ಸಿಎಲ್‌ಸಿಎಸ್‌ಎಸ್‌ ಸಬ್ಸಿಡಿ ಸಾಲಮಿತಿ: 5 ಕೋ.ರೂ.ಗೇರಿಸಲು ಆಗ್ರಹ

Team Udayavani, Dec 11, 2018, 9:10 AM IST

clcss.jpg

ಮಂಗಳೂರು: ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ (ಎಂಎಸ್‌ಎಂಇ)ಗಳಲ್ಲಿ ತಂತ್ರಜ್ಞಾನ ಉನ್ನತಿಗೇರಿಸಲು ಇರುವ ಸಾಲಸಂಪರ್ಕ ಬಂಡವಾಳ ಸಹಾಯಧನ ಯೋಜನೆ (ಸಿಎಲ್‌ಸಿಎಸ್‌ಎಸ್‌)ಯಲ್ಲಿ ಶೇ. 15 ಬಂಡವಾಳ ಸಬ್ಸಿಡಿ ದರದ ಸಾಲಮಿತಿಯನ್ನು ಸಬ್ಸಿಡಿ ಅನುಪಾತದ ಏರಿಕೆಯೊಂದಿಗೆ 5 ಕೋ.ರೂ.ಗಳಿಗೆ ಹೆಚ್ಚಿಸಬೇಕು ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘ (ಕಾಸಿಯಾ) ಸರಕಾರವನ್ನು ಆಗ್ರಹಿಸಿದೆ.

ಮಂಗಳೂರಿನಲ್ಲಿ ಸೋಮವಾರ ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಕಾಸಿಯಾ ಅಧ್ಯಕ್ಷ ಬಸವರಾಜ ಎಸ್‌. ಜವಳಿ, ಈ ಯೋಜನೆಯಡಿ ಪ್ರಸ್ತುತ ಸಬ್ಸಿಡಿ ದರದಲ್ಲಿ ಸಾಲಮಿತಿ 1 ಕೋ.ರೂ. ಮಾತ್ರ ಇದೆ. ಭಾರತೀಯ ಉತ್ಪಾದನ ವಲಯದ ವ್ಯಾಪಕ ಬಂಡವಾಳ ಸ್ವರೂಪ ಹಾಗೂ ಸಾಲ ಮತ್ತು ಸಹಾಯಧನ ಬಹುತೇಕ ಒಂದು ದಶಕದ ಹಿಂದಿನ ದ್ದಾಗಿರುವುದರಿಂದ ಈ ಯೋಜನೆಯ ಪುನರ್‌ವಿಮರ್ಶೆ ಅವಶ್ಯ ಎಂದರು.

ಎಂಎಸ್‌ಎಂಇ ವ್ಯಾಖ್ಯಾನ: ಲೋಪ 
ಪ್ರಸ್ತುತ ಕೇಂದ್ರ ಸರಕಾರ ಎಂಎಸ್‌ಎಂಇಗಳ ವ್ಯಾಖ್ಯಾನ ಪರಿಷ್ಕರಿಸುತ್ತಿದ್ದು, ಇದು ಎಂಎಸ್‌ಎಂಇ ಕ್ಷೇತ್ರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಹೊಸ ವ್ಯಾಖ್ಯಾನದಂತೆ ಕಿರು ಕೈಗಾರಿಕೆ 5 ಕೋ.ರೂ., 5 ಕೋ.ರೂ.ನಿಂದ 75 ಕೋ.ರೂ.ವರೆಗೆ ಸಣ್ಣ ಹಾಗೂ 75 ಕೋ.ರೂ.ನಿಂದ 250 ಕೋ.ರೂ.ವರೆಗೆ ಮಧ್ಯಮ ಕೈಗಾರಿಕೆ ಎಂದು ಪರಿಗಣಿಸಲಾಗುತ್ತಿದೆ. ವ್ಯಾಖ್ಯಾನ ಕರಡು ಪ್ರಕ್ರಿಯೆಯಲ್ಲಿ ತಿದ್ದುಪಡಿ ಮಾಡಿ 2 ಕೋ.ರೂ.ವರೆಗೆ ಕಿರುಕೈಗಾರಿಕೆ, 2ರಿಂದ 25 ಕೋ.ರೂ. ವರೆಗೆ ಸಣ್ಣ ಹಾಗೂ 25ರಿಂದ 50 ಕೋ.ರೂ. ವರೆಗೆ ಮಧ್ಯಮ ಕೈಗಾರಿಕೆ ಎಂದು ಪರಿಗಣಿಸಬೇಕು ಎಂದು ಕಾಸಿಯಾ ಆಗ್ರಹಿಸುತ್ತದೆ ಎಂದರು.

