ಪಯಸ್ವಿನಿಯ ಆಳ ಕಣ್ಮರೆ: ಹೂಳು ತುಂಬಿ ಬರಿದು!


Team Udayavani, Feb 16, 2019, 12:30 AM IST

1502slkp1b.jpg

ಸುಳ್ಯ: ಬಿರು ಬೇಸಗೆ ಯಲ್ಲಿಯೂ ಎರಡಾಳು ಮುಳುಗು ವಷ್ಟು ನೀರು ತುಂಬಿರುತ್ತಿದ್ದ ಪಯಸ್ವಿನಿ ನದಿಯಲ್ಲಿ ಈ ಬಾರಿ ಕೊçನಾಡಿನಿಂದ ಪೆರಾಜೆ ತನಕ ಹೂಳು ತುಂಬಿ ನದಿ ಪಾತ್ರವೇ ಕಣ್ಮರೆಯಾಗಿದೆ.

ಕೊಡಗು ಸಂಪಾಜೆ ಪರಿಸರದಲ್ಲಿ ನದಿಪಾತ್ರ ಬರಡು ನೆಲದಂತಾಗಿದ್ದು, ನೀರು ಸಣ್ಣ ಹರಿವಿಗೂ ಪ್ರಯಾಸ ಪಡುತ್ತಿದೆ. 5 ಮೀ.ಗಿಂತಲೂ ಹೆಚ್ಚು ಹೂಳು ತುಂಬಿದೆ. ಕೃಷಿ, ದಿನ ಬಳಕೆಗೆ ನದಿ ನೀರನ್ನೇ ನಂಬಿರುವ ನೂರಾರು ಕುಟುಂಬಗಳಿಗೆ ಫೆಬ್ರವರಿಯಲ್ಲೇ ಅಭಾವ ಎದುರಾಗಿದೆ.

ಏನು ಕಾರಣ?
ಆಗಸ್ಟ್‌ನಲ್ಲಿ ಉಂಟಾದ ಪ್ರಾಕೃತಿಕ ವಿಕೋಪದ ಪರಿಣಾಮವಿದು ಅನ್ನುತ್ತಾರೆ ಭೂ ತಜ್ಞರು. ಜೋಡು ಪಾಲ, ಮದೆನಾಡು ಮೊದಲಾದೆಡೆ ಗುಡ್ಡ ಕುಸಿದು ಅಪಾರ ಪ್ರಮಾಣದ ಮರಳು ಮಿಶ್ರಿತ ಮಣ್ಣು, ಮರ ಗಿಡ, ಕಲ್ಲು ಬಂಡೆಗಳು ಪಯಸ್ವಿನಿಗೆ ಹರಿದುಬಂದಿದ್ದವು. ಇದರಿಂದ ಮದೆ ನಾಡಿನಿಂದ ಪೆರಾಜೆ ತನಕ ನದಿ ಪಾತ್ರ ಮುಚ್ಚಿದೆ ಅನ್ನುತ್ತಾರೆ ಸ್ಥಳೀಯರು.ಪಯಸ್ವಿನಿ ನದಿಯಲ್ಲಿ ನೂರಾರು ಆಳವಾದ ಕಯ ರೂಪದ ಪ್ರದೇಶ ಗಳಿದ್ದವು. ಇವು ಕಡು ಬೇಸಗೆಯಲ್ಲೂ ಬತ್ತಿದ ಉದಾಹರಣೆ ಇಲ್ಲ. ಪ್ರಾಕೃತಿಕ ವಿಕೋಪ ಉಂಟಾದ ಬಳಿಕ ಈ ಎಲ್ಲ ಆಳ ಪ್ರದೇಶಗಳು ಕಣ್ಮರೆ ಆಗಿವೆ. 
 
ಐದು ಮೀ. ಮೇಲಕ್ಕೆ ಜಿಗಿತ!
ಹೂಳು ತುಂಬಿರುವ ಕಾರಣ ನದಿಯಲ್ಲಿ ಈಗ ನೀರು ಹರಿಯುವ ಮಟ್ಟ ಹಿಂದಿಗಿಂತ ಸುಮಾರು 5 ಮೀ.ಗಳಷ್ಟು ಮೇಲೇರಿ, ಭೂಮಿ ಮಟ್ಟಕ್ಕೆ ಹತ್ತಿರದಲ್ಲಿದೆ. ಈ ಬಾರಿ ಭಾರೀ ಮಳೆ ಮರುಕಳಿಸಿದರೆ ನದಿ-ಭೂಮಿ ಒಂದಾಗುವ ಸಾಧ್ಯತೆ ಹೆಚ್ಚು.

