ಮಂಗಳೂರು: ಡಿವೈಡರ್ ಹಾರಿ ಕಾರು,ಸ್ಕೂಟರ್ ಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು: ಓರ್ವ ಗಂಭೀರ
Team Udayavani, Apr 9, 2022, 1:45 PM IST
ಮಂಗಳೂರು: ಬಿಎಂಡಬ್ಲ್ಯು ಕಾರೊಂದು ಡಿವೈಡರ್ ಹಾರಿ ಎರಡು ವಾಹನಗಳಿಗೆ ಢಿಕ್ಕಿ ಹೊಡೆದಿರುವ ಘಟನೆ ಬಲ್ಲಾಳ್ ಭಾಗ್ ನಲ್ಲಿ ಶನಿವಾರ ನಡೆದಿದೆ.
ಬಿಎಂಡಬ್ಲ್ಯು ಕಾರು ವೇಗದಲ್ಲಿ ಬಲ್ಲಾಳ್ ಭಾಗ್ ರಸ್ತೆಯಲ್ಲಿ ಬರುತ್ತಿರುವಾಗ ಡಿವೈಡರ್ ಹಾರಿ, ಆ ಕಡೆ ರಸ್ತೆಯಲ್ಲಿ ಹೋಗುತ್ತಿದ್ದ ಕಾರು ಹಾಗೂ ಸ್ಕೂಟರ್ ಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಸ್ಕೂಟರ್ ನಲ್ಲಿದ್ದ ಮಹಿಳೆಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.
ಘಟನೆ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ತಿಳಿದು ಬರಬೇಕಿದೆ.