ನಿಯಂತ್ರಣ ತಪ್ಪಿದ ಕಾರು ಪಲ್ಟಿ
Team Udayavani, Feb 12, 2019, 4:01 AM IST
ಮೂಲ್ಕಿ: ಕಾರ್ನಾಡು ಬೈಪಾಸ್ ಬಳಿಯ ಗುಂಡಾಲು ಗುತ್ತು ಸಮೀಪದ ಹೆದ್ದಾರಿಯಲ್ಲಿ ಬ್ರೇಜಾ ಕಾರೊಂದು ಚಾಲಕನ ಹತೋಟಿ ತಪ್ಪಿ ಕಾರು ಹೆದ್ದಾರಿ ಪಕ್ಕದ ಅಲ್ಯುಮಿನಿಯಂ ಗಾರ್ಡ್ಗೆ ಢಿಕ್ಕಿ ಹೊಡೆದು, ಸುಮಾರು 20 ಅಡಿ ಆಳಕ್ಕೆ ಉರುಳಿ ಬಿದ್ದಿದೆ.
ಚಾಲಕನಿಗೆ ತಲೆಸುತ್ತು ಬಂದಿದ್ದು ಅಪಘಾತಕ್ಕೆ ಕಾರಣ ಎನ್ನಲಾಗಿದೆ.ಕಾರಿನಲ್ಲಿ ಓರ್ವ ವೃದ್ಧೆ, ಗರ್ಭಿಣಿ ಹಾಗೂ ಚಾಲಕ ಪ್ರಯಾಣಿಸುತ್ತಿದ್ದರು. ಎದುರಿನ ಸೀಟಿನಲ್ಲಿದ್ದ ಗರ್ಭಿಣಿ ಮತ್ತು ಚಾಲಕ ಸೀಟು ಬೆಲ್ಟ್ ಧರಿಸಿದ್ದರಿಂದ ಗಂಭೀರ ಪ್ರಮಾಣದ ಗಾಯಗಳಾಗಿಲ್ಲ ಎಂದು ತಿಳಿದು ಬಂದಿದೆ. ಹಿಂಬದಿಯಲ್ಲಿದ್ದ ವೃದ್ಧೆಯೂ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಇವರೆಲ್ಲರೂ ಕಟಪಾಡಿ ಸಮೀಪದ ಒಂದೇ ಕುಟುಂಬದವರಾಗಿದ್ದು, ಉಡುಪಿ ಕಡೆಗೆ ಸಂಚರಿಸುತ್ತಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