ಮೂಲ ಸೌಕರ್ಯ ಉನ್ನತಿ
ಕೆಎಸ್‌ಎಸ್‌ಐಡಿಸಿ ಮತ್ತು ಕೆಐಎಡಿಬಿಯಿಂದ ಅಭಿವೃದ್ಧಿಪಡಿಸಲಾದ ಕೈಗಾರಿಕಾ ನಿವೇಶನಗಳು ರಸ್ತೆಗಳು, ಕುಡಿಯುವ ನೀರು, ಒಳಚರಂಡಿಗಳು, ಬೀದಿದೀಪಗಳಂತಹ ಸೂಕ್ತ ಮೂಲಸೌಕರ್ಯಗಳ ಕೊರತೆ ಎದುರಿಸುತ್ತಿವೆ. ಸೂಕ್ತ ಮೂಲ ಸೌಕರ್ಯಗಳೊಂದಿಗೆ ಕೈಗಾರಿಕಾ ಎಸ್ಟೇಟ್‌ಗಳು ಮತ್ತು ಪ್ರದೇಶಗಳನ್ನು ಉನ್ನತಗೊಳಿಸಬೇಕು. ಕೆಎಸ್‌ಎಸ್‌ಐಡಿಸಿ ಮತ್ತು ಕೆಐಎಡಿಬಿಯಲ್ಲಿ ಎಂಎಸ್‌ಎಂಇಗಳಿಗೆ ಸಂಬಂಧಿಸಿ ಅಧಿಕ ಸಂಖ್ಯೆಯಲ್ಲಿ ಅರ್ಜಿಗಳು ಬಾಕಿ ಇವೆ. ಭೂ ಮಂಜೂರಾತಿ ಮತ್ತು ಹಂಚಿಕೆಗಾಗಿ ಇಂತಹ ಅರ್ಜಿಗಳನ್ನು ವಿಲೇವಾರಿ ಮಾಡಲು ಸರಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಜವಳಿಯವರು ಆಗ್ರಹಿಸಿದರು.

ದ.ಕ. ಜಿಲ್ಲೆಯ ಎಂಎಸ್‌ಎಂಇ ಸಮಸ್ಯೆಗಳು
ಜಿಲ್ಲೆಯಲ್ಲಿ ಬೈಕಂಪಾಡಿ ಕೈಗಾರಿಕಾ ಪ್ರದೇಶ ಮತ್ತು ಜಿಲ್ಲೆಯ ಇತರ ಕೈಗಾರಿಕಾ ಪ್ರದೇಶಗಳು ಮೂಲಸೌಕರ್ಯ ಕೊರತೆಗಳನ್ನು ಎದುರಿಸುತ್ತಿದ್ದು, ಇದನ್ನು ಪರಿಹರಿಸಿ ಉನ್ನತಗೊಳಿಸಬೇಕು. ಜಿಲ್ಲೆಯ ಇತರ ಸ್ಥಳಗಳಲ್ಲಿ ಹೊಸ ಕೈಗಾರಿಕಾ ಪ್ರದೇಶಗಳನ್ನು ಅಭಿವೃದ್ಧಿಗೊಳಿಸಲು ಕೆಐಎಡಿಬಿ ಕಾರ್ಯೋನ್ಮುಖವಾಗಬೇಕು. ವಿದ್ಯುತ್‌ ಪೂರೈಕೆಯನ್ನು ಸುಧಾರಿಸುವುದಕ್ಕಾಗಿ ಹಾಗೂ ಐಟಿ ವರ್ಗದ ಅಡಿ 100 ಎಚ್‌ಪಿ ತನಕ ಲೋಡ್‌ ವರ್ಗಿಕರಿಸಬೇಕು ಎಂಬ ಬೇಡಿಕೆ ಇದ್ದು, ಇದನ್ನು ಗಂಭೀರವಾಗಿ ಪರಿಗಣಿಸಿ ಇತ್ಯರ್ಥ ಗೊಳಿಸಬೇಕಾಗಿದೆ. ಯೆಯ್ನಾಡಿಯ ಕೈಗಾರಿಕಾ ಪ್ರದೇಶದಲ್ಲಿ ಮಹಿಳಾ ಉದ್ಯಮಿಗಳಿಗಾಗಿ ಬಹು ಅಂತಸ್ತಿನ ಸಂಕೀರ್ಣ ಸ್ಥಾಪಿಸಬೇಕು, ಜೆಸ್ಕೋಗೆ ಈ ಹಿಂದೆ ನೀಡಿದ್ದ ಭೂಮಿಯನ್ನು ಜಿಲ್ಲೆಯಲ್ಲಿ ಎಂಎಸ್‌ಎಂಇಗಳ ಅಭಿವೃದ್ಧಿಗಾಗಿ ಮಂಜೂರು ಮಾಡಬೇಕು ಮುಂತಾದ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಸರಕಾರವನ್ನು ಕಾಸಿಯಾ ಆಗ್ರಹಿಸುತ್ತದೆ ಎಂದು ಜವಳಿ ವಿವರಿಸಿದರು.
ಕಾಸಿಯಾ ಉಪಾಧ್ಯಕ್ಷ ಆರ್‌.ರಾಜು, ಪ್ರಧಾನ ಕಾರ್ಯದರ್ಶಿ ರವಿಕಿರಣ್‌ ಕುಲಕರ್ಣಿ, ಜಂಟಿ ಕಾರ್ಯದರ್ಶಿಗಳಾದ ಸುರೇಶ್‌ ಎನ್‌. ಸಾಗರ್‌, ಎಸ್‌. ವಿಶ್ವೇಶ್ವರಯ್ಯ, ಕೋಶಾಧಿಕಾರಿ ಶ್ರೀನಾಥ್‌ ಭಂಡಾರಿ ಉದ್ಯಾವರ, ಮಂಗಳೂರು-ಉಡುಪಿ ವಲಯದ ಕಾರ್ಯಕಾರಿ ಸಮಿತಿ ಸದಸ್ಯರಾದ ಅರುಣ್‌ ಪಡಿಯಾರ್‌, ಅಜಿತ್‌ ಕಾಮತ್‌, ಕೆಎಸ್‌ಐಎ ಅಧ್ಯಕ್ಷ ಗೌರವ್‌ ಹೆಗ್ಡೆ ಉಪಸ್ಥಿತರಿದ್ದರು.

