ಎನ್‌ಐಟಿಕೆ: ಸ್ಟ್ರಾಂಗ್‌ರೂಂಗಳಲ್ಲಿ ಮತಯಂತ್ರಗಳು ಭದ್ರ

Team Udayavani, Apr 20, 2019, 6:00 AM IST

ಸುರತ್ಕಲ್‌: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಿಗೆ ನೀಡಿದ ಜನಾದೇಶ ಕಾಪಾಡಿಕೊಂಡಿರುವ ಮತಯಂತ್ರಗಳನ್ನು ಸುರತ್ಕಲ್‌ ಎನ್‌ಐಟಿಕೆಯ ಸ್ಟ್ರಾಂಗ್‌ರೂಂಗಳಲ್ಲಿ ಭದ್ರಪಡಿಸಲಾಗಿದ್ದು, ಬಿಗಿ ಭದ್ರತಾ ವ್ಯವಸ್ಥೆ ಏರ್ಪಡಿಸಲಾಗಿದೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಮತಯಂತ್ರಗಳನ್ನು ಸಂಗ್ರಹಿಸಿ ಭದ್ರತಾ ಕೊಠಡಿಗಳಲ್ಲಿ ಇರಿಸಲು ಶುಕ್ರವಾರ ಬೆಳಗ್ಗೆ 10 ಗಂಟೆಯ ವರೆಗೆ ಸಮಯ ತಗಲಿತು. ಇದೇ ಕೇಂದ್ರದಲ್ಲಿ ಮೇ 23ರಂದು ಮತ ಎಣಿಕೆ ನಡೆಯಲಿದ್ದು, ಚುನಾವಣ ಆಯೋಗ ಸಕಲ ಕ್ರಮ ಕೈಗೊಂಡಿದೆ.

ಕೇಂದ್ರಕ್ಕೆ ಸಿಆರ್‌ಪಿಎಫ್ ಮತ್ತು ಪೊಲೀಸ್‌ ಜಂಟಿ ಕಾವಲು ಏರ್ಪಡಿಸಲಾಗಿದೆ. ಮತಯಂತ್ರ ಇರಿಸಿರುವ ಕೊಠಡಿಗಳಿಗೆ ಬೀಗ ಹಾಕಿ ಮೊಹರು ಮಾಡಲಾಗಿದೆ. ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿ ಕಾರಿ ಶಶಿಕಾಂತ ಸೆಂಥಿಲ್‌, ಸಹಾಯಕ ಆಯುಕ್ತ ರವಿಚಂದ್ರ, ಪೊಲೀಸ್‌ ಆಯುಕ್ತ ಸಂದೀಪ್‌ ಪಾಟೀಲ್‌, ಡಿಸಿಪಿ ಹನುಮಂತರಾಯ ಅವರು ಶುಕ್ರವಾರ ಕೇಂದ್ರಕ್ಕೆ ಭೇಟಿ ನೀಡಿ ಭದ್ರತೆ ವ್ಯವಸ್ಥೆಗಳನ್ನು ಪರಿಶೀಲಿಸಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