ಆಟೋ ಪ್ರಯಾಣ ದರ 5 ರೂ. ಏರಿಕೆ ಸಾಧ್ಯತೆ

ರಿಕ್ಷಾ ಯೂನಿಯನ್‌ಗಳ ಆಗ್ರಹ

Team Udayavani, Feb 15, 2020, 5:59 AM IST

1402MLR101-RIKSHAW

ಮಹಾನಗರ: ಮಂಗಳೂರು ವ್ಯಾಪ್ತಿಯಲ್ಲಿ ಬಾಡಿಗೆ ನಡೆಸುವ ಆಟೋ ಪ್ರಯಾಣ ದರವನ್ನು ಕನಿಷ್ಠ 5 ರೂ. ಏರಿಕೆ ಮಾಡುವಂತೆ ರಿಕ್ಷಾ ಯೂನಿಯನ್‌ಗಳು ಒತ್ತಾಯಿಸುತ್ತಿದ್ದು, ಶೀಘ್ರದಲ್ಲಿ ದರ ಏರಿಕೆ ಆಗುವ ಸಾಧ್ಯತೆಯಿದೆ.

ದ.ಕ. ಜಿಲ್ಲೆಯಲ್ಲಿ ಆಟೋ ಪ್ರಯಾಣ ದರ ಏರಿಕೆ ಆಗದೆ ಐದು ವರ್ಷ ಕಳೆದಿದ್ದು, ಪೆಟ್ರೋಲ್‌, ಡೀಸೆಲ್‌ ದರ ಬಹಳಷ್ಟು ಏರಿಕೆ ಕಂಡಿದೆ. ದರ ಏರಿಕೆ ಮಾಡುವಂತೆ ಕೆಲವು ಬಾರಿ ರಿಕ್ಷಾ ಯೂನಿಯನ್‌ಗಳು ಮನವಿ ಮಾಡಿದ್ದರೂ ದರ ಏರಿಕೆ ಆಗಿಲ್ಲ. ಹೀಗಾಗಿ ರಿಕ್ಷಾವನ್ನೇ ನಂಬಿ ಬದುಕುತ್ತಿರುವ ಸಾವಿ ರಾರು ಜನರಿಗೆ ಸಮಸ್ಯೆ ಆಗುತ್ತಿದೆ. ಹೀಗಾಗಿ ಈ ಬಾರಿ ದರ ಏರಿಕೆ ಮಾಡಬೇಕಾದದ್ದು ಅನಿ ವಾರ್ಯ ಎಂಬುದು ರಿಕ್ಷಾ ಯೂನಿ ಯನ್‌ಗಳ ಅಭಿಪ್ರಾಯ. ಆದರೆ, ಆಟೋ ಪ್ರಯಾಣ ದರ ಏರಿಕೆಯ ಮೂಲಕ ಜನಸಾ ಮಾ ನ್ಯರಿಗೂ ಸಮಸ್ಯೆ ಆಗದಂತೆ ಅವರಿಗೂ ನ್ಯಾಯ ಸಿಗು ವಂತೆ ಮಾಡಬೇಕಿದ್ದು, ಪರಿಷ್ಕರಣೆ ತೀರ್ಮಾನದಿಂದ ಸಾರ್ವಜನಿಕರಿಗೆ ಹೊರೆ ಯಾಗಲೇಬಾರದು ಎಂಬುದು ಸಾರ್ವಜನಿಕರ ಅಭಿಪ್ರಾಯ. ಈ ಅಭಿಪ್ರಾಯಗಳ ಹಿನ್ನೆಲೆಯಲ್ಲಿ ಚರ್ಚಿಸಿ ಸೂಕ್ತ ತೀರ್ಮಾನ ಕೈಗೊಳ್ಳುವ ಹಿನ್ನೆಲೆ ಯಲ್ಲಿ ಫೆ. 27ರಂದು ದ.ಕ. ಜಿಲ್ಲಾಧಿ ಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದ್ದು, ಅಲ್ಲಿ ಅಂತಿಮ ತೀರ್ಮಾನವಾಗಲಿದೆ ಎಂದು ಆರ್‌ಟಿಒ ಮೂಲಗಳು ತಿಳಿಸಿವೆ.

