Udayavni Special

ಅಂದು ಪಂಚಾಯತ್‌ ಸದಸ್ಯೆ,ಇಂದು ಸೌಕರ್ಯ ವಂಚಿತೆ!


Team Udayavani, May 6, 2018, 6:50 AM IST

3004SUB2-B.jpg

ಸುಬ್ರಹ್ಮಣ್ಯ: ಒಂದೊಮ್ಮೆ ಪಂಚಾಯತ್‌ ಸದಸ್ಯೆಯಾಗಿದ್ದ ಅವರು ಜನಸಾಮಾನ್ಯರ ಸಮಸ್ಯೆಗಳಿಗೂ ಧ್ವನಿಯಾ ಗುತ್ತಿದ್ದರು. ಈಗ ಸೌಕರ್ಯ ವಂಚಿತೆ! ಮೂವರು ಹೆಣ್ಣು ಮಕ್ಕಳು ಭೀತಿ, ಮೂಢನಂಬಿಕೆ ಹಾಗೂ ಖನ್ನತೆಗೆ ಬಲಿಯಾಗುವ ಸ್ಥಿತಿಯಲ್ಲಿದ್ದಾರೆ.

ಹರಿಹರ ಪಳ್ಳತ್ತಡ್ಕ ಗ್ರಾ.ಪಂ.ನ ಐನಕಿದು ಗ್ರಾಮದ ಮಂದ್ರಿಕಜೆ ಕಾಡಂಚಿನಲ್ಲಿ ಆದಿವಾಸಿ ಬುಡಕಟ್ಟು ಜನಾಂಗದ ಹೊನ್ನಮ್ಮ ಕುಟುಂಬ ವಾಸಿಸುತ್ತಿದೆ. ಇವರಿಗೆ ಸತ್ಯವತಿ, ರೇವತಿ ಹಾಗೂ ಶಶಿಕಲಾ – ಮೂವರು ಪುತ್ರಿಯರು. ಕೊನೆಯವಳನ್ನು ಹೊರತು ಪಡಿಸಿ ಉಳಿದವರು ಬೀಡಿ ಕಟ್ಟುತ್ತಿದ್ದು, ತಿಂಗಳಿಗೆ‌ ಬರುವ 1,200 ರೂ. ಹಾಗೂ ಮಹಿಳೆಯ ವಿಧವಾ ವೇತನದ ಆದಾಯದಲ್ಲಿ ಜೀವನ ನಡೆಸುವ ಅನಿವಾರ್ಯತೆ. ಇಬ್ಬರು ಪುತ್ರಿಯರು ಪ್ರಾಥಮಿಕ ಹಂತದಲ್ಲೇ ಶಿಕ್ಷಣಕ್ಕೆ ಶರಣು ಹೊಡೆದರೆ, ಮತ್ತೂಬ್ಟಾಕೆ ಪ್ರಥಮ ಪಿಯುಸಿ ಕಲಿತಿದ್ದಾಳೆ. ಈ ಕುಟುಂಬಕ್ಕೆ ಒಂದು ಎಕರೆ ಭೂಮಿ ಇದೆ. ಆದರೆ, ಕೃಷಿಯಿಲ್ಲ. ಹಕ್ಕುಪತ್ರವೂ ಇಲ್ಲ. ಅಂತ್ಯೋದಯ ಪಡಿತರ ಚೀಟಿ ಇತ್ತು. ಗ್ರಾ.ಪಂ. ಸದಸ್ಯೆಯಾದ ಬಳಿಕ ಅದು ಬಿಪಿಎಲ್‌ ಆಗಿದೆ. ಸದಸ್ಯೆ ಆಗಿದ್ದ ಕಾರಣಕ್ಕೆ ಈಗ ಸೌಕರ್ಯ ನಿರಾಕರಿಸಲಾಗುತ್ತಿದೆ.

