Udayavni Special

ಅಡಿಕೆ ‘ಪಾಲ’ದ ಅಪಾಯಕಾರಿ ನಡಿಗೆಗೆ ಸಿಗುವುದೇ ಮುಕ್ತಿ?

Team Udayavani, May 18, 2018, 8:55 AM IST

adike-pale-15-5.jpg

ಬೆಳಂದೂರು: ಬೆಳಂದೂರು ಗ್ರಾ.ಪಂ. ವ್ಯಾಪ್ತಿಯ ಕಾçಮಣ ಗ್ರಾಮಕ್ಕೊಳಪಟ್ಟ ಸಜಂಕು – ಪಳಸತ್ತಡಿಗೆ ಸಂಪರ್ಕ ಕಲ್ಪಿಸಲು ಈಗಲೂ ಅಡಿಕೆಮರದ ಪಾಲವನ್ನೇ ಬಳಸುತ್ತಿದ್ದಾರೆ. ಈ ಬಾರಿಯಾದರೂ ತಮ್ಮ ಸಮಸ್ಯೆ ಈಡೇರುವ ಅಶಯದಲ್ಲಿ ಇಲ್ಲಿನ ಜನರಿದ್ದಾರೆ. ಕಾçಮಣ ಸಹಿತ ಕೆಲವು ಗ್ರಾಮಗಳ ಜನತೆ ತಮ್ಮ ನಿತ್ಯ ಚಟುವಟಿಕೆಗಳಿಗಾಗಿ, ವಿದ್ಯಾರ್ಥಿಗಳು ಶಾಲೆ, ಕಾಲೇಜುಗಳಿಗೆ ತೆರಳಲು ಇದೇ ಅಡಿಕೆ ಪಾಲವನ್ನು ದಾಟಿಯೇ ಸಾಗಬೇಕಿದೆ. 

ಮಳೆಗಾಲದಲ್ಲಿ ಕಷ್ಟ
ಬೇಸಗೆ ಯಲ್ಲಿ ಹೊಳೆಯಲ್ಲಿ ನೀರು ಖಾಲಿಯಾಗಿರುವುದರಿಂದ ಹೊಳೆಯನ್ನು ಸುಲಭವಾಗಿ ದಾಟಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೋಗಬಹುದು. ಮಳೆಗಾಲದಲ್ಲಂತೂ ಅಡಿಕೆಪಾಲದ ಮೇಲೆ ಚಪ್ಪಲಿ ಹಾಕಿ ನಡೆಯುವಂತಿಲ್ಲ. ಪುಟ್ಟ ಮಕ್ಕಳನ್ನು ಕಂಕುಳಲ್ಲಿ ಹಿಡಿದು ಸಾಗುವ ದೃಶ್ಯ ಎಂಥವರ ಎದೆಯನ್ನೂ ಡವಡವ ಅನಿಸದೇ ಬಿಡಲ್ಲ. ಬೇಸಗೆ ಕಾಲದಲ್ಲಿ ಹೊಳೆಯಲ್ಲಿ ನೀರಿನ ಪ್ರಮಾಣ ಕಡಿಮೆಯಿರುವುದರಿಂದ ಸುಲಭವಾಗಿ ದಾಟಬಹುದು. ಆದರೆ ಮಳೆಗಾಲದಲ್ಲಿ ಮಾತ್ರ ಜೀವ ಕೈಯಲ್ಲಿ ಹಿಡಿದು ಸಾಗುವ ಅನಿವಾರ್ಯ ಇಲ್ಲಿನ ಜನರದ್ದು.

ಪ್ರತಿ ವರ್ಷ ಹೊಸ ಪಾಲ
ಸಜಂಕು – ಪಳಸತ್ತಡಿ ಸಂಪರ್ಕಿಸಲು ಪ್ರತೀ ವರ್ಷ ಹೊಸ ಅಡಿಕೆ ಪಾಲವನ್ನು ರಚಿಸುವುದು ಅನಿವಾರ್ಯ. ಈ ಭಾಗದ ಜನರು ಸ್ವಂತ ಖರ್ಚಿನಿಂದ. ಶ್ರಮದಾನದ ಮೂಲಕ ಅಡಿಕೆಮರದ ಪಾಲವನ್ನು ರಚಿಸಬೇಕಿದೆ. ಮಳೆಗಾಲ ಸಂದರ್ಭ ಇಲ್ಲಿನ ಜನರಿಗೆ ಆರೋಗ್ಯ ಸಮಸ್ಯೆಗಳು ಬಂದರೆ ಆಸ್ಪತ್ರೆಗೆ ಸೇರಿಸಲು ಪಡುವ ಕಷ್ಟ ಹೇಳತೀರದು. ಪಾಲ ದಾಟುವಾಗ ಸ್ವಲ್ಪ ಎಡವಟ್ಟಾದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎದುರಾಗುತ್ತದೆ.