ಸಾರಿಗೆ ಪ್ರಾಧಿಕಾರ ಸಭೆಯಲ್ಲಿ ತೀರ್ಮಾನ
ಆಟೋ ಪ್ರಯಾಣ ದರ ಪರಿಷ್ಕರಿಸುವಂತೆ ರಿಕ್ಷಾ ಚಾಲಕರು, ಮಾಲಕರು, ವಿವಿಧ ಸಂಘಟನೆಗಳಿಂದ ಮನವಿ ಬಂದಿದೆ. ಈ ಬಗ್ಗೆ ರಿಕ್ಷಾ ಬಳಕೆದಾರರ ಜತೆಗೆ ಚರ್ಚೆ ನಡೆಸಿ ಸಾರಿಗೆ ಪ್ರಾಧಿಕಾರದ ಜಿಲ್ಲಾ ಸಮಿತಿಯು ಸೂಕ್ತ ತೀರ್ಮಾನ ಕೈಗೊಳ್ಳಬೇಕಿದೆ. ಈ ಕುರಿತಂತೆ ಚರ್ಚಿಸಲು ಫೆ. 27 ರಂದು ಬೆಳಗ್ಗೆ 10.30ಕ್ಕೆ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಪ್ರಾದೇಶಿಕ ಸಾರಿಗೆ ಪ್ರಾಧಿಕಾರದ ಸಭೆ ನಡೆಯಲಿದೆ. ಅಲ್ಲಿ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು.
– ರಾಮಕೃಷ್ಣ ರೈ, ಆರ್‌ಟಿಒ, ಮಂಗಳೂರು.

ಕನಿಷ್ಠ ದರ ಏರಿಕೆ ಬೇಡ
5 ವರ್ಷಗಳಲ್ಲಿ ಆಟೋ ಪ್ರಯಾಣ ದರ ಏರಿಕೆ ಆಗದ ಕಾರಣದಿಂದ ರಿಕ್ಷಾದವರು ದರ ಏರಿಕೆ ಕೇಳುವುದು ತಪ್ಪಲ್ಲ. ಆದರೆ, ದರ ಏರಿಕೆಯ ಮೂಲಕ ಜನಸಾಮಾನ್ಯರ ಮೇಲೆ ಹೊರೆ ವಿಧಿಸುವುದು ಸರಿಯಲ್ಲ. ರಿಕ್ಷಾ ಬಳಕೆ ಮಾಡುವ ಬಡ-ಮಧ್ಯಮ ವರ್ಗದ ಜನರ ಜೀವನಕ್ಕೂ ಸಮಸ್ಯೆ ಆಗಬಾರದು. ಹೀಗಾಗಿ 1.5 ಕಿ.ಮೀ. ವರೆಗಿನ ಕನಿಷ್ಠ ದರ 25 ರೂ.ಗಳನ್ನು ಬದಲಾವಣೆ ಮಾಡದೆ, ಆ ಬಳಿಕದ ದರ ಜನರ ಅಭಿಪ್ರಾಯ ಪಡೆದು ಪರಿಷ್ಕರಣೆ ಆಗಲಿ.
– ಹನುಮಂತ ಕಾಮತ್‌, ಸಾಮಾಜಿಕ ಹೋರಾಟಗಾರರು.

ಉಡುಪಿಯಲ್ಲಿ ಏರಿಕೆ
ಉಡುಪಿ ಜಿಲ್ಲೆಯ ಆಟೋ ಪ್ರಯಾಣ ದರವನ್ನು ಫೆ. 7ರಂದು ಪರಿಷ್ಕರಿಸಲಾಗಿದ್ದು, ಈಗಿನ ಕನಿಷ್ಠ ದರ 25 ರೂ.ಗಳನ್ನು 30 ರೂ.ಗೆ ಏರಿಸಲಾಗಿದೆ. ಅನಂತರದ ರನ್ನಿಂಗ್‌ ದರವನ್ನು 17 ರೂ.ಗೆ ನಿಗದಿಪಡಿಸಲಾಗಿದೆ. ಎ. 1ರಿಂದ ಹೊಸ ದರ ಉಡುಪಿಯಲ್ಲಿ ಅನ್ವಯವಾಗುತ್ತದೆ. ಇದೇ ಮಾನದಂಡದ ಪ್ರಕಾರ ರಿಕ್ಷಾದರ ಏರಿಕೆ ಮಾಡಬೇಕು ಎಂದು ರಿಕ್ಷಾ ಚಾಲಕ-ಮಾಲಕರು ಹಾಗೂ ವಿವಿಧ ರಿಕ್ಷಾ ಪರ ಸಂಘಟನೆಯವರು ಈಗಾಗಲೇ ದ.ಕ. ಜಿಲ್ಲಾಧಿಕಾರಿ ಹಾಗೂ ಸಾರಿಗೆ ಆಯುಕ್ತರಿಗೆ ಮನವಿ ಸಲ್ಲಿಸಿದ್ದಾರೆ. ಕೆಲವು ಸಂಘಟನೆಯವರು ಕನಿಷ್ಠ ದರವನ್ನು 35 ರೂ.ಗೆ ಏರಿಸಬೇಕು ಎಂದೂ ಮನವಿಯಲ್ಲಿ ಆಗ್ರಹಿಸಿದ್ದಾರೆ.

