ದಾರಂದಕುಕ್ಕು -ಕೋಡಿಂಬಾಡಿ ಮಧ್ಯೆಯ ರಸ್ತೆಯಲ್ಲಿ ಹೊಂಡಗಳದ್ದೇ ಕಾರುಬಾರು

Team Udayavani, Jul 16, 2017, 4:00 AM IST

1507rjh1.gif

ನಗರ : ಪುತ್ತೂರು -ಉಪ್ಪಿನಂಗಡಿ ರಸ್ತೆ ವಿಸ್ತರಣೆಗೊಳ್ಳುವ ಹಂತದಲ್ಲಿದ್ದರೂ ಇದೀಗ ಹೊಂಡಗಳಿಂದ ತುಂಬಿ ವಾಹನ ಚಾಲಕರು ಹರಸಾಹಸ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯ ದಾರಂದಕುಕ್ಕುವಿನಿಂದ ಕೋಡಿಂಬಾಡಿ ಗ್ರಾ. ಪಂ. ತನಕ ನಾದುರಸ್ತಿಯಲ್ಲಿದ್ದು, ಸಂಚಾರ ಕಷ್ಟಕರವಾಗಿದೆ. 

ಪ್ರತಿದಿನ ಸಾವಿರಾರು ವಾಹನಗಳು ಓಡಾಡುವ ಲೊಕೋಪಯೋಗಿ ಇಲಾಖೆಯ ವ್ಯಾಪ್ತಿ ಸೇರಿದ ಈ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 4.20 ಕೋಟಿ ರೂ. ಬಿಡುಗಡೆಯಾಗಿ, ಟೆಂಡರ್‌ ಕರೆಯಲಾಗಿದೆ. ಆಗಸ್ಟ್‌ ತಿಂಗಳ ಕೊನೆಗೆ ಈ ಕಾಮಗಾರಿ ಆರಂಭವಾಗಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಆದರೆ ಅಲ್ಲಿಯವರೆಗೆ ಈ ಹೊಂಡಗಳಿಂದ ಸಾರ್ವಜನಿಕರನ್ನು ರಕ್ಷಿಸಲು ಇಲಾಖೆ ಮುಂದಾಗಬೇಕಿದೆ.

ಚರಂಡಿಯೇ ಇಲ್ಲ
ಈ ರಸ್ತೆಯ ಮತ್ತೂಂದು ಮುಖ್ಯ ಸಮಸ್ಯೆ ಎಂದರೆ ಪುತ್ತೂರಿನಿಂದ ಉಪ್ಪಿನಂಗಡಿ ವರೆಗೆ ಚರಂಡಿಗಳೇ ಸಮರ್ಪಕವಾಗಿಲ್ಲ. ಮಳೆ ಬಂದರೆ ಸಾಕು ರಸ್ತೆಯ ಬದಿಯಲ್ಲಿ ಹರಿಯಬೇಕಾದ ನೀರು ರಸ್ತೆಯಲ್ಲಿಯೇ ಹರಿಯು ತದೆ. ಚರಂಡಿ ಅವ್ಯವಸ್ಥೆ ಅಲ್ಪ ಸರಿಯಾಗಿರುವ ರಸ್ತೆಯನ್ನೂ  ಹಾಳುಗೆಡವುತ್ತಿದೆ.

ಮಧ್ಯೆ ಸಮಸ್ಯೆ
ಪುತ್ತೂರು -ಉಪ್ಪಿನಂಗಡಿ ರಸ್ತೆಯಲ್ಲಿ ಪುತ್ತೂರಿನಿಂದ ದಾರಂದಕುಕ್ಕು ರಸ್ತೆಯ ಭಾಗ ಉತ್ತಮವಾಗಿದೆ. ಹಾಗೆಯೇ ಕೋಡಿಂಬಾಡಿಯಿಂದ ಉಪ್ಪಿನಂಗಡಿ ವರೆಗಿನ ರಸ್ತೆಯ ಸ್ಥಿತಿಯೂ ಚೆನ್ನಾಗಿದೆ. ದಾರಂದಕುಕ್ಕುನಿಂದ ಕೋಡಿಂಬಾಡಿ ವರೆಗಿನ ಸುಮಾರು 2 ಕಿ.ಮೀ. ದೂರ ರಸ್ತೆಯಲ್ಲೂ ಸಮರ್ಪಕವಾದ ಚರಂಡಿಗಳಿಲ್ಲ. ಮಳೆ ನೀರು ರಸ್ತೆಯಲ್ಲಿಯೇ ಹರಿದು ಹೊಂಡಗಳು ನಿರ್ಮಾಣವಾದ ಪರಿಣಾಮ ಚಾಲಕರಿಗೆ ಇದೀಗ ತೊಂದರೆಯಾಗುತ್ತಿದೆ.

ಈ ಅಭಿವೃದ್ಧಿಯಾಗದೇ ಉಳಿದ ರಸ್ತೆ ವಿಸ್ತರಣೆಗೆ ಕಾಯುತ್ತಿದೆ. ಸರಕಾರ ದಿಂದ ಹಣವೂ ಬಂದಿದೆ. ಆದರೆ ಕಾಮಗಾರಿ ನಡೆಯ ಬೇಕಾದರೆ ಮಳೆ ಗಾಲ ಮುಗಿಯಬೇಕು. ಅಲ್ಲಿವರೆಗೆ ಹೊಂಡಗಳಿಂದ ಈ ಭಾಗದ ಪ್ರಯಾಣಿ ಕರನ್ನು ರಕ್ಷಿಸಲು ಅಗತ್ಯ ಕೆಲಸ ನಡೆಯಬೇಕಾಗಿದೆ. 

