ಮನೆ ಪಟ್ಟಿ  ಕಟ್ಟುವ ಮುನ್ನ ಇರಲಿ ಎಚ್ಚರ


Team Udayavani, May 26, 2018, 2:50 PM IST

26-may-15.jpg

ಮನೆ ನಿರ್ಮಾಣದಲ್ಲಿ ಪಟ್ಟಿಗಳಿಗೆ ವಿಶೇಷ ಸ್ಥಾನವಿದೆ. ಇದು ಅನೇಕ ಬಾರಿ ಅಲಂಕಾರಿಕವಾಗಿಯೂ ಬಳಕೆಗೆ ಬರುತ್ತದೆ. ಹೀಗಾಗಿ ಈ ನಿಟ್ಟಿ ನಲ್ಲಿ ಮನೆ ಕಟ್ಟಿಸುವಾಗ ಬಹಳ ಎಚ್ಚರಿಕೆ ಬೇಕು.

ಸಾಮಾನ್ಯವಾಗಿ ಮುಂಬಾಗಿಲಿನ ಹೊಸ್ತಿಲು ಹೊರಗಿನ ಅಂತ್ಯವಾಗಿ ಮನೆಯ ಸುರಕ್ಷಿತ ವಾತಾವರಣದ ಶುರುವನ್ನು ಬಿಂಬಿಸುವ ಕಾರಣ ಅದು ನಮ್ಮೊಂದಿಗೆ ಭಾವುಕ ಸಂಬಂಧವನ್ನು ಹೊಂದಿದೆ. ಸಣ್ಣ ಪುಟ್ಟ ಕೀಟಗಳು ಹೊರಗಿನಿಂದ ನೆಲದಲ್ಲಿ ಸಾಗುತ್ತ ಬರುವುದನ್ನು ತಡೆಯುವುದು ಇದರ ಮುಖ್ಯ ಕಾರಣವಾದರೂ ಮಳೆಯ ಎರಚಲು ನೀರು ಒಳಗೆ ಬರುವುದನ್ನೂ ಹೊಸ್ತಿಲು ತಡೆಯುತ್ತದೆ. ಇಲ್ಲಿ ಸುರಕ್ಷೆಯೂ ಅಡಗಿದೆ. ಬಾಗಿಲ ಚೌಕಟ್ಟಿನ ಕೆಳಭಾಗದ ಈ ಪಟ್ಟಿ ಕಳ್ಳಕಾಕರು ಸುಲಭದಲ್ಲಿ ಸರಳು
ಬಳಸಿ ಕದ ಮುರಿಯದಂತೆಯೂ ತಡೆಯಲು ಸಹಕಾರಿ.

ಹೊಸ್ತಿಲು ಸಾಮಾನ್ಯವಾಗಿ ಮೂರು ಇಂಚು ಅಗಲ ಹಾಗೂ ನಾಲ್ಕು ಇಂಚು ದಪ್ಪ ಇರುತ್ತದೆ. ವಿಶೇಷ ವಿನ್ಯಾಸ ಮಾಡಿಸಬೇಕೆಂದಿದ್ದರೆ, ಅಗಲವಾಗಿ ಮಾಡಿಸಿಕೊಳ್ಳಬಹುದು. ಆದರೆ ಹೆಚ್ಚು ಅಗಲ, ಎತ್ತರ ಇದ್ದರೆ ದಾಟುವುದು ಕಷ್ಟವಾಗಿ ಪದೇಪದೇ ಕಾಲಿಗೆ ತಗುಲಿ ಮುಗ್ಗರಿಸುವ ಸಾಧ್ಯತೆಯಿರುತ್ತದೆ.

