ಕರಾವಳಿ ಭಾಗದ ಅಪರಾಧ ಸುದ್ದಿಗಳು


Team Udayavani, May 18, 2019, 6:00 AM IST

Crime-545

ಕೆಪಿಟಿ ಬಳಿ ನೀರಿನ ಟ್ಯಾಂಕರ್‌ ಪಲ್ಟಿ
ಮಂಗಳೂರು: ನಗರದ ಕೆಪಿಟಿ ಬಳಿಯ ಸಂಕೈಗುಡ್ಡ 7ನೇ ಕ್ರಾಸ್‌ನ ಚಂದಪ್ಪ ಸ್ಟೋರ್‌ ಬಳಿ ಶುಕ್ರವಾರ ಬೆಳಗ್ಗೆ ಮಿನಿ ನೀರಿನ ಟ್ಯಾಂಕರ್‌ ಪಲ್ಟಿಯಾಗಿದ್ದು, ಯಾರಿಗೂ ಅಪಾಯ ಸಂಭವಿಸಿಲ್ಲ. ಆದರೆ ಅಲ್ಲಿದ್ದ ಅಂಗಡಿಗೆ ಸುಮಾರು 45,000 ರೂ. ನಷ್ಟ ಸಂಭವಿಸಿದೆ.

ಟ್ಯಾಂಕರ್‌ ಚಾಲಕ ಮನೋಜ್‌ ಕುಮಾರ್‌ ಅವರಿಗೆ ಗಾಯ ವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಚಾಲಕನು ತೆರೆದ ಡಿವೈಡರ್‌ ಬಳಿ ಲಾರಿಯೊಂದನ್ನು ಎಡಬದಿಯಿಂದ ಓವರ್‌ ಟೇಕ್‌ ಮಾಡುವ ಭರದಲ್ಲಿ ಒಮ್ಮೆಲೇ ಎಡಕ್ಕೆ ತಿರುಗಿಸಿದ ಪರಿಣಾಮ ಟ್ಯಾಂಕರ್‌ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ.ಅಂಗಡಿಯ ಛಾವಣಿ ಶೀಟ್‌ಗೆ ಹಾನಿಯಾಗಿದೆ.

ಟ್ಯಾಂಕರನ್ನು ಕ್ರೇನ್‌ ಮೂಲಕ ಮೇಲಕ್ಕೆತ್ತಲಾಗಿದೆ. ಈ ಬಗ್ಗೆ ಟ್ರಾಫಿಕ್‌ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂಬಯಿಯಲ್ಲಿ ನೇರಳಕಟ್ಟೆಯ ಯುವಕ ಸಾವು
ಕುಂದಾಪುರ: ಮುಂಬಯಿಯಲ್ಲಿ ಶುಕ್ರ ವಾರ ವಿದ್ಯುತ್‌ ಶಾರ್ಟ್‌ ಸರ್ಕ್ನೂ ಟ್‌ ನಿಂ ದಾಗಿ ಕರ್ಕುಂಜೆ ಗ್ರಾಮದ ನೇರಳಕಟ್ಟೆಯ ದಿ| ಮಂಜುನಾಥ ಅವರ ಪುತ್ರ ಯೋಗೀಶ್‌ (30) ಅವರು ಸಾವನ್ನಪ್ಪಿದ್ದಾರೆ. ಮಂಜುನಾಥ ಅವರ ಮೂವರು ಪುತ್ರರ ಪೈಕಿ ಇವರು ಕೊನೆಯವರು. ಯೋಗೀಶ್‌ ಹಲವು ವರ್ಷಗಳಿಂದ ಮುಂಬಯಿಯ ಹೊಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

ಪೋಕೊÕà : ಆರೋಪಿಗೆ ನ್ಯಾಯಾಂಗ ಬಂಧನ
ಕುಂದಾಪುರ: ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಸಂಬಂಧ ರಾಜಸ್ಥಾನ ಮೂಲದ ಪ್ರಕಾಶ್‌ (30)ನನ್ನು ಗಂಗೊಳ್ಳಿ ಪೊಲೀಸರು ಉಡುಪಿಯಲ್ಲಿ ಗುರುವಾರ ರಾತ್ರಿ ಬಂಧಿಸಿದ್ದಾರೆ.

