ಅಪಘಾತದಲ್ಲಿ ಗಾಯಗೊಂಡಿದ್ದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಸಾವು
Team Udayavani, May 24, 2022, 12:05 AM IST
ಮಂಗಳೂರು: ಮಂಗಳೂರು ಪಡೀಲ್ ನಲ್ಲಿ ಸಂಭವಿಸಿದ್ದ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಬಿ.ಸಿ.ರೋಡ್ ಕೈಕುಂಜೆ ಪೂರ್ವಬಡಾವಣೆ ನಿವಾಸಿ, ಉಡುಪಿ ಜಿ.ಪಂ. ಎಂಜಿನಿಯರಿಂಗ್ ವಿಭಾಗದ ನಿವೃತ್ತ ಲೆಕ್ಕಪತ್ರ ಪರಿಶೋಧಕ ಕೆ.ಎನ್. ರಮೇಶ್(67) ಅವರು ಮೇ 22 ರಂದು ಸಾವನ್ನಪ್ಪಿದ್ದರು.
ರಮೇಶ್ ಅವರು ಮೇ 7ರಂದು ಸಂಜೆ ಸ್ಕೂಟರ್‌ನಲ್ಲಿ ಮಂಗಳೂರು ಕಡೆಯಿಂದ ಬಿ.ಸಿ.ರೋಡ್‌ಗೆ ಹೋಗುತ್ತಿದ್ದಾಗ ಪಡೀಲ್‌ನಲ್ಲಿ ಕಾರು ಢಿಕ್ಕಿ ಹೊಡೆದಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಭಾಲ್ಕಿ, ಹಾಸನ, ಬೆಳ್ತಂಗಡಿ, ಸುಳ್ಯ ಸೇರಿದಂತೆ ರಾಜ್ಯದ ವಿವಿಧೆಡೆ ಲೆಕ್ಕಾಧೀಕ್ಷಕ ಸಹಿತ ವಿವಿಧ ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದ ಅವರು, ಉಡುಪಿ ಜಿ.ಪಂ. ಎಂಜಿನಿಯರಿಂಗ್ ವಿಭಾಗದಲ್ಲಿ ಜಿಲ್ಲಾ ಲೆಕ್ಕಪತ್ರ ಪರಿಶೋಧಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ್ದರು. ಮೃತರು ಪತ್ನಿ ಮತ್ತು ಪುತ್ರಿಯನ್ನು ಅಗಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
400 ಥಿಯೇಟರ್ ಗಳಲ್ಲಿ ಬಿಡುಗಡೆಯಾಗಲಿದೆ ‘ಬೈರಾಗಿ’
ಹುಣಸೂರು: ಚಿಲ್ಕುಂದದಲ್ಲಿ ಕೊಳೆರೋಗ, ಹುಳುಬಾಧೆ ಉಪಕ್ರಮಗಳ ಕುರಿತು ಪ್ರಾತ್ಯಕ್ಷಿಕೆ
ಬೀದಿನಾಯಿ ದಾಳಿಯಿಂದ ಮೃತಪಟ್ಟರೆ ಸ್ಥಳೀಯ ಆಡಳಿತವೇ ಹೊಣೆ; ಹೈಕೋರ್ಟ್
ನಾಡಪ್ರಭು ಕೆಂಪೇಗೌಡರನ್ನು ಒಂದು ಸಮುದಾಯಕ್ಕೆ ಸೀಮಿತಗೊಳಿಸಬೇಡಿ; ಗಂಗರುದ್ರಯ್ಯ
ಹುಣಸೂರು: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕಿ ಚಿಕಿತ್ಸೆ ಫಲಿಸದೆ ಸಾವು