Udayavni Special

ಸಿಟಿಯೊಳಗೆ ಬಸ್‌ ಬೇ ನಿರ್ಮಾಣ; 1 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಗೆ ಸಿದ್ಧತೆ


Team Udayavani, Aug 3, 2021, 3:20 AM IST

ಸಿಟಿಯೊಳಗೆ ಬಸ್‌ ಬೇ ನಿರ್ಮಾಣ; 1 ಕೋಟಿ ರೂ. ವೆಚ್ಚದಲ್ಲಿ ಟೆಂಡರ್‌ಗೆ ಸಿದ್ಧತೆ

ಮಹಾನಗರ: ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂ ರಿಗೆ ಪೂರವಾಗುವಂತೆ ನಗರದಲ್ಲಿನ ಪ್ರಮುಖ ಜಂಕ್ಷನ್‌ಗಳಲ್ಲಿ 1.09 ಕೋಟಿ ರೂ. ವೆಚ್ಚದಲ್ಲಿ ಬಸ್‌ ಬೇ ನಿರ್ಮಾಣಕ್ಕೆ ಮನಪಾ ಮುಂದಾಗಿದೆ.

ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ ನಗರದ ಬಂಟ್ಸ್‌ ಹಾಸ್ಟೆಲ್‌, ಮಲ್ಲಿಕಟ್ಟೆ, ಕೆಪಿಟಿ, ಮೇರಿಹಿಲ್‌, ಕುಲಶೇಖರ ಸಹಿತ ಇತರ ಜಂಕ್ಷನ್‌ಗಳಲ್ಲಿ ಬಸ್‌ ಬೇ ನಿರ್ಮಾಣ ಮಾಡುವ ಬಗ್ಗೆ ಕ್ರಿಯಾ ಯೋಜನೆಯನ್ನು ಸರಕಾರಕ್ಕೆ ಸಲ್ಲಿಕೆ ಮಾಡಲಿದ್ದು, ಸದ್ಯದಲ್ಲೇ ಟೆಂಡರ್‌ ಕರೆಯಲು ನಿರ್ಧರಿಸಲಾಗಿದೆ. ಅದರೊಂದಿಗೆ ಪ್ರಮುಖ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆಗೆ ಒತ್ತು ನೀಡುವುದು ಪಾಲಿಕೆಯ ಉದ್ದೇಶ.

ಹಂಪನಕಟ್ಟೆ, ಬಂಟ್ಸ್‌ಹಾಸ್ಟೆಲ್‌, ಪಿ.ವಿ. ಎಸ್‌. ಜಂಕ್ಷನ್‌, ಡಾ| ಬಿ.ಆರ್‌. ಅಂಬೇಡ್ಕರ್‌ ವೃತ್ತ ಸಹಿತ ನಗರದ ವಿವಿಧ ಕಡೆಗಳಲ್ಲಿ ಬಸ್‌ ಲೇನ್‌ ಈಗಾಗಲೇ ಇದ್ದು, ಅದು ಸಮರ್ಪಕವಾಗಿ ವಿನಿಯೋಗವಾಗುತ್ತಿಲ್ಲ. ಅಲ್ಲಿಯ ಬಸ್‌ ಲೇನ್‌ ಅಭಿವೃದ್ಧಿಯ ಜತೆ ಮತ್ತೂ ಕೆಲವು ಜಂಕ್ಷನ್‌ಗಳಲ್ಲಿ ಅಗತ್ಯವಿದ್ದರೆ ಅಲ್ಲಿಯೂ ಬಸ್‌ ಬೇ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗುತ್ತಿದೆ.

ವೃತ್ತ, ಜಂಕ್ಷನ್‌ಗಳ ಅಭಿವೃದ್ಧಿ:

ಬಸ್‌ ಬೇ ನಿರ್ಮಾಣದ ಜತೆಯೇ ಪ್ರಮುಖ ವೃತ್ತ, ಜಂಕ್ಷನ್‌ಗಳ ಅಭಿವೃದ್ಧಿಗೂ ಮನಪಾ ಮುಂದಾಗಿದ್ದು, ಅದರಂತೆ, ನಗರದ ರಾಷ್ಟ್ರಕವಿ ಗೋವಿಂದ ಪೈ ವೃತ್ತ (ನವಭಾರತ ವೃತ್ತ), ಉರ್ವ ವೃತ್ತ ಅಭಿವೃದ್ಧಿಗೊಳ್ಳಲಿದೆ. ಹೊನ್ನಕಟ್ಟೆ ಜಂಕ್ಷನ್‌, ಕೆಎಸ್ಸಾರ್ಟಿಸಿ ಜಂಕ್ಷನ್‌ ಅಭಿವೃದ್ಧಿಗೆ ಪೂರಕ ಕ್ರಮ ಕೈಗೊಳ್ಳಲಾಗುತ್ತಿದೆ. ಇನ್ನು ಬಿಜೈ, ಕಂಕನಾಡಿ, ಪಿವಿಎಸ್‌ ಜಂಕ್ಷನ್‌, ಹಂಪನಕಟ್ಟೆ ಸಹಿತ ವಿವಿಧ ಕಡೆಗಳಲ್ಲಿನ ಜಂಕ್ಷನ್‌ ಅಭಿವೃದ್ಧಿ ಕಾಮಗಾರಿಗಳು ಸಾಗುತ್ತಿದೆ.

ಸಿಟಿ ಬಸ್‌ ಮಾಲಕರ ಸಂಘದ ಅಧ್ಯಕ್ಷ ದಿಲ್‌ರಾಜ್‌ ಆಳ್ವ “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ “ನಗರದಲ್ಲಿ ಸುಗಮ ಸಂಚಾರಕ್ಕೆಂದು ಕೆಲವೊಂದು ಜಂಕ್ಷನ್‌ಗಳಲ್ಲಿ ಈಗಾಗಲೇ ಬಸ್‌ ಲೇನ್‌ಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಇವುಗಳು ಅವೈಜ್ಞಾನಿಕವಾಗಿದೆ. ಈ ಬಗ್ಗೆ ಈಗಾಗಲೇ ಪೊಲೀಸ್‌ ಆಯುಕ್ತರ ಗಮನಕ್ಕೂ ತಂದಿದ್ದೇವೆ. ಕೆಲವೊಂದು ಜಂಕ್ಷನ್‌ಗಳಲ್ಲಿನ ಬಸ್‌ ಲೇನ್‌ಗಳಲ್ಲಿ ಬಸ್‌ಗಳು ಸಾಲು ಸಾಲು ನಿಂತಿರುತ್ತವೆ. ಹೀಗಿದ್ದಾಗ ಮುಂದಿನ ಬಸ್‌ ನಿರ್ಗಮಿಸದೆ ಹಿಂದಿನ ಬಸ್‌ ಹೋಗಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಬಸ್‌ ಲೇನ್‌ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಪಾಲಿಕೆ ಬಸ್‌ ಬೇ ನಿರ್ಮಾಣಕ್ಕೆ ಮುಂದಾಗಿದೆ. ಆದರೆ ನಗರದಲ್ಲಿ ಅದಕ್ಕೆ ಅಷ್ಟೊಂದು ಜಾಗ ಇಲ್ಲ. ಆ ಬದಲು ಬಸ್‌ಗಾಗಿ ಪ್ರತ್ಯೇಕ ಲೇನ್‌ ನಿರ್ಮಾಣ ಮಾಡಬಹುದು’ ಎನ್ನುತ್ತಾರೆ.

ಲೇನ್‌ ತಪ್ಪುತ್ತಿದೆ  ಬಸ್‌ಗಳು ! :

ಸುಗಮ ಸಂಚಾರ ಸುಧಾರಣೆಯ ಉದ್ದೇಶದಿಂದ ನಗರದ ವಿವಿಧ ಕಡೆಗಳಲ್ಲಿ ಬಸ್‌ ಲೇನ್‌ ನಿರ್ಮಾಣ ಮಾಡಲಾಗಿದೆ. ಬಸ್‌ ಬೇ ನಿರ್ಮಾಣಕ್ಕೆ ಸ್ಥಳಾವಕಾಶದ ಕೊರತೆ ಇರುವ ಕಾರಣ ಲೇನ್‌ಗಳಾಗಿ ನಿರ್ಮಾಣ ಮಾಡಲಾಗಿದೆ. ಆದರೆ ಬಹುತೇಕ ಬಸ್‌ ಲೇನ್‌ ಒಳಗೆ ಬಸ್‌ಗಳು ಬರುತ್ತಿಲ್ಲ. ಬದಲಾಗಿ ರಸ್ತೆಯಲ್ಲೇ ನಿಲ್ಲುತ್ತಿವೆ. ಇನ್ನು ಬಸ್‌ ಲೇನ್‌ಗಳಲ್ಲಿ ಬಸ್‌ ಹೊರತುಪಡಿಸಿ ಇತರ ವಾಹನಗಳೂ ಸಂಚರಿಸುತ್ತಿವೆ. ಹೀಗಿದ್ದಾಗ ಹೊಸದಾಗಿ ಬಸ್‌ ಬೇ ನಿರ್ಮಾಣಕ್ಕೂ ಮುನ್ನ ಈ ರೀತಿಯ ಸಮಸ್ಯೆಗಳ ಬಗ್ಗೆಯೂ ಸ್ಥಳೀಯಾಡಳಿತ ಗಮನ ನೀಡಬೇಕಾಗಿದೆ.

