Udayavni Special

ದಕ್ಷಿಣ ಕನ್ನಡ: 8ರಲ್ಲಿ 7 ಬಿಜೆಪಿ ಪಾಲು


Team Udayavani, May 16, 2018, 6:35 AM IST

1505mlr24.jpg

ಮಂಗಳೂರು: ಈ ಬಾರಿಯ ಚುನಾವಣೆಯಲ್ಲಿ ಜಿಲ್ಲೆಯ ಎಂಟು ಕ್ಷೇತ್ರಗಳ ಪೈಕಿ ಒಟ್ಟು ಏಳು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸುವ ಮೂಲಕ ಗಮನಸೆಳೆದಿದೆ. ಕಳೆದ ಚುನಾವಣೆಯಲ್ಲಿ 7 ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್‌ ಕೇವಲ ಒಂದು ಸ್ಥಾನವನ್ನಷ್ಟೇ ಉಳಿಸಿಕೊಂಡಿದೆ. 

ಮಂಗಳೂರಿನ ಬೊಂದೇಲ್‌ನಲ್ಲಿ ಬಿಗಿ ಭದ್ರತೆಯಲ್ಲಿ ಮಂಗಳವಾರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಕಾರ್ಯ ಪ್ರಾರಂಭವಾಗಿತ್ತು. 15ರಿಂದ 18 ಸುತ್ತಿನಲ್ಲಿ ಮತ ಎಣಿಕೆ ಕಾರ್ಯ ನಡೆಯಿತು.

ರಾಜ್ಯದಲ್ಲೇ ಕುತೂಹಲ ಕೆರಳಿಸಿದ್ದ ಬಂಟ್ವಾಳ ಕ್ಷೇತ್ರದಲ್ಲಿ ಸಚಿವ ರಮಾನಾಥ ರೈ ಬಿಜೆಪಿ ಅಭ್ಯರ್ಥಿ ರಾಜೇಶ್‌
ನಾೖಕ್‌ ವಿರುದ್ಧ 15,971 ಮತಗಳ ಅಂತರದಿಂದ ಸೋಲು ಅನುಭವಿಸಿದರು. ರೈ ಕಳೆದ ಬಾರಿ ಈ ಕ್ಷೇತ್ರವನ್ನು 17,850 ಮತಗಳ ಅಂತರದಿಂದ ಗೆದ್ದುಕೊಂಡಿದ್ದರು. ಇನ್ನೊಂದು ಪ್ರತಿಷ್ಠಿತ ಕಣವಾಗಿದ್ದ ಮಂಗಳೂರು ಕ್ಷೇತ್ರದಲ್ಲಿ ಸಚಿವ, ಕಾಂಗ್ರೆಸ್‌ನ ಯು.ಟಿ. ಖಾದರ್‌ ಅವರು ಬಿಜೆಪಿ ಅಭ್ಯರ್ಥಿ ಸಂತೋಷ್‌ ಕುಮಾರ್‌ ರೈ ವಿರುದ್ಧ 19,739 ಮತಗಳ ಅಂತರದಿಂದ ಜಯ ಸಾಧಿಸಿದರು. ಇದು ಜಿಲ್ಲೆಯಲ್ಲಿ ಕಾಂಗ್ರೆಸ್‌ ಗೆದ್ದುಕೊಂಡಿರುವ ಏಕೈಕ ಕ್ಷೇತ್ರ.

