ಅಮೆರಿಕದ ವಿ.ವಿ.ಯಲ್ಲಿ ಕನ್ನಡ ಪೀಠ ಸ್ಥಾಪನೆಗೆ ಪ್ರಯತ್ನ 

Team Udayavani, Jan 29, 2018, 5:07 PM IST

29-Jan-22.jpg

ಪುತ್ತೂರು: ಅಮೆರಿಕದ ಅಕ್ಕ ಸಮ್ಮೇಳನದ ಸಂಘಟಕರಲ್ಲಿ ಒಬ್ಬರು ಪ್ರೊ| ನಾಗ ಐತಾಳ್‌. 60ರ ದಶಕದ ಕೊನೆ ಭಾಗದಲ್ಲಿ ಅಮೆರಿಕದ ಶಿಕಾಗೋ ವಿಶ್ವವಿದ್ಯಾಲಯದ ಬಯೋಕೆಮಿಸ್ಟ್ರಿ ಪ್ರಾಧ್ಯಾಪಕರಾಗಿ ಸೇರಿಂಡ ಅವರು 2001ರಲ್ಲಿ ನಿವೃತ್ತರಾದರು. ಬಳಿಕ ಅಮೆರಿಕದಲ್ಲಿದ್ದು ಕೊಂಡೇ ಕನ್ನಡದ ಕೈಂಕರ್ಯ ಮುಂದುವರಿಸುತ್ತಾ, ಕನ್ನಡ ಸಾಹಿತ್ಯ ರಂಗವನ್ನು ಹುಟ್ಟು ಹಾಕಿದರು. ಅಮೆರಿಕದ ಕನ್ನಡಿಗರಿಂದ ಕನ್ನಡ ಕೃತಿ ಬರೆಸಿದ ಹೆಚ್ಚುಗಾರಿಕೆ ಇವರದ್ದು. ಸದ್ಯ ಲಾಸ್‌ ಏಂಜೆಲೀಸ್‌ನಲ್ಲಿ ಪತ್ನಿ ಲಕ್ಷ್ಮೀ , ಪುತ್ರ ಹಾಗೂ ಪುತ್ರಿ, ಮೊಮ್ಮಕ್ಕಳ ಜತೆ ವಾಸವಾಗಿದ್ದಾರೆ. ಇವರು ಮೂಲತಃ ಕುಂದಾಪುರ ತಾಲೂಕು ಕೋಟದವರು.

ಫೆ. 5ರಂದು ಬೆಂಗಳೂರಿನಲ್ಲಿ ಇವರು ಸಂಪಾದಿಸಿದ ‘ಜಿ.ಎಸ್‌. ಶಿವರುದ್ರಪ್ಪ ಅವರ ನೆನಪಿನ ಓಣಿಯೊಳಗೆ ಮಿಣುಕಾಡುವ ದೀಪ’ ಪುಸ್ತಕ ಬಿಡುಗಡೆ ಆಗುತ್ತಿದೆ. ಇದರ ಜತೆಗೆ ‘ಸ್ಮರಣೆ ಸಾಲದೇ’ ಎಂಬ ಬಿಡಿಬರಹಗಳ ಗುತ್ಛವೂ ಅನಾವರಣಗೊಳ್ಳಲಿದೆ. ಶನಿವಾರ ಸಂಜೆ ಪುತ್ತೂರಿನ ಅನುರಾಗ ವಠಾರಕ್ಕೆ ಭೇಟಿ ನೀಡಿದ ಹೊತ್ತಿನಲ್ಲಿ ಅವರ ಜತೆ ‘ಉದಯವಾಣಿ’ ನಡೆಸಿದ ಮಾತುಕತೆ ಇಲ್ಲಿದೆ.

ಅಮೆರಿಕದಲ್ಲಿರುವ ಕನ್ನಡ ಸಾಹಿತ್ಯದ ಬಗ್ಗೆ ಹೇಳಿ
ಅಮೆರಿಕದಲ್ಲಿ ಇತ್ತೀಚೆಗೆ 50-60ರಷ್ಟು ಕನ್ನಡ ಪುಸ್ತಕಗಳು ಪ್ರಕಟವಾಗಿವೆ. ಇದಕ್ಕೆಲ್ಲ ಉತ್ತೇಜನ ಸಿಕ್ಕಿದ್ದು ರಾಜ್ಯದ ಹಿರಿಯ ಕನ್ನಡ ಸಾಹಿತಿಗಳಿಂದಲೇ. ಅಮೆರಿಕಕ್ಕೆ ಬರುತ್ತಿದ್ದ ಅವರು, ನಮ್ಮನ್ನು ಇನ್ನಷ್ಟು ಉತ್ತೇಜಿಸುತ್ತಿದ್ದರು. ಪರಿಣಾಮ ಮೈಸೂರು ನಾಗರಾಜ್‌, ನಳಿನಿ ಮಯ್ಯ, ಗುರುಪ್ರಸಾದ್‌ ಕಾಗಿನೆಲೆ ಹೀಗೆ ಅನೇಕ ಬರಹಗಾರರು ಹುಟ್ಟಿಕೊಂಡರು.

