ಸೆ. 17ರಿಂದ ಸಿಆರ್‌ಝಡ್‌ ಮರಳುಗಾರಿಕೆ ಸ್ಥಗಿತ


Team Udayavani, Sep 13, 2021, 7:50 AM IST

ಸೆ. 17ರಿಂದ ಸಿಆರ್‌ಝಡ್‌ ಮರಳುಗಾರಿಕೆ ಸ್ಥಗಿತ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಸಿಆರ್‌ಝಡ್‌ ವಲಯದಲ್ಲಿ ಮರಳು ದಿಬ್ಬ ತೆರವಿಗೆ ಪರಿಸರ ಇಲಾಖೆ ನೀಡಿರುವ ಪರಿಸರ ವಿಮೋಚನ ಪತ್ರ (ಇಸಿ ಕ್ಲಿಯರೆನ್ಸ್‌) ದ ಅವಧಿ ಸೆ. 16ಕ್ಕೆ ಮುಗಿಯಲಿದ್ದು ಸೆ. 17ರಿಂದ ಮರಳುಗಾರಿಕೆ ಸ್ಥಗಿತಗೊಳ್ಳಲಿದೆ.

ಮತ್ತೆ ಮರಳುಗಾರಿಕೆಗೆ ಹೊಸದಾಗಿ ಪ್ರಕ್ರಿಯೆಗಳು ನಡೆಯ  ಬೇಕಿವೆ. ನಾನ್‌ಸಿಆರ್‌ಝಡ್‌ನ‌ 16 ಬ್ಲಾಕ್‌ಗಳಲ್ಲಿ ಮರಳುಗಾರಿಕೆ ಮುಂದುವರಿಯಲಿದೆ. ಜಿಲ್ಲೆಯ ಸಿಆರ್‌ಝಡ್‌ನ‌ಲ್ಲಿ ನವೆಂಬರ್‌ನಿಂದ ಈ ವರೆಗೆ 2,35,414 ಮೆಟ್ರಿಕ್‌ ಟನ್‌ ಮರಳು ತೆರವುಗೊಳಿಸಲಾಗಿದೆ.

ಸಿಆರ್‌ಝಡ್‌ನ‌ಲ್ಲಿ 2019ರ ಡಿ. 26ಕ್ಕೆ ಕೊನೆಗೊಂಡಿದ್ದ ಮರಳುಗಾರಿಕೆ ಕರ್ನಾಟಕ ಕರಾವಳಿ ವಲಯ ನಿರ್ವ ಹಣೆ ಸಮಿತಿ (ಕೆಸಿಝಡ್‌ಎಂ)ಯ ಅನುಮೋದನೆ ಪ್ರಕ್ರಿಯೆಗಳು ನಡೆದು 2020ರ ನವೆಂಬರ್‌ನಲ್ಲಿ ಆರಂಭಗೊಂಡಿತ್ತು. ನೇತ್ರಾವತಿ 8, ಗುರುಪುರ 4 ಹಾಗೂ ಶಾಂಭವಿ ನದಿಯಲ್ಲಿ 1ಬ್ಲಾಕ್‌ ಸಹಿತ 13 ಬ್ಲಾಕ್‌ (ದಿಬ್ಬ)ಗಳಲ್ಲಿ  ಮರಳು ತೆರವಿಗೆ ಎರಡು ಹಂತಗಳಲ್ಲಿ 105 ಮಂದಿ ಗುತ್ತಿಗೆದಾರರಿಗೆ ಪರವಾನಿಗೆ ನೀಡಲಾಗಿತ್ತು.

