ಕಲಾವಿದರು ಸಮಾಜದ ಗುರುಗಳು: ಲಕ್ಷ್ಮೀನಾರಾಯಣ ಆಸ್ರಣ್ಣ

Team Udayavani, Jun 3, 2019, 6:00 AM IST

ಮಂಗಳೂರು: ಕಲೆಯ ಮೂಲಕ ಜನರಲ್ಲಿ ಧಾರ್ಮಿಕ ಚಿಂತನೆ ಮೂಡಿಸುವುದು, ಸಂಸ್ಕೃತಿ, ಸಂಸ್ಕಾರವನ್ನು ಪ್ರಸಾರ ಮಾಡುವುದು, ಹಿಂದಿನ ಆಚಾರ ವಿಚಾರ ಗಳನ್ನು ಇಂದಿನ ಪೀಳಿಗೆಗೆ ತಿಳಿಸುವ ಮಹತ್ತರ ಜವಾಬ್ದಾರಿ ನಿರ್ವಹಿಸುತ್ತಿರುವ ಕಲಾವಿ ದರು ಸಮಾಜದ ಗುರುಗಳು ಎಂದು ಶ್ರೀ ಕ್ಷೇತ್ರ ಕಟೀಲಿನ ಆನುವಂಶೀಯ ಅರ್ಚಕ ವೇ| ಮೂ| ಲಕ್ಷ್ಮೀ ನಾರಾಯಣ ಆಸ್ರಣ್ಣ ಅಭಿಪ್ರಾಯಪಟ್ಟರು.

ನಗರದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ವತಿಯಿಂದ ನಗರದ ಅಡ್ಯಾರ್‌ ಗಾರ್ಡನ್‌ನಲ್ಲಿ ರವಿವಾರ ನಡೆದ ಯಕ್ಷ ಧ್ರುವ ಪಟ್ಲ ಸಂಭ್ರಮ-2019ರ ಉದ್ಘಾಟಿಸಿ ಅವರು ಮಾತನಾಡಿದರು. ಸಿನೆಮಾ ತಾರೆಯರು ತಮ್ಮ ನಟನ ಪ್ರದರ್ಶನದಲ್ಲಿ ಕಟ್‌, ರೀ ಟೇಕ್‌ಗಳನ್ನು ಮಾಡಬಹುದು. ಆದರೆ ಯಕ್ಷಗಾನ ಕಲಾವಿ ದರು ನಿರಾರ್ಗಳವಾಗಿ ತಮ್ಮ ಪ್ರದ ರ್ಶ ನವನ್ನು ನೀಡುತ್ತಾರೆ. ವಿದ್ವಾಂಸರೇ ನಾಚು ವಂತಹ ಮಾತುಗಾರಿಕೆಯನ್ನು ಕರ ಗತ ಮಾಡಿಕೊಂಡಿರುತ್ತಾರೆ. ಇಂತಹ ಕಲಾ ವಿ ದರಿಗೆ ಎಲ್ಲ ರೀತಿಯ ಪ್ರೋತ್ಸಾಹ ನೀಡುವ ಕೆಲಸವನ್ನು ಪಟ್ಲ ಸತೀಶ್‌ ಶೆಟ್ಟಿ ನೇತೃ ತ್ವದ ಯಕ್ಷ ಧ್ರುವ ಪಟ್ಲ ಫೌಂಡೇಶನ್‌ ಮಾಡುತ್ತಿ ರುವುದು ಶ್ಲಾಘನೀಯ ಎಂದರು.

ನಿಟ್ಟೆ ಎಜುಕೇಶನ್‌ ಟ್ರಸ್ಟ್‌ನ ಕುಲಾಧಿಪತಿ ಡಾ| ಎನ್‌. ವಿನಯ್‌ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಾವಿದರಿಗೆ ಸಮಾಜದಲ್ಲಿ ಉತ್ತಮ ಗೌರವ ಒದಗಿಸುವ ಶ್ರೇಷ್ಠ ಕೆಲಸವನ್ನು ಪಟ್ಲ ಫೌಂಡೇಶನ್‌ ಮಾಡುತ್ತಿದೆ. ಈ ಕೆಲಸ ಮುಂದುವರಿಯಲಿ ಎಂದು ಶುಭ ಹಾರೈಸಿದರು.