ಮಂಗಳೂರು ದಕ್ಷಿಣದಲ್ಲಿ ಹಾಲಿ ಶಾಸಕ, ಕಾಂಗ್ರೆಸ್‌ನ ಜೆ.ಆರ್‌. ಲೋಬೊ ಅವರು ಬಿಜೆಪಿಯ ವೇದವ್ಯಾಸ ಕಾಮತ್‌ ವಿರುದ್ಧ 16075 ಮತಗಳ ಅಂತರದಿಂದ ಸೋಲು ಅನುಭವಿಸಿದರು. ಮಂಗಳೂರು ಉತ್ತರದಲ್ಲಿ ಹಾಲಿ ಶಾಸಕ, ಕಾಂಗ್ರೆಸ್‌ನ ಮೊದಿನ್‌ ಬಾವಾ ಅವರನ್ನು ಬಿಜೆಪಿಯ ಡಾ| ಭರತ್‌ ಶೆಟ್ಟಿ ಅವರು 26,648 ಮತಗಳ ಭಾರೀ ಅಂತರದಿಂದ ಸೋಲಿಸಿದ್ದಾರೆ. ಮೂಡಬಿದಿರೆಯಲ್ಲಿ ಹಾಲಿ ಶಾಸಕ, ಕಾಂಗ್ರೆಸ್‌ನ ಕೆ. ಅಭಯಚಂದ್ರ ಜೈನ್‌ ಅವರು ಬಿಜೆಪಿ ಅಭ್ಯರ್ಥಿ ಕೆ. ಉಮಾನಾಥ ಕೋಟ್ಯಾನ್‌ ವಿರುದ್ಧ 29,799 ಮತಗಳ ಭಾರೀ ಅಂತರದಿಂದ ಸೋತಿದ್ದಾರೆ. ಬೆಳ್ತಂಗಡಿಯಲ್ಲಿ ಹಾಲಿ ಶಾಸಕ, ಕಾಂಗ್ರೆಸ್‌ನ ಕೆ. ವಸಂತ ಬಂಗೇರ ಅವರು ಕೂಡ ಬಿಜೆಪಿಯ ಹರೀಶ್‌ ಪೂಂಜಾ ವಿರುದ್ಧ 22,974 ಮತಗಳಿಂದ ಪರಾಜಯಗೊಂಡರು. ಪುತ್ತೂರಿನಲ್ಲಿ ಹಾಲಿ ಶಾಸಕಿ,ಕಾಂಗ್ರೆಸ್‌ನ ಕೆ. ಶಕುಂತಳಾ ಶೆಟ್ಟಿ ಅವರು ಬಿಜೆಪಿ ಅಭ್ಯರ್ಥಿ ಸಂಜೀವ ಮಠಂದೂರು ವಿರುದ್ಧ 19,477 ಮತಗಳ ಅಂತರದಿಂದ ಸೋಲು ಅನುಭವಿಸಿದರು. 

ಸುಳ್ಯದಲ್ಲಿ ಹಾಲಿ ಶಾಸಕ, ಬಿಜೆಪಿಯ ಎಸ್‌. ಅಂಗಾರ ಕಾಂಗ್ರೆಸ್‌ ಅಭ್ಯರ್ಥಿ ಡಾ| ರಘು ವಿರುದ್ಧ 26,068 ಮತಗಳ ಅಂತರದಿಂದ ಜಯ ಸಾಧಿಸಿದರು.

ಎರಡನೇ ಬಾರಿಗೆ ಯಶಸ್ವಿ 
ಬಿಜೆಪಿಯ ರಾಜೇಶ್‌ ನಾೖಕ್‌ ಬಂಟ್ವಾಳದಲ್ಲಿ, ಸಂಜೀವ ಮಠಂದೂರು ಪುತ್ತೂರಿನಲ್ಲಿ ಹಾಗೂ ಉಮಾನಾಥ ಕೋಟ್ಯಾನ್‌ ಮೂಡಬಿದಿರೆಯಲ್ಲಿ 2013ರ ಚುನಾವಣೆಯಲ್ಲಿ ಸ್ಪರ್ಧಿಸಿ ಪರಾಜಯ ಕಂಡಿದ್ದರು. ಈ ಬಾರಿ ಇದೇ ಕ್ಷೇತ್ರದಿಂದ ಅವರು ಮರಳಿ ಸ್ಪರ್ಧಿಸಿ ಜಯ ಸಾಧಿಸಿದ್ದಾರೆ.

