ಉಳ್ಳಾಲ: ಸಮುದ್ರಪಾಲಾದ ಮೈಸೂರು ಮೂಲದ ಮಹಿಳೆ
Team Udayavani, May 29, 2022, 1:20 AM IST
ಉಳ್ಳಾಲ: ಉಳ್ಳಾಲದ ಸಮುದ್ರ ತೀರಕ್ಕೆ ವಿಹಾರಕ್ಕೆ ಬಂದಿದ್ದ ಮೈಸೂರು ಮೂಲದ ಮಹಿಳೆಯೊಬ್ಬರು ನೀರಿಗೆ ಬಿದ್ದು ಮೃತಪಟ್ಟಿರುವ ಘಟನೆ ಶನಿವಾರ ನಡೆದಿದೆ.
ಮೈಸೂರು ನಿವಾಸಿ ಭಾಗ್ಯಲಕ್ಷ್ಮೀ (45) ಮೃತರು. ಭಾಗ್ಯಲಕ್ಷ್ಮೀ ದಂಪತಿ, ಅವರ ಮೂವರು ಪುತ್ರಿಯರು ಹಾಗೂ ಮೊಮ್ಮಗಳು ಮೈಸೂರಿನಿಂದ ಮಂಗಳೂರಿಗೆ ವಿಹಾರಕ್ಕೆಂದು ಬಂದಿದ್ದರು. ಪಂಪ್‌ವೆಲ್ ಬಳಿ ರೂಮಿನಲ್ಲಿ ತಂಗಿದ್ದ ಕುಟುಂಬ ಮೇ 28ರಂದು ಬೆಳಗ್ಗೆ ಸೋಮೇಶ್ವರ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದರು.
ಅಲ್ಲಿಂದ ಉಳ್ಳಾಲದ ಸಮುದ್ರವಿಹಾರಕ್ಕೆಂದು ತೆರಳಿದ್ದ ಕುಟುಂಬದ ಪೈಕಿ ಭಾಗ್ಯಲಕ್ಷ್ಮೀ ಅವರು ಸಮುದ್ರದ ಅಲೆಯೊಂದಕ್ಕೆ ಸಿಲುಕಿ ಸಮುದ್ರಪಾಲಾಗಿದ್ದಾರೆ. ತತ್‌ಕ್ಷಣ ಕುಟುಂಬಸ್ಥರು ಕಿರುಚಲು ಆರಂಭಿಸಿದಾಗ, ಸಮೀಪದಲ್ಲಿ ಇದ್ದ ಶಿವಾಜಿ ಜೀವರಕ್ಷಕ ದಳದ ಸದಸ್ಯರು ದೌಡಾಯಿಸಿ ಮಹಿಳೆಯನ್ನು ಮೇಲ ಕ್ಕೆತ್ತಿದರು. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ : ಆಟೋರಿಕ್ಷಾ ಬಳಿ ತೆರಳಿ ಪ್ರಕರಣ ಇತ್ಯರ್ಥಪಡಿಸಿದ ನ್ಯಾಯಾಧೀಶರು
ಸುಳ್ಯ, ಕೊಡಗಿನ ಕೆಲವೆಡೆ ಭಾರಿ ಶಬ್ದದೊಂದಿಗೆ ಭೂಕಂಪನ, ಗೋಡೆ ಬಿರುಕು
ಸಕಲೇಶಪುರ : ರಸ್ತೆ ಅಪಘಾತಕ್ಕೆ ದೈಹಿಕ ಶಿಕ್ಷಕ ಸ್ಥಳದಲ್ಲೇ ಸಾವು: ವಿದ್ಯಾರ್ಥಿಗಳ ಕಣ್ಣೀರು…
ಗೃಹ ಪ್ರವೇಶ ಸಂದರ್ಭ ಅವಾಂತರ |ಮಂಗಳಮುಖಿಯರ ರಂಪಾಟ
ಕಿನ್ನಿಗೋಳಿ :ಪತ್ನಿ ಸೇರಿ ಮೂವರು ಮಕ್ಕಳನ್ನು ಬಾವಿಗೆ ತಳ್ಳಿ ತಾನೂ ಆತ್ಮಹತ್ಯೆ ಯತ್ನಿಸಿದ ಪತಿ
ಹೊಸ ಸೇರ್ಪಡೆ
ಹುಣಸೂರು : ನಿಯಂತ್ರಣ ತಪ್ಪಿ ನಾಲೆಗೆ ಬಿದ್ದ ಬೈಕ್ : ಸವಾರ ಸ್ಥಳದಲ್ಲೇ ಸಾವು
ಇಮ್ರಾನ್ ಖಾನ್ ನಿವಾಸದಲ್ಲಿ ಬೇಹು ಸಾಧನ ಅಳವಡಿಕೆಗೆ ಯತ್ನ: ಭದ್ರತಾ ಸಿಬ್ಬಂದಿ ಬಂಧನ
ಐಎಂಎ ಕೆಎಸ್ಬಿ ವೈದ್ಯರ ದಿನಾಚರಣೆ ಪ್ರಶಸ್ತಿಗೆ ಡಾ. ಆಶಾ ಪ್ರಭು ಆಯ್ಕೆ
ಪಂಚಾಂಗ ನೋಡಿ ರಾಕೆಟ್ ಉಡಾವಣೆ : ಟೀಕೆಗೆ ಗುರಿಯಾದ ಖ್ಯಾತ ನಟ ಮಾಧವನ್ !
3 ಲೋಕಸಭೆ ಮತ್ತು 7 ವಿಧಾನಸಭಾ ಸ್ಥಾನಗಳ ಉಪಚುನಾವಣೆಯ ಫಲಿತಾಂಶ ಹೀಗಿದೆ