ಕ್ಷುಲ್ಲಕ ದೀಕ್ಷಾ ಮಹೋತ್ಸವದ ಮೂಲಕ ಐವರಿಗೆ ದೀಕ್ಷೆ


Team Udayavani, Feb 11, 2019, 1:00 AM IST

kshullaka.jpg

ಬೆಳ್ತಂಗಡಿ: ಧರ್ಮಸ್ಥಳದ ಭಗವಾನ್‌ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ರವಿವಾರ ಕ್ಷುಲ್ಲಕ ದೀಕ್ಷಾ ಮಹೋತ್ಸವ ಎಂಬ ಐತಿಹಾಸಿಕ ಕಾರ್ಯಕ್ರಮವೊಂದು ನಡೆಯಿತು. 23 ಮತ್ತು 24 ವರ್ಷ ವಯಸ್ಸಿನ ಇಬ್ಬರು ತರುಣರು ಸೇರಿದಂತೆ ಒಟ್ಟು ಐವರು ಕ್ಷುಲ್ಲಕ ದೀಕ್ಷೆ ಸ್ವೀಕರಿಸಿದರು. 

ಕ್ಷುಲ್ಲಕ ದೀಕ್ಷೆ ಎಂದರೆ ಜೈನ ದಿಗಂಬರ ಸನ್ಯಾಸಿಯಾಗುವ ಮೊದಲ ಹಂತದಲ್ಲಿ ಪಡೆದುಕೊಳ್ಳುವ ದೀಕ್ಷೆಯಾಗಿದೆ.

ಕ್ಷೇತ್ರದ ಅಮೃತವರ್ಷಿಣಿ ಸಭಾಂಗಣದಲ್ಲಿ ನಡೆದ ಸಮಾರಂಭ ದಲ್ಲಿ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜ್‌ ಅವರು ಆಚಾರ್ಯ ಶ್ರೀ 108 ವರ್ಧಮಾನ ಸಾಗರಜೀ ಮುನಿ ಮಹಾರಾಜ್‌ ಅವರ ಉಪಸ್ಥಿತಿಯಲ್ಲಿ  ಈ ದೀಕ್ಷೆಯನ್ನು ನೀಡಿದರು. 

ಮಧ್ಯಪ್ರದೇಶ ಮೂಲದ 23 ವರ್ಷ ವಯಸ್ಸಿನ ಸತೀಶ್‌ ಜೀ ಭಯ್ನಾಜಿ, ಉತ್ತರಪ್ರದೇಶ ಮೂಲದ 24 ವರ್ಷ ವಯಸ್ಸಿನ ಶ್ರೀಪ್ರಭು ಭಯ್ನಾಜಿ, ಹೈದರಾಬಾದ್‌ ಮೂಲದ 74 ವರ್ಷ ವಯಸ್ಸಿನ ಪೂರನ್‌ ಭಯ್ನಾಜಿ, ಬಳ್ಳಾರಿ ಮೂಲದ 45 ವರ್ಷ ವಯಸ್ಸಿನ  ಸಂಯಮಾ ದೀದಿ ಹಾಗೂ ಬೆಳಗಾವಿ ಮೂಲಕ 81 ವರ್ಷದ ಸಮತಾ ದೀದಿ ಅವರು ದೀಕ್ಷೆ ಸ್ವೀಕರಿಸಿದರು. 

ದೀಕ್ಷಾ ಮಹೋತ್ಸವದ ಆರಂಭದಲ್ಲಿ ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜ್‌ ಅವರು ದೀಕ್ಷೆ ಪಡೆಯುವವರು ಹಾಗೂ ಅವರ ಕುಟುಂಬದ ಸದಸ್ಯರ ಅಭಿಪ್ರಾಯ ಪಡೆದರು. ಈ ಸಂದರ್ಭದಲ್ಲಿ ಎಲ್ಲರೂ ಆತ್ಮಕಲ್ಯಾಣಕ್ಕಾಗಿ ದೀಕ್ಷೆ ಪಡೆಯುವುದಾಗಿ ಮಾರುತ್ತರಿಸಿದರು.

