Udayavni Special

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌


Team Udayavani, Jul 29, 2021, 8:00 AM IST

ಬೊಮ್ಮಾಯಿ ಸಂಪುಟದಲ್ಲಿ ಸಚಿವ ಸ್ಥಾನ: ಕರಾವಳಿಯಲ್ಲಿ ಗರಿಗೆದರಿದೆ ಕುತೂಹಲ!‌

ಮಂಗಳೂರು/ಉಡುಪಿ: ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ಕರಾವಳಿಯ ಬಿಜೆಪಿ ಪಾಳಯದಲ್ಲಿಯೂ ಸಚಿವ ಸ್ಥಾನ ಯಾರ ಪಾಲಿಗೆ ಒಲಿಯಬಹುದು ಎನ್ನುವ ಬಗ್ಗೆ ಲೆಕ್ಕಾಚಾರಗಳು ಆರಂಭವಾಗಿದ್ದು, ಆಕಾಂಕ್ಷಿ ಗಳಲ್ಲೂ ನಿರೀಕ್ಷೆ ಗರಿಗೆದರಿದೆ.

ಬಿ.ಎಸ್‌. ಯಡಿಯೂರಪ್ಪ ಮುಖ್ಯಮಂತ್ರಿ ಅವಧಿಯಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗೆ ತಲಾ ಒಂದು ಸ್ಥಾನ ದೊರಕಿತ್ತು. ಈ ಪೈಕಿ ಕೋಟ ಶ್ರೀನಿವಾಸ ಪೂಜಾರಿ ಅವರು ಆರಂಭದಲ್ಲೇ ಸಚಿವರಾಗಿದ್ದರೆ, ಸುಳ್ಯ ಶಾಸಕ ಎಸ್‌. ಅಂಗಾರ ಸಂಪುಟಕ್ಕೆ ಸೇರಿ 7 ತಿಂಗಳಾಗಿವೆ.  ಆದರೆ ಈಗ ಹೊಸ ಸಂಪುಟದಲ್ಲಿ ಇವರು ಮುಂದು ವರಿಯುವರೇ? ಅಥವಾ ಹೊಸಬರಿಗೆ ಅವಕಾಶವಿದೆಯೇ? ಎಂಬ ಬಗ್ಗೆ ಚರ್ಚೆ ಆರಂಭವಾಗಿದೆ.

ಬಿಜೆಪಿ ಮೂಲಗಳ ಪ್ರಕಾರ ಕೆಲವೇ ತಿಂಗಳ ಹಿಂದೆ ಸಚಿವ ಸ್ಥಾನ ಪಡೆದ ಹಾಗೂ ದ.ಕ. ಜಿಲ್ಲೆಯ ಹಿರಿಯ ಶಾಸಕ ಎಸ್‌. ಅಂಗಾರ ಅವರು ಸಂಪುಟದಲ್ಲಿ ಮುಂದುವರಿ ಯುವುದು ಬಹುತೇಕ ಖಚಿತ‌. ಆದರೆ ಕೋಟ ಶ್ರೀನಿವಾಸ ಪೂಜಾರಿ ಅವರ ಬದಲಾವಣೆ ಬಗ್ಗೆ ಸುದ್ದಿ ಇದ್ದರೂ ನ್ನೂ ಖಚಿತವಾಗಿಲ್ಲ.

ಯಾರು ಆದಾರು ಮಂತ್ರಿ?:

