ಬಿ.ಮೂಡ  ಕಾಲೇಜು: ಆಂಗ್ಲ ಭಾಷಾ ತರಬೇತಿ


Team Udayavani, Aug 8, 2017, 6:20 AM IST

tarabeti.jpg

ಬಂಟ್ವಾಳ:  ಆಂಗ್ಲಭಾಷಾ ತರಬೇತಿ ಕಾರ್ಯಕ್ರಮ ಆಧುನಿಕ ಕಾಲದಲ್ಲಿ ಅವಶ್ಯವಾಗಿದೆ. ಆಂಗ್ಲ ಭಾಷೆಯ ಬಳಕೆಯಿಂದ ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಸಾರ್ವಜನಿಕರ ಜತೆ ಸಂಪರ್ಕ, ಉನ್ನತ ಮಟ್ಟದಲ್ಲಿ ಸಂಭಾಷಣೆ ಸುಲಭವಾಗುವುದು. 21ನೇ ಶತಮಾನದಲ್ಲಿ ವಿಶ್ವದ ಬಹುತೇಕ ದೇಶಗಳು ಆಂಗ್ಲ ಭಾಷೆಯನ್ನು ಬಳಕೆ ಮಾಡುತ್ತಿದ್ದು ನಮ್ಮ ವಿದ್ಯಾರ್ಥಿಗಳು ಅವರ ಜತೆಗೆ ಪೈಪೋಟಿ ನೀಡಬೇಕಾದರೆ ಆಂಗ್ಲ ಭಾಷಾ ಜ್ಞಾನ, ಸಂಭಾಷಣೆ ಅವಶ್ಯವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಹೇಳಿದರು.

ಅವರು ಆ. 6ರಂದು ಬಿ. ಮೂಡ ಪ.ಪೂ. ಕಾಲೇಜಿನಲ್ಲಿ ಇಲಾಖೆಯ ಮೂಲಕ ಹಮ್ಮಿಕೊಂಡ ಆಂಗ್ಲ ಭಾಷಾ ವಿಶೇಷ ತರಬೇತಿ ಕಾರ್ಯಕ್ರಮಕ್ಕೆ  ಚಾಲನೆ ನೀಡಿ ಮಾತನಾಡಿದರು.

ಪ.ಪೂ. ಕಾಲೇಜಿನ ವಿದ್ಯಾರ್ಥಿಗಳ ಆಂಗ್ಲ  ಭಾಷಾ  ವ್ಯಾಕರಣ, ಮಾತನಾಡುವ ಕೌಶಲ ಉತ್ತಮಗೊಳಿಸುವ ಉದ್ದೇಶದಿಂದ ಇಂತಹ ತರಬೇತಿ ಉತ್ತಮ ವಾದುದು. ಪ.ಪೂ. ಶಿಕ್ಷಣ ಇಲಾಖೆ ಇಂತಹ ಕಾರ್ಯಕ್ರಮ ಹಾಕಿಕೊಂಡಿದೆ.  ವಿದ್ಯಾರ್ಥಿಗಳು ಮುಂದಿನ ದಿನದಲ್ಲಿ ಪರೀಕ್ಷೆ ಧೈರ್ಯದಿಂದ ಎದುರಿಸಿ ಉತ್ತಮ ಫಲಿತಾಂಶ ಪಡೆಯಲು ಇದು ಸಹಕಾರಿ ಎಂದರು.

ತರಬೇತಿ ಕೇಂದ್ರ ನೋಡಲ್‌ ಅಧಿಕಾರಿ ಸರಸ್ವತಿ ಮಾತನಾಡಿ ಸರಕಾರದ  ಸೂಚನೆಯಂತೆ ತರಬೇತಿ ಕಾರ್ಯಕ್ರಮ ಪ್ರತಿ ಭಾನುವಾರ ಆಯೋಜಿಸಿದೆ. ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಉತ್ತಮ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುವುದು ಎಂದರು. ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಯ ಹಿತದೃಷ್ಟಿಯಿಂದ ಇನ್ನೆರಡು ಕಾಲೇಜುಗಳಲ್ಲಿ ತರಬೇತಿ ಕೇಂದ್ರಗಳನ್ನು ಆಯೋಜಿಸ ಬೇಕು ಎಂದವರು  ಸಚಿವರಲ್ಲಿ  ಮನವಿ ಮಾಡಿದರು.