ಮಕ್ಕಳ ಸಂಖ್ಯೆ ಕುಸಿತ
ಸಜಂಕು-ಪಳಸತ್ತಡಿ ಸಂಪರ್ಕ ರಸ್ತೆಗೆ ಸೇತುವೆ ನಿರ್ಮಿಸುವುದು ತೀರಾ ಅವಶ್ಯವಾಗಿದ್ದು, ಇಲ್ಲಿ ಅಡಿಕೆ ಪಾಲದ ಮೇಲೆ ಸಂದಿಗªತೆಯಿಂದ ಸಂಚರಿಸುವ ಸನ್ನಿವೇಶ ವಿರುವುದರಿಂದ ಕಾçಮಣ ಗ್ರಾಮದಲ್ಲಿರುವ ನಾರ್ಯಬೈಲು ಶಾಲೆ ಯಲ್ಲಿ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ ಎನ್ನುತ್ತಾರೆ ಶಾಲಾಬಿವೃದ್ಧಿ ಸಮಿತಿಯವರು.

ಈ ಬಾರಿ ಈಡೇರಬಹುದು
ಈ ಬಾರಿ ಈ ಭಾಗದ ಸಮಸ್ಯೆ ಪರಿಹಾರವಾಗುವ ನಿರೀಕ್ಷೆ ಇದೆ.ಆದರೆ ಈ ಬಾರಿಯ ಮಳೆಗಾಲಕ್ಕೆ ಇನ್ನು ಉಳಿದಿರುವ 15 ದಿನಗಳು.ಆದ್ದರಿಂದ ಈ ಬಾರಿಯೂ ಅಡಿಕೆ ಪಾಲವೇ ದಾರಿ. ಮುಂದಿನ ವರ್ಷಕ್ಕಾದರೂ ಕಿಂಡಿ ಅಣೆಕಟ್ಟು ನಿರ್ಮಾಣವಾಗಬಹುದು. ಈ ಮೂಲಕ ಸಂಪರ್ಕ ಹಾಗೂ ಕೃಷಿಕರಿಗೆ ಅನುಕೂಲಕ್ಕಾಗಿ ಕಿಂಡಿ ಅಣೆಕಟ್ಟು ನಿರ್ಮಾಣವಾಗಬಹುದು ಎನ್ನುತ್ತಾರೆ ಸ್ಥಳೀಯರು.

ಮಕ್ಕಳು ಬರುವವರೆಗೆ ಭಯ
ಮಳೆಗಾಲದಲ್ಲಿ ಮಕ್ಕಳು ಬೆಳಗ್ಗೆ ಶಾಲೆ, ಕಾಲೇಜಿಗೆ ಹೋಗಿ ಮರಳಿ ಬರುವ ತನಕ ಹೆತ್ತವರು ಭಯ ಭೀತಿಯಿಂದಲೇ ಇರಬೇಕಾದ ಸಂದಿಗ್ಧ ಪರಿಸ್ಥಿತಿ. ಮಕ್ಕಳು ಶಾಲೆಗೆ ಹೋಗಿ ಬರುವ ತನಕ ನಾವು ಉಸಿರು ಬಿಗಿ ಹಿಡಿದು ಕೂರಬೇಕಾಗಿದೆ ಎನ್ನುತ್ತಾರೆ ಮಕ್ಕಳ ಹೆತ್ತವರು.

ಕಿಂಡಿ ಅಣೆಕಟ್ಟಿಗೆ ಪ್ರಸ್ತಾವನೆ
ಈ ಸ್ಥಳದಲ್ಲಿ ಸುಮಾರು 80 ಲಕ್ಷ ರೂ.ವೆಚ್ಚದಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣಕ್ಕೆ ಸುಳ್ಯ ಶಾಸಕ ಅಂಗಾರ ಅವರು ಪ್ರಸ್ತಾವನೆ ಸಲ್ಲಿಸಿದ್ದರು. ಅನಂತರ ಚುನಾವಣೆ ನೀತಿ ಸಂಹಿತೆ ಬಂತು. ಪ್ರಸ್ತಾವನೆಯ ಅನಂತರದ ಬೆಳವಣಿಗೆಯಾಗಿಲ್ಲ. ಈಗ ಅಂಗಾರ ಅವರೇ ಶಾಸಕರಾಗಿ ಮರು ಆಯ್ಕೆಯಾಗಿದ್ದಾರೆ. ಕಿಂಡಿ ಅಣೆಕಟ್ಟು ನಿರ್ಮಾಣವಾದರೆ ಈ ಭಾಗದ ಕೃಷಿಕರಿಗೂ ಉಪಯೋಗವಾಗುತ್ತದೆ. ಜತೆಗೆ ಕಿಂಡಿ ಅಣೆಕಟ್ಟಿನ ಮೇಲೆ ಕಾಂಕ್ರೀಟ್‌ ಪಾಲ ಮಾಡಿದರೆ ಸಂಪರ್ಕಕ್ಕೂ ಸುಲಭವಾಗಲಿದೆ.

