Udayavni Special

ಸ್ವಚ್ಛತಾ ಅಭಿಯಾನ ಸಾರ್ವಜನಿಕ ಆಂದೋಲನವಾಗಲಿ: ಪ್ರೊ| ರತ್ನಾಕರ ರಾವ್‌

Team Udayavani, Jun 13, 2019, 5:00 AM IST

h-23

ಸುರತ್ಕಲ್‌: ರಾಮಕೃಷ್ಣ ಮಿಷನ್‌ ಮಂಗಳೂರು ನೇತೃತ್ವದಲ್ಲಿ ನಡೆಯುವ ಸ್ವತ್ಛತಾ ಅಭಿಯಾನ ಮತ್ತು ಶ್ರಮದಾನ ಸಾರ್ವಜನಿಕ ಆಂದೋಲನವಾಗಿ ಪರಿವರ್ತನೆಯಾಗಬೇಕು. ಎಲ್ಲ ಸಜ್ಜನರು ಈ ನಿಟ್ಟಿನಲ್ಲಿ ಕೈಜೋಡಿಸಬೇಕು ಎಂದು ನಿವೃತ್ತ ಪ್ರಾಂಶುಪಾಲ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಆಡಳಿತ ನಿರ್ದೇಶಕ ವೈ.ವಿ. ರತ್ನಾಕರ ರಾವ್‌ ಹೇಳಿದರು.

ರಾಮಕೃಷ್ಣ ಮಿಷನ್‌ ಮಂಗಳೂರು, ನಾಗರಿಕ ಸಲಹಾ ಸಮಿತಿ ಸುರತ್ಕಲ್‌ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಎಂಆರ್‌ಪಿಎಲ್‌ ನೆರವಿನೊಂದಿಗೆ ನಡೆಯುತ್ತಿರುವ ರಾಮಕೃಷ್ಣ ಮಿಷನ್‌ ಸ್ವತ್ಛ ಸುರತ್ಕಲ್‌ ಅಭಿಯಾನದ 34ನೇ ವಾರದ ಸ್ವತ್ಛತಾ ಶ್ರಮದಾನಕ್ಕೆ ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪರಿಸರದಲ್ಲಿ ಚಾಲನೆ ನೀಡಿ ಮಾತನಾಡಿದರು. ನಮ್ಮಲ್ಲಿರುವ ಹೆಚ್ಚಿನ ಆರೋಗ್ಯ ಸಮಸ್ಯೆಗಳಿಗೆ ಪರಿಸರವನ್ನು ನಿರ್ಮಲವಾಗಿ ಇಟ್ಟುಕೊಳ್ಳದಿರುವುದೇ ಕಾರಣ. ನಮ್ಮ ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಪ್ರತಿಯೋರ್ವರೂ ಸೂಕ್ತವಾಗಿ ನಿರ್ವಹಿಸುವುದರಿಂದ ಕಸಮುಕ್ತವಾದ ಸುಂದರ ದೇಶವನ್ನು ಕಟ್ಟಲು ಸಾಧ್ಯ ಎಂದರು.

ಪ್ರವಾಸೋದ್ಯಮಕ್ಕೆ ಸಂಕಷ್ಟ
ಭಾರತ ದೇಶದ ಯುವ ಜನಾಂಗ ಅರ್ಥಪೂರ್ಣವಾಗಿ ಈ ಅಭಿಯಾನದಲ್ಲಿ ಕೈ ಜೋಡಿಸಿದಲ್ಲಿ ನಮ್ಮ ದೇಶವನ್ನು ಸ್ವತ್ಛತೆಯ ವಿಚಾರದಲ್ಲಿ ಬೇರೆಲ್ಲ ಮುಂದುವರಿದ ದೇಶಗಳ ಸಾಲಿನಲ್ಲಿ ಕಾಣಬಹುದು, ನೈರ್ಮಲ್ಯ ಸಮಸ್ಯೆಯಿಂದಾಗಿ ನಮ್ಮ ಪ್ರವಾಸೋದ್ಯಮವು ಹೆಚ್ಚಿನ ಸಂಕಷ್ಟಕ್ಕೆ ಈಡಾಗುತ್ತಿರುವುದು ವಿಷಾದನೀಯ ಎಂದರು.

ಗೋವಿಂದದಾಸ ಪದವಿ ಕಾಲೇಜಿನ ಪ್ರಾಂಶುಪಾಲ ಪ್ರೊ| ಕೃಷ್ಣಮೂರ್ತಿ, ಗೋವಿಂದದಾಸ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲೆ ಲಕ್ಷ್ಮೀ, ಉಪ ಪ್ರಾಂಶುಪಾಲೆ ಸುನೀತಾ ಮೊದಲಾದವರು ಉಪಸ್ಥಿತರಿದ್ದರು.

