- Friday 06 Dec 2019
‘ಕ್ರಿಸ್ಮಸ್ ಶಾಂತಿ, ಸಹಬಾಳ್ವೆಯ ಬದುಕಿಗೆ ಪ್ರಚೋದನೆಯಾಗಲಿ’
Team Udayavani, Dec 25, 2018, 1:30 AM IST
ಕೊಕ್ಕಡ: ಸುಮಾರು 2,000 ವರ್ಷಗಳ ಹಿಂದೆ ಸರಳ ಜೀವನಕ್ಕೆ ಬಹುದೊಡ್ಡ ಮಾದರಿಯಾಗಿ ಹಟ್ಟಿಯಲ್ಲಿ ಹುಟ್ಟಿ ಮನುಕುಲದ ಉದ್ಧಾರಕ್ಕೆ ಆಗಮಿಸಿದ ಪ್ರಭು ಯೇಸುಕ್ರಿಸ್ತರ ಜನನದ ಆಚರಣೆಯೇ ಕ್ರಿಸ್ಮಸ್. ಸಿಹಿ ಹಂಚುತ್ತಾ ಮನೆ ಮನೆಗೆ ತಿರುಗುವ ಸಾಂತಾಕ್ಲಾಸ್ ಪ್ರೀತಿಯ ಸಂಕೇತ. ಹಬ್ಬಗಳೆಂದರೆ ಬರೇ ಆಡಂಬರಗಳೇ ಆಗದೆ ಪ್ರೀತಿ ಸಂತೋಷಗಳನ್ನು ಹಂಚುವಂತಾಗಲಿ. ಕ್ರಿಸ್ಮಸ್ ಶಾಂತಿ ಸಹಬಾಳ್ವೆಯ – ಪ್ರೀತಿ, ಸಂತೋಷದ ಬದುಕಿಗೆ ಪ್ರಚೋದನೆಯಾಗಲಿ ಎಂದು ಮಲಂಕರ ಕ್ಯಾಥೋಲಿಕ್ ಪುತ್ತೂರು ಧರ್ಮ ಪ್ರಾಂತ್ಯದ ವಿಕಾರ್ ಜನರಲ್ ವಂ| ಡಾ| ಎಲ್ದೋ ಪುತ್ತನ್‌ಕಂಡತ್ತಿಲ್ ಹೇಳಿದರು. ಬೆಥನಿ ಸಮೂಹ ಸಂಸ್ಥೆಗಳಾದ ಜ್ಞಾನೋದಯ ಪದವಿಪೂರ್ವ ಕಾಲೇಜು, ಎಸ್.ಬಿ. ಕಾಲೇಜು ನೆಲ್ಯಾಡಿ, ಬೆಥನಿ ಕೈಗಾರಿಕಾ ತರಬೇತಿ ಸಂಸ್ಥೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಶುಕ್ರವಾರ ನೆಲ್ಯಾಡಿ ಬೆಥನಿಯ ಸಿಲ್ವರ್ ಜೂಬಿಲಿ ಆಡಿಟೋರಿಯಂನಲ್ಲಿ ನಡೆದ ಕಿಸ್ಮಸ್ ಆಚರಣೆ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಸಂಚಾಲಕ ವಂ| ಡಾ| ವರ್ಗೀಸ್ ಕೈಪನಡುಕ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಮೇರಿಕನ್ ಲೀಡರ್‌ಶಿಪ್ ಬೋರ್ಡಿಂದ ಸಮ್ಮಾನಿಲ್ಪಟ್ಟ ಸಂಸ್ಥೆಯ ಸಂಚಾಲಕರಾದ ವಂ| ಡಾ| ವರ್ಗೀಸ್ ಕೈಪನಡುಕ್ಕ ಅವರನ್ನು ನೆಲ್ಯಾಡಿ ಗ್ರಾ.ಪಂ. ವತಿಯಿಂದ ಅಭಿನಂದಿಸಲಾಯಿತು. ಸಂಸ್ಥೆಯ ಬರ್ಸಾರ್ ವಂ| ಐಸಕ್ ಸ್ಯಾಮುವೇಲ್ ಒಐಸಿ, ನೆಲ್ಯಾಡಿ ಗ್ರಾ.ಪಂ. ಸದಸ್ಯ, ಕೆ.ಪಿ. ಆಬ್ರಹಾಂ, ಬೆಥನಿ ಕೈಗಾರಿಕಾ ತರಬೇತಿ ಕೇಂದ್ರದ ಪ್ರಾಚಾರ್ಯ ಸಜಿ ಕೆ. ತೋಮಸ್ ಕ್ರಿಸ್ಮಸ್, ಸಾಂತಾಕ್ಲಾಸ್ ವೇಷಧಾರಿ ವಿದ್ಯಾರ್ಥಿ ನಿಖಿಲ್ ಉಪಸ್ಥತ ರಿದ್ದು ಶುಭ ಹಾರೈಸಿದರು.
