ಸುಳ್ಯ: ಅಕ್ರಮ ದನ ಸಾಗಾಟ; ಕಾರು ಸಮೇತ ಓರ್ವನ ಬಂಧನ
Team Udayavani, May 15, 2022, 5:10 PM IST
ಸುಳ್ಯ: ಕಾರಿನಲ್ಲಿ ಅಕ್ರಮವಾಗಿ ದನವನ್ನು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ವ್ಯಕ್ತಿ ಯೋರ್ವನನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ಬೆಳ್ಳಾರೆಯಲ್ಲಿ ಮೇ 14ರ ರಾತ್ರಿ ನಡೆದಿದೆ.
ಮಾರುತಿ 800 ಕಾರಿನಲ್ಲಿ ದನವನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಬಂದ ಮಾಹಿತಿಯಂತೆ ಬೂಡು ಸೇತುವೆ ಸಮೀಪ ಬೆಳ್ಳಾರೆ ಪೊಲೀಸರು ಕಾರನ್ನು ತಡೆದಿದ್ದಾರೆ.
ಬಳಿಕ ದನ ಸಾಗಾಟದ ಮಾಡುತ್ತಿದ್ದ ಆರೋಪಿ ಹಾಗೂ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಭಾರತದ ಭವಿಷ್ಯಕ್ಕಾಗಿ ಆರ್ಎಸ್ಎಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ: ರಾಹುಲ್ ಗಾಂಧಿ ಕರೆ
ದನವನ್ನು ಆಲಂಗಾರಿನಿಂದ ಬೆಳ್ಳಾರೆ ಮೂಲಕ ಮರ್ಕಂಜ ಕಡೆಗೆ ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ.