ವಿಮಾನ ದುರಂತದ ನೆನಪು: ಸಾವಿಗಿಂತ ಬದುಕೇ ದೊಡ್ಡದು ಎಂಬುದನ್ನು ಅರ್ಥೈಸಿದ ಘಟನೆ

Team Udayavani, May 22, 2019, 12:31 PM IST

DR-P-SAROJA

ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 2010 ಮೇ 22ರಂದು ಏರ್‌ ಇಂಡಿಯಾ ವಿಮಾನ ರನ್‌ವೇಯಿಂದ ಜಾರಿ ಕೆಳಕ್ಕೆ ಬಿದ್ದು ಸಂಭವಿಸಿದ ದುರಂತಕ್ಕೆ ಇಂದಿಗೆ ಒಂಬತ್ತು ವರ್ಷ. ಕರಾವಳಿಗೆ ಮಾತ್ರವಲ್ಲದೆ ದೇಶದ ನಾಗರಿಕ ವಿಮಾನ ಯಾನ ರಂಗದ ಮಟ್ಟಿಗೂ ವರ್ಷಗಳೆಷ್ಟು ಕಳೆದರೂ ಮರೆಯಲಾಗದ ಭಾರೀ ಅವಘಡವದು.

ಮಂಗಳೂರು: “ಚಿನ್ನಕ್ಕಿಂತಲೂ ಮಾನವೀ ಯತೆಯೇ ಮುಖ್ಯ’ ಎನ್ನಿಸಿದ್ದು ಅಂದೇ..ಆ ಸಂದರ್ಭದಲ್ಲಿಯೇ. ವೈದ್ಯೆಯಾಗಿದ್ದ ನನಗೆ ಬದುಕು ಮತ್ತು ಸಾವು ಹೊಸದೇನಾಗಿರಲಿಲ್ಲ. ಔಷಧೋಪಾಚಾರ ನೀಡಿದ ಕೆಲವು ದಿನಗಳ ಬಳಿಕ ರೋಗಿ ಹುಷಾರಾಗಿ, ಅವರ ಮನೆಯವರು ಬಂದು “ನಮ್ಮನ್ನು ಬದುಕಿಸಿದೆಯಮ್ಮಾ’ ಎನ್ನುವಾಗ ಬದುಕಿನ ಮಹತ್ವ ತಿಳಿಯುತ್ತಿತ್ತು. ಹಾಗೆಯೇ ಯಾವುದಾದರೂ ರೋಗಿ ಸತ್ತ ಸಂದರ್ಭ ಕಂಡಾಗಲೆಲ್ಲಾ ಮರುಕ ಉಮ್ಮಳಿಸಿಬರುತ್ತಿತ್ತು.

ಆದರೆ ಸಾವಿನ ಭೀಕರ ಅಧ್ಯಾಯವನ್ನು ತೆರೆದು ತೋರಿಸಿದ್ದು ಮಾತ್ರ ಮಂಗಳೂರಿನಲ್ಲಿ 2010 ರ ಮೇ 22ರಂದು ಘಟಿಸಿದ ವಿಮಾನ ಅಪಘಾತ.
ಆ ದಿನದ ನೆನಪುಗಳು ಎಂದಿಗೂ ಮಾಸುವು ದಿಲ್ಲ. ದುರಂತದ ಕ್ಷಣಗಳು, ದುಃಖದ ಘಳಿಗೆಗಳು, ಸಾವಿನ ಮನೆಯ ಆಕ್ರೋಶದ ಮಾತುಗಳು- ಎಲ್ಲವನ್ನೂ ಮೌನವಾಗಿ ನೋಡು ವುದು, ಸೂಕ್ಷ¾ವಾಗಿ ನಿಭಾಯಿಸುವುದಷ್ಟೇ ಅಂದು ನಮ್ಮ ಮುಂದಿದ್ದ ಆಯ್ಕೆಗಳು.

ಇದು ಡಾ| ಸರೋಜಾರ ಅನುಭವದ ನುಡಿಗಳು. ಘಟನೆಯಾದ ಸಂದರ್ಭ ಒಬ್ಬ ವೈದ್ಯೆ ಯಾಗಿ ಪರಿಸ್ಥಿತಿಯನ್ನು ನಿಭಾಯಿಸಿದ್ದನ್ನು ಇಲ್ಲಿ ಸ್ಮರಿಸಿಕೊಂಡಿದ್ದಾರೆ.