ಪುರಸಭಾ ಸದಸ್ಯ ಜಗದೀಶ ಕುಂದರ್‌, ಕಾಲೇಜು ಅಭಿವೃದ್ಧಿ  ಸಮಿತಿ ಸದಸ್ಯರಾದ ಸುಧಾಕರ ಮಡಿವಾಳ, ಇಂದಿರಾ ಚಂದಪ್ಪ, ಉಮೇಶ್‌ ಬೋಳಂತೂರು  ಮತ್ತಿತರರು ಉಪಸ್ಥಿತರಿದ್ದರು. ಸಂಪನ್ಮೂಲ ವ್ಯಕ್ತಿ ನಿವೃತ್ತ ಬ್ಯಾಂಕ್‌ ಅಧಿಕಾರಿ ಚಂದ್ರಶೇಖರ ರಾವ್‌ ಅವರನ್ನು  ಸಮ್ಮಾನಿಸಲಾಯಿತು. 

ತರಬೇತಿ ಸಂಯೋಜಕ ದಾಮೋದರ ಇ.  ವಂದಿಸಿದರು. ಉಪನ್ಯಾಸಕ ಅಬ್ದುಲ್‌ ರಜಾಕ್‌ ಸ್ವಾಗತಿಸಿ, ನಿರ್ವಹಿಸಿದರು.

ಟಾಪ್ ನ್ಯೂಸ್

ಕೆ.ಜಿ.ಎಫ್‌ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!

ಕೆ.ಜಿ.ಎಫ್‌ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!

ಅಂಜನಾದ್ರಿ ಸುತ್ತಮುತ್ತಲ ಬೆಟ್ಟಗಳಲ್ಲಿ ಶಿಲಾರೋಹಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ 

ಅಂಜನಾದ್ರಿ ಸುತ್ತಮುತ್ತಲ ಬೆಟ್ಟಗಳಲ್ಲಿ ಶಿಲಾರೋಹಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ 

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

safty belt

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

ವಿನಾಯಕ ನಗರದ ಮೃತ ಬಾಲಕನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ ಎಸ್.ಎಲ್.ಘೋಟ್ನೇಕರ್

hgjghgfd

ಎರಡೂ ಉಪ ಚುನಾವಣೆ ಬಿಜೆಪಿ ಗೆಲುವುದು ನಿಶ್ಚಿತ : ನಾರಾಯಣಸ್ವಾಮಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ

ಪ್ರಧಾನಿ ನರೇಂದ್ರ ಮೋದಿ ಸಾಮಾನ್ಯ ವ್ಯಕ್ತಿಯಲ್ಲ, ಸರ್ವಶಕ್ತನ ಅವತಾರ: ಸಚಿವ ತಿವಾರಿ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

gjhgfd

ಬಂಟ್ವಾಳ : ಬಿಜೆಪಿ ಮುಖಂಡ ಬೆಳ್ಳೂರು ನಿವಾಸಿ‌ ಪ್ರಕಾಶ್ ಮೇಲೆ ಹಲ್ಲೆ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

“ಫೈರಿಂಗ್‌ ರೇಂಜ್‌’ ಇಲ್ಲದೆ ಪೊಲೀಸರ ಪರದಾಟ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ವೆನ್ಲಾಕ್ ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯ ಆರೋಪ

ಕಾಳು ಮೆಣಸು ಧಾರಣೆ ಚೇತರಿಕೆ

ಕಾಳು ಮೆಣಸು ಧಾರಣೆ ಚೇತರಿಕೆ

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಕೆ.ಜಿ.ಎಫ್‌ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!

ಕೆ.ಜಿ.ಎಫ್‌ ಬೆಡಗಿ ರವೀನಾಗೆ ಪಾರ್ಟಿ ಅಂದ್ರೆ ಅಗೋದಿಲ್ವಂತೆ!

ಅಂಜನಾದ್ರಿ ಸುತ್ತಮುತ್ತಲ ಬೆಟ್ಟಗಳಲ್ಲಿ ಶಿಲಾರೋಹಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ 

ಅಂಜನಾದ್ರಿ ಸುತ್ತಮುತ್ತಲ ಬೆಟ್ಟಗಳಲ್ಲಿ ಶಿಲಾರೋಹಣ ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ 

5gas

ಬೆಲೆ ಏರಿಕೆ: ಸಿಲಿಂಡರ್‌ ಹೊತ್ತು ಪ್ರತಿಭಟನೆ

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

ತಾಟಗೇರ ಸಮೀಪ ರಾಜ್ಯ ಹೆದ್ದಾರಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಬೈಕ್ ಸವಾರ ಗಂಭೀರ

safty belt

ಬೈಕಲ್ಲಿ ಮಕ್ಕಳ ಬೆಲ್ಟ್ ಕಡ್ಡಾಯ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.