ನಾಗರಿಕರ ಹೋರಾಟಕ್ಕೆ ಜಯ: ಕೇರಳ ಗಡಿಗೆ ಬಸ್‌

Team Udayavani, Mar 5, 2021, 7:27 AM IST

ನಾಗರಿಕರ ಹೋರಾಟಕ್ಕೆ ಜಯ: ಕೇರಳ ಗಡಿಗೆ ಬಸ್‌

Buses , KERALA Border,,kannada newspaper,online kannada news

ಉಳ್ಳಾಲ: ತಲಪಾಡಿ ನಾಗರಿಕರು ಬುಧವಾರ ಟೋಲ್‌ ಎದುರು ನಡೆಸಿದ ಪ್ರತಿಭಟನೆ ಮತ್ತು ಮಾನವ ಸರಪಳಿಯ ಸಾಂಕೇತಿಕ ಹೋರಾಟಕ್ಕೆ ಜಯ ಸಿಕ್ಕಿದ್ದು, ಗುರುವಾರ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಬಸ್‌ ಮಾಲಕರು, ಹೆದ್ದಾರಿ ಪ್ರಾಧಿಕಾರ, ಟೋಲ್‌ ಅಧಿಕಾರಿಗಳು ಮತ್ತು ತಲಪಾಡಿ ನಾಗರಿಕರ ನಡುವೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚಿಸಿದ ಟೋಲ್‌ ಪಾವತಿಗೆ ಬಸ್‌ ಮಾಲಕರು ಒಪ್ಪಿದ್ದು ಶುಕ್ರವಾರದಿಂದ ತಲಪಾಡಿ ಟೋಲ್‌ ದಾಟಿ ಕೇರಳ ಗಡಿ ಭಾಗವಾದ ಮೇಲಿನ ತಲಪಾಡಿಗೆ ಖಾಸಗಿ ಬಸ್‌ ಸಂಚಾರ ಆರಂಭಗೊಳ್ಳಲಿದೆ.

ಮಂಗಳೂರಿನಿಂದ ತಲಪಾಡಿಗೆ ಸಂಚರಿಸುವ ಬಸ್‌ಗಳು ಟೋಲ್‌ ಗೇಟ್‌ ದಾಟಿ ತಲಪಾಡಿ – ಕೇರಳ ಗಡಿಯಲ್ಲಿರುವ ಮೇಲಿನ ತಲಪಾಡಿಯ ನಿಲ್ದಾಣಕ್ಕೆ ಸಂಚರಿಸಬೇಕು ಎಂದು ತಲಪಾಡಿ ನಾಗರಿಕ ಸಮಿತಿ ಆಶ್ರಯದಲ್ಲಿ ಟೋಲ್‌ ಎದುರು ಪ್ರತಿಭಟನೆ ಮತ್ತು ಬಸ್‌ಗಳನ್ನು ಟೋಲ್‌ ದಾಟಿಸಿ ಪ್ರತಿಭಟನೆ ನಡೆಸಿದ್ದರು.

ಈ ವಿಚಾರದಲ್ಲಿ ಜಿಲ್ಲಾಧಿಕಾರಿ ಕೆ.ವಿ. ರಾಜೇಂದ್ರ ನೇತೃತ್ವದಲ್ಲಿ ಗುರುವಾರ ಮಂಗಳೂರಿನ ಕದ್ರಿಯಲ್ಲಿರುವ ಮನಪಾ ವಿಭಾಗೀಯ ಕಚೇರಿಯಲ್ಲಿ ಸಭೆ ಕರೆದಿದ್ದು, ಬಸ್‌ ಮಾಲಕರು, ಹೆದ್ದಾರಿ ಪ್ರಾಧಿಕಾರ, ಟೋಲ್‌ ಅಧಿಕಾರಿಗಳು ಮತ್ತು ತಲಪಾಡಿ ನಾಗರಿಕರು ಭಾಗವಹಿಸಿದ್ದರು. ಬಸ್‌ಗಳಿಗೆ ಮಾಸಿಕ 28 ಸಾವಿರ ರೂ. ಟೋಲ್‌ ಶುಲ್ಕ ಪಾವತಿಸುವಂತೆ ಪಟ್ಟು ಹಿಡಿದಿದ್ದು, ಖಾಸಗಿ ಬಸ್‌ ಮಾಲಕರು 6 ಸಾವಿರ ರೂ.

