Udayavni Special

ಸೌಕರ್ಯ ವಂಚಿತ ಪುಷ್ಪಗಿರಿ ತಪ್ಪಲಿನ ಗ್ರಾಮಗಳೀಗ ಅನಾಥ


Team Udayavani, May 15, 2018, 8:55 AM IST

Mula-Saukarya-15-5.jpg

ಸುಬ್ರಹ್ಮಣ್ಯ: ಮೊಬೈಲ್‌ ಸಿಗ್ನಲ್‌ ದೊರೆಯದ ದಟ್ಟಾರಣ್ಯ. ಒಂದು ಸೈಕಲ್‌ ಕೂಡ ಸಾಗಲು ಕಷ್ಟವಿರುವ ಹದಗೆಟ್ಟ ಸಂಪರ್ಕ ರಸ್ತೆ, ವರ್ಷಗಳೇ ಕಳೆದರೂ ಈಡೇರದ ಸೇತುವೆ ಕನಸು. ಮನೆ ಅಂಗ ಳಕ್ಕೂ ಕಾಲಿಡುವ ಕಾಡು ಪ್ರಾಣಿಗಳು! ಇದು ಸುಳ್ಯ ತಾಲೂಕಿನ ಕಟ್ಟಕಡೆಯ ಕುಗ್ರಾಮ ಕಲ್ಮಕಾರು-ಕೊಲ್ಲಮೊಗ್ರು ಈ ಎರಡು ಅವಳಿ ಕಂದಾಯ ಗ್ರಾಮಗಳಲ್ಲಿನ ದುಸ್ತಿತಿ. ಮೂಲಸೌಕರ್ಯವಿಲ್ಲದ ಊರಿನಲ್ಲಿ ಶತಮಾನಗಳಿಂದಲೂ ಇಲ್ಲಿನ ಜನರ ಬದುಕು ಮುದುಡುತ್ತಿದೆ.

ದ.ಕ. ಕೊಡಗು ಗಡಿಭಾಗದ ಪುಷ್ಪಗಿರಿ ವನ್ಯಧಾಮ ವ್ಯಾಪ್ತಿಯಲ್ಲಿ ಸುಳ್ಯ ತಾಲೂಕು ಕೇಂದ್ರದಿಂದ 40 ಕಿ.ಮೀ ದೂರದಲ್ಲಿದೆ ಈ ಪ್ರದೇಶ. ಈ ಎರಡು ಕಂದಾಯ ಊರುಗಳು ಅಭಿವೃದ್ಧಿಯಲ್ಲಿ ಸಾಕಷ್ಟು ಹಿಂದೆ ಬಿದ್ದಿವೆ. ಸೇತುವೆ, ರಸ್ತೆ, ಕಾಲನಿಗಳ ಅಭಿವೃದ್ಧಿ, ಶೌಚಾಲಯ ಇತ್ಯಾದಿಗಳನ್ನು ಹೊಂದುವಲ್ಲಿ ಹಿಂದೆ ಬಿದ್ದಿದೆ. ಅವಳಿ ಗ್ರಾಮಗಳಲ್ಲಿ 466ರಕ್ಕೂ ಅಧಿಕ ಮನೆಗಳಿದ್ದು 3,008 ಜನಸಂಖ್ಯೆಯಿದೆ. ಇವರೆಲ್ಲರದು ಕೃಷಿ ಕಸುಬು. ಅಡಿಕೆ ಇಲ್ಲಿಯ ಪ್ರಮುಖ ಬೆಳೆ.