ಒಟ್ಟು  ಪುತ್ತೂರು -ಉಪ್ಪಿನಂಗಡಿವರೆ ಗಿನ ಈ ರಸ್ತೆಯ ಎಲ್ಲಿಯೂ ಚರಂಡಿ ಸರಿಯಾಗಿಲ್ಲ. ಡಾಮರು ಅಂಚಿನಲ್ಲಿಯೇ ಮಳೆ ನೀರು ಹರಿದುಹೋಗುತ್ತಿದೆ. ಪರಿಣಾಮ ರಸ್ತೆ ಮತ್ತೆ ಹಾಳಾಗುವ ಸ್ಥಿತಿ ಉಂಟಾಗುತ್ತಿದೆ. ಈಗಾಗಲೇ ಅಭಿವೃದ್ಧಿ ಯಾಗಿರುವ ರಸ್ತೆಯ ಅಂಚಿನಲ್ಲಿ ಮಣ್ಣು ಹಾಕಲಾಗಿದ್ದು, ಇದರಲ್ಲಿಯೇ ವಾಹನಗಳು ಸಂಚರಿಸಿದಾಗ ಅಲ್ಲಿಯೇ ಚರಂಡಿ ನಿರ್ಮಾಣವಾಗುತ್ತಿದೆ. ಇನ್ನಾ ದರೂ ಲೋಕೋಪಯೋಗಿ ಇಲಾಖೆ ಇತ್ತ ಕಡೆಗೆ ದೃಷ್ಟಿ ಹರಿಸಲಿ.

ಕೊಂಡ ಮುಚ್ಚಲು ಕ್ರಮ
ಪುತ್ತೂರು ಉಪ್ಪಿನಂಗಡಿ ರಸ್ತೆಯಲ್ಲಿ ಅಭಿವೃದ್ಧಿಯಾಗದೆ ಬಾಕಿಯಾಗಿರುವ ಕಡೆ ರಸ್ತೆಯ ವಿಸ್ತರಣೆಗಾಗಿ ಈಗಾಗಲೇ 4.20 ಕೋಟಿ ರೂ. ಬಿಡುಗಡೆಯಾಗಿ ಟೆಂಡರ್‌ ಪ್ರಕ್ರಿಯೆ ಹಂತದಲ್ಲಿದೆ. ಆಗಸ್ಟ್‌ ತಿಂಗಳ ಅಂತ್ಯದೊಳಗೆ ಕಾಮಗಾರಿ ಆರಂಭವಾಗಲಿದೆ. ಇದೀಗ ವಾಹನ ಚಾಲಕರಿಗೆ ಸಮಸ್ಯೆಯಾಗಿರುವ ರಸ್ತೆಯಲ್ಲಿನ ಹೊಂಡಗಳನ್ನು ಮುಚ್ಚುವ ಕೆಲಸಕ್ಕೆ ತತ್‌ಕ್ಷಣ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ. ರಸ್ತೆಯ ಬದಿಯ ಚರಂಡಿ ವ್ಯವಸ್ಥೆಗೆ ಸರಿಪಡಿಸಲು ಕ್ರಮ ಕೈಗೊಳ್ಳುವ ಕೆಲಸಕ್ಕೂ ಅಧಿಕಾರಿಗಳಿಗೆ ಸೂಚಿಸುತ್ತೇನೆ
– ಶಕುಂತಳಾ ಟಿ. ಶೆಟ್ಟಿ
ಶಾಸಕರು, ಪುತ್ತೂರು

ಟಾಪ್ ನ್ಯೂಸ್

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Bangalore south Lok Sabha Constituency:ಸುಶಿಕ್ಷಿತರ ಕ್ಷೇತ್ರದಲ್ಲಿ ಸೂರ್ಯ ಸೌಮ್ಯಾ ಕದನ

Stones Pelted: ಪಶ್ಚಿಮ ಬಂಗಾಳ: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

Gadag Incident; ದರೋಡೆಯ ಉದ್ದೇಶವಿಲ್ಲ; ಕೊಲೆ ಮಾಡಲೆಂದೆ ಬಂದಿದ್ದಾರೆ; ಐಜಿಪಿ ಹೇಳಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

7-bng

Bengaluru: ರೈಲಿಗೆ ಸಿಲುಕಿ ವೈದ್ಯ, ಸ್ಟಾಫ್ ನರ್ಸ್‌ ಆತ್ಮಹತ್ಯೆ

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

Udupi: ಟಿಪ್ಪರ್ – ಬೈಕ್ ನಡುವೆ ಭೀಕರ ಅಪಘಾತ; ಬೈಕ್ ಸವಾರ ಸ್ಥಳದಲ್ಲೇ ಸಾವು

6-bng-crime

Bengaluru Crime: ಅಕ್ರಮ ಸಂಬಂಧ ಜೋಡಿ ಕೊಲೆಯಲ್ಲಿ ಅಂತ್ಯ

ಬೊಮ್ಮಾಯಿ

Hubli; ಕಾನೂನು ವ್ಯವಸ್ಥೆ ಹೀಗೆ ಮುಂದುವರಿದರೆ ರಾಜ್ಯ ಬಿಹಾರವಾಗುತ್ತದೆ: ಬಸವರಾಜ ಬೊಮ್ಮಾಯಿ

O2

O2: ತೆರೆಗೆ ಬಂತು ಓ2; ಚಿತ್ರದ ಮೇಲೆ ಆಶಿಕಾ ನಿರೀಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.