ಮತಗಳ ಏರಿಳಿತ
ಮೂಡಬಿದಿರೆ ಕ್ಷೇತ್ರದ ಮತಗಳ ಎಣಿಕೆ ಒಟ್ಟು 16 ಸುತ್ತುಗಳಲ್ಲಿ ನಡೆಯಿತು. ಬಿಜೆಪಿ ಅಭ್ಯರ್ಥಿ ಉಮಾನಾಥ ಕೋಟ್ಯಾನ್‌ ಮೊದಲ ಸುತ್ತಿನಿಂದಲೇ ಮುನ್ನಡೆ ಸಾಧಿಸುತ್ತಾ ಬಂದಿದ್ದರು. ಮುನ್ನಡೆ 11ನೇ ಸುತ್ತಿನಲ್ಲಿ 24,524ಕ್ಕೇರಿ ಅವರ ಗೆಲುವು ನಿಶ್ಚಿತವಾಗುತ್ತಿದ್ದಂತೆಯೇ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ಬೆಳ್ತಂಗಡಿಯ ಬಿಜೆಪಿ ಅಭ್ಯರ್ಥಿ ಹರೀಶ್‌ ಪೂಂಜಾ, ಬಂಟ್ವಾಳದ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾೖಕ್‌ ಕೂಡ ಆರಂಭದಿಂದಲೂ ಮುನ್ನಡೆ ಸಾಧಿಸುತ್ತಾ ಬಂದಿದ್ದರು. ಮಂಗಳೂರು ಕ್ಷೇತ್ರದ ಮತಗಳ ಎಣಿಕೆ ಒಟ್ಟು 15 ಸುತ್ತುಗಳಲ್ಲಿ ನಡೆದಿದ್ದು, ಶಾಸಕ ಯು.ಟಿ. ಖಾದರ್‌ ಅವರು 9ನೇ ಸುತ್ತಿನ ವರೆಗೆ ನಿರಂತರ ಮುನ್ನಡೆ ಸಾಧಿಸುತ್ತಾ 18,426 ಮತಗಳ ಅಂತರದಿಂದ ಮುಂದಿದ್ದರು. ಆದರೆ 10ನೇ ಸುತ್ತಿನಲ್ಲಿ ಇದು 14,675 ಕ್ಕೆ ಹಾಗೂ 11ನೇ ಸುತ್ತಿನಲ್ಲಿ 13,262ಕ್ಕೆ ಕುಸಿಯಿತು. ಆದರೆ 14ನೇ ಸುತ್ತಿನಲ್ಲಿ ಖಾದರ್‌ ಮುನ್ನಡೆ ಮತ್ತೆ ಏರಿಕೆಯಾಗುತ್ತಾ 15ನೇ ಸುತ್ತಿನಲ್ಲಿ 19,385 ತಲುಪಿತು. 
ಮಂಗಳೂರು ಉತ್ತರ ಕ್ಷೇತ್ರದ ಮತಗಳ ಎಣಿಕೆ ಒಟ್ಟು 18 ಸುತ್ತುಗಳಲ್ಲಿ ನಡೆಯಿತು. ಡಾ| ಭರತ್‌ ಶೆಟ್ಟಿ ಅವರು 16ನೇ ಸುತ್ತು ಹೊರತುಪಡಿಸಿ ಉಳಿದಂತೆ ಎಲ್ಲ ಸುತ್ತುಗಳಲ್ಲೂ ಮುನ್ನಡೆ ಕಾಯ್ದುಕೊಂಡಿದ್ದರು. ಮಂಗಳೂರು ದಕ್ಷಿಣದ ಬಿಜೆಪಿ ಅಭ್ಯರ್ಥಿ ವೇದವ್ಯಾಸ ಕಾಮತ್‌, ಸುಳ್ಯದ ಬಿಜೆಪಿ ಅಭ್ಯರ್ಥಿ ಎಸ್‌. ಅಂಗಾರ, ಪುತ್ತೂರಿನ ಬಿಜೆಪಿ ಅಭ್ಯರ್ಥಿ ಸಂಜೀವ  ಮಠಂದೂರು ಅವರ ಮುನ್ನಡೆಯ ಅಂತರ ಕೂಡ ಪ್ರತಿ ಸುತ್ತಿನಲ್ಲಿಯೂ ಏರಿಕೆಯಾಗುತ್ತಲೇ ಇತ್ತು.

ಖಾದರ್‌ ದಾಖಲೆ ಮುರಿದ ಕೋಟ್ಯಾನ್‌
ಜಿಲ್ಲೆಯಲ್ಲಿ ಯು.ಟಿ. ಖಾದರ್‌ ಅವರ ಹೆಸರಿನಲ್ಲಿದ್ದ ಗರಿಷ್ಠ ಅಂತರದ ಗೆಲವಿನ ದಾಖಲೆಯನ್ನು ಈ ಬಾರಿ ಉಮಾನಾಥ ಕೋಟ್ಯಾನ್‌ ಮುರಿದಿದ್ದಾರೆ. 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಯು.ಟಿ. ಖಾದರ್‌ 29,111 ಮತಗಳ ಅಂತರಿಂದ ಜಯ ಸಾಧಿಸಿದ್ದು ಜಿಲ್ಲೆಯಲ್ಲಿ ಅಭ್ಯರ್ಥಿ ದಾಖಲಿಸಿದ್ದ ಗರಿಷ್ಠ ಅಂತರದ ಜಯವಾಗಿತ್ತು. ಆದರೆ ಉಮಾನಾಥ ಕೋಟ್ಯಾನ್‌ ಅವರು 29,799 ಮತಗಳ ಅಂತರದಿಂದ ಗೆಲುವು ಸಾಧಿಸಿ ಹೊಸ ದಾಖಲೆ ಬರೆದಿದ್ದಾರೆ.

