ಬೆಳ್ಳಾರೆ ಕಾಲೇಜು 22 ಅತಿಥಿ ಉಪನ್ಯಾಸಕರು ಹಾಜರು
Team Udayavani, Aug 5, 2017, 11:25 AM IST
ಸುಳ್ಯ: ಉಪನ್ಯಾಸಕರು ಇಲ್ಲದೆ ತರಗತಿಗೆ ಬೀಗ ಜಡಿದಿದ್ದ ತಾಲೂಕಿನ ಪೆರುವಾಜೆಯಲ್ಲಿರುವ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ ಶುಕ್ರವಾರ 22 ಮಂದಿ ಅತಿಥಿ ಉಪನ್ಯಾಸಕರು ಕರ್ತವ್ಯಕ್ಕೆ ಹಾಜರಾಗಿದ್ದು, ತರಗತಿಗಳು ಪುನರಾರಂಭಗೊಂಡಿವೆ.
48 ಉಪನ್ಯಾಸಕರು ಇದ್ದ ಕಾಲೇಜಿನಲ್ಲಿ ಐವರು ಖಾಯಂ ಉಪನ್ಯಾಸಕರ ವರ್ಗಾ ವಣೆ ಹಾಗೂ 42 ಮಂದಿ ಅತಿಥಿ ಉಪನ್ಯಾಸಕರ ರದ್ದತಿಯಿಂದ ಕಾಲೇಜಿನಲ್ಲಿ ಪ್ರಾಂಶುಪಾಲರೊಬ್ಬರನ್ನು ಹೊರತು ಪಡಿಸಿ ಉಳಿದೆಲ್ಲ ಹುದ್ದೆಗಳು ಖಾಲಿ ಆಗಿತ್ತು. ಉಪನ್ಯಾಸಕರು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ಅಘೋಷಿತ ರಜೆ ದೊರೆತಿರುವ ಬಗ್ಗೆ ಉದಯವಾಣಿ ವರದಿ ಪ್ರಕಟಿಸಿತ್ತು.
ಗುರುವಾರವೂ ಮೊದಲ ಅವಧಿ ಅನಂತರ ವಿದ್ಯಾರ್ಥಿಗಳಿಗೆ ತರಗತಿ ನಡೆದಿರಲಿಲ್ಲ. ಶುಕ್ರವಾರ 22 ಮಂದಿ ಅತಿಥಿ ಉಪನ್ಯಾಸಕರು ಹಾಜರಾದ ಕಾರಣ ಪದವಿ ಹಾಗೂ ಸ್ನಾತಕೋತ್ತರ ಪದವಿ ತರಗತಿಗಳು ನಡೆದಿವೆ.
ಖಾಯಂ ಉಪನ್ಯಾಸಕರಿಗೆ ಆಗ್ರಹ
13 ಮಂಜೂರಾತಿ ಹುದ್ದೆಗಳಲ್ಲಿ 1 ಹುದ್ದೆ ಯಲ್ಲಿ ಮಾತ್ರ ಉಪನ್ಯಾಸಕರಿದ್ದು, ಉಳಿದ ಎಲ್ಲ ಹುದ್ದೆಗಳಲ್ಲಿ ಅತಿಥಿ ಉಪನ್ಯಾಸಕರು ಕರ್ತವ್ಯ ನಿಭಾಯಿಸಬೇಕಿದೆ. ಹಾಗಾಗಿ ಪೂರ್ಣ ಕಾಲಿಕ ಉಪನ್ಯಾಸಕರ ನೇಮಕಕ್ಕೆ ಆಗ್ರಹ ಕೇಳಿ ಬಂದಿದೆ. ಕಾಲೇಜಿಗೆ ವಾರದೊಳಗೆ ಪೂರ್ಣಕಾಲಿಕ ಉಪ ನ್ಯಾಸಕರು ಆಗಮಿಸುವ ಬಗ್ಗೆ ಮಾಹಿತಿ ದೊರೆತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು
LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ
Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು
Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ
ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