ಖ್ಯಾತ ಮಕ್ಕಳ ತಜ್ಞ ಡಾ| ಸಂದೀಪ್‌ ರೈ ಆರೋಗ್ಯ ಶಿಬಿರವನ್ನು ಉದ್ಘಾಟಿಸಿ ಶುಭ ಹಾರೈಸಿದರು. ಶ್ರೀ ಕ್ಷೇತ್ರ ಮಧೂರಿನ ವ್ಯವ ಸ್ಥಾಪನ ಸಮಿತಿ ಅಧ್ಯಕ್ಷ ಯು.ಟಿ. ಆಳ್ವ, ಶ್ರೀ ಕ್ಷೇತ್ರ ಪೊಳಲಿಯ ಆಡಳಿತ ಮೊಕ್ತೇ ಸರ ಡಾ| ಮಂಜಯ್ಯ ಶೆಟ್ಟಿ, ಹಿರಿಯ ಲೆಕ್ಕ ಪರಿಶೋಧಕ ಎಸ್‌.ಎಸ್‌. ನಾಯಕ್‌, ಹೈದರಾಬಾದ್‌ ಉದ್ಯಮಿ ಕೃಷ್ಣ ಮೂರ್ತಿ ಮಂಜ, ಧರ್ಮಸ್ಥಳ ಶಾಂತಿವನ ಟ್ರಸ್ಟ್‌ ಕಾರ್ಯದರ್ಶಿ ಸೀತಾ ರಾಮ ತೋಳ್ಪಡಿತ್ತಾಯ, ಕ್ಷೇಮ ಮಂಗ ಳೂರು ಕುಲಪತಿ ಡಾ| ಸತೀಶ್‌ ಭಂಡಾರಿ, ಲೆಕ್ಕಪರಿಶೋಧಕ ದಿವಾಕರ್‌ ರಾವ್‌ ಕಟೀಲು, ವಿದ್ಯಾರಶ್ಮಿ ಸಮೂಹ ಸಂಸ್ಥೆ ಗಳ ಆಡಳಿತ ನಿರ್ದೇಶಕ ಸವಣೂರು ಸೀತಾ ರಾಮ ರೈ, ಉದ್ಯಮಿ ಶ್ರೀಪತಿ ಭಟ್‌ ಮೂಡು ಬಿದಿರೆ, ಪಟ್ಲಗುತ್ತು ಮಹಾಬಲ ಶೆಟ್ಟಿ, ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಪ್ರಮುಖರಾದ ಭಾಸ್ಕರ್‌ ಶೆಟ್ಟಿ, ಅಶೋಕ್‌ ಶೆಟ್ಟಿ, ಸಚ್ಚಿದಾ ನಂದ ಶೆಟ್ಟಿ, ವಿವಿಧ ಘಟಕ ಗಳ ಅಧ್ಯ ಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ ಯಕ್ಷಧ್ರುವ ಪಟ್ಲ ಫೌಂಡೇಶನ್‌ ವತಿಯಿಂದ ಕಲಾವಿ ದರ ಮಕ್ಕಳಿಗೆ ವಿದ್ಯಾರ್ಥಿ ವೇತನ ವಿತರಿಸಲಾ ಯಿತು. ಪಟ್ಲ ಪ್ರಶಸ್ತಿ ಪುರಸ್ಕೃತ ಹಿರಿಯ ವಿದ್ವಾಂಸ, ಯಕ್ಷಗಾನ ವಿಮರ್ಶಕ ಡಾ| ಎಂ. ಪ್ರಭಾಕರ ಜೋಶಿ ಅವರ ಕುರಿ ತಾದ “ಯಕ್ಷ ಪ್ರಭಾಕರ’ ಕೃತಿ ಬಿಡುಗಡೆ ಗೊಳಿಸಲಾಯಿತು. ಟ್ರಸ್ಟ್‌ನ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್‌ ಶೆಟ್ಟಿ ಸ್ವಾಗತಿಸಿದರು. ರವಿರಾಜ್‌ ಶೆಟ್ಟಿ ಅಶೋಕನಗರ ವಂದಿಸಿದರು. ಕದ್ರಿ ನವನೀತ್‌ ಶೆಟ್ಟಿ , ಪುರುಷೋತ್ತಮ ಭಂಡಾಡಿ ಅಡ್ಯಾರ್‌ ನಿರೂಪಿಸಿದರು.