ದರ ಏರಿಕೆ ಅನಿವಾರ್ಯ
ರಿಕ್ಷಾ ಪ್ರಯಾಣ ದರ ಏರಿಕೆ ಮಾಡದೆ ಬರೋಬ್ಬರಿ 5 ವರ್ಷಗಳೇ ಕಳೆದಿವೆ. ಅದರ ಬಳಿಕ ಪೆಟ್ರೋಲ್‌, ಡೀಸೆಲ್‌ ದರ ಸಹಿತ ಎಲ್ಲ ಉತ್ಪನ್ನಗಳ ಬೆಲೆಯೂ ಅಧಿಕವಾಗಿದೆ. ಆದರೆ, ರಿಕ್ಷಾ ದರ ಮಾತ್ರ ಏರಿಕೆಯಾಗಲೇ ಇಲ್ಲ. ರಿಕ್ಷಾದಲ್ಲಿ ದುಡಿಯುತ್ತಿರುವ ಬಡವರು ಇದರಿಂದ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಹೀಗಾಗಿ ಕನಿಷ್ಠ ದರವನ್ನು ಉಡುಪಿಯ ಸ್ವರೂಪದಲ್ಲಿ ಕನಿಷ್ಠ 5 ರೂ.ಗಳಾದರೂ ಏರಿಕೆ ಮಾಡಬೇಕಾಗಿದೆ.
 - ಸುನಿಲ್‌ ಕುಮಾರ್‌ ಬಜಾಲ್‌, ಜಿಲ್ಲಾಧ್ಯಕ್ಷರು, ಆಟೋ ರಿಕ್ಷಾ ಡ್ರೈವರ್‌ ಫೆಡರೇಶನ್‌.

ಟಾಪ್ ನ್ಯೂಸ್

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

UPSC Result: ವಿಜಯಪುರದ ವಿಜೇತಾಗೆ ಯುಪಿಎಸ್‍ಸಿಯಲ್ಲಿ 100ನೇ ರ್‍ಯಾಂಕ್

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

Bhatkal ನೀರು ಪೋಲು; ಜಾಲಿ ಪಟ್ಟಣ ಪಂಚಾಯತ್ ನಿರ್ಲಕ್ಷ್ಯ; ಜನರ ಆಕ್ರೋಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

17=

Mangaluru: ಬೈಕ್‌ಗೆ ಕಾರು ಢಿಕ್ಕಿ: ವಿದ್ಯಾರ್ಥಿ ಸಾವು

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Moodabidri ಮೆದುಳು ಜ್ವರ ಉಲ್ಬಣಿಸಿ ವಿದ್ಯಾರ್ಥಿನಿ ನಿಧನ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Dakshina Kannada: ಮನೆಮನೆ ಭೇಟಿ ಮೂಲಕ ಮತದಾನ ಸೌಲಭ್ಯಕ್ಕೆ ಚಾಲನೆ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Hajj Yatra: ಕಂತು ಪಾವತಿಗೆ ಎ. 27ರಂದು ಕೊನೆಯ ದಿನ

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

Mangaluru ಪ್ರಧಾನಿಯ ಕೈ ಸೇರಿದ ಕರಾವಳಿ ಕಲಾವಿದನ “ಆಯಿಲ್‌ ಕ್ಯಾನ್ವಾಸ್‌’

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಹಣ

Dharawad: ಮದ್ಯದ ಶೋಧಕ್ಕೆ ಹೋದ ಅಧಿಕಾರಿಗಳಿಗೆ ಸಿಕ್ಕಿದ್ದು ಕಂತೆ ಕಂತೆ ಕೋಟಿಗಟ್ಟಲೆ ಹಣ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

ಇನ್ನು ಹಣಕೊಟ್ಟರೆ ಮಾತ್ರ ಟ್ವಿಟರ್‌ನಲ್ಲಿ ಪೋಸ್ಟ್‌, ಲೈಕ್‌ ರಿಪ್ಲೈ ಗೆ ಅವಕಾಶ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

Bantwal: ಮೂರ್ಛೆ ರೋಗದಿಂದ ಬಳಲುತ್ತಿದ್ದ ಮಹಿಳೆ ನದಿಗೆ ಹಾರಿ ಆತ್ಮಹತ್ಯೆ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

2018ರಲ್ಲಿ ನಡೆದ ಬಾಲ್ಯ ವಿವಾಹ ಪ್ರಕರಣ: 7 ಜನರಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

18-

Road Mishap: ಹೈಕಾಡಿಯಲ್ಲಿ ಕಾರು ಅಪಘಾತ: ನಾಲ್ವರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.