ಗರಿಷ್ಠ -ಕನಿಷ್ಠ ಅಂತರದ ಗೆಲುವು
ಉಮಾನಾಥ ಕೋಟ್ಯಾನ್‌ ಅವರ 29,799 ಮತಗಳ ಅಂತರದ ಗೆಲುವು ಈ ಬಾರಿ ಜಿಲ್ಲೆಯ ಎಂಟು ಕ್ಷೇತ್ರಗಳಲ್ಲಿ ದಾಖಲಾಗಿರುವ ಗರಿಷ್ಠ ಅಂತರ ಜಯ. 26,648 ಮತಗಳ ಗೆಲುವು ಸಾಧಿಸಿರುವ ಡಾ| ಭರತ್‌ ಶೆಟ್ಟಿ ಅವರು 2ನೇ ಸ್ಥಾನದಲ್ಲಿದ್ದಾರೆ. ಜಯ ಗಳಿಸಿದ ಎಲ್ಲ ಅಭ್ಯರ್ಥಿಗಳ ಜಯದ ಅಂತರ 15 ಸಾವಿರಕ್ಕಿಂತ ಮಿಕ್ಕಿರುವುದು ಈ ಬಾರಿ ಚುನಾವಣೆಯ ವಿಶೇಷ. ಬಂಟ್ವಾಳದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‌ ನಾೖಕ್‌ 15,971 ಮತಗಳ ಅಂತರದ ಗೆಲುವು ಜಿಲ್ಲೆಯ ಮಟ್ಟಿಗೆ ಕನಿಷ್ಠ. ಕಳೆದ ಬಾರಿ ಸುಳ್ಯದಲ್ಲಿ ಎಸ್‌. ಅಂಗಾರ ಅವರ 1,373 ಮತಗಳ ಗೆಲುವು ಕನಿಷ್ಠ ಅಂತರದ್ದಾಗಿತ್ತು. 

ಎವಿಎಂ ಬಗ್ಗೆ  ಕಾಂಗ್ರೆಸ್‌  ಶಂಕೆ; ದೂರು
ಜಿಲ್ಲೆಯಲ್ಲಿ ಬಹುತೇಕ ಕ್ಷೇತ್ರಗಳಲ್ಲೂ ಭಾರೀ ಅಂತರದ ಸೋಲಿನ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿರುವ ಕಾಂಗ್ರೆಸ್‌ ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿದೆ. ಮತ ಎಣಿಕೆ ನಡೆಯುತ್ತಿರುವಾಗ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಸಚಿವ ರಮಾನಾಥ ರೈ, ಶಾಸಕ ಮೊದಿನ್‌ ಬಾವಾ, ಜೆ.ಆರ್‌. ಲೋಬೋ, ಶಕುಂತಳಾ ಶೆಟ್ಟಿ ಚುನಾವಣಾಧಿಕಾರಿಗಳಿಗೆ ಇವಿಎಂಗಳ ಮೇಲೆ ಶಂಕೆ ವ್ಯಕ್ತಪಡಿಸಿ ದೂರು ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಮಾನಾಥ ರೈ ಹಾಗೂ ಮೊದಿನ್‌ ಬಾವಾ, ಇವಿಎಂಗಳ ಬಗ್ಗೆ ನಮಗೆ ಶಂಕೆ ಇದೆ. ಈ ಬಗ್ಗೆ ನಾವು ಈಗಾಗಲೇ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇವೆ. ಬುಧವಾರ ಜಿಲ್ಲಾಧಿಕಾರಿಯವರ ಬಳಿಗೆ ತೆರಳಿ ಸವಿವರ ದೂರು ಸಲ್ಲಿಸುತ್ತೇವೆ ಎಂದು ತಿಳಿಸಿದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ!