“2010ರಲ್ಲಿ ನಾನು ವೆನ್‌‍ಲಾಕ್‌ ಜಿಲ್ಲಾ ಶಸ್ತ್ರ ಚಿಕಿತ್ಸಕಿಯಾಗಿ ಹೆಚ್ಚುವರಿ ಹೊಣೆ ಹೊತ್ತು ಒಂದೆರಡು ತಿಂಗಳಾಗಿತ್ತು. ಬೆಳಗ್ಗೆ 6 ಗಂಟೆಗೆ ಎದ್ದು ಕಾಫಿ ಕುಡೀತಿದ್ದೆ. ಫೋನ್‌ಬಂತು. ಮಂಗಳೂರು ವಿಮಾನ ನಿಲ್ದಾಣದ ಹತ್ತಿರ ದುಬೈಯಿಂದ ಬರುವ ಏರ್‌ಇಂಡಿಯಾ ವಿಮಾನ ಪತನವಾಗಿದೆ’ ಎಂದು ಹೇಳಿದರು ಫೋನ್‌ ಮಾಡಿದವರು.

“ಯಾವುದೋ ಊರಲ್ಲಿ ಪ್ಲೇನ್‌ ಕ್ರಾಶ್‌ ಆಗಿ ಸಮುದ್ರಕ್ಕೆ ಬಿದ್ದಿತು’ ಎಂದೆಲ್ಲಾ ಕೇಳಿದ್ದ ನನಗೆ ಅಂಥದೊಂದು ಘಟನೆ ನನ್ನ ಅಂಗಳದಲ್ಲೇ ಘಟಿಸೀತು ಎಂದು ಊಹಿಸಿರಲಿಲ್ಲ. ಘಟನೆಯನ್ನು ಅರಗಿಸಿಕೊಳ್ಳಲು ಕೆಲವು ನಿಮಿಷಗಳೇ ಹಿಡಿದವು. ಆಘಾತದಿಂದ ಸುಧಾರಿಸಿಕೊಂಡು ಕೂಡಲೇ ಡ್ರೈವರ್‌ಗೆ ಬರಲು ಹೇಳಿ, ಆಸ್ಪತ್ರೆಗೆ ಹೊರಡಲು ಸಜ್ಜಾದೆ’ ಎಂದು ನೆನಪಿಸಿಕೊಂಡರು ಡಾ| ಸರೋಜ.

ಸಂದರ್ಭ ಅರ್ಥೈಸಿ ತುರ್ತು ವ್ಯವಸ್ಥೆ
ಆಸ್ಪತ್ರೆಗೆ ಬಂದು ವಾರ್ಡ್‌ನಲ್ಲಿದ್ದ ರೋಗಿಗಳನ್ನು ಮರು ಹಂಚಿಕೆ ಮಾಡಿ, ಅಪಘಾತದಿಂದ ಬಂದವರಿಗೆ ಎಲ್ಲಿ ಅವಕಾಶ ಕಲ್ಪಿಸಬೇಕು ಎಂದು ವ್ಯವಸ್ಥೆ ಮಾಡಿದೆ. ಲಭ್ಯವಿದ್ದ ಆ್ಯಂಬುಲೆನ್ಸ್‌ಗಳನ್ನು ಹೊಂದಿಸಿ, ಹಲವು ವೈದ್ಯರನ್ನು ಸ್ಥಳಕ್ಕೆ ಕಳುಹಿಸಿದೆ. ಬಳಿಕ ನಾನೂ ಹೊರಟೆ. ಅಬ್ಟಾ, ಅಲ್ಲಿಗೆ ಹೋಗಿ ನೋಡಿದರೆ ಬರೀ ಹೊಗೆಯಷ್ಟೇ ಕಾಣುತ್ತಿತ್ತು. 7-8 ಮಂದಿ ಪ್ರಾಣ ಉಳಿಸಿಕೊಂಡವರು ಅದಾಗಲೇ ಎಸ್‌.ಸಿ.ಎಸ್‌ ಆಸ್ಪತ್ರೆ ಸೇರಿದ್ದರು. ಉಳಿದವರ ಪತ್ತೆಯೇ ಸಿಗುತ್ತಿರಲಿಲ್ಲ’