ಜೂ. 1ರಿಂದ ಎರಡು ತಿಂಗಳ ಕಾಲ ಜಾರಿಯಲ್ಲಿದ್ದ ಮರಳುಗಾರಿಕೆ ನಿಷೇಧ ಜು. 31ಕ್ಕೆ ಕೊನೆಗೊಂಡು ಆಗಸ್ಟ್‌ ಮಧ್ಯಭಾಗದಲ್ಲಿ ನಿಯಮ ಗಳನ್ನು ಉಲ್ಲಂಘಿಸಿರುವ ಪ್ರಕರಣ ಗಳಲ್ಲಿ ಒಳಗೊಂಡಿರುವ ಪರವಾನಿಗೆ ಗಳಿಗೆ ಹೊರತಾಗಿ ಉಳಿದ ಪರ ವಾ ನಿಗೆ ದಾರರು ಸೆ. 16ರ ವರೆಗೆ ಮರಳು ಗಾರಿಕೆ ನಡೆಸಬಹುದಾಗಿದೆ.

ಸದ್ಯ ಸಮಸ್ಯೆ ಬಾರದು :

ನಾನ್‌ಸಿಆರ್‌ಝಡ್‌ನ‌ಲ್ಲಿ ಗುರುತಿಸಲಾದ 58 ಬ್ಲಾಕ್‌ಗಳಿವೆ. 16 ಬ್ಲಾಕ್‌ ಗಳು ಕಾರ್ಯಾಚರಿಸುತ್ತಿವೆ. 9 ಬ್ಲಾಕ್‌ಗಳನ್ನು ಸರಕಾರಿ ಕಾಮಗಾರಿಗಳಿಗೆ ಮೀಸಲಿಡಲಾಗಿದೆ. ಸಿಆರ್‌ಝಡ್‌ನ‌ಲ್ಲಿ ಮರಳುಗಾರಿಕೆ ಆರಂಭ

ವಾಗುವವರೆಗೆ ಇಲ್ಲಿಂದ ಪೂರೈಕೆ ಆಗಲಿದೆ. ನಿಯಮಗಳ ಪ್ರಕಾರ ಮರಳು ಸಂಗ್ರಹಿಸಿ ಇಡಲು ಅವ ಕಾಶ ವಿಲ್ಲ. ನಿರ್ಮಾಣಗಾರರು ಪರವಾ ನಿಗೆ ಮೂಲಕ ಪಡೆದಿರುವ ಮರಳನ್ನು ಯಾರ್ಡ್‌ನಲ್ಲಿ ಸಂಗ್ರಹಿಸಿ ಡಲು ಅವಕಾಶವಿದೆ. ಸಿಆರ್‌ಝಡ್‌ ನಲ್ಲಿ ಮರಳುಗಾರಿಕೆ ಅನು ಮತಿ ಪ್ರಕ್ರಿಯೆ ವಿಳಂಬವಾದರೆ ಮರಳು ಸಮಸ್ಯೆ ತಲೆದೋರುವ ಸಾಧ್ಯತೆಗಳಿವೆ.

ಹೊಸದಾಗಿ ಪ್ರಕ್ರಿಯೆ ಬಳಿಕ ಆರಂಭ:

ನೇತ್ರಾವತಿ, ಫಲ್ಗುಣಿ ಹಾಗೂ ಶಾಂಭವಿ ನದಿಯ ಸಿಆರ್‌ಝಡ್‌ನ‌ಲ್ಲಿ ಮತ್ತೆ ಬ್ಯಾಥಮೆಟ್ರಿಕ್ಸ್‌ ಸರ್ವೇ ನಡೆದು ಮರಳು ದಿಬ್ಬಗಳನ್ನು ಗುರು ತಿಸಿ ತಾಂತ್ರಿಕ ವರದಿ ಪಡೆಯ ಲಾಗು ತ್ತದೆ. ಜಿಲ್ಲಾಧಿಕಾರಿ ಅಧ್ಯಕ್ಷತೆ ¿ ುಲ್ಲಿರುವ ಜಿಲ್ಲಾ ಮರಳು ಉಸ್ತು ವಾರಿ ಸಮಿತಿಯು ವರದಿ ಯನ್ನು ಪರಿಶೀಲಿಸಿ ಕೆಸಿಝಡ್‌ಎಂಗೆ ಕಳುಹಿಸುತ್ತದೆ. ಅದು ಪರಿ ಶೀಲಿಸಿ ಅನುಮೋದಿಸಿದ ಬಳಿಕ ಮರಳುಗಾರಿಕೆ ಆರಂಭವಾಗುತ್ತದೆ. ಆದರೆ ಈ ಬಾರಿ ಕಳೆದ ವರ್ಷ ನೀಡಿರುವ ಪರಿಸರ ವಿಮೋಚನ ಪತ್ರವನ್ನೇ ಮುಂದುವರಿಸಿ ಮರಳುಗಾರಿಕೆಗೆ ಅವ‌ಕಾಶ ನೀಡುವ ಸಾಧ್ಯತೆಗಳ ಬಗ್ಗೆಯೂ ಚಿಂತನೆ ನಡೆಯುತ್ತಿದೆ.