ಹತ್ತಾರು ವರ್ಷಗಳಿಂದ ಇಲ್ಲಿಯೇ ಬದುಕು ಕಟ್ಟಿಕೊಂಡಿದ್ದಾರೆ ಇಲ್ಲಿಯವರು. ಆದರೆ ಅರಣ್ಯ ಸಂರಕ್ಷಣೆಯಲ್ಲಿ ಬರುವ ಸೂಕ್ಷ್ಮ ವಲಯ ಕಾಯ್ದೆ, ಕಾಡು ಪ್ರಾಣಿಗಳ ಹಾವಳಿ ಒಂದೆಡೆ ಕಂಗೆಡಿಸಿದ್ದರೆ ಸಂಪರ್ಕ ರಸ್ತೆಗಳು, ಸೇತುವೆಗಳು ಸುಸೂತ್ರವಾಗಿಲ್ಲದೆ ಇರುವುದು ಇಲ್ಲಿನ ನಿತ್ಯದ ಗೋಳಾಗಿ ಹೋಗಿದೆ. ಹತ್ತೂರೊಟ್ಟಿಗೆ ಹನ್ನೊಂದರಂತೆ ಸಮಸ್ಯೆ ಸಹಿಸಿಕೊಂಡು ಬದುಕುತ್ತಿದ್ದೇವೆ ಎನ್ನುವ ಇಲ್ಲಿಯವರಿಗೆ ದುಸ್ತರ ಬದುಕಿನಿಂದ ಕಾಲ್ನಡಿಗೆ ಅಭ್ಯಾಸವಾಗಿಬಿಟ್ಟಿದೆ.


ಬಸ್‌ ಸಂಚಾರ ಇಲ್ಲ

ತೀರಾ ಹದೆಟ್ಟ ಈ ಊರಿಗೆ ಸರಕಾರಿ ಬಸ್ಸುಗಳು ಬರಲು ಒಪ್ಪುವುದಿಲ್ಲ, ದಿನಕ್ಕೆ ಒಂದೆರಡು ಬಸ್ಸುಗಳು ಬರುತ್ತವೆ. ಉಳಿದಂತೆ ಎಲ್ಲರು ಖಾಸಗಿ ವಾಹನಗಳನ್ನೆ ಅವಲಂಭಿಸಿಕೊಂಡಿದ್ದಾರೆ. ಗ್ರಾಮದಿಂದ ಗ್ರಾಮಕ್ಕೆ ಸಂಪರ್ಕ ಸೇತುವೆಗಳಿಲ್ಲದೆ ಮಳೆಗಾಲದಲ್ಲಿ ಸಂಕಷ್ಟ ಪಡುತ್ತಿರುತ್ತಾರೆ. ಮಕ್ಕಳು, ಇಳಿವಯಸ್ಸಿನವರು, ಮಹಿಳೆಯರು ಜೀವ ಅಭದ್ರತೆಯಲ್ಲಿ ದಿನ ಕಳೆಯುತ್ತಿದ್ದಾರೆ. ಈ ಊರಿನ ಮಂದಿ ತಮ್ಮೂರಿಗೆ ಸೇತುವೆಗಾಗಿ ಎದುರು ನೋಡುತ್ತಿದ್ದಾರೆ.

ಇಚ್ಚಾಶಕ್ತಿಯ ಕೊರತೆ
ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಗಾಳಿಬೀಡು ಗ್ರಾಮ ಪಂಚಾಯತ್‌ಗೆ ಸೇರಿದ ಕಡಮಕಲ್ಲು ಎಂಬಲ್ಲಿ ಸುಮಾರು 200 ಕುಟುಂಬಗಳು ವಾಸಿಸುತ್ತಿವೆ. ಪಡಿತರ ಸಹಿತ ಇನ್ನಿತರ ಮೂಲ ಸವಲತ್ತುಗಳಿಗೆ ಈ ಕುಟುಂಬಗಳ ಸದಸ್ಯರು ಗಾಳಿಬೀಡಿಗೆ ತೆರಳಬೇಕು. ಅದಕ್ಕಾಗಿ ಕಡಮಕಲ್ಲಿನಿಂದ ನೇರ ದಾರಿಯಿಲ್ಲ. 40 ಕಿ.ಮೀ ಬದಲಿಗೆ ಸುಳ್ಯ ನಗರ ಮೂಲಕ 140 ಕಿ.ಮೀ ದೂರ ಸುತ್ತಿ ತೆರಳಬೇಕು. ಬಳಸಿ ಸಾಗುವ ವೇಳೆ ಸಮಯ ಹಾಗೂ ಹಣ ವ್ಯರ್ಥ. ಮಡಿಕೇರಿ-ಗಾಳಿಬೀಡು-ಕಡಮಕಲ್ಲು-ಸುಬ್ರಹ್ಮಣ್ಯ ಈ ಕಚ್ಚಾ ರಸ್ತೆ ಅಭಿವೃದ್ಧಿ ಆದಲ್ಲಿ ಎರಡು ಗ್ರಾಮಗಳು ಅಭಿವೃದ್ಧಿಯಾಗುತ್ತವೆ. ಇದಕ್ಕೆ ಜನಪ್ರತಿನಿಧಿಗಳಿಗೆ ಇಚ್ಚಾಶಕ್ತಿಬೇಕು.