ನಾವು ಅಮೆರಿಕದಲ್ಲಿ ಸಾಹಿತ್ಯದ ಕೆಲಸ ಮಾಡುವ ಮೊದಲೇ ಶಿಕಾಗೋ ವಿಶ್ವವಿದ್ಯಾಲಯದ ಪ್ರೊ| ಎ.ಕೆ. ರಾಮನುಜನ್‌ 3 ಕವನ ಸಂಕಲನ, ಹಲವಾರು ಲೇಖನಗಳನ್ನು ಕನ್ನಡದಲ್ಲಿ ಪ್ರಕಟಿಸಿದ್ದರು. ಅಡಿಗರ ಭಕ್ತ ಪಿ. ಶ್ರೀನಿವಾಸ ರಾಜು ಅವರು ಕನ್ನಡದಲ್ಲಿ ಕೃಷಿ ಮಾಡಿದ್ದರು. ಡಿಟ್ರಾಯಿಟ್‌, ಶಿಕಾಗೋ, ಲಾಸ್‌ ಏಂಜಲೀಸ್‌, ವಾಷಿಂಗ್ಟನ್‌ ಮೊದಲಾದ ದೊಡ್ಡ ಸಿಟಿಗಳಲ್ಲಿ ಕನ್ನಡದ ಕೂಟಗಳಿವೆ. ಇವುಗಳಿಗೆ ವಿದ್ಯಾರಣ್ಯ, ಸಂಗಮ, ಕಾವೇರಿ ಎಂಬ ಹೆಸರನ್ನು ಕೊಡಲಾಗಿದೆ. ಅಮೆರಿಕದ ಕನ್ನಡ ಕೂಟಗಳ ಆಕರವೇ ಅಕ್ಕ. ಕನ್ನಡ ಸಾಹಿತ್ಯ ರಂಗ ಎರಡು ವರ್ಷಕ್ಕೊಮ್ಮೆ ಸೇರಿ ಸಭೆ ನಡೆಸುತ್ತದೆ. ಹೀಗೆ ಸೇರಿದಾಗ ಒಂದು ಪುಸ್ತಕವಾದರೂ ಪ್ರಕಟ ಮಾಡುವ ಕೆಲಸ ನಡೆಯುತ್ತಿದೆ.

ನೀವು ಅಮೆರಿಕದಲ್ಲಿದ್ದುಕೊಂಡು ಬೇಂದ್ರೆ, ಕುವೆಂಪು, ಕಾರಂತರ ಬಗ್ಗೆ ಆಳವಾದ ಅಧ್ಯಯನ ಮಾಡಲು ಹೇಗೆ ಸಾಧ್ಯವಾಯಿತು?ಊರಿನಿಂದಲೇ ಪುಸ್ತಕ ಕೊಂಡೊಯ್ಯುತ್ತಿದ್ದೆವು. ಕನ್ನಡಿಗರು ಸಿಕ್ಕಾಗ ಓರ್ವ ಸಾಹಿತಿ ಅಥವಾ ವಿಷಯದ ಬಗ್ಗೆ ಬರೆದುಕೊಡುವಂತೆ ಕೇಳಿಕೊಳ್ಳುತ್ತಿದ್ದೆ. ಅದಕ್ಕೆ ಬೇಕಾದ ಪೂರಕ ಮಾಹಿತಿ ಇಲ್ಲ ಎಂದು ಹೇಳಿದಾಗ, ಇಲ್ಲಿಂದ ಕೊಂಡೊಯ್ದ ಪುಸ್ತಕಗಳನ್ನು ಅವರಿಗೆ ನೀಡಿದೆ. ಸುಪ್ತ ಪ್ರತಿಭೆಗಳು ಹೊರ ಬರಲು ಇದು ಕಾರಣವೂ ಆಯಿತು.

