಂಬ ವದಂತಿ ಹಬ್ಬಿ, ಬಸ್ಸನ್ನು ತಡೆದು ಶಂಕಿತರಿಬ್ಬರನ್ನು ವಿಚಾರಣೆ ನಡೆಸಿ ಬಿಟ್ಟ ಘಟನೆ ಆಲಂಕಾರಿನಲ್ಲಿ ನಡೆದಿದೆ. ವಿಶೇಷವೆಂದರೆ ಸ್ಥಳೀಯರು ವಿಚಾರಣೆ ನಡೆಸಿ ಬಿಟ್ಟವರು ಕಳ್ಳರು ಎಂಬುದು ಬಳಿಕ ತಿಳಿದು ಬಂದಿದ್ದು, ಅವರನ್ನು ಉಪ್ಪಿನಂಗಡಿಯಲ್ಲಿ ಬಂಧಿಸಲಾಗಿದೆ.

ಪ್ರಕರಣದ ವಿವರ
ಇಬ್ಬರು ಕಾವಿಧಾರಿಗಳು ಪಂಜ ಪೇಟೆಯಿಂದ ಮಗುವನ್ನು ಅಪಹರಿಸಿ ಸರಕಾರಿ ಬಸ್ಸಿನಲ್ಲಿ ಕಡಬ ಮೂಲಕ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದಾರೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಆಲಂಕಾರಿನಲ್ಲಿ ಬಸ್ಸನ್ನು ತಡೆಯಲಾಯಿತು. ಬಸ್ಸಲ್ಲಿದ್ದ ಇಬ್ಬರು ಶಂಕಿತರನ್ನು ಕೆಳಗಿಳಿಸಿ ಪ್ರಶ್ನಿಸಲಾರಂಭಿಸಿದಾಗ ಕಡಬ ಠಾಣೆಯ ಹೋಂಗಾರ್ಡ್‌ ಚೇತನ್‌ ಕೂಡ ಸ್ಥಳಕ್ಕಾಗಮಿಸಿದರು.

ನಿರಪರಾಧಿಗಳೆಂದರು
ವಿಚಾರಣೆ ವೇಳೆ, ತಾವು ಹಾಸನ ಜಿಲ್ಲೆಯ ಅರಸಿಕೆರೆ ತಾಲೂಕು ಬಕಪ್ಪನಕೊಪ್ಪಲು ಸುಡುಗಾಡು ಸತೀಶ (32) ಮತ್ತು ಪ್ರದೀಪ (27) ಎಂಬವರಾಗಿದ್ದು, ಬೆಳಗ್ಗೆ ಬೆಳ್ಳಾರೆಯಿಂದ ಕಡಬ ತನಕ ಮನೆ ಮನೆಗೆ ತೆರಳಿ ಭವಿಷ್ಯ ಹೇಳಿದ್ದೇವೆ. ಬಳಿಕ ಕಡಬದಿಂದ ಉಪ್ಪಿನಂಗಡಿಗೆ ಪ್ರಯಾಣಿಸುತ್ತಿದ್ದೇವೆ ಎಂದು ಅವರು ತಿಳಿಸಿದರು. ಈ ಮಾಹಿತಿಯನ್ನು ಹೋಂಗಾರ್ಡ್‌ ಕಡಬ ಠಾಣೆಗೆ ನೀಡಿದರು. ಜತೆಗೆ ಬೆಳ್ಳಾರೆ ಠಾಣೆಯನ್ನೂ ಸಂಪರ್ಕಿಸಲಾಗಿದ್ದು, ಅಲ್ಲಿ ಮಗು ಅಪಹರಣವಾದ ಬಗ್ಗೆ ದೂರು ದಾಖಲಾಗಿಲ್ಲ ಎಂಬುದು ತಿಳಿದ ಬಳಿಕ ಅವರನ್ನು ಬಿಟ್ಟು ಕಳುಹಿಸಲಾಯಿತು.

