ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಕರ ಮೇಲೆ ಸಿಐಡಿ ಕಣ್ಣು !

Team Udayavani, Jun 28, 2021, 10:55 AM IST

ಮಕ್ಕಳ ಅಶ್ಲೀಲ ದೃಶ್ಯ ವೀಕ್ಷಕರ ಮೇಲೆ ಸಿಐಡಿ ಕಣ್ಣು !

ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳಿಗೆ ಸಂಬಂಧಿಸಿದ ಅಶ್ಲೀಲ ವೀಡಿಯೋ, ಚಿತ್ರಗಳ ವೀಕ್ಷಣೆ, ಡೌನ್‌ ಲೋಡ್‌ ಹಾಗೂ ಹಂಚುವವರ ಮೇಲೆ ಅಪರಾಧ ತನಿಖಾ ದಳ (ಸಿಐಡಿ) ಕಣ್ಣಿಟ್ಟಿದೆ.

ಅಂತಹವರ ಮೇಲೆ ಕಳೆದೊಂದು ವರ್ಷದಿಂದ ನಿಗಾ ಇಟ್ಟಿದ್ದ ಸಿಐಡಿ ಸಮಗ್ರ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ನೀಡಿದೆ. ಅದರಂತೆ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುತ್ತಿದ್ದಾರೆ. ವಿಶೇಷವೆಂದರೆ ಅನೇಕ ಮಂದಿಗೆ ತಪ್ಪಿನ ಅರಿವೇ ಇಲ್ಲ. ಮನೆ ಬಾಗಿಲಲ್ಲಿ ಪೊಲೀಸರನ್ನು ಕಂಡು ದಂಗಾಗುತ್ತಿದ್ದಾರೆ.

ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಉದ್ದೇಶದಿಂದ ಕೇಂದ್ರ ಸರಕಾರ ಕಠಿನ ಕಾಯಿದೆ ರೂಪಿಸಿದ್ದು, ಅಂತಹ ದೃಶ್ಯಗಳ ವೀಕ್ಷಣೆಯನ್ನೂ ನಿಷೇಧಿಸಲಾಗಿದೆ. ಆದಾಗ್ಯೂ ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ರೂಪದಲ್ಲಿ ಲಭಿಸುತ್ತಿದ್ದು, ಅವುಗಳಿಂದ ದುಷೆøàರಣೆಗೊಂಡು ತಾವೇ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಪ್ರಕರಣಗಳು ನಡೆಯುತ್ತಿವೆ. ಆದ್ದರಿಂದ ಇಂತಹ ಸೈಟ್‌ಗಳನ್ನು ಜಾಲಾಡುವವರನ್ನು, ಮುಖ್ಯವಾಗಿ ಡೌನ್‌ಲೋಡ್‌ ಮಾಡಿ ಹಂಚುವವರ ವಿರುದ್ಧ ಕಲಂ 67(ಬಿ) ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗುತ್ತಿದೆ.

ಎನ್‌ಸಿಎಂಇಸಿ ನೆರವು: ಕೇಂದ್ರ ಸರಕಾರ ಸ್ಥಾಪಿಸಿರುವ ಎನ್‌ಸಿಎಂಇಸಿ (ಕಾಣೆಯಾದ ಮತ್ತು ಶೋಷಿತ ಮಕ್ಕಳ ಕೇಂದ್ರ) ಮತ್ತು ಎನ್‌ಸಿಆರ್‌ಬಿ (ನ್ಯಾಶನಲ್‌ ಕ್ರೈಂ ರೆಕಾರ್ಡ್‌ ಬ್ಯೂರ್‌) ಮೂಲಕ ಸಿಐಡಿ ಮಾಹಿತಿ ಸಂಗ್ರಹಿಸುತ್ತಿದೆ.

ಲಾಕ್‌ಡೌನ್‌ ಅವಧಿಯಲ್ಲಿ ಹೆಚ್ಚಳ: ಸಿಐಡಿ ಕಳೆದ 7 ತಿಂಗಳಲ್ಲಿ ಪತ್ತೆಹಚ್ಚಿ ನೀಡಿರುವ ದಾಖಲೆಗಳ ಆಧಾರದಲ್ಲಿ ಬಂಧನ ನಡೆಯುತ್ತಿದೆ. ಹೆಚ್ಚಿನವು ಕಳೆದ ಲಾಕ್‌ಡೌನ್‌ ಅವಧಿಯಲ್ಲಿ ನಡೆದಿರುವ ಪ್ರಕರಣಗಳು. ಹೊರ ಜಿಲ್ಲೆ / ರಾಜ್ಯದವರು ಇಲ್ಲಿನ ವಿಳಾಸದಲ್ಲಿ ಪಡೆದ ಸಿಮ್‌ ಮೂಲಕವೂ ಇಂತಹ ದೃಶ್ಯಗಳನ್ನು ಡೌನ್‌ಲೋಡ್‌ ಮಾಡಿ ಹಂಚಿರುವ ಪ್ರಕರಣಗಳೂ ಇವೆ.

