ಬಿಜೆಪಿ ಸಂಘಟನಾತ್ಮಕ ಪಕ್ಷ : ಶ್ಯಾಮಲಾ ಕುಂದರ್‌


Team Udayavani, Jul 10, 2017, 3:45 AM IST

shyamala-kundar.jpg

ಹಳೆಯಂಗಡಿ: ಕುಟುಂಬದ ದರ್ಬಾರ್‌ ಇಲ್ಲದೆ, ಸಾಮಾನ್ಯ ಕಾರ್ಯಕರ್ತನೂ ಸಹ ಮುಖ್ಯಮಂತ್ರಿ, ಪ್ರಧಾನಿ ಹುದ್ದೆಯಂತಹ ಅತ್ಯುನ್ನತ ಸ್ಥಾನಮಾನ ಪಡೆಯುವ  ಅರ್ಹತೆ ಇರುವ ಬಿಜೆಪಿ ಅಪ್ಪಟ ಕಾರ್ಯಕರ್ತರ ಸಂಘಟನಾತ್ಮಕ ಪಕ್ಷವಾಗಿದೆ. ನನ್ನಿಂದ ಪಕ್ಷ ಎನ್ನದೆ, ನಮ್ಮಿಂದ ಪಕ್ಷ  ಬೆಳೆ ಯಬೇಕು ಎಂಬ ಭಾವನೆ ಕಾರ್ಯ ಕರ್ತರಲ್ಲಿ ಅಗ ತ್ಯ. ನಾಯಕನಾಗಿ ಅಧಿಕಾರ ಪಡೆದ  ಅನಂತರವೂ ತಳಮಟ್ಟದ ಕಾರ್ಯಕರ್ತನನ್ನು ಮರೆಯಬಾರದು ಎಂದು  ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯೆ ಹಾಗೂ ಮೂಲ್ಕಿ ಮೂಡಬಿದಿರೆ  ಕ್ಷೇತ್ರದ ವಿಸ್ತಾರಕ ಪ್ರಮುಖ್‌ ಶ್ಯಾಮಲಾ ಕುಂದರ್‌ ಹೇಳಿದರು.

ಅವರು ಹಳೆಯಂಗಡಿಯ ಭಾರತೀಯ ಜನತಾ ಪಾರ್ಟಿಯ ಗ್ರಾಮ ಸಮಿತಿಯ ಆಶ್ರಯದಲ್ಲಿ ಕಿನ್ನಿಗೋಳಿ ಶಕ್ತಿಕೇಂದ್ರದ ಸಹಕಾರದಲ್ಲಿ ಎನ್‌ಡಿಎ ಸರಕಾರದ 3 ವರ್ಷಗಳ ಸಾಧನೆ ಹಾಗೂ ಯೋಜನೆಗಳ ಮಾಹಿತಿ ಕಾರ್ಯಾಗಾರ ಸಬ್‌ಕಾ ಸಾಥ್‌ ಸಬ್‌ಕಾ ವಿಕಾಸ್‌ ಕಾರ್ಯಕ್ರಮವನ್ನು  ಹಳೆಯಂಗಡಿಯ ಶ್ರೀ ಜಾರಂದಾಯ ದೈವಸ್ಥಾನದ ಶ್ರೀನಿವಾಸ ಕಲಾ ಮಂದಿರದಲ್ಲಿ ಉದ್ಘಾಟಿಸಿ ಮಾತನಾಡಿದರು.

ಮೂಲ್ಕಿ ಮೂಡಬಿದಿರೆ ಕ್ಷೇತ್ರದ ಅಧ್ಯಕ್ಷ ಈಶ್ವರ್‌ ಕಟೀಲ್‌ ಅಧ್ಯಕ್ಷತೆ ವಹಿಸಿ, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥ ಕೆಲ ಸ ವನ್ನು ಸಾಮಾಜಿಕ ಜಾಲತಾಣದಲ್ಲಿ  ಮಾಡಬೇಡಿ. ಪಕ್ಷದ ವರಿಷ್ಠರು ಸೂಚಿಸಿದ ಅಭ್ಯರ್ಥಿಯನ್ನು ಗೆಲ್ಲಿಸುವ ಪಣತೊಟ್ಟು ಈ ಬಾರಿ ಬಿಜೆಪಿ ಮೂಲ್ಕಿ ಮೂಡಬಿದಿರೆ ಕ್ಷೇತ್ರದಲ್ಲಿ ಕಮಲವನ್ನು ಅರಳಿಸಬೇಕು ಎಂದರು.