ಮತ್ತೆ ಸಿಕ್ಕಿತು ಕಳ್ಳರೆಂಬ ಮಾಹಿತಿ!
ಶಂಕಿತರು ನಿರಪರಾಧಿಗಳು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದ ಕಾರಣ ಅವರನ್ನು ಬಿಟ್ಟು ಕಳುಹಿಸಲಾಯಿತು. ಆದರೆ ಬಳಿಕ ಬಂದ ಮಾಹಿತಿಯಂತೆ ಇವರಿಬ್ಬರು ಬೆಳ್ಳಾರೆ ಸಮೀಪದ ಮನೆಯೊಂದರಿಂದ ಬೆಲೆಬಾಳುವ ಸೊತ್ತುಗಳನ್ನು ಕದ್ದವರಾಗಿದ್ದು, ಇವರ ಜತೆಗಿದ್ದ ಓರ್ವನನ್ನು ಸಂಪ್ಯದಲ್ಲಿ ಬಂಧಿಸಲಾಗಿದೆ ಎಂಬ ಮಾಹಿತಿ ಸಿಕ್ಕಿತು. ಆಲಂಕಾರಿನಲ್ಲಿ ಇಬ್ಬರನ್ನು ಸಾರ್ವಜನಿಕರು ತಡೆದು ನಿಲ್ಲಿಸಿದ್ದಾರೆ ಎಂಬ ಮಾಹಿತಿಯಂತೆ ಅಲ್ಲಿಗಾಗಮಿಸಿದ ಸಂಪ್ಯ ಪೊಲೀಸರು ಕಳವಿನ ಬಗ್ಗೆ ಮಾಹಿತಿ ನೀಡಿದರು. ಆರೋಪಿಗಳ ಫೋಟೋವನ್ನು ಪರಿಶೀಲಿಸಿದಾಗ ಅವರು ಕಳ್ಳರೆಂಬುದು ಸ್ಪಷ್ಟವಾಯಿತು. ತತ್‌ಕ್ಷಣ ಉಪ್ಪಿನಂಗಡಿ ಪೊಲೀಸರಿಗೆ ಮಾಹಿತಿ ನೀಡಿ ಆರೋಪಿಗಳನ್ನು ಉಪ್ಪಿನಂಗಡಿ ಬಸ್‌ ತಂಗುದಾಣದಲ್ಲಿ ಬಂಧಿಸಲಾಯಿತು.

ಟಾಪ್ ನ್ಯೂಸ್

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

Loksabha Poll: ತಮಿಳುನಾಡು ಮಾಜಿ ಕಾಂಗ್ರೆಸ್‌ ನಾಯಕ ಈಗ ಬಿಜೆಪಿ ರಾಷ್ಟ್ರೀಯ ವಕ್ತಾರ

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಕಾಂಗ್ರೆಸ್ ನವರು ಕೇಸರಿ ಶಾಲು ಹಾಕಿದಾಕ್ಷಣ ಮನಸ್ಥಿತಿ ಬದಲಾಗಲ್ಲ… ಶೆಟ್ಟರ್ ಆರೋಪ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Naxal: ಕೂಜಿಮಲೆ: ಮತ್ತೆ ನಕ್ಸಲ್‌ ಸಂಚಾರ? ಎಎನ್‌ಎಫ್ ಶೋಧ ಚುರುಕು!

Naxal: ಕೂಜಿಮಲೆ: ಮತ್ತೆ ನಕ್ಸಲ್‌ ಸಂಚಾರ? ಎಎನ್‌ಎಫ್ ಶೋಧ ಚುರುಕು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Puttur; ಮನೆಯೊಳಗೆ ಬೆಂಕಿ ಅವಘಡ

Puttur; ಮನೆಯೊಳಗೆ ಬೆಂಕಿ ಅವಘಡ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

Arunachal Village: ಕೇವಲ ಒಂದು ಮತಕ್ಕಾಗಿ ಚುನಾವಣಾ ಅಧಿಕಾರಿಗಳ 40 ಕಿ.ಮೀ ಕಾಲ್ನಡಿಗೆ!

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

SSLC ಪರೀಕ್ಷೆ ವೇಳೆ ಉತ್ತರ ತೋರಿಸಲಿಲ್ಲ ಎಂದು ಸಹಪಾಠಿಗೆ ಚಾಕು ಇರಿದ ವಿದ್ಯಾರ್ಥಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬಂದಿಯ ಗುಂಡಿಕ್ಕಿ ಹತ್ಯೆ… ಭಯಾನಕ ದೃಶ್ಯ ಸೆರೆ

Shocking: ಮುಸುಧಾರಿಗಳಿಂದ ಗುರುದ್ವಾರದ ಸಿಬ್ಬಂದಿಯ ಗುಂಡಿಕ್ಕಿ ಹತ್ಯೆ.. ಭಯಾನಕ ದೃಶ್ಯ ಸೆರೆ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.