ಕುಲಶೇಖರ; ಪರ್ಯಾಯ ಹಳಿಯಲ್ಲಿ ರೈಲು ಸಂಚಾರ ಆರಂಭ

Team Udayavani, Sep 1, 2019, 5:32 AM IST

ಮಂಗಳೂರು: ಕುಲಶೇಖರದಲ್ಲಿ ರೈಲು ಹಳಿ ಮೇಲೆ ಮಣ್ಣು ಕುಸಿತವಾದ ಭಾಗದಲ್ಲಿ ಪರ್ಯಾಯವಾಗಿ ನಿರ್ಮಿಸಿರುವ 450 ಮೀ. ಉದ್ದದ ಹಳಿ ಪ್ರಯಾಣಕ್ಕೆ ಅರ್ಹವಾಗಿದೆ ಎಂದು ದಕ್ಷಿಣ ರೈಲ್ವೇ ಇಲಾಖೆಯ ಅಧಿಕಾರಿಗಳು ಶನಿವಾರ ಸಂಜೆ ಖಚಿತಪಡಿಸಿದ್ದು, ರೈಲು ಸೇವೆ ಆರಂಭಗೊಂಡಿದೆ.

ನಿಜಾಮುದ್ದೀನ್‌ (ಹೊಸದಿಲ್ಲಿ)- ಎರ್ನಾಕುಳಂ ಮಂಗಳಾ ಲಕ್ಷದ್ವೀಪ ಎಕ್ಸ್‌ಪ್ರೆಸ್‌ ನಂ. 12618 ಪ್ರಯಾಣಿಕರ ರೈಲು ಶನಿವಾರ ಸಂಜೆ ಹೊಸ ಹಳಿ ಯಲ್ಲಿ ಸಂಚರಿಸಿತು. 8 ದಿನಗಳಿಂದ ಉಂಟಾಗಿದ್ದ ಸಂಚಾರ ತೊಡಕು ಇದೀಗ ನಿವಾರಣೆಯಾಗಿದೆ.

ಪ್ರಥಮ ಹಂತದಲ್ಲಿ ಮಂಗಳೂರು ಜಂಕ್ಷನ್‌ನಿಂದ ಪಣಂಬೂರು ವರೆಗೆ ಈ ಮಾರ್ಗದಲ್ಲಿ ಸರಕು ಬೋಗಿಗಳನ್ನು ಓಡಿಸಲಾಯಿತು. ಶನಿವಾರ ಬೆಳಗ್ಗೆ ಮುಂಬಯಿ- ಮಂಗಳೂರು ಮತ್ಸ್ಯಗಂಧ ಎಕ್ಸ್‌ಪ್ರೆಸ್‌ (ನಂ.12620) ಸುರತ್ಕಲ್ ವರೆಗೆ ಬಂದು ವಾಪಸಾಗಿತ್ತು. ಮಂಗಳೂರು ಜಂಕ್ಷನ್‌ – ಮುಂಬಯಿ ಸಿಎಸ್‌ಎಂಟಿ ಎಕ್ಸ್‌ಪ್ರೆಸ್‌ (ನಂ.12134) ಪ್ರಯಾಣವೂ ಮಂಗಳೂರು ಜಂಕ್ಷನ್‌, ಸುರತ್ಕಲ್ ನಡುವೆ ರದ್ದುಗೊಂಡಿತ್ತು. ಈ ಮಧ್ಯೆ ಎರಡೂ ಭಾಗಗಳಿಂದ ಪ್ರಯಾಣಿಸುವ ಕುರ್ಲಾ- ತಿರುವನಂತಪುರ ಎಕ್ಸ್‌ಪ್ರೆಸ್‌ಗಳ ಸುಮಾರು 2,000ದಷ್ಟು ಪ್ರಯಾಣಿಕರ ಸಂಪರ್ಕಕ್ಕಾಗಿ 30 ಬಸ್‌ಗಳ ಸೇವೆಯನ್ನು ಕೊಂಕಣ ರೈಲ್ವೇ ವಿಭಾಗ ಮಾಡಿಕೊಟ್ಟಿತ್ತು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