ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ


Team Udayavani, Apr 23, 2019, 7:14 AM IST

25

ದೇಶ ಸುತ್ತಿ ನೋಡು, ಕೋಶ ಓದಿ ನೋಡು ಎನ್ನುವುದು ಪ್ರಚಲಿತವಾದ ಮಾತು. ಜ್ಞಾನ ಸಂಪಾದನೆಗೆ ಅಂದಿನಿಂದ ಇಂದಿನವರೆಗೂ ಪುಸ್ತಕವೇ ಮೂಲವಾಗಿದೆ. ಇ-ಬುಕ್‌ ಇರುವ ಈ ಕಾಲದಲ್ಲೂ ಪುಸ್ತಕಗಳ ತನ್ನ ಮೌಲ್ಯಗಳನ್ನು ಕಳೆದುಕೊಂಡಿಲ್ಲ. ಪುಸ್ತಕ, ಲೇಖಕರು ಮತ್ತು ಪ್ರಕಾಶನಗಳ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು 1995ರಲ್ಲಿ ಪ್ಯಾರಿಸ್‌ನಲ್ಲಿ ನಡೆದ ಯುನೆಸ್ಕೋದ ಸಾಮಾನ್ಯ ಸಭೆಯಲ್ಲಿ ಎಪ್ರಿಲ್ 23ರಂದು ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನಾಗಿ ಆಚರಿಸಲು ನಿರ್ಧರಿಸಲಾಯಿತು. ಈ ನಿಟ್ಟಿನಲ್ಲಿ ಪ್ರತಿ ವರ್ಷ ವಿಶ್ವಾದ್ಯಂತ ಯುನೆಸ್ಕೋ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಆಚರಿಸಲಾಗುತ್ತದೆ.

ಆಚರಣೆಯ ಉದ್ದೇಶ
ಒಬ್ಬ ವ್ಯಕ್ತಿಯ ಬೌದ್ಧಿಕ ಪ್ರಬುದ್ಧತೆ ಬರುವುದೇ ಪುಸ್ತಕ ಓದುವುದರಿಂದ, ಓದು ನಮ್ಮ ಮನೋವೈಶಾಲ್ಯವನ್ನು ಹೆಚ್ಚಿಸುವ ಬಹುದೊಡ್ಡ ಸಾಧನ. ಈ ಆಧುನಿಕ ಕಾಲದಲ್ಲಿ ಇಂದಿನ ಯುವ ಜನತೆಯಲ್ಲಿ ಪುಸ್ತಕ ಪ್ರೇಮ ಕೊರತೆ ಬಹಳಷ್ಟಿದೆ. ಯುವ ಜನತೆಯಲ್ಲಿ ಪುಸ್ತಕ ಕುರಿತಾದ ಮಹತ್ವ ಹೆಚ್ಚಿಸಲು, ಪುಸ್ತಕ ಮಾರಾಟವನ್ನು ಹೆಚ್ಚಿಸುವ ಸಲುವಾಗಿ, ಪುಸ್ತಕದ ಉಳಿವಿಗಾಗಿ ಈ ದಿನವನ್ನು ಆಚರಿಸಲಾಗುತ್ತದೆ.

ಕೃತಿಸ್ವಾಮ್ಯ ದಿನ
ಪುಸ್ತಕಗಳ ರಕ್ಷಕನಾಗಿ ಕೃತಿಸ್ವಾಮ್ಯ ಕೆಲಸ ಮಾಡುತ್ತದೆ. ಲೇಖಕರಿಗೆ ಪುಸ್ತಕಗಳೇ ಆಸ್ತಿ .

ಈ ಅಸ್ತಿಯನ್ನು ಕದಿಯದಂತೆ ನೋಡುಕೊಳ್ಳುತ್ತದೆ ಕೃತಿಸ್ವಾಮ್ಯ ಕಾಯ್ದೆ. ಭಾರತ ಸಹಿತ ವಿಶ್ವ ದ ಅನೇಕ ರಾಷ್ಟ್ರಗಳಲ್ಲಿ ಕೃತಿ ಸ್ವಾಮ್ಯ ಕಾಯ್ದೆ ಇದೆ.

ಪುಸ್ತಕದ ಜತೆ ಸಂಗೀತ, ನಾಟಕ, ಸಿನೆಮಾ, ಛಾಯಾಚಿತ್ರ, ತಂತ್ರಜ್ಞಾನಕ್ಕೂ ಕೃತಿಸ್ವಾಮ್ಯ ಅನ್ವಯವಾಗುತ್ತದೆ. ಕೃತಿ ಸ್ವಾಮ್ಯದ ಅಪರಾಧಿ ಎಂದು ಸಾಬೀತಾದರೆ ದಂಡ ಮತ್ತ ಜೈಲು ಶಿಕ್ಷೆಯನ್ನು ಅನುಭವಿಸಬೇಕಾಗುತ್ತದೆ.

ಪುಸ್ತಕ ಓದುವ ಹವ್ಯಾಸ ಇರುವವರೂ ಎಲ್ಲಿ ಬೇಕಾದರೂ ಸಂತೋಷವಾಗಿರುತ್ತಾರೆ ಎನ್ನುವುದು ಮಹಾತ್ಮಾ ಗಾಂಧಿಜೀ ಅವರ ಮಾತು.

ಹಿಂದಿನ ಮತ್ತು ಭವಿಷ್ಯದ ಪೀಳಿಗೆ ನಡುವೆ ತಲೆಮಾರುಗಳ ಮತ್ತು ಸಂಸ್ಕೃತಿಗಳ ನಡುವಿನ ಸೇತುವೆಯಾಗಿ ಪುಸ್ತಕ ನಿಲ್ಲುತ್ತದೆ.