ಕಷ್ಟದ ಜೀವನ

ಈ ಭಾಗದಲ್ಲಿ ಬಹುತೇಕ ದಿನಗಳಲ್ಲಿ ಮೊಬೈಲ್‌ ಸಂಪರ್ಕ ಸೇವೆ ಇರುವುದಿಲ್ಲ. ವಿದ್ಯುತ್‌ ಸರಬರಾಜುಗಳು ಇರುವುದಿಲ್ಲ. ಪ್ರತಿನಿತ್ಯ ಕಾಡು ಪ್ರಾಣಿಗಳು ಕೃಷಿ ತೋಟಗಳಿಗೆ ಧಾವಿಸಿ ಬಂದು ಕೃಷಿ ಫಸಲು ನಾಶ ಪಡಿಸುತ್ತಿದೆ. ಕೃಷಿಕರು ಕೃಷಿ ನಡೆಸಲು ಸಾಧ್ಯವಾಗದೆ ಸ್ಥಿತಿ ಒಂದೆಡೆಯಾದರೆ ಮತ್ತೂಂದು ಕಡೆ ಬೆಳೆಗಳಿಗೆ ಭಾಧಿಸುವ ವಿವಿಧ ರೋಗಗಳು, ಅಡಿಕೆಗೆ ಹಸಿರು ಕೊಳೆ ರೋಗ, ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೆ ಇಲ್ಲಿ ಜೀವನ ಸಾಗಿಸಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ.

ವ್ಯರ್ಥ ಹೊರಾಟ
ಕಾಡನಂಚಿನ ಇಲ್ಲಿನ ಜನರು ನಾಗರಿಕತೆಯಿಂದ ತುಂಬಾ ದೂರವಿರುವಂತೆ ಬದುಕುತ್ತಿದ್ದಾರೆ. ಪೂರ್ಣ ಪ್ರಮಾಣದಲ್ಲಿ ನಾಗರಿಕತೆಗೆ ಈ ಊರು ಇನ್ನು ತೆರೆದುಕೊಂಡಿಲ್ಲ. ಹೀಗಾಗಿ ಇಲ್ಲಿಯ ಬಹುತೇಕ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಪುಷ್ಪಗಿರಿ ತಪ್ಪಲಿನ ಕೊಲ್ಲಮೊಗ್ರು, ಕಲ್ಮಕಾರು ಈ ಎರಡು ಗ್ರಾಮಗಳು ಪರಿಸರ ಸಂರಕ್ಷಣೆಯ ಸೂಕ್ಷ್ಮ ವಲಯ ವ್ಯಾಪ್ತಿಗೆ ಸೇರಿದ ಬಳಿಕ ಈ ಭಾಗದವರು ಭಾರಿ ಹೋರಾಟಗಳನ್ನು ನಡೆಸಿದ್ದರು. ಕಾನೂನು ಸೇರಿದಂತೆ ಹಲವಾರು ಹೋರಾಟಗಳಿಗೆ ಧುಮುಕಿದ್ದ ಇಲ್ಲಿಯವರು ಚುನಾವಣೆಗಳ ಸಂದರ್ಭ ಮತದಾನ ಬಹಿಷ್ಕಾರದಂತಹ ಬೆದರಿಕೆಗಳನ್ನು ಒಡ್ಡಿದ್ದರು. ಆದರೆ ಮತದಾನದಿಂದ ದೂರ ಸರಿಯದೇ ಅಭಿವೃದ್ಧಿಯ ಆಶಾವಾದವನ್ನು ಇಟ್ಟುಕೊಂಡಿದ್ದಾರೆ.

