ಬಂಟ್ವಾಳ: ಆಟವಾಡುವ ವೇಳೆ 3ನೇ ಮಹಡಿಯಿಂದ ಬಿದ್ದು ಬಾಲಕ ಸಾವು
Team Udayavani, May 27, 2022, 12:43 PM IST
ಬಂಟ್ವಾಳ: ಗೆಳೆಯಯರ ಜೊತೆ ಆಟ ಆಡುತ್ತಿದ್ದ ವೇಳೆ 6 ನೇ ಕ್ಲಾಸಿನ ವಿದ್ಯಾರ್ಥಿಯೋರ್ವ ಆಯ ತಪ್ಪಿ ಮೂರನೇ ಮಹಡಿ ಮೇಲಿನಿಂದ ಬಿದ್ದು ಮೃತಪಟ್ಟ ಘಟನೆ ಕಲ್ಲಡ್ಕದಲ್ಲಿ ಶುಕ್ರವಾರ ನಡೆದಿದೆ.
ಕಲ್ಲಡ್ಕ ನಿವಾಸಿ ಅಹಮ್ಮದ್ ಅವರ ಪುತ್ರ ಮಹಮ್ಮದ್ ಸಾಹಿಲ್ (10) ಮೃತಪಟ್ಟ ಬಾಲಕ.
ಕಲ್ಲಡ್ಕ ಸಮೀಪದ ಗೊಳ್ತಮಜಲು ಎಂಬಲ್ಲಿರುವ ಸಿಟಪ್ಲಾಜಾ ರೆಸಿಡೆನ್ಸಿಯ ಮೂರನೇ ಮಹಡಿಯ ಸೀಟ್ ಹೌಸ್ ನಲ್ಲಿ ಗುರುವಾರ ಸಾಹಿಲ್ ಗೆಳೆಯರ ಜೊತೆ ಆಟ ಆಡುತ್ತಿದ್ದ. ಆ ವೇಳೆ ಆಯ ತಪ್ಪಿ ಮೂರನೇ ಮಹಡಿಯ ಮೇಲಿನಿಂದ ಕೆಳಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ. ಬಾಲಕನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ ವೇಳೆ ಮೃತಪಟ್ಟಿದ್ದಾನೆ.
ಇದನ್ನೂ ಓದಿ:ಕಾರು- ಲಾರಿ ಢಿಕ್ಕಿ: ಮಹಿಳೆ ಸೇರಿ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಸಾವು!
ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.