ಕರಾವಳಿ ಅಪರಾಧ ಸುದ್ದಿಗಳು

Team Udayavani, Jun 16, 2019, 9:53 AM IST

ಮಾದಕ ವಸ್ತು ಮಾರಾಟ ಆರೋಪಿ ಗೂಂಡಾ ಕಾಯ್ದೆಯಡಿ ಬಂಧನ
ಮಂಗಳೂರು: ಗಾಂಜಾ ಮತ್ತು ಇತರ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ತೌಡುಗೋಳಿ ಅಬ್ದುಲ್‌ ಅಜೀಜ್‌ (42)ನನ್ನು ಮಂಗಳೂರು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿದ್ದಾರೆ.

ಈತನ ವಿರುದ್ಧ ಕೊಣಾಜೆ ಸಹಿತ ವಿವಿಧ ಠಾಣೆಗಳಲ್ಲಿ 5 ಪ್ರಕರಣಗಳು ದಾಖಲಾಗಿವೆ. ಈ ಸಂಬಂಧ ಹಲವು ಬಾರಿ ಜೈಲಿಗೆ ಹೋಗಿ ಬಂದು ಮತ್ತೆ ಹಳೆ ಚಾಳಿಯನ್ನು ಮುಂದುವರಿಸಿದ್ದ. ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌ ನಿರ್ದೇಶನದ ಮೇರೆಗೆ ಕೊಣಾಜೆ ಪೊಲೀಸರು ಅಬ್ದುಲ್‌ ಅಝೀಜ್‌ ವಿರುದ್ಧ ಗೂಂಡಾ ಗೂಂಡಾ ಕಾಯ್ದೆಗೆ ಪೂರಕವಾದ ದಾಖಲೆಗಳನ್ನು ಸಿದ್ದಪಡಿಸಿ ಸಲ್ಲಿಸಿದ್ದರು. ಅವುಗಳನ್ನು ಪರಿಶೀಲಿಸಿದ ಆಯುಕ್ತರು ಆರೋಪಿ ವಿರುದ್ಧ ಗೂಂಡಾ ಕಾಯ್ದೆ ಹೇರಿದ್ದಾರೆ. ಆರೋಪಿಯನ್ನು ಬೆಂಗಳೂರು ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

*
ಅಪಘಾತ: ಗಾಯಾಳು ಸಾವು
ಉಡುಪಿ: ಕೆಮ್ಮಣ್ಣು ತೊಟ್ಟಂನಲ್ಲಿ ಸಂಭವಿಸಿದ ರಸ್ತೆ ಅವಘಾತದಲ್ಲಿ ಗಾಯಗೊಂಡಿದ್ದ ವಿಟಲ ಸುವರ್ಣ (50) ಅವರು ಸಾವಿಗೀಡಾಗಿದ್ದಾರೆ.
ಕೆಮ್ಮಣ್ಣು ತೊಟ್ಟಂನಲ್ಲಿ ಸೆಲೂನ್‌ ವೃತ್ತಿ ಮಾಡುತ್ತಿದ್ದ ವಿಟಲ ಸುವರ್ಣ ಅವರು ಜೂ. 1ರಂದು ಕೆಲಸ ಬಿಟ್ಟು ಮನೆಗೆ ಬರುತ್ತಿದ್ದಾಗ ಟೆಂಪೋ ಒಂದು ರಿವರ್ಸ್‌ ಬರುವಾಗ ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಅವರು ಗುರುವಾರ ಮೃತಪಟ್ಟರು. ಮೃತರು ತಾಯಿ, ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

*
ಮನೆ ಕೆಲಸದಾಕೆ ಮೇಲೆ ಅತ್ಯಾಚಾರ: ಬಂಧನ
ಮಂಗಳೂರು : ತನ್ನ ಮನೆ ಕೆಲಸಕ್ಕಿದ್ದ ಪರಿಶಿಷ್ಟ ಜಾತಿಗೆ ಸೇರಿದ ಯುವತಿ ಮೇಲೆ ಅತ್ಯಾಚಾರ ಎಸಗಿದ ಪ್ರಕರಣ ನಗರದ ಪಾಂಡೇಶ್ವರದಲ್ಲಿ ನಡೆದಿದ್ದು, ಆರೋಪಿ ಪಾಂಡೇಶ್ವರ ಸುಭಾಷ್‌ನಗರ ನಿವಾಸಿ ರವಿ ಉಚ್ಚಿಲ್‌ (40)ಯನ್ನು ಬಂಧಿಸಲಾಗಿದೆ. ಈತ ಗ್ಯಾಸ್‌ ಏಜೆನ್ಸಿಯೊಂದರಲ್ಲಿ ಕೆಲಸದಲ್ಲಿದ್ದ. ಯುವತಿಯು ಈತನ ಮನೆಯಲ್ಲಿ 7 ವರ್ಷಗಳಿಂದ ಕೆಲಸಕ್ಕಿದ್ದಳು. ಈಕೆಯನ್ನು ರವಿ ಲೈಂಗಿಕ ಕ್ರಿಯೆಗೆ ಬಳಸಿಕೊಳ್ಳುತ್ತಿದ್ದ ಮಾತ್ರವಲ್ಲದೆ ಮಾನಸಿಕ ಹಾಗೂ ದೈಹಿಕವಾಗಿ ಹಿಂಸೆ ನೀಡುತ್ತಿದ್ದ. ನಿದ್ರೆ ಮಾತ್ರೆ ನೀಡಿ ಲೈಂಗಿಕ ಕ್ರಿಯೆ ನಡೆಸಿದ್ದು, ಅದನ್ನು ಚಿತ್ರೀಕರಿಸಿಕೊಂಡಿದ್ದ. ಕೆಲಸ ಬಿಟ್ಟು ಹೋದರೆ ಇದನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಯ ಬಿಡುವ ಬೆದರಿಕೆ ಒಡ್ಡಿದ್ದ ಎಂದು ಆರೋಪಿ ಸಲಾಗಿದೆ. ಸಂತ್ರಸ್ತ ಯುವತಿ ಇತ್ತೀಚೆಗೆ ಗರ್ಭಿ ಣಿಯೂ ಆಗಿದ್ದು, ವೈದ್ಯರಿಂದ ಗರ್ಭಪಾತ ಮಾಡಿಸಿದ್ದಾನೆಂದು ಆಪಾದಿಸಲಾಗಿದೆ. ಯುವತಿ ಮನೆಯವರ ದೂರಿನಂತೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