ಉಡುಪಿ ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರದ ಶಾಸಕರು ಮತ್ತು ಒಬ್ಬರು ವಿಧಾನ ಪರಿಷತ್‌ ಸದಸ್ಯರು ಅರ್ಹರಿದ್ದಾರೆ. ಯಡಿ ಯೂರಪ್ಪ ಅವಧಿಯಲ್ಲಿ ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಸಚಿವರಾದರು. ಹಿಂದಿನ ಮಂತ್ರಿಗಳಿಗೆ ಮತ್ತೆ ಅವಕಾಶ ದೊರಕಿದರೆ ಪೂಜಾರಿ ಅವರು ಮುಂದುವರಿಯಲೂ ಬಹುದು. ವಿಧಾನಸಭೆ ಸದಸ್ಯರಿಗೇ ಅವಕಾಶ ನೀಡುವುದಾದರೆ  ಐವರೊಳಗೆ ಒಬ್ಬರಿಗೆ ಸಿಗಬಹುದು. ಬಿಲ್ಲವ ಕೋಟಾದಡಿ ಚುನಾಯಿತರಿಗೆ ಅವಕಾಶ ಕಲ್ಪಿಸುವುದಾದರೆ ಸುನಿಲ್‌ ಕುಮಾರ್‌ಗೆ ಅವಕಾಶ ಸಿಗಬಹುದು. ಆದರೆ ಶಿವಮೊಗ್ಗ ಮತ್ತಿತರ ಪ್ರದೇಶದ ಈಡಿಗ ಸಮುದಾಯದ ಶಾಸಕರಿಗೆ ಸಚಿವ ಹುದ್ದೆ ಸಿಗುವುದಾದರೆ  ಸುನಿಲ್‌ ಆವರಿಗೆ ಅವಕಾಶ ತಪ್ಪಬಹುದು. ಆಗ ಅತಿ ಹೆಚ್ಚು ಬಾರಿ ಕುಂದಾಪುರದಿಂದ ಶಾಸಕರಾದ  ಹಾಲಾಡಿ ಶ್ರೀನಿವಾಸ ಶೆಟ್ಟಿ ಸಚಿವರಾಗಬಹುದು. ಉಡುಪಿ ವಿಧಾನಸಭಾ ಕ್ಷೇತ್ರದ ರಘುಪತಿ ಭಟ್‌ ಮತ್ತು ಲಾಲಾಜಿ ಮೆಂಡನ್‌ ಸಹ ಅರ್ಹರ ಪಟ್ಟಿಯಲ್ಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಿಂದ ಕೋಟ ಶ್ರೀನಿವಾಸ ಪೂಜಾರಿ ಅವರನ್ನೇ ಉಳಿಸಿಕೊಂಡರೆ, ಉಡುಪಿ ಜಿಲ್ಲೆಯಲ್ಲಿ ಬಿಲ್ಲವ ಅಥವಾ ಬಂಟ ಸಮುದಾಯಕ್ಕೆ ಅವಕಾಶ ಸಿಗಲೂ ಬಹುದು.   ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೂ ಉತ್ತಮ ಆಡಳಿತ ನೀಡಬೇಕೆಂಬ ಹೊಣೆಗಾರಿಕೆ ಇದೆ. ಇದರೊಂದಿಗೆ ಬೊಮ್ಮಾಯಿ ಅವರು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿದ್ದರು. ಶಾಸಕರಲ್ಲಿ ಯಾರನ್ನು ಸಂಪುಟಕ್ಕೆ ಸೇರಿಸಿಕೊಂಡರೆ ಹೆಚ್ಚು ಜನಪರ ಕೆಲಸಗಳನ್ನು ಮಾಡಲು ಸಾಧ್ಯ ಎಂಬುದು ತಿಳಿದಿದ್ದು,  ಯೋಚಿಸಿ ನಿರ್ಧರಿಸುವ ಸಾಧ್ಯತೆ ಹೆಚ್ಚಿದೆ.

ಬೊಮ್ಮಾಯಿ ಅವರು ಮತ್ತು  ಹೈಕಮಾಂಡ್‌ ಇಬ್ಬರೂ ಸೇರಿ ಸಚಿವ ಸಂಪುಟವನ್ನು ನಿರ್ಧರಿಸುವ ಸಾಧ್ಯತೆಯೇ ಹೆಚ್ಚು. ಹಾಗಾಗಿ ಕರಾವಳಿಯಿಂದ ಯಾರಿಗೆ ಅವಕಾಶ ಸಿಗುತ್ತದೆ ಎಂಬ ಸಂಗತಿ ಕುತೂಹಲ ಮೂಡಿಸಿದೆ.  ಈ ಮಧ್ಯೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ಕಾಲದಲ್ಲಿ ನೇಮಕವಾದ ವಿವಿಧ ನಿಗಮ -ಮಂಡಳಿಗಳ ಲ್ಲಿರುವ ಕರಾವಳಿ ನಾಯಕರ ಹುದ್ದೆ ಬದಲಾವಣೆ ಆಗಲಿ ದೆಯೇ ಎಂಬ ಬಗ್ಗೆಯೂ ಚರ್ಚೆ ಆರಂಭವಾಗಿದೆ.