ಎತ್ತರದ ಬಗ್ಗೆ ಎಚ್ಚರವಿರಲಿ
ಮನೆಯ ಮುಂಬಾಗಿಲಿನ ಚೌಕಟ್ಟನ್ನು ನೆಲಹಾಸು ಹಾಕುವ ಮೊದಲು ಕೂರಿಸುವ ಕಾರಣ ಕೆಲವೊಮ್ಮೆ ಮಟ್ಟದಲ್ಲಿ ಎಡವಟ್ಟಾದರೆ ಮುಚ್ಚಿಹೋಗುವ ಸಾಧ್ಯತೆಯಿರುತ್ತದೆ. ಹೀಗಾಗಿ ಈ ಬಗ್ಗೆ ಗಮನ ಹರಿಸಲೇಬೇಕು.

ಟಾಯ್ಲೆಟ್‌ ಪಟ್ಟಿ
ಸ್ನಾನ ಹಾಗೂ ಶೌಚಗೃಹದ ನೀರು ಹೊರಬರದಂತೆ ತಡೆಯಲು ಪಟ್ಟಿ ಕೊಡಬೇಕಾಗುತ್ತದೆ. ನೆಲಹಾಸಿನ ಮಟ್ಟಗಳನ್ನು ಮೊದಲೇ ನಿರ್ಧರಿಸಿದ್ದರೆ, ಒಂದು ಇಂಚು ಅಥವಾ ಕಡೇ ಪಕ್ಷ ಅರ್ಧ ಇಂಚಿನಷ್ಟಾದರೂ ಕೆಳಗೆ ಬರುವಂತೆ ಮಾಡಿದರೆ, ನೀರು ಹೊರಗೆ ಹೋಗದಂತೆ ತಡೆಯುತ್ತದೆ.

ಕೆಲವೊಮ್ಮೆ ಟಾಯ್ಲೆಟ್‌ ಫ್ಲೋರ್‌ ಮಟ್ಟ ಮನೆಯ ನೆಲಹಾಸಿನ ಮಟ್ಟಕ್ಕಿಂತ ಮೇಲಿದ್ದರೆ, ಆಗ ಅನಿವಾರ್ಯವಾಗಿ ಒಂದು ಪಟ್ಟಿ ಕಟ್ಟಬೇಕಾಗುತ್ತದೆ. ಇದರ ಅಗಲ, ಬಾಗಿಲ ಚೌಕಟ್ಟಿನಷ್ಟಿದ್ದು, ಎತ್ತರ ಮುಕ್ಕಾಲು ಇಂಚಿನಿಂದ ಒಂದು ಇಂಚಿದ್ದರೆ ಸಾಕಾಗುತ್ತದೆ.

ಪ್ರೊಜೆಕ್ಷನ್‌ ಕೆಳಗಿನ ಪಟ್ಟಿ
ಸೂರು ಗೋಡೆಯಿಂದ ಹೊರಗೆ ಚಾಚಿದ್ದರೆ ಭಯವಿಲ್ಲ. ಅದಕ್ಕೆ ಹಾಗೂ ಬಾಲ್ಕನಿ ಸಜ್ಜಾಗಳಿಗೆ ಮಳೆಯ ನೀರು ಕೆಳಗೆ ಹರಿದು ಗೋಡೆಯತ್ತ ಬಂದು ಕಲೆಗಳು ಬೀಳಬಾರದು ಎಂಬ ಕಾರಣಕ್ಕೆ, ಪಟ್ಟಿಗಳನ್ನು ಕಟ್ಟಲಾಗುತ್ತದೆ. ಇದು ಸಾಮಾನ್ಯವಾಗಿ ಒಂದರಿಂದ ಎರಡಿಂಚು ಅಗಲವಿದ್ದು, ಎಲ್ಲೆಲ್ಲಿ  ಮಳೆಯ ನೀರು ಕೆಳಗಿಳಿದು, ಗೋಡೆಯತ್ತ ಬರುವ ಸಾಧ್ಯತೆ ಇರುವುದೋ ಅಲ್ಲೆಲ್ಲಿ  ಪಟ್ಟಿ ಕಟ್ಟಬೇಕಾಗುತ್ತದೆ.