ಮಕ್ಕಳಿಂದ ವಿವಿಧ ಮನರಂಜನ ಕಾರ್ಯಕ್ರಮಗಳು ನಡೆದವು. ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಐಟಿಐ ವಿದ್ಯಾರ್ಥಿ ಸುಕೃತ್ ಸ್ವಾಗತಿಸಿ, ದಿವ್ಯಾ ಎಂ.ವಿ. ವಂದಿಸಿ, ಕುಮಾರಿ ಆಪ್ತ ಶೆಟ್ಟಿ ಮತ್ತು ತಂಡದವರು ಪೂಜಾನೃತ್ಯಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಒಂದಾಗಿ ಬಾಳೋಣ
ಕಾರ್ಯಕ್ರಮದಲ್ಲಿ ನೆಲ್ಯಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ಗಂಗಾಧರ ಶೆಟ್ಟಿ ಹೊಸಮನೆ ಮಾತನಾಡಿ, ಭಗವಾನ್ ಶ್ರೀಕೃಷ್ಣ ಹಾಗೂ ಪ್ರಭು ಯೇಸು ಕ್ರಿಸ್ತರ ಜನನ ಪೂರ್ವನಿರ್ಧಾರದಂತೆ ಆಗಿದೆ. ಧರ್ಮ ಸಂಸ್ಥಾಪನೆಯೇ ಇವರಿಬ್ಬರ ಜನನದ ಉದ್ದೇಶ. ಇಂತಹ ಆಚರಣೆಗಳಿಂದ ಯಾವುದೇ ಜಾತಿ, ಮತ, ಧರ್ಮ ಬೇಧವಿಲ್ಲದೆ ಎಲ್ಲರೂ ಒಂದಾಗಿ ಪ್ರೀತಿ ಶಾಂತಿ ನೆಮ್ಮದಿಯಿಂದ ಬಾಳೋಣ ಎಂದರು.
ಈ ವಿಭಾಗದಿಂದ ಇನ್ನಷ್ಟು
-
ಸುಬ್ರಹ್ಮಣ್ಯ : ಮಲೆನಾಡು ಭಾಗದಲ್ಲಿ ರೈತರ ಬೆಳೆ ನಾಶ ಮಾಡಿ ಆರ್ಥಿಕ ಸಂಕಷ್ಟ ತಂದೊಡ್ಡುವ ಮಂಗಗಳ ಹಾವಳಿ ಬೇಸಿಗೆ ಆರಂಭದಲ್ಲೆ ಯಥೇತ್ಛವಾಗಿ ಕಾಡುತ್ತಿದೆ. ರೈತರ...
-
ಕಡಬ : ಕಡಬ ಗ್ರಾ.ಪಂ. ವ್ಯಾಪ್ತಿಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ರಸ್ತೆ ಪರಂಬೋಕು ಸ್ಥಳಗಳಲ್ಲಿ ಗ್ರಾ.ಪಂ. ಅನುಮತಿ ಪಡೆಯದೆ ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗುವ...