ನಗರದ ಪ್ರಮುಖ ರಸ್ತೆಗಳು ವಾಹನ ದಟ್ಟಣೆಯಿಂದ ಕೂಡಿದ್ದು, ಸುಗಮ ವಾಹನ ಸಂಚಾರಕ್ಕೆ ಪ್ರಮುಖ ರಸ್ತೆಗಳಲ್ಲಿ ಬಸ್‌ ಬೇ ನಿರ್ಮಾಣ ಅಗತ್ಯವಿದೆ. ಈ ನಿಟ್ಟಿನಲ್ಲಿ ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆಯಡಿ 1.9 ಕೋಟಿ ರೂ. ವೆಚ್ಚದಲ್ಲಿ ಬಸ್‌ ಬೇ ನಿರ್ಮಿಸಲು ಮುಂದಾಗಿದ್ದೇವೆ. ಅದರಂತೆ ಸದ್ಯದಲ್ಲಿಯೇ ಟೆಂಡರ್‌ ಕರೆಯಲಾಗುವುದು. ಕೆಲವೊಂದು ಕಡೆಗಳಲ್ಲಿ ಬಸ್‌ ಲೇನ್‌ಗಳಿದ್ದು, ಅವುಗಳ ಸುಧಾರಣೆಗೂ ಕ್ರಮ ಕೈಗೊಳ್ಳಲಾ ಗುವುದು. -ಪ್ರೇಮಾನಂದ ಶೆಟ್ಟಿ, ಮನಪಾ ಮೇಯರ್‌

 

-ನವೀನ್‌ ಭಟ್‌ ಇಳಂತಿಲ

ಟಾಪ್ ನ್ಯೂಸ್

12aa

ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ, 166 ಮಂದಿ ಸಾವು

ಭಾರತದಲ್ಲಿ ಕಳೆದ 24ಗಂಟೆಗಳಲ್ಲಿ 15,981 ಕೋವಿಡ್ ಪ್ರಕರಣ ಪತ್ತೆ, 166 ಮಂದಿ ಸಾವು

michael vaughan on rahul dravid

‘ಹುಷಾರಾಗಿರಿ…’: ದ್ರಾವಿಡ್ ನೇಮಕದ ಸುದ್ದಿ ಕೇಳಿ ವಿಶ್ವ ಕ್ರಿಕೆಟ್ ಗೆ ಎಚ್ಚರಿಸಿದ ವಾನ್!

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

ಇದು 14ನೇ ಬಾರಿಯ ಏರಿಕೆ; ಮುಂಬೈನಲ್ಲಿ ಪೆಟ್ರೋಲ್‌ ಲೀಟರ್‌ಗೆ 111.09 ರೂ.

1-aaa

‘ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ’ ಕಾರ್ಯಕ್ರಮಕ್ಕೆ ಮರು ಚಾಲನೆ ನೀಡಿದ ಸಿಎಂ

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಬಿಜೆಪಿ ಅಧಿಕಾರಕ್ಕೆ ಬರಲಿದೆಯಾ ಕುತ್ತು? ಮೈಲಾರಸ್ವಾಮಿ ಕಾರ್ಣಿಕ ನುಡಿ ಏನು ಗೊತ್ತಾ?