ಈತನನ್ನು ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿ ಸಿದ್ದು, ಮೇ 29ರ ವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.

ಈತ ಗಂಗೊಳ್ಳಿಯ ಮನೆಯೊಂದ ರಲ್ಲಿ ಗ್ರಿಲ್ಸ್‌ ಕೆಲಸ ನಿರ್ವಹಿಸುತ್ತಿದ್ದ. ಮನೆಯ ಮೊದ ಲ ಮಹಡಿಯಲ್ಲಿ ಮನೆ ಮಂದಿ ವಾಸವಾಗಿದ್ದು, ಕೆಳ ಅಂತಸ್ತಿನ ದುರಸ್ತಿ ಕಾರ್ಯ ನಡೆಯುತ್ತಿತ್ತು. ಗುರುವಾರ ಮಧ್ಯಾಹ್ನ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಕೆಳ ಅಂತಸ್ತಿನಲ್ಲಿ ಆಟವಾಡುತ್ತಿದ್ದ ಐದು ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಎನ್ನಲಾಗಿದೆ.

ವಿಕೃತ ಕಾಮಿಯನ್ನು ಸೆರೆಹಿಡಿದ
ಎಂಆರ್‌ಪಿಎಲ್‌ ಭದ್ರತಾ ಸಿಬಂದಿ
ಸುರತ್ಕಲ್‌: ಮಹಿಳೆಯರು ಒಣಗಲು ಹಾಕಿದ ಬಟ್ಟೆಗಳನ್ನು ಧರಿಸಿ ವಿಕೃತ ಆನಂದ ಪಡೆಯುತ್ತಿದ್ದ ಸಿದ್ಧಿಕ್‌ ಎಂಬ ಯುವಕನನ್ನು ಎಂಆರ್‌ಪಿಎಲ್‌ ಭದ್ರತಾ ಸಿಬಂದಿ ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದೆ.

ಹಲವು ದಿನಗಳಿಂದ ಈತನ ವರ್ತನೆಯನ್ನು ಗಮನಿಸಿದ ಬಳಿಕ ಕಾವಲುಗಾರರು ಸೆರೆ ಹಿಡಿದು ಸುರತ್ಕಲ್‌ ಠಾಣೆಗೆ ಒಪ್ಪಿಸಿ ದರು. ಪೊಲೀಸರು ವಿಚಾರಿಸಿದಾಗ ಆತ ತಪ್ಪೊಪ್ಪಿ ಕೊಂಡ.ಬಳಿಕ ಮುಚ್ಚ ಳಿಕೆ ಬರೆಸಿಕೊಂಡು ಎಚ್ಚರಿಕೆ ನೀಡಿ ಕುಟುಂಬದವರ ಜತೆ ಕಳಿಸಿಕೊಡಲಾಯಿತು.

ಬೈಕಿಗೆ ಕಾರು ಢಿಕ್ಕಿ
ಶಿರ್ವ: ಶಿರ್ವ- ಬೆಳ್ಮಣ್‌ ಮುಖ್ಯರಸ್ತೆಯ ಕಾಡಿಕಂಬಳ ಜ್ಯೋತಿ ಎಂಜಿನಿಯರಿಂಗ್‌ ವರ್ಕ್‌ ಶಾಪ್‌ ಬಳಿ ಮೇ 17ರ ಬೆಳಗ್ಗೆ ದ್ವಿಚಕ್ರ ವಾಹನ‌ಕ್ಕೆ ಕಾರು ಢಿಕ್ಕಿ ಹೊಡೆದು ಸವಾರ ಜಾನ್‌ ಪೀಟರ್‌ ರೇಗೋ ಗಾಯಗೊಂಡಿದ್ದಾರೆ.