ಆಶ್ರಯ ಮನೆ ಯೋಜನೆಯಲ್ಲಿ ಮನೆ ನಿರ್ಮಾಣಕ್ಕೆ 20 ಸಾವಿರ ರೂ. ಅನುದಾನ ದೊರಕಿತ್ತು. ಸಾಲ ಹೊಂದಿಸಿ ಮನೆ ನಿರ್ಮಿಸಿದ್ದರು. ಅದು ಮುರಿದು ಬಿದ್ದು ಭೂತ ಬಂಗಲೆಯಂತಾಗಿದೆ. ಹೆಂಚು, ಪಕ್ಕಾಸು, ಮಣ್ಣಿನ ಗೋಡೆ ನೆಲಕ್ಕುರುಳಿವೆ. ಈಗಲೂ ಬೀಳುತ್ತಿವೆ. ಹಕ್ಕಿ ಗೂಡಿನಂತಹ ಗುಡಿಸಲಲ್ಲಿ ಮೂರು ವರ್ಷಗಳಿಂದ ಗಾಳಿ ಮಳೆಯೆನ್ನದೆ ಈ ಕುಟುಂಬ ಕಾಲ ಕಳೆಯುತ್ತಿದ್ದು, ಶೌಚಾಲಯ, ವಿದ್ಯುತ್‌ ಸಹಿತ ಯಾವ ಸೌಕರ್ಯಗಳೂ ಇವರಿಗಿಲ್ಲ.

ಮಾಜಿ ಸದಸ್ಯೆ ವೋಟ್‌ ಬೇಡ
ಸ್ಥಳೀಯಾಡಳಿತ ಸ್ಥಾನಗಳಿಗೆ 2010- 11ರಲ್ಲಿ ನಡೆದ ಚುನಾವಣೆಯಲ್ಲಿ ಪ.ಪಂ. ಮೀಸಲು ಆಧಾರದಲ್ಲಿ ಸ್ಪರ್ಧಿಸಿ ಅವಿರೋಧ ಆಯ್ಕೆಗೊಂಡಿದ್ದರು. ಬಿಜೆಪಿ ಬೆಂಬಲಿತ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಲಾಗಿತ್ತು. ಮನೆಯ ಮೂರು ಮಂದಿಗೆ ಮತದಾನ ಹಕ್ಕು ಇದ್ದು, ಅದನ್ನು ಕೇಳುವುದಕ್ಕೂ ಯಾರೂ ಮನೆಗೆ ಬರುತ್ತಿಲ್ಲ.

ಬೆಂಕಿ ತೂರುತ್ತಾರೆ!
ಮನೆ ಪಕ್ಕ ಇವರದೇ ಸಮುದಾಯದ ಏಳು ಸಹಿತ 25 ಕುಟುಂಬಗಳಿವೆ. ಎಲ್ಲರೂ ತಮ್ಮನ್ನು ದೂರ ಇರಿಸಿದ್ದಾರೆ ಎಂದು ಮನೆ ಮಂದಿ ಹೇಳುತ್ತಾರೆ. ನಮ್ಮನ್ನು ಯಾವುದೇ ಕಾರ್ಯಕ್ರಮಕ್ಕೆ ಕರೆಯುತ್ತಿಲ್ಲ. ಅಸ್ಪೃಶ್ಯರಂತೆ ಕಾಣುತ್ತಿದ್ದಾರೆ. ಭೂಮಿ ಕಬಳಿಸುವ ಉದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿ ನಮ್ಮನ್ನು ಹಿಂಸಿಸುತ್ತಿದ್ದಾರೆ. ರಾತ್ರಿ ವೇಳೆ ಬಂದೂಕು ಹಿಡಿದು ಮನೆ ಪಕ್ಕ ಸಂಚರಿಸುತ್ತಾರೆ. ಕಾಡಿನಿಂದ ಹರಿದು ಬರುವ ನೀರನ್ನು ಕುಡಿಯಲು ಬಳಸುತ್ತಿದ್ದು, ಅದಕ್ಕೆ ಮಾಂಸದ ತುಂಡುಗಳನ್ನು ಹಾಕಿ ಕಲುಷಿತಗೊಳಿಸುತ್ತಾರೆ. ಗುಡಿಸಲಿನ ಒಳಕ್ಕೆ ಬೆಂಕಿ ತೂರುತ್ತಾರೆ. ನಮಗೆ ಬೆದರಿಕೆ ಇದೆ. ಪೊಲೀಸರಿಗೆ ದೂರು ನೀಡಿದರೂ ನ್ಯಾಯ ಸಿಗುತ್ತಿಲ್ಲ ಎಂದು ಹೊನ್ನಮ್ಮ ಕುಟುಂಬ ಆರೋಪಿಸುತ್ತಿದೆ.