— ಪ್ರವೀಣ್‌ ಚೆನ್ನಾವರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

ದಿಲ್ಲಿ ಪ್ರವಾಸ ಯಶಸ್ವಿ, ಇಂದೇ ಸಂಪುಟ ವಿಸ್ತರಣೆ ಬಗ್ಗೆ ಅಂತಿಮ ನಿರ್ಧಾರ: ಬಿ ಎಸ್ ಯಡಿಯೂರಪ್ಪ

ದಿಲ್ಲಿ ಪ್ರವಾಸ ಯಶಸ್ವಿ, ಸಂಪುಟ ವಿಸ್ತರಣೆ ಬಗ್ಗೆ ಇಂದೇ ಅಂತಿಮ ನಿರ್ಧಾರ: ಬಿ ಎಸ್ ಯಡಿಯೂರಪ್ಪ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಗಾಂಜಾ ಸಾಗಾಣಿಕೆ: ಇಬ್ಬರು ಆರೋಪಿಗಳಿಂದ 2ಕೆಜಿ.200 ಗ್ರಾಂ ಗಾಂಜಾ ವಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

ಪಿಎಂ ಆವಾಸ್‌ ಯೋಜನೆಗೆ ಮರುಜೀವ: ಪ್ರತೀ ಗ್ರಾ.ಪಂ.ಗೆ 20 ಮನೆ ನಿರ್ಮಾಣದ ಗುರಿ

ಅಶ್ವತ್ಥ ಎಲೆಯಲ್ಲಿ ಮೋದಿ; ಸುಳ್ಯದ ಯುವಕನ ಕಲೆಗೆ ಪ್ರಧಾನಿ ಶ್ಲಾಘನೆ

ಅಶ್ವತ್ಥ ಎಲೆಯಲ್ಲಿ ಮೋದಿ; ಸುಳ್ಯದ ಯುವಕನ ಕಲೆಗೆ ಪ್ರಧಾನಿ ಶ್ಲಾಘನೆ

ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ ಸೇರಿ ಕಡಬದಲ್ಲಿ ಪೊಲೀಸ್‌ ವೃತ್ತ ಕಚೇರಿಗೆ ಬೇಡಿಕೆ

ಕಡಬ, ಸುಬ್ರಹ್ಮಣ್ಯ, ಬೆಳ್ಳಾರೆ ಸೇರಿ ಕಡಬದಲ್ಲಿ ಪೊಲೀಸ್‌ ವೃತ್ತ ಕಚೇರಿಗೆ ಬೇಡಿಕೆ

ಬಂಟ್ವಾಳ: ಅಂತರ್ ಜಿಲ್ಲಾ ವಾಹನ ಕಳ್ಳನ ಬಂಧನ; ದ್ವಿ ಚಕ್ರ ವಾಹನ ವಶ

ಬಂಟ್ವಾಳ: ಅಂತರ್ ಜಿಲ್ಲಾ ಕಳವು ಆರೋಪಿಯ ಬಂಧನ; ದ್ವಿ ಚಕ್ರ ವಾಹನ ವಶ

kaadane-1

ಚೆಂಬು: ಕಾಡಾನೆ‌ ದಾಳಿಗೆ ಅಪಾರ ಪ್ರಮಾಣದ ಕೃಷಿ ನಾಶ

MUST WATCH

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!

udayavani youtube

ಭತ್ತದ ಕೃಷಿಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ

udayavani youtube

COVID-19 ಸಮಯದಲ್ಲಿ ಜೀವನಕ್ಕೆ ಆಧಾರವಾದ ಹೈನುಗಾರಿಕೆಹೊಸ ಸೇರ್ಪಡೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ದೇಶದಲ್ಲಿ ಶೇ.60ರಷ್ಟು ವಿದ್ಯಾರ್ಥಿಗಳು ಕಾಲ್ನಡಿಗೆಯಲ್ಲಿಯೇ ಶಾಲೆಗೆ ತೆರಳುತ್ತಾರೆ: ಸಮೀಕ್ಷೆ

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ಮಂಗಳೂರು: ಡ್ರಗ್ಸ್ ಸಾಗಿಸುತ್ತಿದ್ದ ಬಾಲಿವುಡ್ ಡ್ಯಾನ್ಸರ್ ಕಿಶೋರ್ ಶೆಟ್ಟಿ ಬಂಧನ!

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ತೆಕ್ಕಟ್ಟೆ : ಕಾರಿಗೆ ಲಾರಿ ಢಿಕ್ಕಿ ಹೊಡೆದು ಡಿವೈಡರ್‌ ಏರಿ ನಿಂತ ಕಾರು; ಪ್ರಯಾಣಿಕರು ಪಾರು

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕರಣ್‌ ಜೋಹರ್‌ಗೆ “ಡ್ರಗ್‌ ಪಾರ್ಟಿ’ ಕಂಟಕ?

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

ಕೇರಳ ಮತ್ತು ಬಂಗಾಳದಲ್ಲಿ ಎನ್ಐಎ ದಾಳಿ: 9 ಅಲ್ ಖೈದಾ ಉಗ್ರರ ಬಂಧಿಸಿದ ಅಧಿಕಾರಿಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.