ಜೀವ ಬೆದರಿಕೆ
ಸಿದ್ದಾಪುರ: ಜಾನು ವಾರುಗಳನ್ನು ತೋಟಕ್ಕೆ ಮೇಯಲು ಬಿಡಬೇಡಿ, ಕೃಷಿ ನಾಶವಾಗುತ್ತದೆ ಎಂದು ಹೇಳಿದ್ದ‌ಕ್ಕೆ ಮೇ 16ರಂದು ಸಂಬಂಧಿಕರಾದ ಕೃಷ್ಣವೇಣಿ, ಸುರೇಂದ್ರ, ರಾಘವೇಂದ್ರ, ಸರೋಜಾ ಮತ್ತು ರಕ್ಷಿತಾ ಅವರು ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ರಟ್ಟಾಡಿ ನರಸೀಪುರ ಚಂದ್ರ ದೇವಾಡಿಗ ಅವರು ಆಮಾಸೆಬೈಲು ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕರ್ಕುಂಜೆ: ಆತ್ಮಹತ್ಯೆ
ಕುಂದಾಪುರ: ಕುಡಿತದ ಚಟ ಹೊಂದಿದ್ದ ಕರ್ಕುಂಜೆ ನೇರಳ ಕಟ್ಟೆಯ ಹಿಲ್ಕೋಡಿನ ನಿವಾಸಿ ರಾಜು ಪೂಜಾರಿ (46) ಅವರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ. ವಿವಾಹಿತರಾಗಿದ್ದ ಇವರು ಈ ಹಿಂದೆ 3 ಬಾರಿ ಆತ್ಮಹತ್ಯೆಗೆ ಯತ್ನಿಸಿದ್ದ ರೆಂದು ಕಂಡೂÉರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಿಪ್ಪರ್‌ಗೆ ಸಿಲುಕಿದ ಬೈಕ್‌; ಸವಾರ ಪಾರು
ಕಾಪು: ಬೈಕ್‌ ಸಹಿ ತ ಸವಾರನೋರ್ವ ಟಿಪ್ಪರ್‌ನಡಿಗೆ ಸಿಲುಕಿ ರಸ್ತೆಯಲ್ಲಿ 20 ಮೀಟರ್‌ ದೂರದವರೆಗೆ ಎಳೆದುಕೊಂಡು ಬಂದರೂ ಪವಾಡ ಸದೃಶ ರೀತಿಯಲ್ಲಿ ಪಾರಾದ ಘಟನೆ ರಾ. ಹೆ. 66ರ ಕಟಪಾಡಿ ಜಂಕ್ಷನ್‌ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದೆ.

ಉಡುಪಿಯಿಂದ ಬಂದ ಟಿಪ್ಪರ್‌ ಕಟಪಾಡಿ ಜಂಕ್ಷನ್‌ನಲ್ಲಿ ಶಿರ್ವಕ್ಕೆ ತಿರುಗುತ್ತಿತ್ತು. ಆಗ ಹಿಂದಿನಿಂದ ಬಂದ ಬೈಕಿನ ಮುಂದಿನ ಚಕ್ರ ಟಿಪ್ಪರ್‌ನ ಹಿಂದಿನ ಟಯರ್‌ಗೆ ಸಿಲುಕಿತ್ತು. ಇದು ಟಿಪ್ಪರ್‌ ಚಾಲಕನ ಗಮನಕ್ಕೆ ಬಾರದೇ ಬೈಕನ್ನು ಎಳೆದುಕೊಂಡು ಬರುವಂತಾಗಿದೆ.