ಗಂಡನದು ಅಸಹಜ ಸಾವಲ್ಲ, ಕೊಲೆ
ತನ್ನ ಮೂರು ಮಕ್ಕಳು ಚಿಕ್ಕವರಿದ್ದರು. ಅದೊಂದು ರಾತ್ರಿ ಊಟಕ್ಕೆ ಕುಳಿತಿದ್ದ ತನ್ನ ಪತಿ ದಾಮೋದರ ಅವರು ತಟ್ಟನೆ ಎದ್ದು “ಈಗ ಬರುತ್ತೇನೆ’ ಎಂದು ಕತ್ತಿ ಕೈಯಲ್ಲಿ ಹಿಡಿದು ಹೊರಹೋದರು. ಬಹು ಹೊತ್ತಾದರೂ ಮರಳಿ ಬಾರದಿದ್ದಾಗ ಹುಡುಕಾಡಿದೆ. ಹಳೆ ಮನೆಯ ಕಟ್ಟಡದಲ್ಲಿ ಅವರ ಶವ ನೇಣು ಬಿಗಿದ ಸ್ಥಿತಿಯಲ್ಲಿ ಕಂಡುಬಂದಿತ್ತು. ಪತಿಯ ಸಾವಿನ ಕುರಿತು ತನಗೆ ಸಂಶಯವಿತ್ತು. ಪೊಲೀಸರಿಗೆ ತಿಳಿಸಿದ್ದೆ. ಅವರು, ಹಣದ ಅಡಚಣೆಯಿಂದ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡರೆಂದು ಹೊನ್ನಮ್ಮ ಆರೋಪಿಸುತ್ತಿದ್ದಾರೆ.

ಒಕ್ಕಲೆಬ್ಬಿಸುವ ಉದ್ದೇಶ:ಆರೋಪ
ಎಲ್ಲರಂತೆ ನಮಗೂ ಬದುಕುವ ಹಕ್ಕಿದೆ. ನಮ್ಮಲ್ಲಿ ಯಾರೂ ಮಾನಸಿಕ ಅಸ್ವಸ್ಥರಲ್ಲ. ನಾವು ಅಸ್ಪೃಶ್ಯರೂ ಅಲ್ಲ. ಜಾಗ ಕಬಳಿಸುವ ಒಂದೇ ಉದ್ದೇಶಕ್ಕೆ ಈ ರೀತಿ ಎಲ್ಲರೂ ಸೇರಿ ನಮ್ಮನ್ನು ದೂರವಿಟ್ಟು ತುಳಿಯುತ್ತಿದ್ದಾರೆ. ನಮ್ಮ ಬಗ್ಗೆ ಪೊಲೀಸರಿಗೆ ಸುಳ್ಳು ದೂರು ನೀಡುತ್ತಿದ್ದಾರೆ. ನೋಟಿಸ್‌ ನೀಡಿ, ಕಿರುಕುಳ ನೀಡುತ್ತಿದ್ದಾರೆ ಎಂದು ಪೊಲೀಸರು ನೀಡಿರುವ ನೋಟಿಸ್‌ ಪ್ರತಿಯನ್ನು ಹೊನ್ನಮ್ಮ ತೋರಿಸಿದರು. ಇಷ್ಟು ಹೇಳುವಾಗ ಅವರ ಧ್ವನಿಯಲ್ಲಿ, ಚಹರೆಯಲ್ಲಿ ಭೀತಿ ಇತ್ತು. ಮಾಟ-ಮಂತ್ರದ ಮೇಲೆ ಅತೀವ ನಂಬಿಕೆ ಇರುವುದನ್ನು ತೋರ್ಪಡಿಸಿದರು. ಮೂಢನಂಬಿಕೆ ಹಾಗೂ ಖನ್ನತೆಯಿಂದ ಈ ಕುಟುಂಬ ತೊಳಲಾಡುವ ಮುನ್ನ ಅವರ ಸಮಸ್ಯೆಗೆ ಸ್ಪಂದಿಸಬೇಕಿದೆ.

