ಇನ್ನೋವಾ ಕಾರಿನಲ್ಲಿ ಕುಖ್ಯಾತ ಕ್ರಿಮಿನಲ್‌ನ ಮೃತದೇಹ ಪತ್ತೆ

ಬಂಟ್ವಾಳದ ಸಜೀಪಮೂಡ ಗ್ರಾಮದ ನಗ್ರಿ

Team Udayavani, Feb 2, 2020, 8:50 PM IST

innova2

ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪಮೂಡ ಗ್ರಾಮದ ಬೊಳ್ಳಾಯಿ ಸಮೀಪದ ನಗ್ರಿ ಶಾಂತಿನಗರದಲ್ಲಿ ರವಿವಾರ ಇನ್ನೋವಾ ಕಾರಿನಲ್ಲಿ ಕೊಲೆಯಾದ ಸ್ಥಿತಿಯಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿದ್ದು, ಕೊಲೆಯಾದ ವ್ಯಕ್ತಿ ಕೇರಳ ಮೂಲದ ಕುಖ್ಯಾತ ಕ್ರಿಮಿನಲ್‌, ಮೂಲತಃ ಕಾಸರಗೋಡು ಜಿಲ್ಲೆ ಚೆಮ್ನಾಡ್‌ ಚೆಂಬರಿಕದ ಕಲಾ°ಡ್‌ ಗ್ರಾಮ ನಿವಾಸಿ ತಸ್ಲೀಮ್‌ ಯಾನೆ ಮುತಾಸಿಮ್‌(39) ಎಂದು ಗುರುತಿಸಲಾಗಿದೆ.

ನಗ್ರಿ ಶಾಂತಿನಗರದಲ್ಲಿ ಮೃತದೇಹವಿರುವ ಕಾರೊಂದು ನಿಂತಿದೆ ಎಂಬ ಸುದ್ದಿ ರವಿವಾರ ಮಧ್ಯಾಹ್ನ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಪ್ರಾರಂಭದಲ್ಲಿ ಅದು ಅಪರಿಚಿತ ಶವವೆಂದು ಭಾವಿಸಿದ್ದರೂ, ಬಳಿಕ ಮೃತ ವ್ಯಕ್ತಿಯ ಗುರುತು ಪತ್ತೆಯಾಗಿತ್ತು. ತಸ್ಲೀಮ್‌ ಎರಡು ದಿನಗಳ ಹಿಂದೆ ಗುಲ್ಬರ್ಗಾ ಜೈಲಿನಿಂದ ಬಿಡುಗಡೆಗೊಂಡಿದ್ದು, ಅಲ್ಲಿಂದಲೇ ಆತನನ್ನು ಅಪಹರಣ ಮಾಡಿದ್ದ ಗ್ಯಾಂಗ್‌ ಕೊಲೆ ನಡೆಸಿದೆ.

ಆರೋಪಿಗಳು ಕೊಲೆ ನಡೆಸಿ ಮೃತದೇಹವನ್ನು ಕಾರಿನಲ್ಲಿಟ್ಟು, ಕಾರನ್ನು ಬಿಟ್ಟು ಪರಾರಿಯಾಗಿದ್ದರು. ಬೆಳಗ್ಗಿನಿಂದ ಕಾರು ಅಲ್ಲೇ ನಿಂತಿರುವುದನ್ನು ಕಂಡ ಸ್ಥಳೀಯರು ಮಧ್ಯಾಹ್ನದ ವೇಳೆಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಕೆಎ 53 ನೋಂದಣಿ ಹೊಂದಿರುವ ಇನ್ನೋವಾ ಕಾರಿನ ಹಿಂಬದಿಯ ಸೀಟಿನಲ್ಲಿ ಮೃತದೇಹ ಪತ್ತೆಯಾಗಿದ್ದು, ರಕ್ತದ ಮಡುವಿನಲ್ಲಿ ತುಂಬಿತ್ತು. ವ್ಯಕ್ತಿಯ ಕುತ್ತಿಗೆಗೆ ಹಗ್ಗ ಬಿಗಿದು ಬಳಿಕ ಚೂರಿ ಹಾಕಿ ಕೊಲೆ ನಡೆಸಿರುವ ಕುರಿತು ಶಂಕಿಸಲಾಗಿದೆ. ಬೇರೆ ಯಾವುದೇ ಸ್ಥಳದಲ್ಲಿ ಕೊಲೆ ನಡೆಸಿ, ಕಾರನ್ನು ನಗ್ರಿ ಶಾಂತಿನಗರದಲ್ಲಿ ಬಿಟ್ಟು ಪರಾರಿಯಾಗಿರುವ ಸಾಧ್ಯತೆಯ ಕುರಿತು ಹೇಳಲಾಗುತ್ತಿದೆ.