ಬೈಕ್‌ ಮತ್ತು ಸವಾರನನ್ನು ಟಿಪ್ಪರ್‌ 20 ಸುಮಾರು ಮೀಟರ್‌ವರೆಗೆ ಎಳೆದುಕೊಂಡು ಬಂದಿದ್ದರೂ ಸವಾರ ಪ್ರಾಣಾಪಾಯದಿಂದ ಪಾರಾ ಗಿ ದ್ದಾರೆ. ಸವಾರನನ್ನು ಸ್ಥಳೀಯರು ಉಡುಪಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಾಲಕನಿಗೆ ಲೈಂಗಿಕ ದೌರ್ಜನ್ಯ ಆರೋಪ
ಪುತ್ತೂರು: ನರಿಮೊಗರು ಗ್ರಾಮದ ಪುರುಷರಕಟ್ಟೆಯ ಹಿಮಾಯುತುಲ್‌ ಇಸ್ಲಾಂ ಮದರಸದಲ್ಲಿ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ಪುತ್ತೂರು ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾ. 21ರಂದು ಬಾಲಕನೋರ್ವ ಮಸೀದಿಯ ಗುರುಗಳಿಗೆ ಪದ್ಧತಿಯಂತೆ ಚಹಾ ತಿಂಡಿ ತೆಗೆದುಕೊಂಡು ಹೋಗಿದ್ದ. ಈ ಸಂದ ರ್ಭ ಅನ್ವರ್‌ ಮೌಲವಿ ಅವರು ಮದರಸದ ಬಾಗಿಲು ಹಾಕಿ ಬಾಲಕನಿಗೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ಎ.7ರಂದು ಮತ್ತೂಮ್ಮೆ ಇದೇ ರೀತಿ ಮಾಡಿದ್ದು, ಯಾರಿಗಾದರೂ ತಿಳಿ ಸಿದರೆ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ.

ಬಾಲಕನು ಬಳಿಕ ಮದರಸ ಹಾಗೂ ಮಸೀದಿಗೆ ಹೋಗದಿರುವುದನ್ನು ಗಮನಿಸಿ ಮೇ 16ರಂದು ತಾಯಿ ವಿಚಾರಿಸಿದಾಗ ವಿಷಯ ತಿಳಿದು ಬಂದಿದ್ದು,ಈ ಹಿನ್ನೆಲೆಯಲ್ಲಿ ಮೇ 17ರಂದು ದೂರು ದಾಖಲಿಸಲಾಯಿತು.

ಮೂಡುತೋನ್ಸೆ: ಮರಳು ಲಾರಿ ವಶಕ್ಕೆ
ಮಲ್ಪೆ: ಅಕ್ರಮವಾಗಿ ಮರಳು ಸಾಗಾಟ ನಡೆಸುತ್ತಿದ್ದ ಲಾರಿಯನ್ನು ಮಲ್ಪೆ ಪೊಲೀಸರು ಮೂಡುತೋನ್ಸೆ ನಿಡಂಬಳ್ಳಿ ಬಳಿ ಶುಕ್ರವಾರ ಬೆಳಗ್ಗೆ ತಡೆದು ವಾಹನ ಮತ್ತು ಮರಳನ್ನು ವಶಪಡಿಸಿಕೊಂಡಿದ್ದಾರೆ.

ಮೂಡುತೋನ್ಸೆ ಗ್ರಾಮ ನಿಡಂಬಳ್ಳಿ ಮುದಲಕಟ್ಟೆಯ ನದಿಯಲ್ಲಿ ಕಳವು ಮಾಡಿದ ಮರಳನ್ನು ಮಹಮ್ಮದ್‌ ಶಫಿ ಅವರಿಗೆ ಸೇರಿದ ಜಾಗದಲ್ಲಿ ಶೇಖರಿಸಿಟ್ಟು ಟಿಪ್ಪರ್‌ ಮೂಲಕ ಸಾಗಿಸಲಾಗುತ್ತಿದೆ ಎಂಬ ಮಾಹಿತಿ ದೊರೆತ ಮೇರೆಗೆ ಮಲ್ಪೆ ಠಾಣಾಧಿಕಾರಿ ಮಧು ಬಿ. ಇ. ಮತ್ತು ಸಿಬಂದಿ ದಾಳಿ ನಡೆಸಿದರು.