ಕಾರ್ಯಾಗಾರದಲ್ಲಿ  ಕೇಂದ್ರ ಸರಕಾರದ ಯೋಜನೆಗಳ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಬಿಜೆಪಿ ವಕ್ತಾರ ವಿಕಾಸ ಪುತ್ತೂರು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಮೂರು ವರ್ಷದಲ್ಲಿ 14 ಸಾವಿರ ಕೋಟಿ. ರೂ.ಗಳ ಅನುದಾನ ಕೇಂದ್ರ ಸರಕಾರದಿಂದ ಮಂಜೂರಾಗಿದೆ. 5,400 ಕೋ. ರೂ. ಅನ್ನು ರಸ್ತೆ ನಿರ್ಮಾಣಕ್ಕೆ ಬಳಸಲಾಗಿದೆ. ಸಣ್ಣ ಮಕ್ಕಳಿಂದ ಹಿಡಿದು ಆಬಾಲವೃದ್ಧರವರೆಗೆ ಇರುವ ಕೇಂದ್ರದ ಯೋಜನೆಗಳನ್ನು ಯಾವುದೇ ಮಧ್ಯವರ್ತಿಗಳಿಲ್ಲದೆ ನೇರವಾಗಿ ಫಲಾನುಭವಿಗೆ ತಲುಪುತ್ತಿದೆ ಎಂದರು.

ರಾಜ್ಯ ಹಿಂದುಳಿದ ವರ್ಗ ಮೋರ್ಚಾದ ಕಾರ್ಯದರ್ಶಿ ಸತ್ಯಜಿತ್‌ ಸುರತ್ಕಲ್‌ ಬಿಜೆಪಿ ಪಕ್ಷದ ಹಿನ್ನೆಲೆಯನ್ನು ವಿವ ರಿ ಸಿ ದರು.  ಜಿಲ್ಲಾ ಪಂಚಾಯತ್‌ ಉಪಾಧ್ಯಕ್ಷೆ ಕಸ್ತೂರಿ ಪಂಜ, ಸದಸ್ಯ ವಿನೋದ್‌ ಕುಮಾರ್‌ ಬೊಳ್ಳೂರು, ತಾಲೂಕು ಪಂಚಾಯತ್‌ ಸದಸ್ಯ ಜೀವನ್‌ ಪ್ರಕಾಶ್‌ ಕಾಮೆರೊಟ್ಟು  ವಿವಿಧ ಯೋಜನೆಗಳ ಬಗ್ಗೆ ವಿವರಿಸಿದರು. ಕಾರ್ಯಕರ್ತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.

ಹಿಂದುಳಿದ ವರ್ಗ ಮೋರ್ಚಾದ ಜಿಲ್ಲಾ ಕಾರ್ಯದರ್ಶಿ ವಿನೋದ್‌ ಸಾಲ್ಯಾನ್‌ ಬೆಳ್ಳಾಯರು, ತಾಲೂಕು ಪಂಚಾಯತ್‌ ಸದಸ್ಯೆಯರಾದ ರಶ್ಮಿ ಆಚಾರ್ಯ,  ವಜ್ರಾಕ್ಷಿ ಶೆಟ್ಟಿ, ಪಿಸಿಎ ಬ್ಯಾಂಕ್‌ ಅಧ್ಯಕ್ಷ ಎಸ್‌.ಎಸ್‌. ಸತೀಶ್‌ ಭಟ್‌ ಕೊಳುವೈಲು, ಪಡುಪಣಂಬೂರು ಗ್ರಾ.ಪಂ. ಅಧ್ಯಕ್ಷ ಮೋಹನ್‌ದಾಸ್‌, ಕೆಮ್ರಾಲ್‌ ಪಂ. ಅಧ್ಯಕ್ಷ ನಾಗೇಶ್‌, ವೈದ್ಯರ ಪ್ರಕೋಷ್ಠದ ಡಾ| ನಿಶಾಂಕ್‌ ಶೆಟ್ಟಿಗಾರ್‌, ಕಿನ್ನಿಗೋಳಿ ಶಕ್ತಿ ಕೇಂದ್ರದ ಅಧ್ಯಕ್ಷ ಸಂತೋಷ್‌ ಶೆಟ್ಟಿ  ಉಪಸ್ಥಿತರಿದ್ದರು.

ಹಳೆಯಂಗಡಿ ಗ್ರಾಮ ಸಮಿತಿ ಅಧ್ಯಕ್ಷ ನರೇಂದ್ರ ಪ್ರಭು ಸ್ವಾಗತಿಸಿ, ನಿಶಾ ಎಂ. ವಂದಿಸಿದರು. ಪ್ರಧಾನ ಕಾರ್ಯದರ್ಶಿ ಚಿತ್ರಾ ಸುಕೇಶ್‌ ನಿರೂಪಿಸಿದರು.

ಟಾಪ್ ನ್ಯೂಸ್

ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ

ಯಮುನೋತ್ರಿ ಹೆದ್ದಾರಿಯ ಸುರಕ್ಷಾ ಗೋಡೆ ಕುಸಿತ: 10 ಸಾವಿರ ಪ್ರವಾಸಿಗರ ಪರದಾಟ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ತೀರ್ಥಹಳ್ಳಿ: ಗೋ ಮಾಂಸ ಮಾರಾಟ ಮಾಡುವ ಅಂಗಡಿ ಮೇಲೆ ಪೊಲೀಸರ ದಾಳಿ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

