ಮಕ್ಕಳ ಹಕ್ಕುಗಳ ಗ್ರಾಮಸಭೆ


Team Udayavani, Dec 21, 2017, 12:24 PM IST

21-Dec-6.jpg

ಹಳೆಯಂಗಡಿ: ಅಂಗನವಾಡಿ ಕೇಂದ್ರದ ಮಕ್ಕಳಿಗೆ ಮಾತ್ರ ಯಾಕೆ ಹಾಲು ಮತ್ತು ಮೊಟ್ಟೆಯನ್ನು ಕೊಡುತ್ತಾರೆ ನಮಗೆ ಯಾಕೆ ಕೊಡುವುದಿಲ್ಲ, ನಾವು ಮಕ್ಕಳಲ್ಲವೇ ಎಂದು ಹಳೆಯಂಗಡಿ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ಮಕ್ಕಳು ಆಗ್ರಹಿಸಿದರು.

ಹಳೆಯಂಗಡಿ ಶ್ರೀ ನಾರಾಯಣ ಸನಿಲ್‌ ಪದವಿ ಪೂರ್ವ ಕಾಲೇಜಿನಲ್ಲಿ ಡಿ.20ರಂದು ನಡೆದ ಪಂಚಾಯತ್‌ ವ್ಯಾಪ್ತಿಯ ಶಾಲಾ ಮಕ್ಕಳ ಹಕ್ಕುಗಳ ಗ್ರಾಮ ಸಭೆಯಲ್ಲಿ ನಾರಾಯಣ ಸನಿಲ್‌ ಪ್ರೌಢಶಾಲೆಯ ವಿದ್ಯಾರ್ಥಿ ಮಹಮ್ಮದ್‌ ಶಿಯಾನ್‌ ಪ್ರಶ್ನಿಸಿ, ನಮ್ಮದು ಸಹ ಸರಕಾರಿ ಶಾಲೆಯಾಗಿದೆ. ನಮಗೂ ಹಾಲು, ಮೊಟ್ಟೆ ಬೇಕು ಎಂದು ಆಗ್ರಹಿಸಿದಾಗ ಸಭೆಯಲ್ಲಿನ ಮಕ್ಕಳಲ್ಲೂ ಸಂಚಲನ ಮೂಡಿತಲ್ಲದೇ ಚಪ್ಪಾಳೆ ಮೂಲಕ ಬೆಂಬಲ ವ್ಯಕ್ತಪಡಿಸಿದರು.

ಫಲಕ ಬೇಕು ಎಂದು ಸಸಿಹಿತ್ಲು ಶಾಲೆಯ ಪೂಜಾ ಆಗ್ರಹಿಸಿದರು. ನಾರಾಯಣ ಸನಿಲ್‌ ಪ್ರೌಢಶಾಲೆಯಲ್ಲಿ ಶೌಚಾಲಯ ಹೆಚ್ಚಬೇಕು ಎಂದು ಪ್ರಣಿತ್‌ ಕೇಳಿಕೊಂಡರೇ, ಯುಬಿಎಂಸಿ ಶಾಲೆಯ ಶೌಚಾಲಯದ ಛಾವಣಿ ಸರಿಯಿಲ್ಲ ಎಂದು ವಿದ್ಯಾ ದೂರಿಕೊಂಡರು. ಆಟದ ಮೈದಾನ ಸಮತಟ್ಟಿಲ್ಲ, ಶಾಲೆಗೆ ಆವರಣ ಗೋಡೆ ಬೇಕು ಎಂದು ನಾರಾಯಣ ಸನಿಲ್‌ ಶಾಲೆಯ ಸುಶ್ಮಿತ್‌ ಹೇಳಿದರು.