ಪಾವತಿಸಲು ಸಿದ್ಧರಿದ್ದರು. ಬಳಿಕ ಜಿಲ್ಲಾಧಿಕಾರಿ ಮಾತನಾಡಿ ಮಾಸಿಕ 14 ಸಾವಿರ ರೂ. ಪಾವತಿಸುವಂತೆ ಬಸ್‌ ಮಾಲಕರಿಗೆ ಸೂಚಿಸಿದ್ದು ಇದಕ್ಕೆ ಟೋಲ್‌ ಅಧಿಕಾರಿಗಳು ಮತ್ತು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸಮ್ಮತಿ ಸೂಚಿಸಿದರು.

ನಾಗರಿಕರ ಪರವಾಗಿ ಜಿ.ಪಂ. ಮಾಜಿ ಸದಸ್ಯ ವಿನಯ ನಾಯ್ಕ ಮತ್ತು ಸಿದ್ಧಿಕ್‌ ತಲಪಾಡಿ ಆಹವಾಲು ಮಂಡಿಸಿದರು. ಹೆದ್ದಾರಿ ಯೋಜನಾ ಪ್ರಾಧಿಕಾರದ ನಿರ್ದೇಶಕ ಶಿಶುಮೋಹನ್‌, ಟೋಲ್‌ ಪ್ರಬಂಧಕ ಶಿವಪ್ರಸಾದ್‌ ಶೆಟ್ಟಿ, ಖಾಸಗಿ ಬಸ್‌ ಮಾಲಕರ ಸಂಘದ ಜಿಲ್ಲಾಧ್ಯಕ್ಷ ದಿಲ್‌ರಾಜ್‌ ಆಳ್ವ ಮೊದಲಾದವರಿದ್ದರು.

2 ರೂ. ಹೆಚ್ಚುವರಿ ಪ್ರಯಾಣ ದರ ;

ಟೋಲ್‌ ದಾಟಿ ಕೇರಳ ಗಡಿಗೆ ಸಂಚರಿಸುವ ಪ್ರಯಾಣಿಕರಿಗೆ ಶುಕ್ರವಾರದಿಂದ 2 ರೂ. ಹೆಚ್ಚು ಟಿಕೆಟ್‌ ದರ ನಿಗದಿಯಾಗಲಿದೆ. ತಲಪಾಡಿಯಿಂದ ತೊಕ್ಕೊಟ್ಟು ಮತ್ತು ಮಂಗಳೂರು ವರೆಗೆ ಸಂಚರಿಸುವವರಿಗೆ ಈ ದರ ಅನ್ವಯಿಸಲಿದ್ದು ಕನಿಷ್ಠ ದರದಲ್ಲಿ ಪ್ರಯಾಣಿಸುವರಿಂದ ಹೆಚ್ಚುವರಿ ದರ ವಸೂಲಿ ಮಾಡುವುದಿಲ್ಲ ಎಂದು ತಲಪಾಡಿ – ಮಂಗಳೂರು ಬಸ್‌ ಮಾಲಕರ ಸಂಘದ ಅಧ್ಯಕ್ಷ ಕರೀಂ ಉಚ್ಚಿಲ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

1

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

siddaramaiah

ಯಾವ ಸಾಧನೆಗೆ 100 ಕೋಟಿ ಲಸಿಕೆ ಸಂಭ್ರಮ? ‘ವೈಫಲ್ಯದ ವಿಶ್ವಗುರು’ ಕುಖ್ಯಾತಿಗಾಗಿಯೇ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

1-AAA

ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

ಬಂಧಿಸಲು ಹೋದ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಎಸ್ಕೇಪ್ : ಓರ್ವನ ಬಂಧನ

ಬಂಧಿಸಲು ಹೋದ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಎಸ್ಕೇಪ್ : ಓರ್ವನ ಬಂಧನ

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

21hkr1

ಜಿಲ್ಲಾದ್ಯಂತ ಬಿಸಿಯೂಟ ಕಾರ್ಯಕ್ರಮಕ್ಕೆ ಚಾಲನೆ

d news

ಮನೆಗೆ ಸಿಡಿಲು ಬಡಿದು ಮೂವರಿಗೆ ಗಾಯ

11

ನಿಯಂತ್ರಣಕ್ಕೆ ಬಾರದ ಡೆಂಘೀ-ಮಲೇರಿಯಾ

21hvr8

ಹಣ ದೋಚಲು ಸಚಿವರ ಕಿತ್ತಾಟ: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.