ಟಿಪ್ಪರ್‌ ಚಾಲಕ ಬ್ರಹ್ಮಾವರ ಬೈಕಾಡಿ ಶಂಕರ್‌ನನ್ನು ವಶಕ್ಕೆ ವಿಚಾರಿಸಿದಾಗ ತಾನು, ವಾಹನದ ಮಾಲಕ ಸಂತೋಷ್‌ ಮತ್ತು ಜಾಗದ ಮಾಲಕ ಮಹಮ್ಮದ್‌ ಶಫಿ ಸೇರಿಕೊಂಡು ಅಕ್ರಮವಾಗಿ ಮರಳು ಸಾಗಾಟ ಮಾಡುವುದಾಗಿ ಒಪ್ಪಿಕೊಂಡಿದ್ದಾರೆ. ಸ್ವಾಧೀನಪಡಿಸಿಕೊಂಡ ಮರಳು ಮತ್ತು ಟಿಪ್ಪರಿನ ಮೌಲ್ಯ 3.08 ಲ. ರೂ.ಎಂದು ಅಂದಾಜಿಸಲಾಗಿದೆ.

ಕಟಪಾಡಿ : ವಿವಾಹಿತ ಮಹಿಳೆ ನಾಪತ್ತೆ
ಕಾಪು: ಕಟಪಾಡಿ ಅಗ್ರಹಾರ ನಿವಾಸಿ ಗೋಪಾಲ ಪೂಜಾರಿ ಅವರ ಪತ್ನಿ ರೇಣುಕಾ ಪೂಜಾರಿ (52) ಅವರು ಮೇ 16ರಿಂದ ನಾಪತ್ತೆಯಾಗಿದ್ದಾರೆ.

ಮುಂಬಯಿಯಲ್ಲಿ ಉದ್ಯೋಗ ದಲ್ಲಿರುವ ಗೋಪಾಲ ಪೂಜಾರಿ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ಎ. 29ರಂದು ಕಟಪಾಡಿಗೆ ಬಂದಿದ್ದರು. ಮೇ 15ರಂದು ಪತ್ನಿ ಮತ್ತು ಮಕ್ಕಳನ್ನು ಮನೆಯಲ್ಲೇ ಬಿಟ್ಟು, ಸಂತೆಕಟ್ಟೆಯ ಆಸ್ಪತ್ರೆಯಲ್ಲಿ ದಾಖಲಾಗಿದ್ದ ತಾಯಿಯನ್ನು ನೋಡಲು ತೆರಳಿದ್ದರು.
ಮೇ 16ರಂದು ಮನೆಗೆ ಬಂದಾಗ ರೇಣುಕಾ ಮನೆಯಲ್ಲಿ ರಲಿಲ್ಲ.ಬಳಿಕ ವಿವಿ ಧೆಡೆ ಹುಡುಕಾಡಿದರೂ ಆಕೆ ಪತ್ತೆ ಯಾಗಿಲ್ಲ ಎಂದು ಗೋಪಾಲ ಪೂಜಾರಿ ಪೊಲೀಸರಿಗೆ ದೂರು ನೀಡಿದ್ದಾರೆ.

ಮಹಿಳೆಯ ಮೊಬೈಲ್‌ ಲೊಕೇಶನ್‌ ಮಣಿಪುರವನ್ನು ತೋರಿಸುತ್ತಿದ್ದು, ಅಲ್ಲೆಲ್ಲ ಹುಡುಕಾಟ ನಡೆಸಿದರೂ ಪತ್ತೆ ಯಾಗಿಲ್ಲ.ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಿಕಪ್‌ ಢಿಕ್ಕಿ: ಗಾಯಾಳು ಮುಖ್ಯ ಶಿಕ್ಷಕ ಸಾವು
ಪುಂಜಾಲಕಟ್ಟೆ: ಹಿಮ್ಮುಖವಾಗಿ ಚಲಿಸುತ್ತಿದ್ದ ಪಿಕಪ್‌ ವಾಹನ ಢಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ಬಂಟ್ವಾಳ ತಾಲೂಕಿನ ಪಂಜಿಕಲ್ಲು ಗ್ರಾಮದ ಮುಕುಡ ನಿವಾಸಿ, ಸಿದ್ದಕಟ್ಟೆ ಸೈಂಟ್‌ ಪ್ಯಾಟ್ರಿಕ್‌ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ಜಾನ್‌ ಡಿ’ ಸೋಜಾ (53) ಅವರು ಮೇ 16ರಂದು ಆಸ್ಪತ್ರೆ ಯಲ್ಲಿ ಕೊನೆಯುಸಿರೆಳೆದರು.