brobed

ಯಾದಗಿರಿ: ಲಂಚ ಪಡೆಯುತ್ತಿದ್ದ ವೇಳೆ ಲೆಕ್ಕ ಪರಿಶೋಧನ ಅಧಿಕಾರಿ ಎಸಿಬಿ ಬಲೆಗೆ

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ತನ್ನ ಅಂಗಡಿ ಮುಂದೆ ಉಗುಳಿದ ಎಂಬ ಕ್ಷುಲ್ಲಕ ಕಾರಣಕ್ಕೆ ಇರಿದು ವ್ಯಕ್ತಿಯ ಕೊಲೆ

ದಟ್ಟ ಕಾಡಿನಲ್ಲಿ ತಡರಾತ್ರಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ತಡರಾತ್ರಿ ದಟ್ಟ ಕಾಡಿನಲ್ಲಿ ಕಾರಿನೊಳಗೆ 6 ತಾಸು ಕಳೆದ ಮೂವರನ್ನು ರಕ್ಷಿಸಿದ ಪೊಲೀಸ್‍ ಅಧಿಕಾರಿ

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

ಹೊಸ ಶಿಕ್ಷಣ ನೀತಿ ಯಶಸ್ವಿ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳ ಪಾತ್ರ ಪ್ರಮುಖ

ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು

ರಸ್ತೆ ದುರಸ್ತಿಗೆ ಆಗ್ರಹಿಸಿ ಪಟ್ಟಣ ಪಂಚಾಯತ್ ಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಂಕ್ಷನ್‌ಗಳಲ್ಲಿ ಅಳವಡಿಸಿದ್ದ ರಬ್ಬರ್‌ ಕೋನ್‌ ಬದಲಾವಣೆಗೆ ನಿರ್ಧಾರ

ಜಂಕ್ಷನ್‌ಗಳಲ್ಲಿ ಅಳವಡಿಸಿದ್ದ ರಬ್ಬರ್‌ ಕೋನ್‌ ಬದಲಾವಣೆಗೆ ನಿರ್ಧಾರ

ನೀರಿನ ಬಿಲ್‌ ಗೊಂದಲ ಪರಿಹಾರಕ್ಕೆ “ವಾಟರ್‌ ಬಿಲ್‌ ಅದಾಲತ್‌’

ನೀರಿನ ಬಿಲ್‌ ಗೊಂದಲ ಪರಿಹಾರಕ್ಕೆ “ವಾಟರ್‌ ಬಿಲ್‌ ಅದಾಲತ್‌’

ಎಬಿಡಿಗೆ “ಕುಡ್ಲ’ ಅಂದರೆ ತುಂಬಾ ಇಷ್ಟ !

ಎಬಿಡಿಗೆ “ಕುಡ್ಲ’ ಅಂದರೆ ತುಂಬಾ ಇಷ್ಟ !

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಮಂಗಳೂರು: ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ’ ಹೆಸರಿಡಲು ಸರ್ಕಾರ ಆದೇಶ

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

MUST WATCH

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು

udayavani youtube

Manipal: Multi-storey building in danger | inspection by DC Jagadeesh



ಹೊಸ ಸೇರ್ಪಡೆ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ರಾಯಚೂರು ಐಐಐಟಿಗೆ ಗ್ರೀನ್ ಸಿಗ್ನಲ್ : ಕೇಂದ್ರದ ನಿರ್ಧಾರಕ್ಕೆ ಡಿಸಿಎಂ ಸವದಿ ಹರ್ಷ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ

ಏನಿದು: ಪಾಕಿಸ್ತಾನ ವಿರೋಧ ಪಕ್ಷಗಳ ಮುಖಂಡರ ಜತೆ ಐಎಸ್ ಐ, ಮಿಲಿಟರಿ ಚೀಫ್ ರಹಸ್ಯ ಸಭೆ!

ಸಂಗೀ ತವಿವಿಯಲ್ಲಿ ಕಲಿತವರು ನಿರುದ್ಯೋಗಿ ಆಗಿಲ್ಲ

ಸಂಗೀ ತವಿವಿಯಲ್ಲಿ ಕಲಿತವರು ನಿರುದ್ಯೋಗಿ ಆಗಿಲ್ಲ

ಗಾಂಜಾ ಸಂಗ್ರಹ: ಇಬ್ಬರ ಬಂಧನ

ಗಾಂಜಾ ಸಂಗ್ರಹ: ಇಬ್ಬರ ಬಂಧನ

br-tdy-02

ಅಡುಗೆ ಕೆಲಸಗಾರರಿಗೆ 5 ಸಾವಿರ ರೂ.ಪರಿಹಾರ ನೀಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.