ಶ್ರೀ ನಾರಾಯಣ ಸನಿಲ್‌ ಪ.ಪೂ. ಕಾಲೇಜಿನ ವಿದ್ಯಾರ್ಥಿ ಬಶೀರ್‌ ಅಧ್ಯಕ್ಷತೆ ವಹಿಸಿದ್ದರು. ಪ್ರೌಢಶಾಲೆಯ ಮನ್ವಿತ್‌,
ಹಳೆಯಂಗಡಿ ಯುಬಿಎಂಸಿ ಶಾಲೆಯ ಸಪ್ತಮಿ, ಸಿಎಸ್‌ಐ ಶಾಲೆಯ ರಕ್ಷಣ್‌, ಸಸಿಹಿತ್ಲು ಇದಕ್ಕೆ ಪ್ರತಿಕ್ರಿಯಿಸಿದ ಅಂಗನವಾಡಿ ಕೇಂದ್ರದ ಮೇಲ್ವಿಚಾರಕಿ ಶೀಲಾವತಿ, ಈ ಬೇಡಿಕೆಯನ್ನು ಶಿಕ್ಷಣ ಇಲಾಖೆಗೆ ತಲುಪಿಸಲಾಗುವುದು ಎಂದರು.

ಸೂಚನ ಫ‌ಲಕ ಅಳವಡಿಸಿ
ಶಾಲಾ ವಠಾರದಲ್ಲಿ ಸೂಚನ ಶಾಲೆಯ ಕಾರ್ತಿಕ್‌, ಹಳೆಯಂಗಡಿ ಗ್ರಾ.ಪಂ. ಅಧ್ಯಕ್ಷೆ ಜಲಜಾ, ಉಪಾಧ್ಯಕ್ಷೆ ಪದ್ಮಾವತಿ ಶೆಟ್ಟಿ, ಕಾರ್ಯದರ್ಶಿ ಕೇಶವ ದೇವಾಡಿಗ, ಅಂಗನವಾಡಿ ಮೇಲ್ವಿಚಾರಕಿ ಶೀಲಾವತಿ, ಆರೋಗ್ಯ ಇಲಾಖೆಯ ಪ್ರದೀಪ್‌ ಕುಮಾರ್‌, ಸಿ.ಆರ್‌.ಪಿ. ಕುಸುಮಾ, ಮುಖ್ಯ ಶಿಕ್ಷಕ ಮೈಕಲ್‌ ಡಿ’ಸೋಜಾ, ಪ್ರಾಂಶುಪಾಲೆ ಜಯಶ್ರೀ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಶ್ರೀ ನಾರಾಯಣ ಸನಿಲ್‌ ಪದವಿ ಪೂರ್ವ ಕಾಲೇಜಿನ ಅಶ್ವಿ‌ನ್‌ ಸ್ವಾಗತಿಸಿದರು. ದೀಪ್ತಿ ವಂದಿಸಿದರು. ನಮಿತಾ ನಿರೂಪಿಸಿದರು.

ಮಕ್ಕಳಿಂದ ಕೇಳಿ ಬಂದ ದೂರು-ದುಮ್ಮಾನ 
ಉಡುಪಿ/ಮಂಗಳೂರು ಕಡೆಗಳಲ್ಲಿ ಸಂಚರಿಸುವ ಲೋಕಲ್‌ ಬಸ್‌ಗಳು ಶಾಲಾ ಮುಂಭಾಗದಲ್ಲಿ ನಿಲ್ಲುವುದೇ ಇಲ್ಲ. ಬಸ್‌ ತಂಗುದಾಣ ಅಗತ್ಯವಾಗಿ ಬೇಕಾಗಿದೆ. ಇಲ್ಲದಿದ್ದಲ್ಲಿ ಒಂದು ಕಿ.ಮೀ. ನಡೆಯಬೇಕು.
  ನಿಶ್ಮಿತಾ,
  ನಾರಾಯಣ ಸನಿಲ್‌ ಪ.ಪೂ. ಕಾಲೇಜು.