ಟಾಪ್ ನ್ಯೂಸ್

fcgbgrtr

ಕಾಂಗ್ರೆಸ್ ಸೇರಲಿದ್ದಾರಂತೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

dxfvsfrefe

“Me Too” ಆರೋಪಿ ಚರಣ್‍ಜಿತ್ ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ| ರಾಷ್ಟ್ರೀಯ ಮಹಿಳಾ ಆಯೋಗ

fgdfgdrt

ನಟಿ ಶಿಲ್ಪಾ ಶೆಟ್ಟಿ ಪತಿ ಕುಂದ್ರಾಗೆ ಸಿಕ್ತು ಜಾಮೀನು

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಅಸೆ

CETಯ ಐದು ವಿಭಾಗದಲ್ಲಿ ಪ್ರಥಮ ರ‍್ಯಾಂಕ್ ಪಡೆದ ಮೈಸೂರಿನ ಮೇಘನ್ ಗೆ ವೈದ್ಯನಾಗುವ ಆಸೆ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ದಾಖಲೆ ಜಿಗಿತ ಕಂಡ ಬಾಂಬೆ ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಮತ್ತೆ ಭಾರೀ ಕುಸಿತ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು : ಮೂವರಿಗೆ ಗಾಯ

ಕೊಪ್ಪಲಂಗಡಿ : ಚಾಲಕನ ನಿಯಂತ್ರಣ ತಪ್ಪಿ ಮೋರಿಗೆ ಢಿಕ್ಕಿ ಹೊಡೆದ ಕಾರು ; ಮೂವರಿಗೆ ಗಾಯ

Untitled-1

ಜಿಲ್ಲೆಯ ಬಹುತೇಕ ಪಶು ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ಪರ್ಕಳ ರಾ.ಹೆ.169 ರಸ್ತೆ ಅವ್ಯವಸ್ಥೆ : ಭೂ ಸಂತ್ರಸ್ತರಿಗೆ ಶೀಘ್ರದಲ್ಲಿ ಪರಿಹಾರ ನೀಡಲು ಆಗ್ರಹ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ನಾಡಿನ ವಿವಿಧೆಡೆ ಇಂದು ಅನಂತನ ಚತುರ್ದಶಿ ವ್ರತ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

ಸಂಪರ್ಕ ರಸ್ತೆಯಿಲ್ಲದೆ ಬಳ‌ಕೆಯಾಗದ ಸೇತುವೆ

MUST WATCH

udayavani youtube

ಅರಮನೆ ಆವರಣದಲ್ಲಿ ಹೆಣ್ಣಾನೆಯ ರಂಪಾಟ, ಆನೆಯನ್ನು ನಿಯಂತ್ರಿಸಿದ ಅಭಿಮನ್ಯು

udayavani youtube

ನಿಮ್ಮ ಅಧಿಕಾರಿಗಳನ್ನು ಸಂಜೆಯೊಳಗೆ ಸಸ್ಪೆಂಡ್ ಮಾಡಿ : ಮಾಜಿ ಸ್ಪೀಕರ್​ ರಮೇಶ್​ ಕುಮಾರ್​

udayavani youtube

48 ಲಕ್ಷ ರೂ.ಗೆ ಗಣಪತಿಯ ‘ಲಡ್ಡು’ ಹರಾಜು

udayavani youtube

ಗಿಫ್ಟ್ ಕೊಡುವ ನೆಪದಲ್ಲಿ ಮಹಿಳಾ ಸಿಬ್ಬಂದಿಗೆ ಮಚ್ಚಿನಿಂದ ಹಲ್ಲೆ

udayavani youtube

ರಸ್ತೆ ದಾಟುವ ವೇಳೆ ಕಾರಿನಡಿ ಬಿದ್ದರೂ ಪವಾಡಸದೃಶವಾಗಿ ಪಾರಾದ ಬಾಲಕ

ಹೊಸ ಸೇರ್ಪಡೆ

fcgbgrtr

ಕಾಂಗ್ರೆಸ್ ಸೇರಲಿದ್ದಾರಂತೆ ಕನ್ಹಯ್ಯ ಕುಮಾರ್, ಜಿಗ್ನೇಶ್ ಮೇವಾನಿ

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ ?

ಡುಕಾಟಿ ಮಾನ್‌ಸ್ಟರ್‌ ಬೈಕ್‌ ಗಳ ಬುಕಿಂಗ್‌ ಶುರು : ಬೆಲೆ ಎಷ್ಟು ಗೊತ್ತಾ?

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಅಜ್ಜಿ ಆಪರೇಷನ್‌ ನೆರವಿಗೆ ಮೊಮ್ಮಗನ ಮೊರೆ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

ಹೃದ್ರೋಗ ಆಸ್ಪತ್ರೆಗಳ ಸುಧಾರಣೆ ಅಗತ್ಯ: ಡಾ| ಜವಳಿ

fbdfgtre

ಕೋವಿಡ್ : 8 ಜಿಲ್ಲೆಯಲ್ಲಿ ಶೂನ್ಯ ಪ್ರಕರಣ | ರಾಜ್ಯದಲ್ಲಿಂದು 677 ಹೊಸ ಕೇಸ್ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.