 ಸಾಹಿತ್ಯ, ವಿಜ್ಞಾನದ ಸಂಬಂಧದ ಬಗ್ಗೆ…
ವಿಜ್ಞಾನ ನನ್ನ ವೃತ್ತಿ. ಸಾಹಿತ್ಯ ಬದುಕು. ಆಲೋಚನೆಯಲ್ಲಿ ಬಂದದ್ದೇ ಸಾಹಿತ್ಯ. ವಿಜ್ಞಾನ ಮತ್ತು ಸಾಹಿತ್ಯವನ್ನು ಒಂದು ಮಾಡುವ ಪ್ರಯತ್ನ ಗೊತ್ತಿಲ್ಲದೇ ನಡೆಯಿತು. ಜೀವನ ರಹಸ್ಯ ಎಂಬ ಪುಸ್ತಕವನ್ನು ಬರೆದೆ. ನಮ್ಮ ಎಲ್ಲ ಆಗುಹೋಗು, ರಹಸ್ಯ ಜೀವಕೋಶದಲ್ಲಿರುವ ಡಿಎನ್‌ ಎನಲ್ಲಿದೆ.  ಸಾಹಿತ್ಯ ಮತ್ತು ವಿಜ್ಞಾನ ಒಂದಾಯಿತಲ್ಲವೇ?

ಅಮೆರಿಕದಲ್ಲಿ ಕನ್ನಡಿಗರು ಜತೆ ಸೇರಿದಾಗ, ಕನ್ನಡವನ್ನೇ ಮಾತನಾಡುತ್ತೀರಾ?
ಅಮೆರಿಕದ ವಿಶ್ವವಿದ್ಯಾಲಯದಲ್ಲಿ ಕನ್ನಡ ಕೇಂದ್ರ ಅಥವಾ ಪೀಠ ಸ್ಥಾಪಿಸಬೇಕೆಂಬ ಪ್ರಯತ್ನ ಸಾಗಿದೆ. ಆದರೆ ಇದಕ್ಕೆ ಬೇಕಾದಷ್ಟು ಹಣ ಒಟ್ಟುಗೂಡಿಸಲು ಸಾಧ್ಯವಾಗಿಲ್ಲ. ಹಣ ನೀಡುವುದರಲ್ಲಿ ಕನ್ನಡಿಗರ ಕೈ ಸ್ವಲ್ಪ ಹಿಂದೆ. ಸ್ಟೇಟ್‌ ಯೂನಿವರ್ಸಿಟಿ ಆಫ್‌ ನ್ಯೂಯಾರ್ಕ್‌ನ ಭಾರತೀಯ ಕಲಿಕಾ ವಿಭಾಗದ ಮುಖ್ಯಸ್ಥ ಪ್ರೊ| ಎಸ್‌.ಎನ್‌. ಶ್ರೀಧರ್‌ ಮೈಸೂರಿನವರು. ಕುಮಾರವ್ಯಾಸನ ಬರಹವನ್ನು ಇಂಗ್ಲೀಷ್ ಗೆ ಅನುವಾದ ಮಾಡುವ ಪ್ರಯತ್ನದಲ್ಲಿದ್ದಾರೆ. ಎ.ಕೆ. ರಾಮಾನುಜನ್‌ ಅವರು ಅನಂತಮೂರ್ತಿಯವರ ಸಂಸ್ಕಾರ ಕೃತಿಯನ್ನು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಬಸವಣ್ಣನ ಕೆಲ ವಚನಗಳು ಇಂಗ್ಲಿಷ್‌ನಲ್ಲಿ ಸಿಗುತ್ತವೆ. ಈ ಎಲ್ಲ ಕೆಲಸಗಳಿಗೆ ಕನ್ನಡದಲ್ಲೇ ಮಾತನಾಡಬೇಕಲ್ಲ. ಕನ್ನಡವನ್ನು ಮರೆತು ಬಿಡಬಾರದು. ಕನ್ನಡವನ್ನು ಬಿಟ್ಟು ಬಂದಿದ್ದೇವೆ ಎಂಬ ಅಪರಾಧಿ ಭಾವ ನಮ್ಮಲ್ಲಿದೆ. ಎಷ್ಟು ಮಂದಿ ಅಮೆರಿಕದಲ್ಲಿ ಕನ್ನಡ ಮಾತನಾಡುತ್ತಾರೆ ಎಂದು ಗೊತ್ತಿಲ್ಲ. ಕನ್ನಡವನ್ನು ಉಳಿಸುವ ಪ್ರಯತ್ನ ನಿರಂತರ.