ವಿದ್ಯಾರ್ಥಿಗಳಿಂದ ಸ್ವಚ್ಛತಾ ಶ್ರಮದಾನ
ಗೋವಿಂದದಾಸ ಕಾಲೇಜಿನ ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯ ಸುಮಾರು 60 ವಿದ್ಯಾರ್ಥಿಗಳ ಉಪನ್ಯಾಸಕರಾದ ವೆಂಕಟರಮಣ ಭಟ್‌, ಚಿತ್ರಾ ಶೆಟ್ಟಿ ನೇತೃತ್ವದಲ್ಲಿ ಪರಿಸರದಲ್ಲಿದ್ದ ಬೃಹತ್‌ ಕಸದ ರಾಶಿಯನ್ನು ಎರಡು ವಾಹನಗಳ ನೆರವಿನೊಂದಿಗೆ ತೆರವುಗೊಳಿಸಿದರು. ವಿದ್ಯಾರ್ಥಿಗಳು ಪ್ಲಾಸ್ಟಿಕ್‌ ತ್ಯಾಜ್ಯ, ಕಟ್ಟಡ ಕಾಮಗಾರಿಯ ತ್ಯಾಜ್ಯ ಇನ್ನಿತರ ತ್ಯಾಜ್ಯವನ್ನು ವಿಂಗಡನೆ ಮಾಡಿ ವಿಲೇವಾರಿ ಮಾಡಿದ್ದು ಶ್ಲಾಘನೀಯ. ನಾಗರಿಕ ಸಮಿತಿ ಕುಳಾಯಿ ಅಧ್ಯಕ್ಷ ಭರತ್‌ ಶೆಟ್ಟಿ, ಪ್ರಾಧ್ಯಾಪಕಿ ಸಾವಿತ್ರಿ ರಮೇಶ್‌ ಭಟ್‌, ಕಾಲೇಜಿನ ಪ್ರಾಧ್ಯಾಪಕರು, ಸಿಬಂದಿ ವರ್ಗದವರು ಶ್ರಮದಾನದಲ್ಲಿ ಕೈ ಜೋಡಿಸಿದ್ದರು. ರಾಮಕೃಷ್ಣ ಮಿಷನ್‌ ಸ್ವತ್ಛ ಸುರತ್ಕಲ್‌ ಅಭಿಯಾನದ ಸಂಯೋಜಕ ಸತೀಶ್‌ ಸದಾನಂದ್‌ ಸ್ವಯಂ ಸೇವಕರಿಗೆ ಅಗತ್ಯ ಮಾಹಿತಿ ನೀಡಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಬೆಂಗಳೂರಿನಿಂದ ಬೀದರ್‌ಗೆ ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಧಾರವಾಡ: ಮೂರು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

ಧಾರವಾಡ: ಮೂರು ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆ

ಜೂನ್ 14ರಂದು ಪದಗ್ರಹಣದ ‘ಪ್ರತಿಜ್ಞೆ’ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದೇನೆ

ಜೂನ್ 14ರಂದು ಪದಗ್ರಹಣದ ‘ಪ್ರತಿಜ್ಞೆ’ ಕಾರ್ಯಕ್ರಮಕ್ಕೆ ಅನುಮತಿ ಕೋರಿದ್ದೇನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ 30 ಆಶಾ ಕಾರ್ಯಕರ್ತೆಯರಿಗೆ ಕಿಟ್‌ ವಿತರಣೆ

ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ವತಿಯಿಂದ 30 ಆಶಾ ಕಾರ್ಯಕರ್ತೆಯರಿಗೆ ಕಿಟ್‌ ವಿತರಣೆ

ಹವಾನಿಯಂತ್ರಿತ ಬಸ್‌ ಸಂಚಾರ ಸದ್ಯಕ್ಕಿಲ್ಲ

ಹವಾನಿಯಂತ್ರಿತ ಬಸ್‌ ಸಂಚಾರ ಸದ್ಯಕ್ಕಿಲ್ಲ

ನೀವು ಪ್ರೇರಕರು ನಾನು ಸೇವಕ: ಪ್ರಧಾನಿ ಪತ್ರ ಮನೆ ಮನೆಗೆ

ನೀವು ಪ್ರೇರಕರು ನಾನು ಸೇವಕ: ಪ್ರಧಾನಿ ಪತ್ರ ಮನೆ ಮನೆಗೆ

ಜೂ. 25ರಿಂದ ಜು. 4ರ ವರೆಗೆ SSLC ಪರೀಕ್ಷೆ: ದ.ಕ. ಜಿಲ್ಲೆಯಿಂದ 30,835 ವಿದ್ಯಾರ್ಥಿಗಳು

ಜೂ. 25ರಿಂದ ಜು. 4ರ ವರೆಗೆ SSLC ಪರೀಕ್ಷೆ: ದ.ಕ. ಜಿಲ್ಲೆಯಿಂದ 30,835 ವಿದ್ಯಾರ್ಥಿಗಳು

MUST WATCH

udayavani youtube

Growth of a Miyawaki Forest in a city | World Environment day Special

udayavani youtube

ಮರದ ಬೇರಿಗೆ ಸುಂದರ ರೂಪ ನೀಡುವ ಶಿಲ್ಪಿ | Wood sculptor Jagadesh Acharya

udayavani youtube

70 CENTS ಜಾಗದಲ್ಲಿ 16 TON ಕಲ್ಲಂಗಡಿ ಬೆಳೆದ ಯಶಸ್ವಿ ಕೃಷಿಕ | Udayavani

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

ಹೊಸ ಸೇರ್ಪಡೆ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ವಿದ್ಯಾರ್ಥಿ ನಿಲಯಗಳಲ್ಲಿ 54,108 ಜನರಿಗೆ ಆಶ್ರಯ : ಗೋವಿಂದ ಕಾರಜೋಳ

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ದ.ಕ.: ಮತ್ತೆ 24 ಮಂದಿಗೆ ಕೋವಿಡ್-19 ದೃಢ  

ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಬೆಂಗಳೂರಿನಿಂದ ಬೀದರ್‌ಗೆ ಬಸ್‌ನಲ್ಲಿ ಬಂದ ಯುವಕನಲ್ಲಿ ಕೋವಿಡ್‌-19 ಸೋಂಕು ಪತ್ತೆ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಕಲಬುರಗಿಯಲ್ಲಿ 20 ಮಕ್ಕಳು ಸೇರಿದಂತೆ 69 ಮಂದಿಗೆ ಕೋವಿಡ್-19 ಸೋಂಕು ದೃಢ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

ಪಾಂಡವಪುರ ಸಕ್ಕರೆ ಕಾರ್ಖಾನೆ ನಿರಾಣಿ ತೆಕ್ಕೆಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.