ವಂಚನೆಯ ಬಿಲ್‌
ಹಳೆ ಮನೆಗೆ ವಿದ್ಯುತ್‌ ಸಂಪರ್ಕ ಇತ್ತು. ಒಂದು ಬಾರಿಯೂ ದೀಪ ಉರಿಯಲಿಲ್ಲ. ಸಿಬಂದಿ ಬಿಲ್‌ ತಂದು ಕೊಟ್ಟಿದ್ದಾರೆ. ಖಾಲಿ ಬಿಲ್‌ ಕೊಟ್ಟು ವಂಚನೆ ಮಾಡಿರುವುದು ಕಂಡುಬಂದಿದೆ. ಇವರ ಮನೆಯ ಸಂಪರ್ಕ ಬೇರೆ ಮನೆಗೆ ಕಲ್ಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ಹೊನ್ನಮ್ಮ ಹೇಳಿದ್ದಾರೆ.

 ಭೇಟಿ ನೀಡುವೆ
ಜಾಗದ ತಕರಾರು, ವ್ಯಾಜ್ಯ, ಕೌಟುಂಬಿಕ ಕಲಹ ನಡೆದು ದೂರುಗಳು ಬಂದಾಗ, ಠಾಣೆಗೆ ಕರೆಸಿ ವಿಚಾರಿಸುತ್ತೇವೆ. ಈ ಹಿಂದೆ ಅವರ ವಿರುದ್ಧ ದೂರುಗಳು ಬಂದಿರುವ ಕಾರಣಕ್ಕೆ  ನೋಟಿಸ್‌ ನೀಡಿರಬಹುದು. ಕುಟುಂಬದ ಭದ್ರತೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವೆ.
– ರಮೇಶ್‌ ಪವಾರ್‌,ಪಿಎಸ್‌ಐ,ಸುಬ್ರಹ್ಮಣ್ಯ ಠಾಣೆ

ನ್ಯಾಯ ದೊರಕಿಲ್ಲ 2017ರಲ್ಲಿ ಪಿಯುಸಿ ಕಲಿಯುತ್ತಿದ್ದೆ. ಸಂಜೆ ಕಾಲೇಜಿನಿಂದ ಮರಳಿ ಕಾಡು ದಾರಿಯಲ್ಲಿ ಬರುತ್ತಿದ್ದಾಗ ಮರದ ಮರೆಯಿಂದ ತನ್ನ ಮೇಲೆ ಯಾರೋ ಬಂದೂಕಿನಿಂದ ಗುಂಡು ಹಾರಿಸಲು ಯತ್ನಿಸಿದ್ದರು. ಅದು ತನ್ನ ದೇಹದ ಸನಿಹದಲ್ಲಿ ಹಾದುಹೋಗಿತ್ತು. ಈ ಕುರಿತು ಠಾಣೆಗೆ ದೂರು ನೀಡಿದ್ದೆ. ನ್ಯಾಯ ಸಿಗಲಿಲ್ಲ. ಉನ್ನತ ಅಧಿಕಾರಿಗಳಿಗೆ ಮನವಿ ಮಾಡಿದೆ. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ ತನಿಖೆ ನಡೆಸಿ, ದೌರ್ಜನ್ಯಕ್ಕೆ ಒಳಗಾದ ಆದಿವಾಸಿ ಬುಡಕಟ್ಟು ಜನಾಂಗಕ್ಕೆ ನ್ಯಾಯ ಒದಗಿಸಲು ಎಸಿಪಿಗೆ ಸೂಚಿಸಿದ್ದರೂ ನ್ಯಾಯ ದೊರಕಿಲ್ಲ. 
– ಶಶಿಕಲಾ ಹೊನ್ನಮ್ಮ ಪುತ್ರಿ