ಮಕ್ಕಳ ಕೊರತೆ
ಕಡಮಕಲ್ಲು ಎಂಬಲ್ಲಿ ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಸಾರ್ವಜನಿಕ ಶಿಕ್ಷಣ ಇಲಾಖೆಯ ಸರಕಾರಿ ಶಾಲೆ ಕಾರ್ಯಚರಿಸುತ್ತಿತ್ತು. ಇದು ಕಡಮಕಲ್ಲು ಭಾಗದ ಜನತೆಗೆ ಉಪಯುಕ್ತವಾಗಿತ್ತು. ಮೂಲಸೌಕರ್ಯವಿಲ್ಲದೆ ಇರುವ ಈ ಶಾಲೆ ಈಗ ಪಾಳು ಬಿದ್ದಿದೆ. ಹಳೆ ಕಟ್ಟಡ ಕೆಡವದೆ ಉಳಿಸಿಕೊಳ್ಳಲಾಗಿದೆ. ಪಕ್ಕದ ಹೊಸ ಕಟ್ಟಡದಲ್ಲಿ ಶಾಲೆ ನಡೆಯುತ್ತಿದೆ. ಇಲ್ಲಿರುವ ಶಾಲೆ ಮಕ್ಕಳ ಕೊರತೆ ಎದುರಿಸುತ್ತಿದೆ. ಇಲ್ಲಿ ವಾಸವಿರುವ ಕುಟುಂಬಗಳ ಹೆತ್ತವರು ತಮ್ಮ ಮಕ್ಕಳನ್ನು ಇತರೆಡೆಗಳ ಶಾಲೆಗೆ ಸೇರಿಸಿರುವ ಕಾರಣಕ್ಕೆ ಶಾಲೆಯಲ್ಲಿ ಮಕ್ಕಳ ಕೊರತೆ ಕಂಡುಬಂದಿದೆ.

ಅಭಿವೃದ್ಧಿಗೆ ತಡೆ
ಮೂಲ ಸೌಕರ್ಯ ಕೊರೆತೆ ನಮ್ಮನ್ನು ಚಿಂತೆಗೀಡು ಮಾಡಿದೆ. ಗಡಿಭಾಗಗಳ ಕಚ್ಚಾ ರಸ್ತೆ ಅಭಿವೃದ್ಧಿ ಆದಲ್ಲಿ ಈ ಎರಡು ಅಭಿವೃದ್ಧಿಗೆ ತೆರೆದಂತೆ. ಸಣ್ಣ ನೆಪಗಳನ್ನು ಹೇಳಿಕೊಂಡು ಅ ಕಾರಿಗಳು ಮಡಿಕೇರಿ-ಸುಬ್ರಹ್ಮಣ್ಯ ರಸ್ತೆಗೆ ತಡೆ ಒಡ್ಡುತ್ತಿದ್ದಾರೆ.

ಒಟ್ಟಾರೆ ಬದುಕು
ವಿದ್ಯುತ್‌ ಯಾವತ್ತೂ ಇರುವುದಿಲ್ಲ. ಸಣ್ಣ ಗುಡುಗು ಆದರೂ ಮೊಬೈಲ್‌ ನೆಟ್‌ವರ್ಕ್‌ ಹೋಗುತ್ತದೆ. ನಡುರಾತ್ರಿ ಅನಾರೋಗ್ಯ ಕಾಣಿಸಿಕೊಂಡರೆ ತತ್‌ಕ್ಷಣಕ್ಕೆ ಏನೂ ಮಾಡಲಾಗುತ್ತಿಲ್ಲ. ಒಟ್ಟಾರೆ ನಮ್ಮದೊಂದು ಬದುಕು ಅಷ್ಟೆ.
– ತೇಜಾವತಿ ಕಲ್ಮಕಾರು, ಗ್ರಹಿಣಿ