ಮಾರ್ನಬೈಲು-ಸಾಲೆತ್ತೂರು ರಸ್ತೆಯ ಶಾಂತಿನಗರದ ಗುಡ್ಡದಲ್ಲಿ ಕಾರನ್ನು ನಿಲ್ಲಿಸಲಾಗಿದ್ದು, ಬೆಳಗ್ಗೆ 8ರ ಸುಮಾರಿಗೆ ಅಲ್ಲಿ ಯಾವುದೇ ಕಾರು ಇರಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ. ಹೀಗಾಗಿ ಆ ಬಳಿಕವೇ ಆರೋಪಿಗಳು ಕಾರನ್ನು ನಿಲ್ಲಿಸಿ ಪರಾರಿಯಾಗಿರುವ ಕುರಿತು ಸಂಶಯಿಸಲಾಗಿದೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರು ವೆನಾÉಕ್‌ ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಬಂಟ್ವಾಳ ಡಿವೈಎಸ್‌ಪಿ ವೆಲೆಂಟೈನ್‌ ಡಿಸೋಜಾ ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ದ.ಕ.ಜಿಲ್ಲಾ ಚಾರ್ಜ್‌ನಲ್ಲಿರುವ ಉಡುಪಿ ಎಸ್‌ಪಿ ವಿಷ್ಣುವರ್ಧನ್‌, ದ.ಕ.ಅಡಿಶನಲ್‌ ಎಸ್‌ಪಿ ಡಾ| ವಿಕ್ರಂ ಅಮ್ಟೆ, ಮಂಗಳೂರು ಡಿಸಿಐಬಿ ಇನ್ಸ್‌ಪೆಕ್ಟರ್‌ ಚೆಲುವರಾಜು, ಬಂಟ್ವಾಳ ಪೊಲೀಸ್‌ ಸರ್ಕಲ್‌ ಇನ್ಸ್‌ಪೆಕ್ಟರ್‌ ಟಿ.ಡಿ.ನಾಗರಾಜ್‌, ಬಂಟ್ವಾಳ ನಗರ ಪಿಎಸ್‌ಐ ಅವಿನಾಶ್‌, ಗ್ರಾಮಾಂತರ ಪಿಎಸ್‌ಐ ಪ್ರಸನ್ನ ಹಾಗೂ ಸಿಬಂದಿ ತೆರಳಿದ್ದು, ಪ್ರಕರಣದ ಕುರಿತು ತನಿಖೆ ನಡೆಸುತ್ತಿದ್ದಾರೆ.

ಜ್ಯುವೆಲ್ಲರಿ ಕಳವಿನ ಪ್ರಮುಖ ಆರೋಪಿ
ಕೊಲೆಯಾದ ತಸ್ಲೀಮ್‌ 2019ರಲ್ಲಿ ಸೆಪ್ಟೆಂಬರ್‌ನಲ್ಲಿ ಮಂಗಳೂರು ಭವಂತಿ ಸ್ಟ್ರೀಟ್ ನ ಜ್ಯುವೆಲ್ಲರಿವೊಂದರಲ್ಲಿ ನಡೆದ ಕಳವು ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಇಬ್ಬರು ಅಪಾ^ನ್‌ ಮೂಲದ ಕುಖ್ಯಾತ ರೌಡಿಗಳ ಜತೆ ಸೇರಿ ಈ ಕಳವು ಪ್ರಕರಣ ನಡೆಸಿ, ಮಂಗಳೂರು ಪೊಲೀಸರಿಗೆ ಸಿಕ್ಕಿ ಬಿದ್ದಿದ್ದ. ಜತೆಗೆ ಉಳ್ಳಾಲ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಾಲಿಯಾ ರಫೀಕ್‌ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದ ಎನ್ನಲಾಗಿದೆ.

ಈತ ಕಾಸರಗೋಡಿನಿಂದ ಮುಂಬಯಿಗೆ ತೆರಳಿದ ಬಳಿಕ ಅಲ್ಲಿ ಕುತ್ಯಾತ ರೌಡಿಗಳು ಹಾಗೂ ಭೂಗತ ಪಾತಕಿಗಳ ಸಂಪರ್ಕ ಬೆಳೆಸಿಕೊಂಡಿದ್ದ. ಈತನ ವಿರುದ್ಧ ಕಾಸರಗೋಡಿನ ಬೇಕಲ ಪೊಲೀಸ್‌ ಠಾಣೆ, ಉಳ್ಳಾಲ ಪೊಲೀಸ್‌ ಠಾಣೆ ಸೇರಿದಂತೆ ಹೊಸದಿಲ್ಲಿಯ ವಿಶೇಷ ಪೊಲೀಸ್‌ ಠಾಣೆಯಲ್ಲಿ ಕ್ರಿಮಿನಲ್‌ ಒಳಸಂಚು ಮತ್ತು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಾಗಿರುವ ಕುರಿತು ಕಳೆದ ಸೆಪ್ಟೆಂಬರ್‌ನ ಜ್ಯುವೆಲ್ಲರಿ ಕಳವು ಪ್ರಕರಣದ ಸಂದರ್ಭ ಮಂಗಳೂರು ಪೊಲೀಸರು ತಿಳಿಸಿದ್ದರು.