ಪ್ರಮುಖ ಬೇಡಿಕೆಗಳು
* ಬೈಕಂಪಾಡಿಯಲ್ಲಿ ಕೈಗಾರಿಕಾ ಪ್ರಾಧಿಕಾರ ಸ್ಥಾಪನೆ.
* ಎಂಎಸ್‌ಎಂಇಗಾಗಿ ಪ್ರತ್ಯೇಕ ಕನಿಷ್ಠ ವೇತನ.
* ಎನ್‌ಎಂಪಿಟಿ ಸೌಲಭ್ಯವನ್ನು ಗರಿಷ್ಠವಾಗಿ ಬಳಸಿಕೊಳ್ಳಲು ಲಾಜಿಸ್ಟಿಕ್‌ ಪಾರ್ಕ್‌ ಅಭಿವೃದ್ಧಿ.
* ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಪರೀಕ್ಷಾರ್ಥ ಪ್ರಯೋಗಾಲಯ ಸ್ಥಾಪನೆ.
* ಎಂಎಸ್‌ಎಂಇಗಳಿಗೆ 5 ಕೋ.ರೂ.ವರೆಗೆ ರಿಯಾಯಿತಿ ದರದಲ್ಲಿ ಸಹಾಯಧನ.
* ಕಾಸಿಯಾ ಪದಾಧಿಕಾರಿಗಳ ಚುನಾವಣೆ ಸ್ವರೂಪದಲ್ಲಿ ಬದಲಾವಣೆಗೆ ಚಿಂತನೆ.
* ಬೆಂಗಳೂರಿನಲ್ಲಿ ನವೋದ್ಯಮಿಗಳಿಗೆ ತರಬೇತಿಗಾಗಿ 5 ಎಕ್ರೆ ಜಾಗದಲ್ಲಿ ಕಾಸಿಯಾ ಸೆಂಟರ್‌ ಅಫ್‌ ಎಕ್ಸೆಲೆನ್ಸಿ ಸ್ಥಾಪನೆ. 

ಟಾಪ್ ನ್ಯೂಸ್

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqqwewqe

BJP; ಖೂಬಾ ಮತ್ತೊಮ್ಮೆ ಸಚಿವರಾಗ್ತಾರೆ : ಔರಾದ್ ನಲ್ಲಿ ಯಡಿಯೂರಪ್ಪ ಘೋಷಣೆ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಬಾಗಲಕೋಟೆ: ಯಾರೇ ಪಕ್ಷ ಬಿಟ್ಟರೂ ಏನೂ ಆಗಲ್ಲ- ಸಿದ್ದು ಸವದಿ

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

ಧಾರವಾಡ: “ಶ್ರೀರಾಮ-ಕೃಷ್ಣರ ಜೀವನ ಇಂದಿಗೂ ಆದರ್ಶ’

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kollywood: ಅಜಿತ್‌ ಹುಟ್ಟುಹಬ್ಬಕ್ಕೆ ಸೂಪರ್‌ ಹಿಟ್ ʼಬಿಲ್ಲಾʼ ರೀ ರಿಲೀಸ್; ಫ್ಯಾನ್ಸ್‌ ಖುಷ್

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.