-
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
-
ಅರಂತೋಡು: ಪೆರಾಜೆ- ಅಮಚೂರು- ತೊಡಿಕಾನ ಸಂಪರ್ಕ ರಸ್ತೆ ತುಂಬಾ ಕಿರಿದಾಗಿದ್ದು, ಈಗ ನಾದುರಸ್ತಿಯಲ್ಲಿದೆ. ವಾಹನ ಸಂಚಾರಕ್ಕೆ ತೊಡಕಾಗುತ್ತಿದೆ. ಈ ರಸ್ತೆಯನ್ನು...
-
ತೆಂಕಿಲ: ಇಲ್ಲಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ನೇತೃತ್ವದಲ್ಲಿ ಲಘು ಉದ್ಯೋಗ ಭಾರತಿ ಹಾಗೂ ಕ್ಯಾಂಪ್ಕೋ ಆಶ್ರಯದಲ್ಲಿ ತೆಂಕಿಲದ ವಿವೇಕಾನಂದ ಆಂಗ್ಲ ಮಾಧ್ಯಮ...
ಹೊಸ ಸೇರ್ಪಡೆ
-
ಕುಂಬಳೆ : ಕೇರಳ ಮತ್ತು ಕರ್ನಾಟಕದ ಪ್ರಯಾಣಿಕರು ಮತ್ತು ಶಾಲಾ ಕಾಲೇಜು ವಿದ್ಯಾರ್ಥಿಗಳು ಸೇರಿ ದಿನನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಆಶ್ರಯಿಸುತ್ತಿರುವ...
-
ಕಾಸರಗೋಡು: ತಿರುವನಂತ ಪುರದ ಕಿಳಮನ್ನೂರ್ನಲ್ಲಿ ಹೂತಿದ್ದ ರಾಜ ಮುದ್ರೆಯುಳ್ಳ 2,600 ಚಿನ್ನದ ನಾಣ್ಯಗಳು ಪತ್ತೆಯಾಗಿವೆ. ಆರು ಕೋಟಿ ರೂ. ಮೊತ್ತದ ಕೇರಳ ಲಾಟರಿ ಬಂಪರ್...
-
ಹೆಬ್ರಿ: ಉಡುಪಿ ಜಿಲ್ಲೆ ವ್ಯಾಪ್ತಿಯಲ್ಲಿ ಹಾಗೂ ಕಾರ್ಕಳ, ಹೆಬ್ರಿ ತಾಲೂಕಿನಲ್ಲಿ ಕಳೆದ 10 ತಿಂಗಳಿನಿಂದ ಸುಮಾರು 600 ಫಲಾನುಭವಿಗಳಿಗೆ ಮಾಸಾಶನ ಬಾರದೆ ಆತಂಕಕ್ಕೀಡಾಗಿದ್ದಾರೆ. ವೃದ್ಧಾಪ್ಯ,...
-
19ನೆಯ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಡಳಿತದಡಿ, ಊರ ಹಿರಿಯರ ಮುತುವರ್ಜಿಯಲ್ಲಿ ಸ್ಥಾಪನೆಗೊಂಡು ಈಗಲೂ ವಿದ್ಯೆಯ ಬೆಳಕನ್ನು ಪಸರಿಸುತ್ತಿರುವ ಹಲವು ಸರಕಾರಿ...
-
ಉಡುಪಿ: ಜಿಲ್ಲೆಯಲ್ಲಿ ಈ ಬಾರಿ ಸುರಿದ ಮಳೆಗೆ ಮುಂಗಾರು ಹಂಗಾಮಿನಲ್ಲಿ ಖಾರಿಫ್ನ ಭತ್ತದ ಇಳುವರಿಯೂ ಚೆನ್ನಾಗಿದೆ. ಅದೇ ಹುಮ್ಮಸ್ಸಿನಲ್ಲಿ ರೈತರು ಈಗ ಹಿಂಗಾರು ಹಂಗಾಮಿಗೆ...