ವಿವಿಧೆಡೆ ಕಡಲ್ಕೊರೆತ; ಅಪಾಯದಲ್ಲಿ ಬಟ್ಟಪ್ಪಾಡಿ ಬೀಚ್‌ ರಸ್ತೆ

Team Udayavani, Jul 22, 2019, 5:00 AM IST

ಉಳ್ಳಾಲ: ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಸಮುದ್ರ ಬದಿಯ ರಸ್ತೆ ಕೊಚ್ಚಿಹೋಗುವ ಭೀತಿಯುಂಟಾಗಿದೆ.

ಉಳ್ಳಾಲ/ ಮಲ್ಪೆ/ ಬೈಂದೂರು: ಸೋಮೇಶ್ವರ ಉಚ್ಚಿಲದಲ್ಲಿ ಕಡಲ್ಕೊರೆತ ಮುಂದು ವರಿದಿದ್ದು, ಉಚ್ಚಿಲ ಬಟ್ಟಪ್ಪಾಡಿಯಲ್ಲಿ ಬೀಚ್‌ ರಸ್ತೆ ಸಮುದ್ರ ಪಾಲಾಗುವ ಭೀತಿಯಲ್ಲಿದೆ.

ಉಚ್ಚಿಲದಲ್ಲಿ ಕಡಲ್ಕೊರೆತಕ್ಕೆ ಶಾಶ್ವತ ಕಾಮಗಾರಿ ಗಾಗಿ ಬಟ್ಟಪ್ಪಾಡಿಯಲ್ಲಿ ಹಾಕಿರುವ ತಡೆದಂಡೆ ಯಿದ್ದು, ಅಲೆಗಳು ಬಟ್ಟಪ್ಪಾಡಿಯ ಇನ್ನೊಂದು ಭಾಗಕ್ಕೆ ತೀವ್ರ ಹಾನಿ ಮಾಡಿವೆ. ವಿದ್ಯುತ್‌ ಕಂಬ ಸಮುದ್ರ ಪಾಲಾಗುವ ಸಾಧ್ಯತೆಯಿಂದ ಶನಿವಾರ ಮತ್ತು ರವಿವಾರ ವಿದ್ಯುತ್‌ ನಿಲುಗಡೆ ಮಾಡಿದ್ದು, ರವಿವಾರ ನಾಲ್ಕು ಕಂಬಗಳನ್ನು ರಸ್ತೆಯ ಇನ್ನೊಂದು ಬದಿಗೆ ಹಾಕಲಾಗಿದೆ. ಮಲ್ಪೆ, ಕೋಡಿಬೆಂಗ್ರೆಯಲ್ಲಿ ಕಡಲ ಅಬ್ಬರ ತೀವ್ರವಾಗಿದೆ. ಸಮುದ್ರ ಪ್ರಕ್ಷಬ್ಧ ಗೊಂಡು, ಸಮುದ್ರದ ಅಡಿಯ ಕೆಸರು ಮೇಲೆದ್ದು ನೀರು ಕಪ್ಪು ಬಣ್ಣಕ್ಕೆ ತಿರುಗಿದೆ. ಬೈಂದೂರು ಭಾಗದಲ್ಲಿ ಎಡೆಬಿಡದೆ ಸುರಿದ ಮಳೆಗೆ ಬಾರಿ ಗಾತ್ರದ ತೆರೆಗಳು ಏಳುತ್ತಿವೆ. ನಾಳೆ ಕೂಡ ಕಡಲ ಅಬ್ಬರವಿರಲಿದೆ ಎಂದು ಮೀನುಗಾರರು ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