ಶಾಲೆಯ ಬಾವಿಯಿಂದ ನೀರು ಎಳೆಯಲು ಕಷ್ಟವಾಗುತ್ತದೆ. ಟಾಂಕಿಗೆ ನೀರು ಸುರಿಯದ ಕಾರಣ ಶಾಲೆಯಲ್ಲಿ ನೀರಿನ ಸಮಸ್ಯೆ ಕಾಡಿದೆ.
ವಿದ್ಯಾ, ಯುಬಿಎಂಸಿ ಶಾಲೆ.

ಶಾಲಾ ಮೈದಾನಕ್ಕೆ ಅಕ್ರಮವಾಗಿ ಪ್ರವೇಶಿಸುತ್ತಾರೆ. ಮದ್ಯಪಾನ ಮಾಡಿ,ಬಾಟಲಿ ಎಲ್ಲೆಂದರಲ್ಲಿ ಬಿಸಾಡುತ್ತಾರೆ. ಹೆಂಚುಗಳನ್ನು ಕದಿಯುತ್ತಿದ್ದಾರೆ.
 ರಜಾಕ್‌ ಮತ್ತು ನಮಿತಾ,
 ನಾರಾಯಣ ಸನಿಲ್‌

ಪ್ರೌಢಶಾಲೆಯ ಕಿಟಕಿ ಬಾಗಿಲು ಬೀಳುವ ಸ್ಥಿತಿಯಲ್ಲಿವೆ. ಭದ್ರತೆ ಇಲ್ಲ, ಕಸ, ಕಡ್ಡಿಗಳನ್ನು ಪಕ್ಕದ ನಿವಾಸಿಗಳು ಶಾಲಾ ಆವರಣಕ್ಕೆ ಬಿಸಾಡುತ್ತಾರೆ.
ಶಬ್ರಿನಾ, ಬೊಳ್ಳೂರು ಸರಕಾರಿ ಶಾಲೆ.

ಪೋಷಕರಿಲ್ಲದ ಮಕ್ಕಳ ಪಾಲನೆ, ಪೋಷಣೆಗೆ ಸರಕಾರದಿಂದ ಮಾಸಿಕ ಪೋಷಕ ಧನ ಬರುವುದು ನಿಂತಿದೆ.
ಜುನೈದ್‌, ನಾರಾಯಣ ಸನಿಲ್‌ 

ಮಕ್ಕಳ ದೂರುಗಳು ಇಲಾಖೆಗೆ
ಮಕ್ಕಳ ಗ್ರಾಮ ಸಭೆಯಲ್ಲಿ ಬಂದಂತಹ ದೂರುಗಳನ್ನು ಸಂಬಂಧಿಸಿದ ಇಲಾಖೆಗಳಿಗೆ ರವಾನಿಸಲಾಗುವುದು. ಕೆಲವೊಂದು ಖಾಸಗಿ ಅಥವಾ ಅನುದಾನಿತ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಿಗೆ ಮಾಹಿತಿ ನೀಡಿ ಕ್ರಮ ಕೈಗೊಳ್ಳಲಾಗುವುದು. ಗ್ರಾಮ ಪಂಚಾಯತ್‌ನಿಂದ ಸಾಧ್ಯವಾದಷ್ಟು ನೆರವು ನೀಡಲು ಪ್ರಯತ್ನ ನಡೆಸಲಿದ್ದೇವೆ. ಶಾಲಾ ಪರಿಸರದಲ್ಲಿನ ನಿವಾಸಿಗಳಿಗೆ ಮಕ್ಕಳ ದೂರಿನಂತೆ ನೋಟಿಸ್‌ ನೀಡುವ ಬಗ್ಗೆ ಆಡಳಿತದ ಗಮನಕ್ಕೆ ತರಲಾಗುವುದು.
 – ಅಬೂಬಕ್ಕರ್‌
   ಪಂಚಾಯತ್‌ ಅಭಿವೃದ್ಧಿ ಅಧಿಕಾರಿ.