ಸದ್ಯದಲ್ಲೇ ನಿರ್ಧಾರ :

ಸಿಆರ್‌ಝಡ್‌ ವಲಯದಲ್ಲಿ ಮರಳು ದಿಬ್ಬ ತೆರವುಗೊಳಿಸಲು ಕೆಸಿಝಡ್‌ಎಂ ನೀಡಿರುವ ಪರಿಸರ ವಿಮೋಚನ ಪತ್ರ ಸೆ. 16ಕ್ಕೆ ಮುಗಿಯಲಿದೆ. ಮುಂದಿನ ಕ್ರಮಗಳ ಬಗ್ಗೆ ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಸಭೆ ನಡೆಸಿನಿರ್ಧಾರಗಳನ್ನು ಕೈಗೊಳ್ಳಲಿದೆ.-ಡಾ| ಕೆ.ವಿ. ರಾಜೇಂದ್ರ, ಜಿಲ್ಲಾಧಿಕಾರಿ, ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರು

ಸಿಆರ್‌ಝಡ್‌ ಮರಳುಗಾರಿಕೆ ಮುಕ್ತಾಯ ಹಿನ್ನೆಲೆಯಲ್ಲಿ  ಸೆ. 13ರ ಬಳಿಕ ಬೆಂಗಳೂರಿನಲ್ಲಿ ಗಣಿ ಮತ್ತು ಭೂವಿಜ್ಞಾನ ಖಾತೆ ಸಚಿವರನ್ನು ಭೇಟಿಯಾಗಿ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸುತ್ತೇನೆ. ಸಿಆರ್‌ಝಡ್‌ನ‌ಲ್ಲಿ  ಮರಳುಗಾರಿಕೆಗೆ ಸಂಬಂಧಪಟ್ಟು  ತ್ವರಿತ ಕ್ರಮ ಕೈಗೊಳ್ಳುವಂತೆ ಸಚಿವರನ್ನು ಕೋರಲಾಗುವುದು. - ಎಸ್‌. ಅಂಗಾರ, ಬಂದರು, ಮೀನುಗಾರಿಕಾ ಖಾತೆ ಸಚಿವರು

ಟಾಪ್ ನ್ಯೂಸ್

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಪ್ರೊ ಕಬಡ್ಡಿ : ಮತ್ತೆ ಯು ಮುಂಬಾಗೆ ಸೋತ ಬೆಂಗಳೂರು ಬುಲ್ಸ್‌

ಚೀನದಿಂದ ಯುವಕನ ಶೀಘ್ರ ಹಸ್ತಾಂತರ: ಸಚಿವ ರಿಜಿಜು

ಅರುಣಾಚಲದಿಂದ ನಾಪತ್ತೆಯಾಗಿದ್ದ ಬಾಲಕನನ್ನು ಶೀಘ್ರವೇ ಚೀನ ಹಸ್ತಾಂತರ: ಸಚಿವ ರಿಜಿಜು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಬುಟ್ಟಿ ತೆಗೆದರೆ ತಾನೇ ಗೊತ್ತಾಗೋದು? ಕಾಂಗ್ರೆಸ್ ಗೆ ಎಸ್‌.ಟಿ.ಸೋಮಶೇಖರ್‌ ತಿರುಗೇಟು

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಏಕದಿನ ಶ್ರೇಯಾಂಕ: 2, 3ನೇ ಸ್ಥಾನದಲ್ಲಿ ಕೊಹ್ಲಿ, ರೋಹಿತ್‌