ಹೊಸ ಹೊಂಡವೇ ಗತಿ
ಕಳೆದ ವರ್ಷದ ತನಕ ನದಿಯ ಆಳಗಳಿಂದ ಪಂಪ್‌ ಮೂಲಕ ನೀರೆತ್ತಿ ಕೃಷಿಗೆ ಬಳಸಲಾಗುತ್ತಿತ್ತು. ಚೆಂಬು ಗ್ರಾ.ಪಂ. ವ್ಯಾಪ್ತಿಯ ಬಾಲೆಂಬಿ, ಪಡ್ಡೆಂಜಿ, ಮೇರ್ತಿಗುಂಡಿ ಇಲ್ಲೆಲ್ಲ ನೀರಿಗಾಗಿ ಹೊಂಡ ತೋಡಲಾಗುತ್ತಿದೆ. ತೆಗೆದ ಹೊಂಡಕ್ಕೆ ಹರಿಯುವ ನೀರಿನೊಂದಿಗೆ ಬಂದ ಮರಳು ಸೇರಿ ಮುಚ್ಚುತ್ತಿರುವುದು ಸವಾಲು. ತಾತ್ಕಾಲಿಕ ಪರಿಹಾರವಾಗಿ ಹೊಂಡ‌ ಸುತ್ತ ಮರಳು ಚೀಲ ಪೇರಿಸಲಾಗಿದೆ.

ಇದೇ ಮೊದಲು
ಹಿಂದೆ ಬೇಸಗೆ ಯಲ್ಲಿ ಕೂಡ ನದಿಗೆ ಇಳಿಯಲು ಸಾಧ್ಯ ವಾಗದಷ್ಟು ನೀರು ಇರುತ್ತಿತ್ತು. ಇಷ್ಟು ಪ್ರಮಾಣದ ಹೂಳು ತುಂಬಿದ್ದು ಇದೇ ಮೊದಲು. ಎಪ್ರಿಲ್‌, ಮೇ ತಿಂಗಳಲ್ಲಿ ಆಳ ಪ್ರದೇಶ ಬಿಟ್ಟು ಇತರೆಡೆ ಒಂದಾಳು ಮುಳುಗುವಷ್ಟು ನೀರಿರುತ್ತಿತ್ತು.
– ಮಧುಕರ, 
ಸ್ಥಳೀಯ ನಿವಾಸಿ

ಮರಳು ತೆಗೆಯುವಂತಿಲ್ಲ
ನದಿಯಲ್ಲಿ ತುಂಬಿರುವ ಮರಳು ಮಿಶ್ರಿತ ಮಣ್ಣು ತೆಗೆದರೆ ಸಮಸ್ಯೆ ಪರಿಹಾರ ಕಾಣಬಹುದು. ಈಗ ಮರಳುಗಾರಿಕೆಗೆ ಅವಕಾಶ ಇಲ್ಲ. ಗ್ರಾ.ಪಂ., ಜಿಲ್ಲಾಡಳಿತ ಮೂಲಕ ಮಣ್ಣು ಮಿಶ್ರಿತ ಮರಳು ಎತ್ತುವ ಪ್ರಯತ್ನ ಮಾಡಿದಲ್ಲಿ ಇಲ್ಲಿನ ಕೃಷಿಗೆ ನೀರು ದೊರಕಬಹುದು. 
– ಶ್ರೀನಿವಾಸ ನಿಡಿಂಜಿ
ಗ್ರಾ.ಪಂ. ಸದಸ್ಯ, ಚೆಂಬು

– ಕಿರಣ್‌ ಪ್ರಸಾದ್‌ ಕುಂಡಡ್ಕ
 

ಟಾಪ್ ನ್ಯೂಸ್

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

1-ewrwe

ವಿದ್ಯಾರ್ಥಿಗಳೊಂದಿಗೆ ಕುಳಿತು ಬಿಸಿಯೂಟ ಸವಿದ ಆಹಾರ ನಿಗಮದ ಅಧ್ಯಕ್ಷ ನಡಹಳ್ಳಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