ಯಾವುದೇ ಗೋಡೆಯ ಬಣ್ಣ ಮಾಸುವುದಕ್ಕೆ ಮುಖ್ಯ ಕಾರಣ ನೀರು. ಹಾಗಾಗಿ ಪಟ್ಟಿಗಳನ್ನು ಕಟ್ಟುವಾಗ ಎಚ್ಚರವಿರಬೇಕು. ನೀರು ಪಟ್ಟಿಯನ್ನು ದಾಟಿ, ಗೋಡೆಯ ಮೇಲೆ ಹರಿಯದೆ, ನೆಲಕ್ಕೆ ತೊಟ್ಟಿಕ್ಕುವಂತೆ ಅಥವಾ ಸ್ವಲ್ಪ ಕೆಳಗೆ ಬಾಗಿದಂತೆ ಫಿನಿಶ್‌ ಮಾಡಿದರೆ ಉತ್ತಮ. 

ಗೋಡೆ ಸೂರು ಸೇರುವ ಕಡೆ ಪಟ್ಟಿ
ರೂಫ್ ಹಾಗೂ ಗೋಡೆ ಸೇರುವ ಕಡೆ ಪಟ್ಟಿ ಕಟ್ಟುವ ಹಳೆ ಸಂಪ್ರದಾಯ ಈಗಲೂ ಇದೆ. ಇದು ಸರಳವಾಗಿ ಒಂದೆರಡು ಇಂಚು ಅಗಲ ಹಾಗೂ ಒಂದರ್ಧ ಇಂಚು ದಪ್ಪವಿದ್ದರೆ ಸೂರು ಹಾಗೂ ಗೋಡೆಗಳ ಕೂಡುವಿಕೆಯನ್ನು ಡಿಫೈನ್‌ ಮಾಡಿ ಮನೆಯ ಒಳಾಂಗಣ ಎತ್ತರವಾಗಿರುಂತೆ ಕಾಣಿಸುತ್ತದೆ. ಇದನ್ನೇ ಸ್ವಲ್ಪ ಸುಂದರವಾಗಿ ಅರ್ಧ ರೌಂಡ್‌ ಅಥವಾ ಮೆಟ್ಟಿಲುಮೆಟ್ಟಿಲಾಗಿ ಮಾಡಿದರೆ ಅದೇ ಕಾನೀಸ್‌ ಆಗಿ ರೂಪುಗೊಳ್ಳುತ್ತದೆ. ಮೂಲೆಗಳನ್ನು ಗುಂಡಗೆ ತಿರುಗಿಸಿದರೆ ಜೇಡ, ಕೀಟಗಳಿಗೆ ಗೂಡುಕಟ್ಟಲು ಕಷ್ಟವಾಗುತ್ತದೆ.ಇದ ಕ್ಕೆ ಗೋಡೆಗಿಂತ ಗಾಢವಾದ ಬಣ್ಣ ಬಳಿದರೆ ಒಳ್ಳೆಯ ಕಾಂಟ್ರಾಸ್ಟ್ ಸಿಗುತ್ತದೆ. ಗೋಡೆಯ ಬಣ್ಣ ಈ ಪಟ್ಟಿಯಿಂದಾಗಿ ಮತ್ತೂ ಸುಂದರವಾಗಿ ಕಾಣುತ್ತದೆ.

ಟಾಪ್ ನ್ಯೂಸ್

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

Lok Sabha election: ಗುರುವಾರ 21.48 ಕೋ.ರೂ. ಮೌಲ್ಯದ ಚುನಾವಣ ಅಕ್ರಮ ಪತ್ತೆ

18

Bombay High Court: ಆರತಕ್ಷತೆ ಮದುವೆಯ ಭಾಗ ಎಂದು ಪರಿಗಣಿಸಲಾಗದು: ಬಾಂಬೆ ಹೈಕೋರ್ಟ್‌

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.