ದಿನಪೂರ್ಣ ಯಕ್ಷಗಾನ ಸಂಭ್ರಮ
ಬೆಳಗ್ಗೆ ಗಂಟೆ ತೆಂಕು, ಬಡಗುತಿಟ್ಟಿನ ಪ್ರಸಿದ್ಧ 7 ಭಾಗವತರಿಂದ ಯಕ್ಷ ಸಪ್ತಸ್ವರ, ನೃತ್ಯ ವರ್ಷ ದರ್ಶನ, ಬಳಿಕ ಮಹಿಳಾ ಯಕ್ಷಗಾನ ನಾಟ್ಯ ವೈಭವ ಜರಗಿತು. ಅಪರಾಹ್ನ 3 ಗಂಟೆಯಿಂದ ಯಕ್ಷಗಾನ ತಾಳಮದ್ದಳೆ, ಸಂಜೆ 4.30ರಿಂದ 5ರ ವರೆಗೆ ಯಕ್ಷಗಾನ ನೃತ್ಯ ಪ್ರರ್ದಶನಗೊಂಡಿತು. ಸಂಜೆ 5ರಿಂದ ಸಭಾ ಕಾರ್ಯಕ್ರಮ ಜರಗಿತು. ಸಂಜೆ 7 ಗಂಟೆಯಿಂದ ದೇರಾಜೆ ಸೀತಾರಾಮಯ್ಯ ಅವರ “ಕುರುಕ್ಷೇತ್ರ ಕ್ಕೊಂದು ಆಯೋಗ’ ಎಂಬ ವಿಶಿಷ್ಟ ಯಕ್ಷ ಗಾನ ಪ್ರಯೋಗವು ಕದ್ರಿ ನವ ನೀತ ಶೆಟ್ಟಿ ಅವರ ರಂಗ ಪರಿಕಲ್ಪನೆ, ನಿರೂ ಪಣೆ ಯೊಂದಿಗೆ ಪ್ರಖ್ಯಾತ ಕಲಾವಿದರ ಕೂಡು ವಿಕೆಯಲ್ಲಿ ಜರಗಿತು.

ರಕ್ತದಾನ ಶಿಬಿರ, ಉಚಿತ ವೈದ್ಯಕೀಯ ಶಿಬಿರ
ರವಿವಾರ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಟ್ರಸ್ಟಿನ ಸದಸ್ಯರು, ಯಕ್ಷಭಿಮಾನಿಗಳಿಂದ ರಕ್ತದಾನ ಶಿಬಿರ ನಡೆಯಿತು. ಕೆ.ಎಸ್‌. ಹೆಗ್ಡೆ ಮೆಡಿಕಲ್‌ ಅಕಾಡೆಮಿ ದೇರಳಕಟ್ಟೆ ಸಹಯೋಗದಲ್ಲಿ ಯಕ್ಷಗಾನ ಕಲಾವಿದರಿಗೆ ಹಾಗೂ ಅವರ ಮನೆಯವರಿಗೆ ಉಚಿತ ವೈದ್ಯಕೀಯ ಶಿಬಿರ, ಉಚಿತ ಔಷಧ ವಿತರಣೆ ನಡೆಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