ತಸ್ಲೀಮ್‌ ಕೆಲ ದಿನಗಳ ಹಿಂದೆಯಷ್ಟೇ ಗುಲಾºರ್ಗಾ ಜೈಲಿನಿಂದ ಬಿಡುಗಡೆಗೊಂಡು ಹೊರ ಬರುತ್ತಿದ್ದಂತೆ ಆತನನ್ನು ಯಾವುದೇ ತಂಡವೊಂದು ಅಪಹರಣ ನಡೆಸಿತ್ತು. ಈ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಿಡ್ನಾಪ್‌ ಆರೋಪಿಗಳ ಹುಡುಕಾಟದಲ್ಲಿ ತೊಡಗಿದ್ದರು. ಯಾವುದೋ ಹಳೆ ಪ್ರಕರಣದ ದ್ವೇಷದ ಹಿನ್ನೆಲೆಯಲ್ಲೇ ಕೊಲೆ ನಡೆದಿರುವ ಸಾಧ್ಯತೆ ಇದೆ.

ಟಾಪ್ ನ್ಯೂಸ್

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ಪರ್ಯಾಯ ಶ್ರೀಗಳಿಂದ ಉಗ್ರಾಣ ವೀಕ್ಷಣೆ

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ದಂಡತೀರ್ಥ ಮಠ: ಕೃಷ್ಣಾಪುರ ಶ್ರೀಗಳ ತೀರ್ಥಸ್ನಾನಕ್ಕೆ ಸಜ್ಜು

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಏಕಕಾಲಕ್ಕೆ 9,201ಶ್ರದ್ಧಾ ಕೇಂದ್ರಗಳ ಶುಚಿತ್ವ

ಏಕಕಾಲಕ್ಕೆ 9,201ಶ್ರದ್ಧಾ ಕೇಂದ್ರಗಳ ಶುಚಿತ್ವ

ಸಾವಿರ ಕಿ.ಮೀ. ಬೆಂಕಿ ರೇಖೆ ನಿರ್ಮಾಣ, 140 ಸಿಬಂದಿ

ಸಾವಿರ ಕಿ.ಮೀ. ಬೆಂಕಿ ರೇಖೆ ನಿರ್ಮಾಣ, 140 ಸಿಬಂದಿ

ಶಿಕ್ಷಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ; ಆರೋಪಿ ಶಿಕ್ಷಕನ ಜಾಮೀನು ವಜಾಗೊಳಿಸಿದ ಹೈಕೋರ್ಟ್

ಶಿಕ್ಷಕನಿಂದ ವಿದ್ಯಾರ್ಥಿನಿಯ ಅತ್ಯಾಚಾರ; ಆರೋಪಿ ಶಿಕ್ಷಕನ ಜಾಮೀನು ವಜಾಗೊಳಿಸಿದ ಹೈಕೋರ್ಟ್

ಸುಳ್ಯ ನಗರ ಪಂಚಾಯತ್‌ಗೆ ಜಿಲ್ಲಾಧಿಕಾರಿ ಭೇಟಿ : ಕಚೇರಿ ಅವ್ಯವಸ್ಥೆ, ತರಾಟೆ

ಸುಳ್ಯ ನಗರ ಪಂಚಾಯತ್‌ಗೆ ಜಿಲ್ಲಾಧಿಕಾರಿ ಭೇಟಿ : ಕಚೇರಿ ಅವ್ಯವಸ್ಥೆ, ತರಾಟೆ

ಮಗನಿಂದ ತಾಯಿಯ ಮೇಲೆ ಅತ್ಯಾಚಾರ ಆರೋಪ ; ಆರೋಪಿ ಬಂಧನ

ಮಗನಿಂದ ತಾಯಿಯ ಮೇಲೆ ಅತ್ಯಾಚಾರ ಆರೋಪ ; ಆರೋಪಿ ಬಂಧನ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

 ಪರ್ಯಾಯ ಮಹೋತ್ಸವ: 5ಡಿವೈಎಸ್‌ಪಿ, 62 ಮಂದಿ ಎಎಸ್‌ಐ; ಭದ್ರತೆಗೆ ಸಿಸಿಟಿವಿ ಕಣ್ಗಾವಲು

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

ಪರ್ಯಾಯೋತ್ಸವಕ್ಕೆ ಸ್ವಚ್ಛತೆಯ ಸ್ಪರ್ಶ: ಮೊಬೈಲ್‌ ಶೌಚಾಲಯ ಬಳಕೆಗೆ ಸಿದ್ಧ

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

“ಸಂಸ್ಕೃತದಲ್ಲಿ ಅಭಿನಂದನೆ ಹೆಮ್ಮೆಯ ವಿಚಾರ’

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಪರ್ಯಾಯದ ಸುಗ್ರಾಸ ಭೋಜನಕ್ಕೆ ಮಟ್ಟುಗುಳ್ಳ

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

ಅಶ್ವತ್ಥ ಎಲೆಯಲ್ಲಿ ಮೂಡಿಬಂದ ಶ್ರೀ ವಿದ್ಯಾಸಾಗರ ತೀರ್ಥ ಶ್ರೀಪಾದರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.