ಸಾಯಿ ಲೇಔಟ್‌ ನಿವಾಸಿಗಳಿಗೆ ಭವಿಷ್ಯದ ಚಿಂತೆ

5death

ಪ್ರಿಯತಮೆಯ ಆತ್ಮಹತ್ಯೆಯಿಂದ ಮನನೊಂದು ಪ್ರಿಯತಮ ಆತ್ಮಹತ್ಯೆ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಕಟ್ಟಿಂಗ್ ಶಾಪ್ ಚಿತ್ರವಿಮರ್ಶೆ: ಅಡ್ಡ ಕತ್ತರಿಯಲ್ಲಿ ‘ಸಂಕಲನ’ಕಾರನ ಜೀವನ ಚಿತ್ರಣ

ಎಚ್. ವಿಶ್ವನಾಥ್

ಪಠ್ಯಪುಸ್ತಕದಲ್ಲಿ ಕೇಸರಿಕರಣ ನುಸುಳುತ್ತಿರುವುದು ಅಪಾಯಕಾರಿ: ಎಚ್. ವಿಶ್ವನಾಥ್

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ

ರೋಣ: ಧಾರಾಕಾರ ಮಳೆಗೆ ಅಪಾಯ ಮಟ್ಟ ಮೀರಿ ಹರಿಯುತ್ತಿದೆ ಬೆಣ್ಣಿಹಳ್ಳ; ಪ್ರವಾಹ ಭೀತಿ



ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

suratkal

ರಸ್ತೆಯಂಚಿಗೆ ವಾಹನ ಇಳಿದರೆ ಎತ್ತಲು ಕ್ರೇನ್‌ ಬರಬೇಕು!

mangalore-city-corporation

ವಾರ್ಡ್‌ ಕಮಿಟಿ ಸ್ವರೂಪದ ಏರಿಯಾ ಸಭಾ!

ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್‌

ಜಿ.ಪಂ., ತಾ.ಪಂ. ಚುನಾವಣೆ ಶೀಘ್ರ ನಡೆಸಲಿ: ಸಲೀಂ ಅಹ್ಮದ್‌

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

ರಾಜ್ಯ ಹೆದ್ದಾರಿಗೆ ಮರ ಬಿದ್ದು ಸಂಚಾರಕ್ಕೆ ತೊಡಕು

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

ಕರಾವಳಿ ಜನರ ಸಮಗ್ರ ಅಭಿವೃದ್ಧಿಗೆ ಮತ್ಸ್ಯೋದ್ಯಮದ ನೆರವು

MUST WATCH

udayavani youtube

ಮೆಸ್ಕಾಂ ಸಿಬ್ಬಂದಿ ಮೇಲೆ ತಂಡದಿಂದ ಹಲ್ಲೆ! ದೃಶ್ಯ ಸಿಸಿಟಿವಿಯಲ್ಲಿ ಸೆರೆ

udayavani youtube

ಹೈನುಗಾರಿಕೆ ಯಶಸ್ಸು ಕಾಣಲು ಇಲ್ಲಿದೆ formula!

udayavani youtube

ಜಮ್ಮು ಕಾಶ್ಮೀರ ಹೆದ್ದಾರಿಯಲ್ಲಿ ನಿರ್ಮಾಣ ಹಂತದ ಸುರಂಗ ಕುಸಿತ 9 ಮಂದಿ ಸಿಲುಕಿರುವ ಶಂಕೆ

udayavani youtube

ಎಸ್ಸೆಸ್ಸೆಲ್ಸಿ ಫಲಿತಾಂಶ : ಶಿರಸಿ ಸರಕಾರಿ ಶಾಲಾ ವಿದ್ಯಾರ್ಥಿಗಳ ಸಾಧನೆ

udayavani youtube

ಒಳ್ಳೆಯ ಆರೋಗ್ಯಕ್ಕೆ ಯಾವ ರೀತಿ ವ್ಯಾಯಾಮ ಮಾಡಬೇಕು ?

ಹೊಸ ಸೇರ್ಪಡೆ

ನ್ಯಾ.ನಾಗಮೋಹನ್‌ದಾಸ್‌ ವರದಿ ಜಾರಿಗೆ ಆಗ್ರಹ

ನ್ಯಾ.ನಾಗಮೋಹನ್‌ದಾಸ್‌ ವರದಿ ಜಾರಿಗೆ ಆಗ್ರಹ

8school-meal

ಕೂಡಗಿ ಶಾಲೆಯ ಬಿಸಿಯೂಟ ಸವಿದ ಸಿಇಒ ಶಿಂಧೆ

b-c-pateel

ದಿನ ಬೆಳಗಾದರೆ ಸಿದ್ದು ಮನೆ ಬಾಗಿಲಲ್ಲಿ ಕುಳಿತುಕೊಳ್ಳಬೇಕಾ?

ಗುತ್ತಿಗೆ ಪೌರ ಕಾರ್ಮಿಕರಿಂದ ಪ್ರತಿಭಟನೆ

ಗುತ್ತಿಗೆ ಪೌರ ಕಾರ್ಮಿಕರಿಂದ ಪ್ರತಿಭಟನೆ

7art

ಗ್ರಾಮೀಣ ಭಾಗದ ಕಲೆ ಉಳಿಸಿ-ಬೆಳೆಸಲು ಸಲಹೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.