ಮೇ 13ರಂದು ಸಿದ್ದಕಟ್ಟೆ ಚರ್ಚ್‌ ಮೈದಾನದಲ್ಲಿ ಅಪಘಾತ ಸಂಭವಿಸಿತ್ತು. ಮೃತರು ಪುತ್ರಿಯನ್ನು ಅಗಲಿದ್ದಾರೆ.

ಬೈಕ್‌ಗಳು ಢಿಕ್ಕಿ: ಗಾಯಾಳು ಸಾವು
ಪುತ್ತೂರು: ನಗರದ ಎಪಿಎಂಸಿ ರಸ್ತೆಯಲ್ಲಿ ಗುರು ವಾರ ರಾತ್ರಿ ಬೈಕುಗಳು ಪರ ಸ್ಪರ ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದ ಸಾಲ್ಮರ ನಿವಾಸಿ, ಟೈಲರ್‌ ಕುಶಾಲಪ್ಪ ಗೌಡ ಅವರು ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಸಾಲ್ಮರ ಸೆಲೂನ್‌ನಲ್ಲಿ ಕೆಲಸ ಮಾಡುತ್ತಿರುವ ಸಂತೋಷ್‌ ಅವರು ಚಲಾಯಿಸುತ್ತಿದ್ದ ಬೈಕಿಗೆ ಇನ್ನೊಂದು ಬೈಕ್‌ ಢಿಕ್ಕಿಯಾಗಿ ಪರಾರಿಯಾಗಿತ್ತು. ಪರಿಣಾಮ ಸಂತೋಷ್‌ ಜತೆ ಹಿಂಬದಿ ಸವಾರರಾಗಿದ್ದ ಕುಶಾಲಪ್ಪ ಗೌಡ ಅವರ ತಲೆಗೆ ಗಂಭೀರ ಸ್ವರೂಪದ ಗಾಯವಾಗಿತ್ತು. ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

ಪರಾರಿಯಾಗಿದ್ದ ಬೈಕ್‌ ಮತ್ತೂಂದು ಬೈಕಿಗೆ ಢಿಕ್ಕಿ!
ಢಿಕ್ಕಿ ಹೊಡೆದು ಪರಾರಿಯಾಗಿದ್ದ ಬೈಕ್‌ ನೆಲ್ಲಿಕಟ್ಟೆ ಬಳಿ ಮತ್ತೂಂದು ಬೈಕಿಗೆ ಢಿಕ್ಕಿಯಾಗಿದೆ. ಈ ಬೈಕ್‌ ಸವಾರರ ವಿರುದ್ಧ ಎರಡು ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಲ್ಲಾರು : ವಿವಾಹಿತ ನಾಪತ್ತೆ
ಕಾಪು: ಮಲ್ಲಾರು ಪಂಚಾಯತ್‌ ಮುಂಭಾಗದ ಭಾನುಮಾ ಕಾಂಪ್ಲೆಕ್ಸ್‌ ನಿವಾಸಿ ಸಕೀರ್‌ (38) ಮೇ 13ರಿಂದ ನಾಪತ್ತೆ ಯಾಗಿದ್ದಾರೆ. ಅಂದು ಬೆಳಗ್ಗೆ ಸೇಹಿತ ಕರೀಂ ಜತೆಗೆ ಉಡುಪಿಗೆಂದು ಹೋಗಿದ್ದವರು ರಾತ್ರಿ 9 ಗಂಟೆಗೆ ತಾನು ಗೋವಾದಲ್ಲಿದ್ದು, ಮರುದಿನ ಬರುವುದಾಗಿ ತನಗೆ ಕರೆ ಮಾಡಿ ತಿಳಿಸಿದ್ದರು ಎಂದು ಪತ್ನಿ ಮೈಮುನಾ ನೀಡಿರುವ ದೂರಿನಂತೆ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀಮತಿ ಶೆಟ್ಟಿ ಪ್ರಕರಣ: ಮುಖ್ಯ ಆರೋಪಿ ಇನ್ನೂ ಆಸ್ಪತ್ರೆಯಲ್ಲಿ
ಮಂಗಳೂರು: ಮಂಗಳಾದೇವಿ ಬಳಿಯ ಅಮರ್‌ ಆಳ್ವ ರಸ್ತೆಯ ನಿವಾಸಿ ಶ್ರೀಮತಿ ಶೆಟ್ಟಿ ಕೊಲೆ ಪ್ರಕರಣದ ಮುಖ್ಯ ಆರೋಪಿ ಜೋನಸ್‌ ಜೂಲಿ ಸ್ಯಾಮ್ಸನ್‌ ಇನ್ನೂ ಆಸ್ಪತ್ರೆಯಲ್ಲಿದ್ದು, ಚೇತರಿಸುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿ ವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿರುವ ಶ್ರೀಮತಿ ಶೆಟ್ಟಿ ಅವರ ಪಾದದ ಭಾಗಗಳ ವರದಿ ಇನ್ನಷ್ಟೇ ಬರ ಬೇಕಾಗಿದೆ.