“ಸತ್ತವರ ಮೃತದೇಹಗಳನ್ನು ಸಂಸ್ಕಾರ ಮಾಡಲು ಕ್ರಮ ಕೈಗೊಳ್ಳಬೇಕಿತ್ತು. ಹಲವು ಮೃತದೇಹಗಳನ್ನು ಲಾಂಡ್ರಿಯಲ್ಲಿ ಸಾಲಾಗಿ ಮಲಗಿಸಿದೆವು. ಅವುಗಳನ್ನು ಗುರುತಿಸಲು ಬಹಳಷ್ಟು ಜನ ಬಂದರು. ಹೆಣದ ಮೈಮೇಲಿನ ಚಿನ್ನ ಕದಿಯುವವರೂ ಅವರ ಮಧ್ಯೆ ಇದ್ದರು. ಬಂದವರಲ್ಲಿ ಕಳ್ಳರು ಯಾರು ಸಂಬಂಧಿಕರು ಯಾರು ಎಂದು ಹೇಗೆ ಪತ್ತೆ ಹೆಚ್ಚುವುದು ? ಬಹಳ ಸೂಕ್ಷ್ಮವಾದ ಸಂದರ್ಭ. ಹಾಗಾಗಿ ಚಿನ್ನಕ್ಕಿಂತಲೂ ಮಾನವೀಯತೆ ಮುಖ್ಯ ಎಂದುಕೊಂಡು ನಾವೆಲ್ಲರೂ ಸುಮ್ಮನಿರಲು ನಿರ್ಧರಿಸಿದೆವು’ ಎಂದು ನೆನಪಿಸಿಕೊಳ್ಳುತ್ತಾರೆ ಡಾ| ಸರೋಜಾ ಅವರು.

“ಅಷ್ಟರಲ್ಲಿ ಮೃತದೇಹಗಳು ಅದಲು ಬದಲಾಗಿವೆ ಎಂಬ ಗಲಾಟೆ ಆರಂಭ ವಾಯಿತು. ಕೇರಳದಿಂದ ಬಂದ ಒಬ್ಬರು ಬೆಳಿಗ್ಗೆ ನಮ್ಮವರದ್ದೇ ಎಂದುಕೊಂಡು ಮೃತದೇಹ ಕೊಂಡೊಯ್ದಿದ್ದರು. ಆದರೆ ಸಂಜೆ ಮೃತದೇಹವನ್ನು ವಾಪಸು ತಂದು ಇದು ನಮ್ಮವರದಲ್ಲ ಎಂದರು. ಮತ್ತೂಬ್ಬರು ಒಂದು ಮಗುವಿನ ಮೃತದೇಹ ಕೊಂಡು ಹೋಗಿ ಸಂಸ್ಕಾರ ಮಾಡಿದ ಮೇಲೆ ಅವರಿಗೆ ಅದು ತಮ್ಮ ಮಗುವಲ್ಲ ಎಂದು ತಿಳಿಯಿತು. ಆದರೆ ಮತ್ತೂಂದು ಮಗು ಅವರದ್ದೆಂದು ತಿಳಿಸಲಾಗದ ಅಸಹಾಯಕ ಸ್ಥಿತಿ ನಮ್ಮದು. ಕೊನೆಗೆ ಆ ಮಗುವಿನ ದೇಹವನ್ನು ಅನಾಥ ಮೃತದೇಹಗಳ ಜತೆ ಸಾಮೂಹಿಕವಾಗಿ ಸಂಸ್ಕಾರ ಮಾಡಲಾಯಿತು’ ಎನ್ನುವ  ಡಾ| ಸರೋಜಾ, “ಬದುಕು ಹೇಗೆ ಅಂತ್ಯಗೊಳ್ಳುತ್ತದೆ ಎಂಬುದನ್ನು ಹೇಳಲು ಸಾಧ್ಯವೆ ಇಲ್ಲ. ಆದರೂ ಸಾವಿಗಿಂತ ಬದುಕು ಎಷ್ಟು ದೊಡ್ಡದು ಎಂಬುದನ್ನು ಅರ್ಥ ಮಾಡಿಸಿಕೊಟ್ಟದ್ದು ಈ ಘಟನೆ’ ಎಂದು ಹೇಳಲು ಮರೆಯಲಿಲ್ಲ.

ಟಾಪ್ ನ್ಯೂಸ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.