ಕಾರು ಅಪಘಾತ: ಯುವ ಉದ್ಯಮಿ ಸಾವು

Team Udayavani, May 6, 2017, 3:41 PM IST

ಉಳ್ಳಾಲ: ಬೋಳಿಯಾರ್‌ ಪಡೀಲು ಬಳಿ ಶುಕ್ರವಾರ ಬೆಳಗಿನ ಜಾವ ಸಂಭವಿಸಿದ ಕಾರು ಅಪಘಾತದಲ್ಲಿ ಮಂಜೇಶ್ವರ ಕಡಂಬಾರಿನ ಯುವ ಉದ್ಯಮಿ ಮೃತಪಟ್ಟಿದ್ದು, ಇನ್ನೊರ್ವ ಗಂಭೀರ ಗಾಯಗೊಂಡಿದ್ದಾರೆ.

ಮಂಜೇಶ್ವರದ  ಕಡಂಬಾರು ಇಡಿಯ ನಿವಾಸಿ ಯೂಸುಫ್‌ (38) ಸಾವನ್ನಪ್ಪಿದವರು.ಅವರ ಜತೆಗಿದ್ದ  ಮಚ್ಚಂಪಾಡಿ ನಿವಾಸಿ ಖಲೀಲ್‌ ಬಜಾಲ್‌ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಘಟನೆಯ ವಿವರ: ಯೂಸುಫ್‌ ಅವರ ಸಹೋದರ ಹನೀಫ್‌ ಅವರ ಪುತ್ರಿಯ ಮದುವೆ ಮೇ 6ರಂದು ನಿಗದಿಯಾಗಿದ್ದು, ಉಪ್ಪಿನಂಗಡಿ ಯಲ್ಲಿರುವ ಸಂಬಂಧಿಗಳಿಗೆ ಆಮಂತ್ರಣ ಪತ್ರ ನೀಡಲೆಂದು ಯೂಸುಫ್‌ ಸಂಬಂಧಿ ಖಲೀಲ್‌ ಜತೆ ತೆರಳುತ್ತಿದ್ದಾಗ ಕಾರು ಹೊಂಡಕ್ಕೆ ಉರುಳಿ ಮರಕ್ಕೆ ಢಿಕ್ಕಿ ಹೊಡೆಯಿತು. ಯೂಸುಫ್‌ ಮತ್ತು ಖಲೀಲ್‌  ಗಂಭೀರ ಗಾಯಗೊಂಡಿದ್ದರು. ಇಬ್ಬರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದು, ದಾರಿ ಮಧ್ಯೆಯೇ ಯೂಸುಫ್‌ ಸಾವನ್ನಪ್ಪಿದರು. ಯೂಸುಫ್‌  ಮಡಿಕೇರಿಯ ಕುಶಾಲನಗರದಲ್ಲಿ  ಹೊಟೇಲ್‌ ಹಾಗೂ ವಸತಿಗೃಹವನ್ನು ನಡೆಸುತ್ತಿದ್ದರು.  ಮೃತರು  ತಾಯಿ, ಪತ್ನಿ, ಮೂವರು ಪುತ್ರಿಯರನ್ನು ಅಗಲಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