— ಬಾಲಕೃಷ್ಣ  ಭೀಮಗುಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

suresh-anagadi

ಹುಟ್ಟೂರ ಮಣ್ಣು ಮತ್ತು ನೀರಿನೊಂದಿಗೆ ದೆಹಲಿಯಲ್ಲೇ ಸುರೇಶ್ ಅಂಗಡಿ ಅಂತ್ಯಕ್ರಿಯೆ

HUNDI

ಗಂಗಾವತಿ: ಅಂಜನಾದ್ರಿ ಹುಂಡಿ ಹಣ ಎಣಿಕೆ; 10.24 ಲಕ್ಷ ಸಂಗ್ರಹ

manday

ಮಂಡ್ಯದಲ್ಲಿಂದು 195 ಜನರಿಗೆ ಕೋವಿಡ್ ದೃಢ; 314 ಮಂದಿ ಗುಣಮುಖ, 1 ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಪ್ಪಿನಂಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಉಪ್ಪಿನಂಗಡಿ ಕೊಣಾಲು: ಪತಿಯಿಂದ ಪತ್ನಿ, ಪತ್ನಿಯ ಚಿಕ್ಕಮ್ಮನ ಮೇಲೆ ಆಸಿಡ್ ದಾಳಿ

ಶಾಲಾ ಖಾತೆಗೆ ಹಣ ಬಂದರೂ ಎಲ್‌ಕೆಜಿ ಅತಿಥಿ ಶಿಕ್ಷಕರಿಗೆ ತಲುಪದ ವೇತನ

ಶಾಲಾ ಖಾತೆಗೆ ಹಣ ಬಂದರೂ ಎಲ್‌ಕೆಜಿ ಅತಿಥಿ ಶಿಕ್ಷಕರಿಗೆ ತಲುಪದ ವೇತನ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ರೈತರ ಕೃಷಿ ಭೂಮಿಯ ಬೆಳೆ ಸಮೀಕ್ಷೆ ಕಾರ್ಯ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಅಡ್ಡಾಡಿಡ್ಡಿ ಪಾರ್ಕಿಂಗ್‌ನಿಂದ ಇಲಾಖಾ ವಾಹನ ಬರುವುದಕ್ಕೂ ತೊಂದರೆ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

ಕ್ಲಪ್ತ ಚಿಕಿತ್ಸೆ ಸಿಗದೆ ಸಾರ್ವಜನಿಕ ಆಸ್ಪತ್ರೆಯಲ್ಲಿ ರೋಗಿಗಳ ಪರದಾಟ

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

SPB ಆರೋಗ್ಯ ಸ್ಥಿತಿ ಇನ್ನಷ್ಟು ಗಂಭೀರ ; ಆಸ್ಪತ್ರೆಗೆ ನಟ ಕಮಲ್ ಹಾಸನ್ ದೌಡು

ಕೋವಿಡ್ 19ಗೆ 200 ದಿನ: ಶತಕದ ದ್ವಿತಿಯಾರ್ಧದಲ್ಲೇ ಶೇ.99 ಪ್ರಕರಣಗಳು ಪತ್ತೆ!

Covid19ಗೆ 200 ದಿನ: ದ್ವಿಶತಕದ ಹಾದಿಯಲ್ಲೇ ಶೇ.99ರಷ್ಟು ಪ್ರಕರಣಗಳು ಪತ್ತೆ!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

ರಾಹುಲ್ ಅಜೇಯ ಶತಕದಾಟಕ್ಕೆ ಬೆಚ್ಚಿದ RCBಗೆ ಘೋರ ಸೋಲು!

KL-Rahul-1

ಕನ್ನಡಿಗ ರಾಹುಲ್ ಅಜೇಯ ಸ್ಪೋಟಕ ಸೆಂಚುರಿ ; RCB ಗೆಲುವಿಗೆ 207 ಟಾರ್ಗೆಟ್

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

ಮಹಾರಾಷ್ಟ್ರದಲ್ಲಿ ಕೋವಿಡ್‌ ಸಾವು ಪ್ರಮಾಣ ಹೆಚ್ಚಳ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.