ಪುತ್ತೂರು: ಎಂಡೋ ಸಲ್ಫಾನ್ ಪೀಡಿತ ಬಾಲಕನ ಮೇಲೆ ಅತ್ಯಾಚಾರ; ಸಲಿಂಗ ಕಾಮುಕನ ಬಂಧನ

ಪುತ್ತೂರು:ಕಬ್ಬು ಕೊಡಿಸುವುದಾಗಿ ಹೇಳಿ ಬಾಲಕನ ಮೇಲೆ ಅತ್ಯಾಚಾರ; ಆರೋಪಿ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆ.ಸಿರೋಡ್ ಬೈಕ್ ಸ್ಕಿಡ್ : ಇಬ್ಬರ ದಾರುಣ ಸಾವು

ಕೆ.ಸಿರೋಡ್ ಬೈಕ್ ಸ್ಕಿಡ್ : ಇಬ್ಬರ ದಾರುಣ ಸಾವು

incident held at mangalore

ಮಂಗಳೂರು: ಪಾರ್ಟಿ ಮಾಡಲು ಹೋದ ಗೆಳೆಯರ ನಡುವೆ ಕಿರಿಕ್‌: ಕೊಲೆಯಲ್ಲಿ ಅಂತ್ಯ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಪ್ರತೀ ಠಾಣೆಯಲ್ಲೂ ಎಸ್‌ಜೆಪಿಯು ಪುನಶ್ಚೇತನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಕರಾವಳಿ: ಸಂಭ್ರಮದ ನವರಾತ್ರಿ,ದಸರಾ ಸಮಾಪನ

ಶೇ.82ರಷ್ಟು ಮಂದಿಗೆ ಲಸಿಕೆ ಪೂರ್ಣ; ಶೇ.18 ಗುರಿ ಮುಟ್ಟುವುದೇ ಸವಾಲು

ಶೇ.82ರಷ್ಟು ಮಂದಿಗೆ ಲಸಿಕೆ ಪೂರ್ಣ; ಶೇ.18 ಗುರಿ ಮುಟ್ಟುವುದೇ ಸವಾಲು

MUST WATCH

udayavani youtube

ಹುಮನಾಬಾದ್ ನಲ್ಲಿ ವಿಜಯ ದಶಮಿ ಸಂಭ್ರಮ : ನೋಡುಗರ ಗಮನ ಸೆಳೆದ ರಾವಣನ ಪ್ರತಿಕೃತಿ

udayavani youtube

ಯಾರಿಗೆ ಒಲಿಯುತ್ತೆ IPL ಟ್ರೋಫಿ|UDAYAVANI NEWS BULLETIN|15/10/2021

udayavani youtube

ನವರಾತ್ರಿ ಸಂಭ್ರಮ: ಶಿರಸಿ ಮಾರಿಕಾಂಬಾ ದೇವಸ್ಥಾನಕ್ಕೆ ಭಕ್ತರ ದಂಡು

udayavani youtube

ಅಂಬಾರಿ ಹೊರುವ ಅಭಿಮನ್ಯುಗೆ ಮತ್ತು ದಸರಾ ಗಜಪಡೆಗೆ ಬಣ್ಣದ ಅಲಂಕಾರ..

udayavani youtube

ಇದೇ ದಸರಾ ಇತಿಹಾಸದಲ್ಲೇ ಮೊದಲ ಬಾರಿಗೆ ಅಂಬಾರಿ‌ಉತ್ಸವ ಮೂರ್ತಿ ಮೆರವಣಿಗೆ…

ಹೊಸ ಸೇರ್ಪಡೆ

ಸೆಲಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಯುವಕ ನೀರು ಪಾಲು

ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ: ಕವಲಗೇರಿ ಗ್ರಾಮ ವೀಕ್ಷಣೆ ಮಾಡಿದ ಧಾರವಾಡ ಡಿಸಿ

‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ’: ಕವಲಗೇರಿ ಗ್ರಾಮ ವೀಕ್ಷಣೆ ಮಾಡಿದ ಧಾರವಾಡ ಡಿಸಿ

12aa

ರೈತ ಪ್ರತಿಭಟನೆಯಲ್ಲಿ ಕ್ರಿಮಿನಲ್ ಗಳು ಸೇರಿ ತಾಲಿಬಾನ್ ವರ್ತನೆ: ಬಿಜೆಪಿ

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ಕೊಟ್ಟೂರಿನಲ್ಲಿ ದಸರಾ ಮಹೋತ್ಸವ  

ದೇವನಗರಿಯಲ್ಲಿ ಅದ್ಧೂರಿ ಶೋಭಾಯಾತ್ರೆ

ದೇವನಗರಿಯಲ್ಲಿ ಅದ್ಧೂರಿ ಶೋಭಾಯಾತ್ರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.