ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮ ಕ್ರಿಸ್ಮಸ್‌:  ಬಿಷಪ್‌

Team Udayavani, Dec 20, 2018, 10:47 AM IST

ಮಂಗಳೂರು: ಕ್ರಿಸ್ಮಸ್‌ ಹಬ್ಬವು ದೇವರು ಮಾನವನಾಗಿ ಹುಟ್ಟಿದ ಘಟನೆಯ ಸಂಭ್ರಮವಾಗಿದೆ. ದೇವರು – ಮನುಷ್ಯನ ಸಮಾಗಮವೇ ಕ್ರಿಸ್ಮಸ್‌ ಹಬ್ಬದ ಸಾರ ಎಂದು ಮಂಗಳೂರು ಧರ್ಮಪ್ರಾಂತದ ಬಿಷಪ್‌ ರೈ|ರೆ| ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ಅವರು ಹೇಳಿದರು.

ಅವರು ಬುಧವಾರ ಕೊಡಿಯಾಲ ಬೈಲಿನಲ್ಲಿರುವ ಬಿಷಪ್ಸ್‌ ಹೌಸ್‌ ಸಭಾಂಗಣದಲ್ಲಿ ಮಾಧ್ಯಮದವರ ಜತೆ ಕ್ರಿಸ್ಮಸ್‌ ಆಚರಿಸಿ ಸಂದೇಶ ನೀಡಿದರು. 

ಮನುಷ್ಯ ದೇವರ ಸೃಷ್ಟಿ ಎನ್ನುವುದು ಕ್ರೈಸ್ತರ ನಂಬಿಕೆ. ಪ್ರತಿಯೊಬ್ಬ ಮನುಷ್ಯನೂ ದೇವರನ್ನು ಅರಸುತ್ತಾನೆ. ಈ ಹುಡುಕಾಟದಲ್ಲಿ ಮನುಷ್ಯನಿಗೆ ತೃಪ್ತಿ ಸಿಗಲೆಂದು ದೇವರೇ ಮನುಷ್ಯನ ಬಳಿಗೆ ಮಾನವನಾಗಿ ಬಂದಿದ್ದಾರೆ ಎಂದವರು ವಿವರಿಸಿದರು.

ಧರ್ಮಪ್ರಾಂತವು ಪರಿಸರ ಸಂರಕ್ಷಣೆಗೆ ಆದ್ಯತೆ ನೀಡಿದ್ದು, ಮಂಗಳೂರು ಧರ್ಮಪ್ರಾಂತ ವ್ಯಾಪ್ತಿಯ ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ತಾಲೂಕಿನಲ್ಲಿರುವ ತನ್ನ ಎಲ್ಲ ಚರ್ಚ್‌ ಗಳ ಮೂಲಕ ಈ ಯೋಜನೆಯನ್ನು ಜಾರಿಗೊಳಿಸುತ್ತಿದೆ. “ಬಂಧುತ್ವ’ ಯೋಜನೆಯನ್ನು ಎಲ್ಲ 124 ಚರ್ಚ್‌ ಗಳಲ್ಲಿ ಅನುಷ್ಠಾನಿಸ ಲಾಗುತ್ತಿದೆ. ಸಿಒಡಿಪಿ ಸಂಸ್ಥೆಯ ಮೂಲಕ ಇಂಗು ಗುಂಡಿ ಕಾರ್ಯಕ್ರಮವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಬಿಷಪ್‌ ವಿವರಿಸಿದರು.

ಯುವಜನರ ವರ್ಷಾಚರಣೆ
2019ನೇ ವರ್ಷವನ್ನು ಕ್ರೈಸ್ತ ಸಭೆಯು ಅಂತಾರಾಷ್ಟ್ರೀಯ ಯುವಜನ ವರ್ಷವನ್ನಾಗಿ ಆಚರಿಸಲಿದೆ. ಈ ಸಂದರ್ಭದಲ್ಲಿ ಯುವಜನರ ವಿವಿಧ ಸಮಸ್ಯೆಗಳಿಗೆ ಸ್ಪಂದಿಸಲಾಗುವುದು. ಈ ಕುರಿತಂತೆ ಐಸಿವೈಎಂ ಮತ್ತಿತರ ಯುವಜನ ಸಂಘಟನೆಗಳನ್ನು ಸೇರಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಡಾ| ಪೀಟರ್‌ ಪಾವ್‌É ಸಲ್ಡಾನ್ಹಾ ತಿಳಿಸಿದರು. 

ಕಾರ್ಯಕ್ರಮದ ಪ್ರಾರಂಭದಲ್ಲಿ ಬಿಷಪ್‌ ಅವರು ಕ್ರಿಸ್ಮಸ್‌ ಕೇಕ್‌ ಕತ್ತರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಧರ್ಮಪ್ರಾಂತದ ಶ್ರೇಷ್ಠ ಗುರು ಮೊ| ಮ್ಯಾಕ್ಸಿಂ ಎಲ್‌. ನೊರೋನ್ಹಾ, ಛಾನ್ಸಲರ್‌ ವಂ| ವಿಕ್ಟರ್‌ ಜಾರ್ಜ್‌ ಡಿ’ಸೋಜಾ, ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ವಂ| ವಿಕ್ಟರ್‌ ವಿಜಯ್‌ ಲೋಬೊ ಮತ್ತು ಮಾರ್ಸೆಲ್‌ ಮೊಂತೇರೊ, ಪಾಲನಾ ಪರಿಷತ್‌ ಕಾರ್ಯದರ್ಶಿ ಎಂ.ಪಿ. ನೊರೋನ್ಹಾ, ವಂ| ರಿಚಾರ್ಡ್‌ ಡಿ’ಸೋಜಾ ಉಪಸ್ಥಿತರಿದ್ದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