ಮಕ್ಕಳ ಧ್ವನಿಗೆ ಪರಿಹಾರ
ಮಕ್ಕಳು ಮುಗ್ದªರಾದರೂ ಅವರಿಗೆ ಸ್ಥಳೀಯ ಸಮಸ್ಯೆಗಳ ಗ್ರಹಿಕೆ ಅತಿ ಅಗತ್ಯವಾದುದರಿಂದ ಯಾವುದೇ ಅಂಜಿಕೆ ಇಲ್ಲದೇ ಇಂದು ಮಕ್ಕಳ ಗ್ರಾಮ ಸಭೆಯಲ್ಲಿ ತಮ್ಮ ಶಾಲಾ ವಠಾರದಲ್ಲಿನ ಸಮಸ್ಯೆಗಳನ್ನು ನಿರ್ಭಯದಿಂದ ಹೇಳುತ್ತಿದ್ದಾರೆ. ಮಕ್ಕಳ ಗ್ರಾಮ ಸಭೆಯಲ್ಲಿನ ಅವರ ಧ್ವನಿಗೆ ಪಂಚಾಯತ್‌ ಸದಸ್ಯರು ಉಪಸ್ಥಿತರಿದ್ದು, ವಿಶೇಷ ಗಮನ ಹರಿಸಬೇಕು. ಅವರ ಹಕ್ಕುಗಳಿಗೆ ಆಸರೆಯಾಗಬೇಕು.
ನಂದಾ ಪಾಯಸ್‌
ಶಿಕ್ಷಣ ಸಂಪನ್ಮೂಲ ಇಲಾಖೆ

ಟಾಪ್ ನ್ಯೂಸ್

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

Surjewala

BJP ಎಂದರೆ ಹೊಸ ಈಸ್ಟ್ ಇಂಡಿಯಾ ಕಂಪೆನಿ: ಸುರ್ಜೇವಾಲಾ ಕಿಡಿ

Kharge (2)

Kalaburagi; ಸತ್ತಾಗ ಮಣ್ಣಿಗಾದರೂ ಬನ್ನಿ: ಭಾವನಾತ್ಮಕವಾಗಿ ಮತಯಾಚಿಸಿದ ಖರ್ಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wewqwqe

Pilikula; ಎ. 29, ಮೇ ತಿಂಗಳ ಎಲ್ಲ ಸೋಮವಾರವೂ ಪಿಲಿಕುಳ ಮುಕ್ತ

1-qqwqe

Janardhana Poojary; ನನ್ನ ಜೀವಿತಾವಧಿಯಲ್ಲಿಯೇ ಶಿಷ್ಯ ಪದ್ಮರಾಜ್‌ ಗೆಲುವು ಕಾಣುವಾಸೆ..

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

Mangalore University; ಪದವಿಗೆ ಸೇರಲು 4 ತಿಂಗಳು ಕಾಯಬೇಕು!

6-court

Mangaluru: ಬಾಲಕಿಯನ್ನು ಅಪಹರಿಸಿ ಅತ್ಯಾಚಾರ; ಅಪರಾಧಿಗೆ 10 ವರ್ಷ ಕಠಿನ ಕಾರಾಗೃಹ ಶಿಕ್ಷೆ

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

Dakshina Kannada ಲೋಕಸಭಾ ಕ್ಷೇತ್ರ: ಚುನಾವಣೆಗೆ ಸಂಪೂರ್ಣ ಸಜ್ಜು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

18-uv-fusion

Clay Pot: ಬಡವರ ಫ್ರಿಡ್ಜ್ ಮಣ್ಣಿನ ಮಡಕೆ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

ಗುಡುಗು-ಸಿಡಿಲು: ಈ ಪ್ರಮುಖ ಮುನ್ನೆಚ್ಚರಿಕೆ ಗಮನದಲ್ಲಿರಲಿ…ಜಿಲ್ಲಾಧಿಕಾರಿ ಗಂಗೂಬಾಯಿ

17-uv-fusion

UV Fusion: ನಿನ್ನೊಳಗೆ ನೀ ಇರುವಾಗ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.