ಮುಂದೆ ದೀಕ್ಷಾ ಸ್ವೀಕಾರ ನಡೆಸು ವವರ ತಲೆಗೂದಲುಗಳನ್ನು ಕೈಯಿಂದ ಕಿತ್ತು ಹಾಕುವ ಕೇಶಲೋಚನ ವಿಧಿ ನಡೆಯಿತು. ಆರಂಭದಲ್ಲಿ ಅವರು ಧರಿಸಿದ್ದ ಒಡವೆಗಳು ಹಾಗೂ ರಾಜ ಪೋಷಾಕನ್ನು ತೆಗೆಯಲಾಯಿತು. ಬಳಿಕ ಸಂಪ್ರದಾಯದಂತೆ ವಿವಿಧ ಧಾರ್ಮಿಕ ಪ್ರಕ್ರಿಯೆಗಳು ನಡೆದು, ಶ್ವೇತ ವಸ್ತ್ರ, ನವಿಲುಗರಿಯ ಪಿಂಛಿ, ಕಮಂಡಲವನ್ನು ನೀಡಿ, ನಾಮಕರಣ ಪ್ರಕ್ರಿಯೆ ನಡೆಯಿತು.

ಆಚಾರ್ಯ ಶ್ರೀ 108 ವರ್ಧಮಾನ ಸಾಗರ್‌ ಜೀ ಮುನಿ ಮಹಾರಾಜ್‌ ಆಶೀರ್ವಚನ ನೀಡಿ, ಪ್ರಸ್ತುತ ಸಾಂಸಾರಿಕ ಜೀವನದಲ್ಲಿ ದುಃಖವೇ ಹೆಚ್ಚಾಗಿದ್ದು, ಸನ್ಯಾಸತ್ವದಿಂದ ಶಾಶ್ವತಸುಖ ಪ್ರಾಪ್ತಿಯಾಗುತ್ತದೆ. ವೈರಾಗ್ಯದಿಂದ ಸ್ವರ್ಗಸುಖವೂ ಸಾಧ್ಯ. ದೀಕ್ಷೆ  ಪಡೆದ ವರು ತಮ್ಮ ಉದ್ದೇಶವನ್ನು ಸದಾ ಗಮನದಲ್ಲಿ ಇರಿಸಿಕೊಳ್ಳಬೇಕು ಎಂದರು. 
ಆಚಾರ್ಯ ಶ್ರೀ 108 ಪುಷ್ಪದಂತ ಸಾಗರ ಮುನಿ ಮಹಾರಾಜ್‌ ಅವರು ಆಶೀರ್ವಚನ ನೀಡಿ, ದೀಕ್ಷೆ ನೀಡುವುದೆಂದರೆ ಬೀಜ ಬಿತ್ತುವ ಪ್ರಕ್ರಿಯೆಯಾ ಗಿದ್ದು, ಅದ ಬೆಳೆದು ಜಗತ್ತಿಗೆ ಬೆಳಕನ್ನು ನೀಡಬೇಕಿದೆ ಎಂದರು. 

ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ, ಹೇಮಾವತಿ ವೀ. ಹೆಗ್ಗಡೆ, ಡಿ. ಸುರೇಂದ್ರಕುಮಾರ್‌, ಅನಿತಾ ಸುರೇಂದ್ರಕುಮಾರ್‌, ಡಿ. ಹಷೇìಂದ್ರಕುಮಾರ್‌, ಸುಪ್ರಿಯಾ ಹಷೇìಂದ್ರಕುಮಾರ್‌, ಶ್ರದ್ಧಾ ಅಮಿತ್‌,
ಅಮಿತ್‌ಕುಮಾರ್‌ ಭಾಗವಹಿಸಿದ್ದರು. 

ಆರಂಭದಲ್ಲಿ ಕ್ಷೇತ್ರದ ಶ್ರೀ ಚಂದ್ರ ನಾಥ ಬಸದಿಯಿಂದ ಪೂಜ್ಯ ಮುನಿಗಳು, ಮಾತಾಜಿಯವರು, ಶ್ರಾವಕ-ಶ್ರಾವಕಿಯರ ಸಮ್ಮುಖದಲ್ಲಿ ದೀಕ್ಷೆ ಪಡೆಯುವವರನ್ನು ಪೇಟ- ರಾಜಪೋಷಾಕಿನಲ್ಲಿ ಸಭಾಂಗಣಕ್ಕೆ ಕರೆತರಲಾಯಿತು.