ರೌಡಿ ಗೌರೀಶ್‌
ಆಸ್ಪತ್ರೆಯಿಂದ ಜೈಲಿಗೆ
ಮಂಗಳೂರು: ಜಪ್ಪಿನಮೊಗರಿನಲ್ಲಿ ಮೇ 9ರಂದು ರಾತ್ರಿ ಪೊಲೀಸ್‌ ಕಾರ್ಯಾಚರಣೆ ವೇಳೆ ಗುಂಡೇಟಿನಿಂದ ಗಾಯ ಗೊಂಡಿದ್ದ ರೌಡಿ ಶೀಟರ್‌ ಗೌರೀಶ್‌ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾನೆ. ಆತನನ್ನು ಕೋರ್ಟಿಗೆ ಹಾಜರುಪಡಿಸಲಾಗಿದ್ದು, ನ್ಯಾ ಯಾಂಗ ಬಂಧನವಿಧಿಸಲಾಗಿದೆ.

ಟಾಪ್ ನ್ಯೂಸ್

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

1-24-friday

Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು

dk-suresh

ಸಂಸದ ಡಿ.ಕೆ.ಸುರೇಶ್‌ ಆಸ್ತಿ ಮೌಲ್ಯ 593 ಕೋಟಿ ರೂ.!

Kohli IPL 2024

IPL; ಇಂದು ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Kannada Cinema: ತೆರೆಗೆ ಬಂತು ಯುವ, ತಾರಿಣಿ

Kannada Cinema: ತೆರೆಗೆ ಬಂತು ಯುವ, ತಾರಿಣಿ

5-toll-gate

Toll Gate: ಎ.1ರಿಂದ ಟೋಲ್‌ ದರದಲ್ಲಿ ಹೆಚ್ಚಳ

4-naxal-

Mangaluru: ಶರಣಾಗುವ ನಕ್ಸಲರಿಗೆ ಸಿಗಲಿದೆ 7.50 ಲ.ರೂ. ಪ್ರೋತ್ಸಾಹಧನ

3-blthgdy

Belthangady: ತುಮಕೂರು ತ್ರಿಬ್ಬಲ್ ಮರ್ಡರ್ ಪ್ರಕರಣ;ಮನೆಮಂದಿಗೆ ಇಂದು ತಲುಪಿದ ಮೃತದೇಹ

2-mukthar-ansari

Mukhtar Ansari: ಕುಖ್ಯಾತ ಗ್ಯಾಂಗ್‌ಸ್ಟರ್‌, 5 ಬಾರಿ ಶಾಸಕ ಅನ್ಸಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.