ಅಮೆರಿಕದಲ್ಲಿ ಕನ್ನಡವನ್ನು ಜೀವಂತವಾಗಿಡಲು ಹೇಗೆ ಸಾಧ್ಯವಾಯಿತು?
ಅಮೆರಿಕಕ್ಕೆ ಕನ್ನಡವನ್ನು ಹೊತ್ತುಕೊಂಡೇ ಹೋಗಿದ್ದೆವು. ಭಾಷೆ ಮತ್ತು ಸಂಸ್ಕೃತಿ ಸದಾ ನಮ್ಮೊಳಗೆ ಕಾಡುತ್ತಲೇ ಇತ್ತು. ಕನ್ನಡಿಗರನ್ನು ಜತೆಗೂಡಿಸಿ ಏನಾದರೂ ಮಾಡಬೇಕೆಂದು ಅನಿಸಿತು. ಪ್ರಾಧ್ಯಾಪಕ ಹುದ್ದೆಯಿಂದ ನಿವೃತ್ತನಾದ ಬಳಿಕ ಇದೇ ಕೆಲಸದಲ್ಲಿ ತೊಡಗಿಸಿಕೊಂಡೆ. ಕನ್ನಡ ಎಂದಿಗೂ ಜೀವಂತವಾಗಿಯೇ ಇರುತ್ತದೆ.

ಅಮೆರಿಕದಲ್ಲಿ ಕನ್ನಡ ಕಲಿಸುವ ಕೆಲಸ ನಡೆಯುತ್ತಿದೆಯೇ?
ಕನ್ನಡ ಕಲಿ ಎಂಬ ಸಂಸ್ಥೆಗಳು ಅಮೆರಿಕದಲ್ಲೇ ಬೆಳೆದ ಕನ್ನಡಿಗರ ಮಕ್ಕಳಿಗೆ ಕನ್ನಡ ಕಲಿಸುತ್ತಿವೆ. ಅದು ಸ್ವಯಂಪ್ರೇರಿತವಾಗಿ ಹುಟ್ಟಿಕೊಂಡ ಸಂಸ್ಥೆ. ಒಂದಷ್ಟು ಜನ ಬಂದು ಕನ್ನಡ ಕಲಿಯುತ್ತಿದ್ದಾರೆ.

ಗಣೇಶ್‌ ಎನ್‌. ಕಲ್ಲರ್ಪೆ 

ಟಾಪ್ ನ್ಯೂಸ್

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Hamsalekha ಸಂಗೀತದಿಂದ ದೂರವಾಗುತ್ತಿರುವುದು ಯಾಕೆ?ಯಾರಿಗೆ ಬರೆಯಲಿ ಸಾಹಿತ್ಯ ಎಂದ ನಾದಬ್ರಹ್ಮ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Kalaburagi; ಬಿಜೆಪಿ ತೊರೆದು ಮರಳಿ ಕಾಂಗ್ರೆಸ್ ಸೇರಿದ ಮಾಲೀಕಯ್ಯ ಗುತ್ತೇದಾರ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

Tour: 9 ದಿನ 4,800 ಕಿ.ಮೀ ಪ್ರಯಾಣ-ಅಡ್ವೆಂಚರ್‌ ಬೈಕ್‌ನಲ್ಲಿ 64ರ ಹಿರಿಯರ ಸಾಹಸ ಯಾನ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

ಹಣ ಪಡೆದು ವರ್ಗಾವಣೆಯಾದ ಪೊಲೀಸರಿಂದ ಕಾನೂನು ವ್ಯವಸ್ಥೆ ನಿರೀಕ್ಷೆ ಸಾಧ್ಯವೇ?: ಜೋಶಿ ಪ್ರಶ್ನೆ

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

Mangaluru: ಬೈಕ್ ಡಿಕ್ಕಿಯಾಗಿ ರಸ್ತೆಗೆ ಬಿದ್ದ ಕಾರ್ಮಿಕನ ಮೇಲೆ ಹರಿದ ಟ್ಯಾಂಕರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8-ptr

Puttur: ಶ್ರೀ ಮಹಾಲಿಂಗೇಶ್ವರ ದೇವರ ಅವಭೃಥ ಸವಾರಿ

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!

17-uv-fusion

Holi: ಹೋಳಿ ಹುಣ್ಣಿಮೆ ಹಿನ್ನೆಲೆ

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು

16-fusion

UV Fusion: ಎಳೆಯರಿಗೂ ಒಂದಿಷ್ಟು ಸಮಯ ಮೀಸಲಿಡೋಣ

15-uv-fusion

Time management: ತಂತ್ರಜ್ಞಾನ ಯುಗದಲ್ಲಿ ಸಮಯ ನಿರ್ವಹಣೆ ಮುಖ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.