ಪುಸ್ತಕಗಳ ಮಾರಾಟ ಸಂಖ್ಯೆ ಕಡಿಮೆಯಾಗಿರಬಹುದು ಆದರೆ ಅವುಗಳ ಪ್ರಕಟನೆಗಳು ಸ್ಥಿರವಾಗಿವೆ. ಇದು ಪುಸ್ತಕಗಳ ಜನಪ್ರಿಯತೆಗೆ ಸಾಕ್ಷಿ.

ಪುಸ್ತಕ ಕೊಂಡು ಓದುವ ಅಭಿರುಚಿ ಬೆಳೆಸಿ
ಮೈ ಮೇಲೆ ಹರಕು ಬಟ್ಟೆ ಇದ್ದರೂ ಚಿಂತೆಯಿಲ್ಲ, ಕೈಯಲ್ಲೊಂದು ಪುಸ್ತಕವಿರಲಿ ಎಂಬ ಮಾತಿನಂತೆ ಪುಸ್ತಕಗಳ ಓದಿನಿಂದ ಮನುಷ್ಯನಿಗೆ ಜ್ಞಾನ ಸಂಪಾದನೆ ಜತೆಗೆ ಆತನ ಅಸ್ತಿತ್ವದ ಬಗ್ಗೆ ಅರಿವಾಗುತ್ತದೆ. ಪ್ರಸ್ತುತವಾಗಿ ಪುಸ್ತಕ ಓದುವವರ ಸಂಖ್ಯೆ ವಿರಳವಾಗುತ್ತಿದೆ. ಪುಸ್ತಕ ಓದು, ಮನುಷ್ಯನ ಹವ್ಯಾಸವಷ್ಟೇ ಅಲ್ಲ, ದೈನಂದಿನ ಕಾಯಕವಾಗಲಿ ಎಂಬ ಸದಾಶಯ.

ಆಚರಣೆ ಹೇಗೆ ?
ವಿಶ್ವ ಪುಸ್ತಕ ದಿನವೂ ಪುಸ್ತಕ ಪ್ರೇಮಿಗಳು ಸಂಭ್ರಮಿಸುವ ದಿನ. ಹಾಗಾಗಿ ಪುಸ್ತಕ ಓದುವ ಹವ್ಯಾಸವಿರುವವರು, ಲೇಖಕರು, ಪ್ರಕಾಶರು ಮತ್ತು ಗ್ರಂಥಾಲಯಗಳಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ. ಈ ದಿನದಂದು ಪುಸ್ತಕ ಮಾರಾಟ, ಗೋಷ್ಠಿಗಳು, ಉಚಿತ ಪುಸ್ತಕ ವಿತರಣೆ, ಕಥೆ, ಕವನ ಸ್ವರ್ಧೆಗಳನ್ನು ನಡೆಸುವುದು, ಲೇಖಕರೊಂದಿಗೆ ಸಂವಾದಗಳನ್ನು ನಡೆಸಲಾಗುತ್ತದೆ. “ಕಥೆಗಳನ್ನು ಹಂಚಿಕೊಳ್ಳಿ (ಶೇರ್‌ ಎ ಸ್ಟೋರಿ ) ಎಂಬ ಥೀಮ್‌ ಸಂದೇಶದೊಂದಿಗೆ ಈ ವರ್ಷದ ವಿಶ್ವ ಪುಸ್ತಕ ಮತ್ತು ಕೃತಿಸ್ವಾಮ್ಯ ದಿನವನ್ನು ವಿಶ್ವದ 100ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಆಚರಿಸಲಾಗುತ್ತದೆ.
ಧನ್ಯಶ್ರೀ ಬೋಳಿಯಾರ್‌

ಟಾಪ್ ನ್ಯೂಸ್

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

KPCC: ಮೋದಿ, ರಾಜನಾಥ್‌ಸಿಂಗ್‌ ವಿರುದ್ಧ ಕ್ರಮಕ್ಕೆ ಕೆಪಿಸಿಸಿ ದೂರು

1-rerwer

IPL; ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಜಯದ ನಗು ಬೀರಿದ ಆರ್ ಸಿಬಿ

MONEY (2)

Mysuru: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 89 ಲಕ್ಷ ರೂ. ವಶಕ್ಕೆ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ

Crime: ತಾಯಿ ಆತ್ಮಹತ್ಯೆಗೆ ಕಾರಣನಾದ ತಂದೆಯನ್ನು ಕೊಂದ ಮಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

11-belthangady

LS Polls: ಬೆಳ್ತಂಗಡಿ ತಾಲೂಕಿನ ಉಜಿರೆಯ ಮಸ್ಟರಿಂಗ್ ಕೇಂದ್ರಕ್ಕೆ ದ.ಕ. ಜಿಲ್ಲಾಧಿಕಾರಿ ಭೇಟಿ

9-bantwala

Bantwala: ಬಾಲಕಿಯೊಂದಿಗೆ ಅನುಚಿತ ವರ್ತನೆ; ಆರೋಪಿ ವಿರುದ್ಧ ಪ್ರಕರಣ ದಾಖಲು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

1-MB

Note Ban ವೇಳೆ ಮಹಿಳೆಯರು ಮಂಗಳಸೂತ್ರ ಅಡವಿಟ್ಟಾಗ ಮೋದಿ ಮೌನ: ಭಂಡಾರಿ

Exam

Udupi; ಪಿಯುಸಿ ಪರೀಕ್ಷೆ-2 : ನಿಷೇಧಾಜ್ಞೆ ಜಾರಿ

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.