ಬಂಟ್ವಾಳ: ಕಾರು ಢಿಕ್ಕಿಯಾಗಿ ಬಾಲಕ ಸಾವು
Team Udayavani, Sep 2, 2022, 8:20 PM IST
ಬಂಟ್ವಾಳ: ಕಾರು ಢಿಕ್ಕಿಯಾಗಿ ಬಾಲಕನೋರ್ವ ಮೃತಪಟ್ಟ ಘಟನೆ ತಾಲೂಕಿನ ಸುರಿಬೈಲು ಕಾಡಂಗಡಿ ಎಂಬಲ್ಲಿ ಶುಕ್ರವಾಗ ಸಂಜೆ ನಡೆದಿದೆ.
ಇಲ್ಲಿನ ಮಹಮ್ಮದಲಿ ಸಖಾಫಿ ಎಂಬವರ ಮಗ ಆದಿಲ್ (4) ಮೃತಪಟ್ಟ ಬಾಲಕ. ಖಾಸಗಿ ಆಂಗ್ಲ ಮಾದ್ಯಮ ಶಾಲೆಯ ಎಲ್.ಕೆ.ಜಿ. ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಮನೆ ಪಕ್ಕದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಮಾರುತಿ ಕಾರೊಂದು ಢಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮೃತದೇಹ ತುಂಬೆ ಖಾಸಗಿ ಆಸ್ಪತ್ರೆಯಲ್ಲಿದ್ದು ಅಲ್ಲಿಂದ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:ಸೆಪ್ಟೆಂಬರ್ 5 ರವರೆಗೆ ಮುರುಘಾ ಶರಣರು ಪೊಲೀಸ್ ಕಸ್ಟಡಿಗೆ
ಘಟನಾ ಸ್ಥಳಕ್ಕೆ ಬಂಟ್ವಾಳ ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.