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆ

ಮುಂಬೈನಲ್ಲಿ ಯುವಕನಿಂದ 1 ಸಾವಿರ ಕೋಟಿ ಜಿಎಸ್‌ಟಿ ವಂಚನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

ಮಂಗಳೂರು ಮಹಾನಗರ ಪಾಲಿಕೆ: ಕೋವಿಡ್‌ ನಿಯಂತ್ರಣಕ್ಕೆ ವಾರ್ಡ್‌ಗೊಂದು ತಂಡ

2gold

ಮಂಗಳೂರು ವಿಮಾನ ನಿಲ್ದಾಣದಲ್ಲಿ 29,14,160 ಮೌಲ್ಯದ ಚಿನ್ನ ವಶ

Musical artist Sheela Divakar passes away

ಖ್ಯಾತ ಸಂಗೀತ ಕಲಾವಿದೆ ಶೀಲಾ ದಿವಾಕರ್ ನಿಧನ

ದ.ಕ., ಉಡುಪಿಯ 306 ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಲೈಬ್ರೆರಿ

ದ.ಕ., ಉಡುಪಿಯ 306 ಗ್ರಾ.ಪಂ.ಗಳಲ್ಲಿ ಡಿಜಿಟಲ್‌ ಲೈಬ್ರೆರಿ

ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

ಸುರಕ್ಷೆಗಾಗಿ ಸಿಟಿ ಬಸ್‌ಗಳಲ್ಲಿ ಸಿಸಿ ಕೆಮರಾ ಅಳವಡಿಕೆ

MUST WATCH

udayavani youtube

ರಾಜಪಥ ಪರೇಡ್ ನಲ್ಲಿ ಯುದ್ಧವಿಮಾನಗಳ ಪವರ್ ಶೋ

udayavani youtube

73ನೇ ಗಣರಾಜ್ಯೋತ್ಸವದಲ್ಲಿ NCC ತಂಡ ಮುನ್ನಡೆಸಿದ ಮೈಸೂರಿನ ಯುವತಿ

udayavani youtube

ಪುನೀತ್ ಗೆ ಸಿಗದ ಪದ್ಮಪ್ರಶಸ್ತಿ: ಮಾತು ತಪ್ಪಿದ ಬೊಮ್ಮಾಯಿ

udayavani youtube

BSF ಮಹಿಳಾ ‘ಸೀಮಾ ಭವಾನಿ’ ತಂಡದಿಂದ ರೋಮಾಂಚಕ ಬೈಕ್ ಸಾಹಸ

udayavani youtube

ಭಯಾನಕ ಹೆಬ್ಬಾವಿನ ಎದುರು ಈ ಬೆಕ್ಕಿನ ಧೈರ್ಯ ನೋಡಿ!!

ಹೊಸ ಸೇರ್ಪಡೆ

ವ್ಗಜಕಹಮನಬವಚ

ಗುಣಮಟ್ಟದ ಕಾಮಗಾರಿಗೆ ಗುತ್ತಿಗೆದಾರರಿಗೆ ತಾಕೀತು

ಗಜಗಜ್ಹಜಹ್ಜಗ

ರಾಜ್ಯದಲ್ಲೇ ಮಾದರಿ ಕ್ಷೇತ್ರವಾಗಿಸಲು ಸಂಕಲ್ಪ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ಯತ್ನಾಳ್‌ ಆತ್ಮಾವಲೋಕನ ಮಾಡಿಕೊಳ್ಳಲಿ: ಸಚಿವ ಮುರುಗೇಶ ನಿರಾಣಿ

ೆಹರಜಹೆದ

ಚುನಾವಣೆಗಳ ಘನತೆ ಎತ್ತಿ ಹಿಡಿಯಿರಿ: ಇರ್ಫಾನ್‌ 

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

ರೋಹಿತ್‌ ಸಂಪೂರ್ಣ ಫಿಟ್‌ ; ವಿಂಡೀಸ್‌ ಸರಣಿಗೆ ಅವರೇ ನಾಯಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.