ಬಜಪೆ: ಪರಿಸರದಲ್ಲಿ ಮುಂದುವರಿದ ಕೆಂಗಣ್ಣು ಕಾಯಿಲೆ ಸಮಸ್ಯೆ
Team Udayavani, Nov 12, 2022, 6:48 AM IST
ಬಜಪೆ: ಇಲ್ಲಿನ ಪರಿಸರದಲ್ಲಿ ಕೆಂಗಣ್ಣು ಕಾಯಿಲೆ ಸಮಸ್ಯೆ ಮುಂದುವರಿದಿದ್ದು, ಹಲವು ಮನೆ ಗಳಿಗೆ ಹರಡಿದೆ. ಮಕ್ಕಳಲ್ಲಿ ಹೆಚ್ಚು ಕಾಣಿಸಿಕೊಂಡಿದೆ. ಇದರಿಂದ ಮಿದುಳು ಜ್ವರ ವಿರುದ್ಧ ಲಸಿಕೆಯ ಸರ್ವೇಗೆ ಮನೆ ಮನೆಗೆ ತೆರಳುವ ಆಶಾ ಕಾರ್ಯಕರ್ತೆಯರಿಗೂ ಸಮಸ್ಯೆ ಎದುರಾಗಿದೆ.
ಬಜಪೆ ಪ. ಪಂ.ನ ಪಡೀಲ್ ಪ್ರದೇಶದಲ್ಲಿದ್ದ ಕೆಂಗಣ್ಣು ಕಾಯಿಲೆ ಈಗ ಜರಿನಗರದ ಹಲವು ಮನೆಗಳಲ್ಲಿ ಕಾಣಿಸಿ ಕೊಂಡಿದೆ. ಇತರೆಡೆ ಕೆಲವು ಮನೆಗಳಲ್ಲಿ ಕಂಡು ಬಂದಿರುವ ಈ ಸಮಸ್ಯೆ ಇತರ ಗ್ರಾಮಗಳಿಗೆ ಹರಡಿದೆ.
ತಿಂಗಳ ಚುಚ್ಚುಮದ್ದಿಗಾಗಿ ಪ್ರಾಥ ಮಿಕ ಆರೋಗ್ಯ ಕೇಂದ್ರಕ್ಕೆ ಕರೆದು ಕೊಂಡು ಬರುವ ಕೆಂಗಣ್ಣು ಸಮಸ್ಯೆ ಇದ್ದ ತಾಯಿ ಹಾಗೂ ಮಕ್ಕಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಒಂದು ವಾರ ಬಿಟ್ಟು ಬರಲು ಸೂಚನೆ ನೀಡಲಾಗಿದೆ. ಕೆಲವೆಡೆ ಮನೆಯ ಎಲ್ಲರಿಗೂ ಕೆಂಗಣ್ಣು ಸಮಸ್ಯೆ ಇದ್ದರೂ ಅವರು ಖರೀದಿಗಾಗಿ ಪೇಟೆಗೆ ಬರುವ ಕಾರಣ ಕೆಂಗಣ್ಣು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ.
ಡಿ.5ರಿಂದ ಮಕ್ಕಳಿಗೆ ಮಿದುಳು ಜ್ವರ ವಿರುದ್ಧ ಲಸಿಕೆ ಕಾರ್ಯಕ್ರಮ ಆರಂಭವಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ವಿಶ್ವ ಚಾಂಪಿಯನ್‌ಶಿಪ್: ಪ್ರಶಸ್ತಿ ಮುಡಿಗೇರಿಸಿಕೊಂಡ ಬಾಕ್ಸರ್ ನಿಖತ್ ಜರೀನ್
ಮೋದಿ ಕೈಕೆಳಗೆ ಕೆಲಸ ಮಾಡುತ್ತೇನೆಯೇ ಹೊರತು ರಾಜ್ಯ ರಾಜಕಾರಣಕ್ಕೆ ಬರಲ್ಲ: ಪ್ರತಾಪ್ ಸಿಂಹ
ರಾಜಧಾನಿಯಲ್ಲಿ ಮೇಳೈಸಿದ ಸ್ಟಾರ್ ಸ್ಪೋರ್ಟ್ಸ್ ನ “ಟ್ರೋಫಿ ಟೂರ್’
50 ಕೊಡ್ತಿರಿ ಅಂತ ಗೊತ್ತಿದೆ,ಬೇಕಿರೋದು 123 ಸ್ಥಾನ : ಹೆಚ್.ಡಿ.ಕುಮಾರಸ್ವಾಮಿ
ಮಧ್ಯಪ್ರದೇಶದಲ್ಲಿ 230 ರಲ್ಲಿ ಬಿಜೆಪಿ 200ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ: ನಡ್ಡಾ