– ಬಾಲಕೃಷ್ಣ ಭೀಮಗುಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

ಚಿತ್ರದುರ್ಗ ಜಿಲ್ಲೆಯಲ್ಲಿ 254 ಜನರಿಗೆ ಕೋವಿಡ್ ಪಾಸಿಟಿವ್! 421 ಮಂದಿ ಗುಣಮುಖ

punjab-delhin

ಐಪಿಎಲ್ 2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ

ಚಾಮರಾಜನಗರ : ಕೋವಿಡ್ ಸೋಂಕಿಗೆ ಓರ್ವ ಸಾವು, 73 ಮಂದಿ ಗುಣಮುಖ, 66 ಹೊಸ ಪ್ರಕರಣ ದೃಢ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಸಿಬ್ಬಂದಿಯನ್ನು ಬೆದರಿಸಿ ಪೆಟ್ರೋಲ್ ಬಂಕ್ ನಿಂದ ನಗದು ದೋಚಿದ ದರೋಡೆಕೋರರು

ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮ: 6 ಮಂದಿಗೆ ಗಾಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ಗುಡ್ಡ ಕುಸಿದು ಮನೆ ಸಂಪೂರ್ಣ ನೆಲಸಮ: 6 ಮಂದಿಗೆ ಗಾಯ, ಸಮಯಪ್ರಜ್ಞೆಯಿಂದ ತಪ್ಪಿದ ಭಾರಿ ದುರಂತ

ವಾಹನ ಸಂಚಾರ ಸಂಪೂರ್ಣ ಬಂದ್‌

ನಿರಂತರ ಮಳೆ: ಮಲೆತ್ತಡ್ಕ ಸೇತುವೆಯ ಒಂದು ಪಾರ್ಶ್ವ ಕುಸಿತ

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

ಅಶ್ವತ್ಥ ಎಲೆಯಲ್ಲಿ ಮೋದಿ; ಸುಳ್ಯದ ಯುವಕನ ಕಲೆಗೆ ಪ್ರಧಾನಿ ಶ್ಲಾಘನೆ

ಅಶ್ವತ್ಥ ಎಲೆಯಲ್ಲಿ ಮೋದಿ; ಸುಳ್ಯದ ಯುವಕನ ಕಲೆಗೆ ಪ್ರಧಾನಿ ಶ್ಲಾಘನೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

Punjab-2

IPL-2020ಯ ಮೊದಲ ಸೂಪರ್ ಓವರ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

ತಮಿಳುನಾಡು ಮಾದರಿಯಲ್ಲಿ ತಮಟೆ ಕಲಾವಿದರಿಗೆ ಸೌಲಭ್ಯ ಕಲ್ಪಿಸಲು ಹೋರಾಟ: ರವಿಶಂಕರ್

Stoins1

ಅರಬ್ ನಾಡಿನಲ್ಲಿ ಸ್ಟೊಯ್ನ್ಸ್ ಬಿರುಗಾಳಿ ; ಪಂಜಾಬ್ ಗೆಲುವಿಗೆ 158 ಗುರಿ

sukbir

ಕೃಷಿ ಮಸೂದೆಗೆ ಅಂಕಿತ ಹಾಕಬೇಡಿ,ರೈತರು ನಮ್ಮನ್ನೆಂದು ಕ್ಷಮಿಸಲ್ಲ:ರಾಷ್ಟ್ರಪತಿಗೆ ಬಾದಲ್ ಮನವಿ

NEWS-TDY-01

ಚೆನ್ನೈ ವಿರುದ್ಧದ ಮೊದಲ ಪಂದ್ಯಕ್ಕೆ ರಾಜಸ್ಥಾನ್ ತಂಡಕ್ಕೆ ಬಟ್ಲರ್ ಅಲಭ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.