ಕನ್ನಡದಲ್ಲೇ ಸಹಿ ಸಂಪೂರ್ಣ ಜಾರಿಗೆ ಬಂದರೆ ಸ್ವಾಗತಾರ್ಹ : ಶ್ರೀನಿವಾಸ ಮೂರ್ತಿ ಕುಲಕರ್ಣಿ

1-rrr

ಕೈಗಾರಿಕೆಗಳಿಗೆ ಭೂಮಿ ನೀಡಲು ಶೀಘ್ರದಲ್ಲೇ ಹೊಸ ನೀತಿ: ಸಚಿವ ನಿರಾಣಿ

1-trtr

ಟಿಕೆಟ್ ಇಲ್ಲದೇ ಪರದಾಟ: 1300 ಭಕ್ತರಿಗೆ ತಿಮ್ಮಪ್ಪನ ದರ್ಶನ ಮಾಡಿಸಿದ ಎಸ್.ಆರ್.ವಿಶ್ವನಾಥ್

1-www

15 ಕೋಟಿ ಸದಸ್ಯರನ್ನು ಹೊಂದಿದ ಏಕೈಕ ಪಕ್ಷ ಬಿಜೆಪಿ : ಸಚಿವ ಹಾಲಪ್ಪ ಆಚಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ಶ್ರೀಕ್ಷೇತ್ರ ಧರ್ಮಸ್ಥಳ: ದೇವರ ದರ್ಶನ ಸಮಯ ಬದಲು

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ವೇತನ ಮೂರ್‍ನಾಲ್ಕು ತಿಂಗಳು ವಿಳಂಬ; ಜೀವನಕ್ಕೆ ಪರದಾಡುವ ಸ್ಥಿತಿ

ಕಾಳು ಮೆಣಸು ಧಾರಣೆ ಚೇತರಿಕೆ

ಕಾಳು ಮೆಣಸು ಧಾರಣೆ ಚೇತರಿಕೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

ಬಂಟ್ವಾಳ: ವ್ಯಕ್ತಿ ಮೃತಪಟ್ಟ 6 ತಿಂಗಳ ಬಳಿಕ ಮೊಬೈಲ್ ಗೆ ಬಂತು ಲಸಿಕೆ ಪೂರ್ಣಗೊಂಡ ಸಂದೇಶ.!

MUST WATCH

udayavani youtube

ಭತ್ತ ಬೇಸಾಯದಲ್ಲಿ ಯಂತ್ರೋಪಕರಣಗಳ ಬಳಕೆಯಿಂದ ಅಧಿಕ ಆದಾಯಕ್ಕೊಂದು ದಾರಿ

udayavani youtube

ರಾಜಸ್ಥಾನದ ಸಿಕ್ಸ್ ಸೆನ್ಸ್ ಫೋರ್ಟ್ ನಲ್ಲಿ ನೆರವೇರಲಿದೆಯಂತೆ ವಿಕ್ಕಿ – ಕತ್ರಿನಾ ಮದುವೆ

udayavani youtube

ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಎಂಬ ಹಾಡಿಗೆ ಹೆಜ್ಜೆ ಹಾಕಿದ ಸಿಎಂ ಬೊಮ್ಮಾಯಿ

udayavani youtube

ಕಾಪು ಕಡಲ ಕಿನಾರೆಯಲ್ಲಿ ‘ಕನ್ನಡಕ್ಕಾಗಿ ನಾವು ಗೀತ ಗಾಯನ’ ಕಾರ್ಯಕ್ರಮ ಸಂಪನ್ನ

udayavani youtube

ಉಡುಪಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮೊಳಗಿದ ಬಾರಿಸು ಕನ್ನಡ ಡಿಂಡಿಮವ

ಹೊಸ ಸೇರ್ಪಡೆ

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

ಚಿಕ್ಕಮಗಳೂರು: ಪ್ರೀತಿಸಿದವನನ್ನು ಬಿಡಲೊಪ್ಪದ ಮಗಳನ್ನೇ ಹತ್ಯೆಗೈದ ತಂದೆ.!

davanagere news

30 ರಿಂದ ರಾಜ್ಯ ಮಟ್ಟದ ವಿವಿಧ ಪ್ರಶಸ್ತಿ ವಿತರಣೆ: ಶೆಣೈ

kottigehara news

ಗ್ರಾಪಂ ಸಂಕೀರ್ಣಕ್ಕೆ ಜಿಪಂ ಸಿಇಒ ಭೇಟಿ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500ಗ್ರಾಂ ಗಾಂಜಾ ವಶ, ಒಬ್ಬನ ಬಂಧನ

ಅಬಕಾರಿ ಅಧಿಕಾರಿಗಳ ಕಾರ್ಯಾಚರಣೆ : 500 ಗ್ರಾಂ. ಗಾಂಜಾ ವಶ, ಓರ್ವನ ಬಂಧನ

Vehicle parking

ವಾಹನ ನಿಲುಗಡೆಗೆ ಶುಲ್ಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.