ಮಕ್ಕಳಿಂದ ವೀಕ್ಷಣೆ; ಹೆತ್ತವರಿಗೆ ಗೋಳು! ಈಗ ಗುರುತಿಸಿರುವ, ಬಂಧಿಸಿರುವ ಆರೋಪಿಗಳ ಪೈಕಿ ಹಲವರು ಕಾರ್ಮಿಕರು. ಇನ್ನು ಕೆಲವು ಪ್ರಕರಣಗಳಲ್ಲಿ ಮನೆಯಲ್ಲಿ ಮಕ್ಕಳು, ಯುವಕರು ತಮ್ಮ ಹೆತ್ತವರ ಮೊಬೈಲ್‌ನಲ್ಲಿ ವೀಕ್ಷಣೆ, ಹಂಚಿಕೆ ಮಾಡಿದ್ದಾರೆ. ಆದರೆ ಸಿಮ್‌ಯಾರ ಹೆಸರಿನಲ್ಲಿದೆಯೋ ಅವರ ವಿರುದ್ಧವೇ ಪ್ರಕರಣ ದಾಖಲಾಗುತ್ತದೆ ಎನ್ನುತ್ತಾರೆ ಸೈಬರ್‌ ಪೊಲೀಸರು.

ಇದನ್ನೂ ಓದಿ:ರೇಖಾ ಕೊಲೆಗೆ 2-3 ತಿಂಗಳ ಸ್ಕೆಚ್: ಕದಿರೇಶ್ ಸಹೋದರಿ ಮಾಲಾ, ಆಕೆಯ ಪುತ್ರನ ಸೆರೆ

ಅಶ್ಲೀಲ ಸೈಟ್‌ಗಳನ್ನು ಸರಕಾರ ನಿಷೇಧಿಸಿದ್ದರೂ ಬೇರೆ ಬೇರೆ ರೂಪದಲ್ಲಿ ಲಭ್ಯವಾಗುತ್ತಿವೆ. ಯಾವುದೇ ಅಶ್ಲೀಲ ವೀಡಿಯೋಗಳ ವೀಕ್ಷಣೆ, ಹಂಚುವಿಕೆ ಅಪರಾಧ. ಇದನ್ನು ತಡೆಯುವುದಕ್ಕಾಗಿ ನಿಗಾ ವಹಿಸಲಾಗುತ್ತಿದೆ. ಮೊಬೈಲನ್ನು ಇತರರಿಗೆ ನೀಡುವುದು ಕೂಡ ಅಪಾಯಕಾರಿ.

ಹೃಷಿಕೇಶ್‌ ಸೋನಾವಣೆ, ದ.ಕ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಶಿಕ್ಷೆ ಏನು?

ಮಕ್ಕಳ ಅಶ್ಲೀಲ ಚಿತ್ರ / ವೀಡಿಯೋ ಪ್ರಕರಣ: 5 ವರ್ಷ ಜೈಲು, 10 ಲ.ರೂ. ದಂಡ

ಎರಡನೇ ಬಾರಿ ಎಸಗುವ ತಪ್ಪಿಗೆ 7 ವರ್ಷ ಜೈಲು, 10 ಲ.ರೂ. ದಂಡ

ಹಿರಿಯರಿಗೆ ಸಂಬಂಧಿಸಿದ ಚಿತ್ರ / ವೀಡಿಯೋ ಪ್ರಕರಣ: 3 ವರ್ಷ ಜೈಲು, 10 ಲ.ರೂ. ದಂಡ

ಎರಡನೇ ಬಾರಿ ಎಸಗುವ ತಪ್ಪಿಗೆ 7 ವರ್ಷ ಜೈಲು, 10 ಲ.ರೂ. ದಂಡ

ಎಲ್ಲಿ ಎಷ್ಟು ಪ್ರಕರಣ

ಮಂಗಳೂರು ಕಮಿಷನರೆಟ್‌ ವ್ಯಾಪ್ತಿ- 11

ದ.ಕ. ಜಿಲ್ಲಾ ಪೊಲೀಸ್‌ ವ್ಯಾಪ್ತಿ -15

ಉಡುಪಿ ಜಿಲ್ಲಾ ಪೊಲೀಸ್‌ ವ್ಯಾಪ್ತಿ- 15

ವರದಿ: ಸಂತೋಷ್ ಬೊಳ್ಳೊಟ್ಟು

ಟಾಪ್ ನ್ಯೂಸ್

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಟೆಸ್ಟ್‌ ಸರಣಿ: ಬಾಂಗ್ಲಾದೇಶ ವಿರುದ್ಧ ಪಾಕಿಸ್ಥಾನಕ್ಕೆ ಇನ್ನಿಂಗ್ಸ್‌ ಗೆಲುವು

ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆ

ಪ್ರಧಾನಮಂತ್ರಿ ಆವಾಜ್‌ ಯೋಜನೆ : ಗ್ರಾಮೀಣ 3 ವರ್ಷಗಳಿಗೆ ವಿಸ್ತರಣೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮನೆ ಮನೆಗೆ ಸಿಟಿ ಗ್ಯಾಸ್‌; ವರ್ಷದೊಳಗೆ ಪೂರೈಕೆ ಸಾಧ್ಯತೆ

ಮನೆ ಮನೆಗೆ ಸಿಟಿ ಗ್ಯಾಸ್‌; ವರ್ಷದೊಳಗೆ ಪೂರೈಕೆ ಸಾಧ್ಯತೆ

ಮುಂದೆ ಬನ್ನಿ..ಇನ್ನಾದರೂ ಲಸಿಕೆ ಪಡೆಯಲು ಮುಂದೆ ಬನ್ನಿ

ಮುಂದೆ ಬನ್ನಿ..ಇನ್ನಾದರೂ ಲಸಿಕೆ ಪಡೆಯಲು ಮುಂದೆ ಬನ್ನಿ

1-ffdsf-aa

ಮಂಗಳೂರು: ಮತಾಂತರ ಯತ್ನ ನಾಲ್ವರ ಸಾವಿಗೆ ಕಾರಣವಾಯ್ತೇ?; ಮಹಿಳೆ ವಶಕ್ಕೆ

1-mang-1

ಮಂಗಳೂರು : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ

1-asds-a

ಮಂಗಳೂರು: ವಿದ್ಯುತ್ ಕಂಬಕ್ಕೆ ಬೈಕ್‌ ಢಿಕ್ಕಿ; 18 ರ ತರುಣ ಸಾವು

MUST WATCH

udayavani youtube

ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಸಿಡಿಎಸ್ ಬಿಪಿನ್ ರಾವತ್ ನಿಧನ

udayavani youtube

ಮಲ್ಲಿಗೆ ಕೃಷಿಯಲ್ಲಿ ಯಶಸ್ಸನ್ನು ಕಂಡ ಕರಂಬಳ್ಳಿಯ ಕೃಷಿಕ

udayavani youtube

ಶಿರಸಿ : ಪೂಜೆಗೆಂದು ಕೊರಳಿಗೆ ಹಾಕಿದ ಬಂಗಾರದ ಸರವನ್ನೇ‌ ನುಂಗಿದ ಆಕಳು

udayavani youtube

ಕುಮಾರಸ್ವಾಮಿಯನ್ನ ಸಿಎಂ ಸ್ಥಾನದಲ್ಲಿ ಕೂರಿಸಿ ಕಾಲೆಳೆದದ್ದು ಕಾಂಗ್ರೆಸ್ ನವರೆ : ಸಿಟಿ ರವಿ

udayavani youtube

ಮಂಗಳೂರು : ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ, ಘಟನಾ ಸ್ಥಳದಲ್ಲಿ ಡೆತ್ ನೋಟ್ ಪತ್ತೆ

ಹೊಸ ಸೇರ್ಪಡೆ

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಶಾಲೆ, ಅಂಗನವಾಡಿ ಕಟ್ಟಡ ನಿರ್ಮಾಣದಲ್ಲಿ ದಾಖಲೆ: ಪಾಟೀಲ್‌

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ಪಾರ್ಟಿಗಳಿಗೆ ಡ್ರಗ್ಸ್‌ ಮಾರಾಟ-ಕೇರಳ ಮೂಲದ ಆರೋಪಿ ಬಂಧನ

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ತಿರುವನಂತಪುರಂ-ಕಾಸರಗೋಡು ರೈಲ್ವೆ ಮಾರ್ಗಕ್ಕೆ ಅನುಮೋದನೆ ನೀಡಿ : ಪಿಣರಾಯಿ ವಿಜಯನ್‌

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಆನ್‌ ಲೈನ್‌ ಗೇಮಿಂಗ್‌ ಕಂಪನಿ ಬ್ಯಾಂಕ್‌ ಖಾತೆ ಜಪ್ತಿ ಆದೇಶಕ್ಕೆ ಹೈಕೋರ್ಟ್‌ ತಡೆ

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

ಸಂಚಾರ ವಿಭಾಗದ ಜಂಟಿ ಆಯುಕ್ತರ ಮನೆಯಲ್ಲೆ ಹಣ, ಮೊಬೈಲ್ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.