ದೀಕ್ಷೆ ಪಡೆದವರಿವರು
ಸತೀಶ್‌ ಭಯ್ನಾಜಿ ಅವರ ಮೂಲ ಹೆಸರು ಸತೀಶ್‌ಕುಮಾರ್‌ ಜೈನ್‌. ಇವರು ಮಧ್ಯಪ್ರದೇಶದ ದಮೋಹ್‌ ಜಿಲ್ಲೆಯ ಪುಲರ್‌ನವರಾಗಿದ್ದು, ಮುನಿಶ್ರೀ ತರುಣ ಸಾಗರ್‌ಜೀ ಮಹಾರಾಜರ ಶಿಷ್ಯರು. ಇವರು 14 ವರ್ಷ ವಯಸ್ಸಿನಲ್ಲಿ ಸನ್ಯಾಸ ದೀಕ್ಷೆ ಸೀÌಕರಿಸಿದ್ದು, 9 ವರ್ಷಗಳಿಂದ ತ್ಯಾಗ ಜೀವನ ನಡೆಸುತ್ತಿದ್ದಾರೆ.

ಶ್ರೀಪ್ರಭು ಭಯ್ನಾಜಿ ಅವರ ಮೂಲ ಹೆಸರು ಶಿವಂಕುಮಾರ್‌ 
ಜೈನ್‌., ಉತ್ತರಪ್ರದೇಶದ ಇಟಾವಾದಲ್ಲಿ ಮುನಿಶ್ರೀ 108 ಪ್ರಮುಖ ಸಾಗರ್‌ಜಿ ಮಹಾರಾಜ್‌ ಅವರಿಂದ 2011ರಲ್ಲಿ ಬ್ರಹ್ಮಚಾರಿ ದೀಕ್ಷೆ ಪಡೆದಿದ್ದರು. ಪೂರನ್‌ ಭಯ್ನಾಜಿ ಅವರ ಮೂಲಕ ಹೆಸರು ಪೂರಣ್‌ಮಲ್‌ ಜೈನ್‌ ಆಗಿದ್ದು, ಹೈದರಾಬಾದಿನ ಮಾಟಿಕ ಶೇಟ್‌ನಲ್ಲಿ ಜನಿಸಿದವರು. ಕಾನೂನು ಪದವೀಧರರು, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಹೊಂದಿದ್ದಾರೆ. 2017ರಲ್ಲಿ ಬ್ರಹ್ಮಚಾರಿ ದೀಕ್ಷೆ ಸ್ವೀಕರಿಸಿದ್ದರು. 

ಸಂಯಮ ದೀದಿ ಅವರು ಬಳ್ಳಾರಿ ಜಿಲ್ಲೆಯ ಸಿರಿಕೊಳದಲ್ಲಿ ಜನಿಸಿದವರಾಗಿದ್ದು, ರಾಜಣ್ಣ-ನಾಗಮ್ಮ ದಂಪತಿಯ ಪುತ್ರಿ. ಸಮತಾ ದೀದಿ ಅವರು ಬೆಳಗಾವಿ ಜಿಲ್ಲೆ ಬುಡರಕಟ್ಟೆಯವರಾಗಿದ್ದು, ಅರ್ಜುನಪ್ಪ ಹಾಗೂ ರತ್ನಮ್ಮ ದಂಪತಿಯ ಪುತ್ರಿ.

ಪ್ರತ್ಯೇಕ ನಾಮಕರಣ 
ದೀಕ್ಷೆ ಪಡೆದ ಐವರಿಗೂ ಸಂಪ್ರದಾಯದಂತೆ ನಾಮಕರಣ ಪ್ರಕ್ರಿಯೆ ನಡೆಯಿತು. ಸತೀಶ್‌ ಜೀ ಭಯ್ನಾಜಿ ಅವರಿಗೆ ಪರ್ವ ಸಾಗರ ಮಹಾರಾಜ್‌, ಶ್ರೀಪ್ರಭು ಭಯ್ನಾಜಿಗೆ ಪ್ರಭಾಕರ್‌ ಸಾಗರ್‌ ಮಹಾರಾಜ್‌, ಪೂರನ್‌ ಭಯ್ನಾಜಿಗೆ ಪರಮಾತ್ಮ ಸಾಗರ್‌ ಮಹಾರಾಜ್‌, ಜಿನವಾಣಿ ಮಾತಾಜಿಯವರು ಸಂಯಮ ದೀದಿಗೆ ಅಮರಜ್ಯೋತಿ ಮಾತಾಜಿ ಹಾಗು ಸಮತಾದೀದಿಗೆ ಅಮೃತ ಜ್ಯೋತಿ ಮಾತಾಜಿ ಎಂದು ಆಚಾರ್ಯ ಶ್ರೀ 10 ಪುಷ್ಪದಂತ ಸಾಗರ ಮುನಿ ಮಹಾರಾಜ ಅವರು ನಾಮಕರಣ ಮಾಡಿದರು.

ಟಾಪ್ ನ್ಯೂಸ್

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

bhajarangi 2

ಭಜರಂಗಿ ಜೊತೆ ಸಂಭ್ರಮಿಸಲು ಶಿವಣ್ಣ ಫ್ಯಾನ್ಸ್‌ ರೆಡಿ

siddaramaiah vs h d kumaraswamy

ಕರ್ನಾಟಕದಲ್ಲಿ ಜಾತಿ ವಿಷ ಬೀಜ ಬಿತ್ತಿದ್ದೆ ಸಿದ್ದರಾಮಯ್ಯ: ಕುಮಾರಸ್ವಾಮಿ ಆರೋಪ

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಇಂದಿನಿಂದ ‘ಕ್ರಾಂತಿ’ ಶುರು: ಶೂಟಿಂಗ್‌ ಮೂಡ್‌ಗೆ ದರ್ಶನ್‌

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಕೊಹ್ಲಿ ಹೇಳಿದ್ದೇನು?

ಮುಂದಿನ ಪಂದ್ಯಕ್ಕೆ ರೋಹಿತ್ ಶರ್ಮಾರನ್ನು ಕೈಬಿಡಿ ಎಂದವರಿಗೆ ಖಡಕ್ ಉತ್ತರ ಕೊಟ್ಟ ಕೊಹ್ಲಿ

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

ಮೈಸೂರಿನಲ್ಲಿ ಮಳೆಯ ಆರ್ಭಟ: ಕುಟುಂಬಸ್ಥರ ಕಣ್ಣೆದುರೇ ನೀರುಪಾಲಾದ ವ್ಯಕ್ತಿ!

hgfjhgfds

ಪುಟಾಣಿಗಳು ಶಾಲೆಯತ್ತ : ಇಂದಿನಿಂದ 1ರಿಂದ 5ನೇ ತರಗತಿ ಆರಂಭ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

2ನೇ ತರಗತಿ ಮಕ್ಕಳಿಂದ ರಸ್ತೆ ದುರಸ್ತಿ!

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಧಾರವಾಡದಲ್ಲಿ ಕ್ಯಾನ್ಸರ್‌ ಚಿಕಿತ್ಸಾ ಘಟಕ: ಹೆಗ್ಗಡೆ

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

ಪಶು ಚಿಕಿತ್ಸಾಲಯದಲ್ಲಿ ದಿನವಿಡೀ ಸೇವೆ ಇಲ್ಲ; ಸಿಬಂದಿ ಕೊರತೆ

veerendra heggade

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸಡಗರ; ಡಾ| ಹೆಗ್ಗಡೆ ಪಟ್ಟಾಭಿಷೇಕ ವರ್ಧಂತಿ

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

9power

ನಿರಂತರ ವಿದ್ಯುತ್‌ ನೀಡಲು ಮನವಿ

ಡ್ರೋನ್‌ ಪರೀಕ್ಷೆ

ಯಶಸ್ಸಿನ ಹಾದಿಯತ್ತ ದೇಸಿ ಡ್ರೋನ್‌ಗಳು

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

24 ಗಂಟೆಯಲ್ಲಿ ದೇಶದಲ್ಲಿ 14,306 ಕೋವಿಡ್ ಸೋಂಕು ಪ್ರಕರಣಗಳು ಪತ್ತೆ

8LAW-NKOWLEDGE

ಕಾನೂನು ಅರಿವಿಲ್ಲದಿದ್ದರೆ ಸಂಕಷ್ಟ ನಿಶ್ಚಿತ: ರೆಡ್ಡಿ

7basavanna

ಬಸವಣ್ಣನ ಚಿಂತನೆ ದಿವ್ಯೌಷಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.